ಹಳ್ಳಿ ಹುಡುಗನ ಸಾಧನೆ ಪ್ರಶಂಸನೀಯ: ಕಡಂದಲೆ


Team Udayavani, Sep 16, 2019, 1:03 PM IST

MUMBAI-TDY-1

ಮುಂಬಯಿ, ಸೆ. 15: ಕೇಶ ವಿನ್ಯಾಸದಲ್ಲಿ ಎಷ್ಟು ವಿನ್ಯಾಸಗಳಿವೆ ಎಂದು ವಿಶ್ವಕ್ಕೆ ತೋರಿಸಿ, ಕೃತಿರೂಪ ತಾಳಿ ಶಿವರಾಮ ಭಂಡಾರಿ ಕಠಿಣ ಪರಿಶ್ರಮದಿಂದ ಎಲ್ಲವೂ ಸಿದ್ಧಿಸಲು ಸಾಧ್ಯ ಎಂಬುವುದನ್ನು ತೋರ್ಪಡಿಸಿದ್ದಾರೆ. ಇಂತಹ ಬೆಲೆ ಕಟ್ಟಲು ಅಸಾಧ್ಯ. ವಿಶ್ವಕಂಡ ಭಾರತೀಯ ಅಪ್ರತಿಮ ಕಲಾವಿದ ಬಿಗ್‌ಬೀ, ಷಹೇನ್‌ಷಾ ಹೆಸರಾಂತ ಪದ್ಮಶ್ರೀ ಅಮಿತಾಭ್‌ ಬಚ್ಚನ್‌ ಅವರಿಂದಲೇ ಪ್ರಶಂಸೆಗೆ ಪಾತ್ರವಾದ ಈ ಕೃತಿಯನ್ನು ಮಾನವನಿಗೆ ಜ್ಞಾನ‌ ಕೊಡುವ ವಿಶ್ವವಿದ್ಯಾಲಯದಲ್ಲಿ ನನ್ನ ಹಸ್ತಗಳಿಂದ ಲೋಕಾ ರ್ಪಣೆಗೊಳಿಸಿದ್ದು ನನ್ನ ಹಿರಿಮೆ. ಎಂದು ಭಂಡಾರಿ ಮಹಾ ಮಂಡಲ ಇದರ ಸಂಸ್ಥಾಪಕ ಅಧ್ಯಕ್ಷ, ನಾಗೇಶ್ವರ ಸಿನಿ ಕ್ರಿಯೇಷನ್ಸ್‌ನ ಆಡಳಿತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಕಡಂದಲೆ ಸುರೇಶ್‌ ಎಸ್‌. ಭಂಡಾರಿ ತಿಳಿಸಿದರು.

ಸೆ. 14ರಂದು ಅಪರಾಹ್ನ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಕ‌ನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಹಯೋಗದಲ್ಲಿ ಸಾಂತಾಕ್ರೂಜ್‌ ಪೂರ್ವದ ಕಲೀನಾ ವಿದ್ಯಾನಗರಿಯ ಜೆ. ಪಿ. ನಾಯಕ್‌ ಭವನದಲ್ಲಿ ನಡೆದ ವಿಶೇಷ ಉಪನ್ಯಾಸ ಮತ್ತು ಹೆಸರಾಂತ ಕೇಶ ವಿನ್ಯಾಸಕ ಶಿವಾಸ್‌ ಹೇರ್‌ ಡಿಜೈನರ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಯ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ. ಭಂಡಾರಿ ಯಶೋಗಾಥೆ, ಜೀವನ ಶೈಲಿಯಧಾರಿತ ಜಯಶ್ರೀ ಜಿ. ಶೆಟ್ಟಿ ರಚಿತ ‘ಸ್ಟೈಲಿಂಗ್‌ ಅಟ್ ದ ಟಾಪ್‌’ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಶಿವರಾಮ ಅವರು ಭಂಡಾರಿ ಈ ಕೃತಿಯ ಮುಖೇನ ಸಮುದಾಯದ ಕೀರ್ತಿಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ. ಕುಲವೃತ್ತಿಯನ್ನೇ ಪ್ರವೃತ್ತಿಯಾಗಿಸಿದ ಹಳ್ಳಿ ಹುಡುಗನ ಜಾಗತಿಕ ಸಾಧನೆ ಪ್ರಶಂಸನೀಯ. ತಾಯಿಯ ಮಮತೆಯ ಮೌಲ್ಯದ ಅನಿವಾರ್ಯತೆ ಏನೆಂಬುವುದನ್ನು ಆಧುನಿಕ ಯುವಜನತೆಗೆ ಅವರು ತೋರಿಸಿಕೊಟ್ಟಿದ್ದಾರೆ. ವ್ಯಕ್ತಿ ಉಸಿರು ಇರುವ ತನಕ ಮಾತ್ರವಾಗಿದ್ದರೆ ಆತನ ಸಾಧನೆಯ ವ್ಯಕ್ತಿತ್ವ ಪ್ರಪಂಚ ಇರುವ ತನಕ ಇರುತ್ತದೆ ಎನ್ನುವಂತೆ ನಮ್ಮ ಶಿವರಾಮ ಅವರ ಸಾಧನೆಯೂ ಸದಾ ಪ್ರಕಾಶಿಸುತ್ತಿರಲಿ ಎಂದು ಶುಭಹಾರೈಸಿದರು.

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ| ಜಿ. ಎನ್‌. ಉಪಾಧ್ಯ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರಾಷ್ಟ್ರ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೇಷ್ಠ ಕಲಾವಿದ, ಕಲಾಜಗತ್ತು ಮುಂಬಯಿ ಅಧ್ಯಕ್ಷ ತೋನ್ಸೆ ವಿಜಯಕುಮಾರ್‌ ಶೆಟ್ಟಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದು ಅಭಿನಂದಿಸಿದರು. ಅತಿಥಿಗಳಾಗಿ ಕೃತಿಕಾರರಾದ ಜಯಶ್ರೀ ಜಿ. ಶೆಟ್ಟಿ, ಪತ್ರಿಕಾ ಛಾಯಾಚಿತ್ರಕಾರ ಗೋಪಾಲ ಶೆಟ್ಟಿ ಹಾಗೂ ಗುಲಾಬಿ ಕೃಷ್ಣ ಭಂಡಾರಿ, ಅನುಶ್ರೀ ಶಿವರಾಮ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತೀರಾ ಗ್ರಾಮೀಣ ಪ್ರದೇಶದ ಬಾಲಕನೋರ್ವ ವಿದ್ಯೆಯ ಅರಿವು ಇಲ್ಲದೆನೇ ಉದರ ಪೋಷಣೆಗಾಗಿ ಕರ್ಮಭೂಮಿ ಸೇರಿ ಇಂದು ಗ್ಲೋಬಲೈಝ್ಡ್‌ ಬಾಯ್‌ ಆಗಿ ಸೆಟೆದು ನಿಂತಿದ್ದಾರೆ. ಇದು ನಮಗೆ ಅಭಿಮಾನ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ಕಲಾಜಗತ್ತು ಮುಂಬಯಿ ವಿಜಯಕುಮಾರ್‌ ಶೆಟ್ಟಿ ಅವರು ಶಿವಾ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯ ಅನ್ನುವ ಶಿಕ್ಷಣಾಲಯದಂತಹ ಈ ದೇವಾಲಯದಲ್ಲಿ ನಾನು ರಚಿಸಿದ ಕೃತಿಯೊಂದು ಬಿಡುಗಡೆ ಆಗಿದ್ದು ನನ್ನ ಅಭಿಮಾನ. ಮಾನವ ಓದಿನಿಂದ ಬದುಕು ಬದಲಾಯಿಸಿಕೊಳ್ಳಬಹುದು ಎಂದು ತಿಳಿದ ನಾನು ಶಿಕ್ಷಣ, ಸಹಯೋಗ, ಪಿತೃಪ್ರೀತಿ ಸಿಗದೆ ಬೆಳೆದ ಶಿವಾ ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ ಎಂದು ಕೃತಿಕಾರರಾದ ಜಯಶ್ರೀ ಶೆಟ್ಟಿ ಹೇಳಿದರು.

ಕ‌ನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್‌ ಬಂಟ್ವಾಳ್‌ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾನ್ವಿತರನ್ನು ಗುರುತಿಸುವುದೇ ಪತ್ರಿಕಾ ಧರ್ಮವಾಗಿದೆ. ಇದನ್ನೇ ಕನ್ನಡಿಗ ಪತ್ರಕರ್ತರ ಸಂಘ ಮತ್ತು ಕನ್ನಡ ವಿಭಾಗ ಮಾಡುತ್ತಿದೆ. ಇಂತಹ ಕಾಯಕವನ್ನು ಈ ಕಾರ್ಯಕ್ರಮದ ಮೂಲಕ ಸಿದ್ಧಿಸಿದ್ದೇವೆ ಎಂದರು.

ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ಜಯರಾಮ ಎನ್‌. ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯ ಪ್ರೀತಂ ಎನ್‌. ದೇವಾಡಿಗ, ವಿಶೇಷ ಆಮಂತ್ರಿತ ಸದಸ್ಯರಾದ ನ್ಯಾಯವಾದಿ ವಸಂತ್‌ ಎಸ್‌. ಕಲಕೋಟಿ, ಸಾ. ದಯಾ, ಗೋಪಾಲ ತ್ರಾಸಿ, ಸವಿತಾ ಸುರೇಶ್‌ ಶೆಟ್ಟಿ, ಕರುಣಾಕರ್‌ ವಿ. ಶೆಟ್ಟಿ ಹಾಗೂ ನಗರದ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದು ಶಿವರಾಮ ಭಂಡಾರಿ ಅವರನ್ನು ಅಭಿನಂದಿಸಿದರು.

ಕನ್ನಡ ವಿಭಾಗದ ಡಾ| ಉಮಾರಾವ್‌, ಕುಮುದಾ ಆಳ್ವ, ಮದುಸೂಧನ ರಾವ್‌, ಶೈಲಜಾ ಹೆಗಡೆ, ಡಾ| ಶ್ಯಾಮಲಾ ಪ್ರಕಾಶ್‌, ಸುರೇಖಾ ಎಸ್‌. ದೇವಾಡಿಗ, ಶ್ರೀಪಾದ ಪತಕಿ, ಗೀತಾ ಮಂಜುನಾಥ್‌ ಮತ್ತಿತರರ ಸಹಕಾರದೊಂದಿಗೆ ನಡೆಸಲ್ಪಟ್ಟ ಕಾರ್ಯ ಕ್ರಮದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ರಂಗಕರ್ಮಿ ಸಾ. ದಯಾ ವಂದಿಸಿದರು.

ಇಲ್ಲಿನ ಹಳೆಯಂಗಡಿಯ ಪಡುಪಣಂಬೂರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಸಂಯೋಜನೆಯಲ್ಲಿ ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನ ಮತ್ತು ಗಾಯತ್ರಿ ಮಹಿಳಾ ಸಮಿತಿಯ ಸಹಕಾರದಲ್ಲಿ ಸೆ. 17ರಂದು ಬೆಳಗ್ಗೆ 9ಕ್ಕೆ ದೈವಸ್ಥಾನದ ವಠಾರದಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಜರಗಲಿದೆ. ಮಧ್ನಾಹ್ಯ 12ಕ್ಕೆ ಭಜನ ಸಂಕೀರ್ತನೆ, ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ.

ಟಾಪ್ ನ್ಯೂಸ್

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.