ಗ್ರೀನ್‌ ಕಾರಿಡಾರ್‌ ಶಾರ್ಟ್‌ ಫಿಲ್ಮ್‌ ಸ್ಪರ್ಧೆ

Team Udayavani, Feb 9, 2018, 4:18 PM IST

ಪುಣೆ: ಅತ್ಯಾಧುನಿಕ ವೈದ್ಯಕೀಯ ಸಂಶೋಧನೆಯಲ್ಲಿ ಅಂಗಾಂಗ ದಾನದಿಂದಾಗಿ ರೋಗಿಯೊಬ್ಬನ ಜೀವ ಉಳಿ ಸುವ ಅವಕಾಶವಿದೆ. ಆದರೆ ಜನರಲ್ಲಿ ಮೂಡಿರುವ ತಪ್ಪು ಅಭಿಪ್ರಾಯಗಳಿಂದಾಗಿ ಭಾವ ನಾತ್ಮಕ, ಸಾಮಾಜಿಕ ಅಡತಡೆ ಗಳಿಂದಾಗಿ ಅಂಗಾಂಗ ದಾನದ ಬಗ್ಗೆ  ಒಲವು ವ್ಯಕ್ತವಾಗುತ್ತಿಲ್ಲ. ಈ ಬಗ್ಗೆ  ಸಾರ್ವಜನಿಕವಾಗಿ ಇದರ ಮಹತ್ವವನ್ನು ತಿಳಿಸಿ ಜನರಲ್ಲಿ ವ್ಯಾಪಕವಾದ ಜನ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ.   ಅಂಗಾಂಗ  ದಾನದ ಬಗ್ಗೆ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಪುಣೆಯ ಸ್ವಯಂ ಸೇವಾ ಸಂಸ್ಥೆ ರಿಬರ್ಥ್ ಫೌಂಡೇಶನ್‌ ವತಿಯಿಂದ ಗ್ರೀನ್‌ ಕಾರಿಡಾರ್‌ ಶಾರ್ಟ್‌ ಫಿಲ್ಮ… ಸ್ಪರ್ಧೆಯನ್ನು ಆಯೋಜಿಸಲಾಗುವುದು. ಇಂದಿನ ಯುವ ಜನಾಂಗ ಸಾಮಾಜಿಕ ಜಾಲ ತಾಣಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದು ಕಿರು ಚಿತ್ರಗಳನ್ನು ಸಾಮಾಜಿಕ ಜಾಲ ತಾಣಗಳ ಮೂಲಕ  ಹೆಚ್ಚು ಪಸರಿಸುವ ಮೂಲಕ ಅಂಗಾಂಗ ದಾನದ ಮಹತ್ವದ ಬಗ್ಗೆ ಸಾಮಾಜಿಕ ಜನ ಜಾಗೃತಿ ಮೂಡಿಸುವಲ್ಲಿ ಈ ಹೆಜ್ಜೆ ಹೆಚ್ಚು ಪರಿಣಾಮಕಾರಿ ಆಗಬಲ್ಲುದೆಂಬ ವಿಶ್ವಾಸ ನಮ್ಮದಾಗಿದೆ. ಮುಖ್ಯವಾಗಿ  ಮಾಧ್ಯಮ ರಂಗ, ಸಾಮಾಜಿಕ ಸಂಸ್ಥೆಗಳು ಇದಕ್ಕೆ ಹೆಚ್ಚು ಮಹತ್ವ ನೀಡಿ ಪ್ರೋತ್ಸಾಹಿಸಬೇಕು ಎಂದು ರೀಬರ್ತ್‌ ಫೌಂಡೇಶನ್‌ ಅಧ್ಯಕ್ಷ ರಾಜೇಶ್‌ ಆರ್‌.  ಶೆಟ್ಟಿ  ಅವರು ನುಡಿದರು.

ಅವರು ಫೆ. 7 ರಂದು ನಗರದ ಪ್ರಸ್‌ ಕ್ಲಬ್‌ನಲ್ಲಿ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜೇಶ್‌ ಶೆಟ್ಟಿ ಅವರು, ಕಳೆದ ವರ್ಷ ರೀಬರ್ತ್‌ ಸಂಸ್ಥೆಯಿಂದ ಪ್ರಥಮವಾಗಿ ಇಂತಹ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು,  ಉತ್ತಮ ಪ್ರತಿಕ್ರಿಯೆ ದೊರೆತಿದೆ. ದೇಶದಾದ್ಯಂತ ಸುಮಾರು 96 ನೋಂದಣಿಗಳು ಬಂದಿದ್ದು ಬಹುಮಾನ ವಿತರಣಾ ಸಮಾರಂಭಕ್ಕೆ ಪುಣೆ ಮೇಯರ್‌ ಮುಕ್ತಾ ತಿಲಕ್‌, ಪುಣೆ ಮನಪಾ ಆಯುಕ್ತರಾದ ಕುಣಾಲ್‌ ಕುಮಾರ್‌ ಮಾತ್ತಿತರ ಕ್ಷೇತ್ರದ ಗಣ್ಯರು ಆಗಮಿಸಿ ಪ್ರೋತ್ಸಾಹಿಸಿದ್ದರು. ಪ್ರಸ್ತುತ ದ್ವಿತೀಯ ವರ್ಷ  ಸುಮಾರು  ಮೂರು ಲಕ್ಷದ ನಲವತ್ತು ಸಾವಿರ ಮೊತ್ತದ ಬಹುಮಾನವನ್ನು ಅತ್ಯುತ್ತಮ ಫಿಲ್ಮ…ಗಳಿಗೆ ನೀಡಲಾಗುವುದು.  5 ನಿಮಿಷಗಳ ಕಿರು ಚಿತ್ರವನ್ನು ತಯಾರಿಸಲು ಕಾಲಾವಕಾಶವಿದೆ. ಯಾವುದೇ ರೀತಿಯ ಪ್ರವೇಶ ಶುಲ್ಕವಿಲ್ಲದೆ ಮಾ.  15 ರವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದ್ದು ಆಯ್ಕೆಗೊಂಡ  ಅತ್ಯುತ್ತಮ ಕಿರುಚಿತ್ರಕ್ಕೆ ಮಾ. 25 ರಂದು ನಡೆಯುವ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಒಂದು ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ನೀಡಲಾಗುವುದು. ಅಲ್ಲದೆ ದ್ವಿತೀಯ, ತೃತೀಯ, ಶ್ರೇಷ್ಠ ನಟ, ಶ್ರೇಷ್ಠ ನಟಿ, ಅತ್ಯುತ್ತಮ ಛಾಯಾಚಿತ್ರ, ಎಡಿಟಿಂಗ್‌, ಸೌಂಡ್‌ ಮುಂತಾದ ಹಲಾವಾರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು. ಈಗಾಗಲೇ ದೇಶದ ವಿವಿಧ ರಾಜ್ಯಗಳಿಂದ ಹಾಗೂ ಬಾಂಗ್ಲಾದೇಶದಿಂದಲೂ ಎರಡು ಫಿಲ್ಮ…ಗಳು ನೋಂದಣಿಗೊಂಡಿದ್ದು ಸುಮಾರು 200 ಕ್ಕೂ ಹೆಚ್ಚು  ಫಿಲ್ಮ…ಗಳು  ನೋಂದಣಿಗೊಳ್ಳುವ ಉದ್ದೇಶ ನಮ್ಮದಾಗಿದೆ ಎಂದು ತಿಳಿಸಿದರು.

ಉಪಸ್ಥಿತರಿದ್ದ ರಾಜ್ಯದ ಸಾಂಸ್ಕೃತಿಕ ಖಾತೆಯ ಸಲಹಾಗಾರರಾದ ಚಲನಚಿತ್ರ ನಿರ್ದೇಶಕ, ನಿರ್ಮಾಪಕರಾದ ಮಿಲಿಂದ್‌ ಲೇಲೆ ಮಾತನಾಡಿ,  ಅಂಗಾಂಗ ದಾನದ ಮಹತ್ವವನ್ನು ಸಾರುವ ಕಿರು ಚಿತ್ರಗಳಿಂದ ವಿವಿಧ ಜಾಲ ತಾಣಗಳಲ್ಲಿ  ಪ್ರಸಾರಗೊಂಡು ಯುವ ವರ್ಗಕ್ಕೆ ಜಾಗೃತಿ ತಲುಪಿಸುವ ಕಾರ್ಯ ಆಗಲಿದೆ. ಇದು ಸಮಾಜದ ಪ್ರತೀ ವರ್ಗಕ್ಕೂ ಮಾಹಿತಿ ತಲುಪುವಲ್ಲಿ ಸಹಕಾರಿಯಾಗಲಿದೆ. ಮೆದುಳು ನಿಷ್ಕಿೃàಯಗೊಂಡಂತಹ ವ್ಯಕ್ತಿಯೊಬ್ಬನ ಅವಯವಗಳಿಂದ ಅನೇಕರ ಪ್ರಾಣಗಳನ್ನು ಉಳಿಸುವ ಕಾರ್ಯ ಆಗಲಿದ್ದು  ಜನರಿಗೆ ಸೂಕ್ತ ಮಾಹಿತಿಗಳಿಂದ ಮಾತ್ರ ಅರಿವನ್ನು ಮೂಡಿಸಬೇಕಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರಕಾರದ ಅವಯವದಾನ ಕಕ್ಷೆಯ ಸಮನ್ವಯಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಆರತಿ ಗೋಖಲೆ  ಮಾತನಾಡಿ, ಅಂಗಾಂಗ ದಾನವನ್ನು ಸಾರುವ ಕಿರುಚಿತ್ರಗಳ ಮಾಧ್ಯಮದಿಂದ ಜನರಲ್ಲಿ ಮಹತ್ತರ ಪ್ರಭಾವ ಬೀರಲಿದೆ. ಇಂದಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಪ್ರಕಾರಗಳಿಂದ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಆಗುತ್ತಿದ್ದು ವರ್ಷದಿಂದ ವರ್ಷಕ್ಕೆ ದಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಾಧ್ಯಮಗಳ ಪಾತ್ರ ಈ ನಿಟ್ಟಿನಲ್ಲಿ ಮಹತ್ತರವಾದುದು ಎಂದರು.  ಈ ಸಂದರ್ಭ ಶಾರ್ಟ್‌ ಫಿಲ್ಮ… ಸ್ಪರ್ಧೆಯ ಲೋಗೋ ಬಿಡುಗಡೆಗೊಳಿಸಲಾಯಿತು. ರೀಬರ್ತ್‌ ಸಂಸ್ಥೆಯ ಸ್ವಯಂಸೇವಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಏನಿದು ರೀಬರ್ತ್‌ ?
ಪುಣೆಯಲ್ಲಿ ವಿವಿಧ ಕ್ಷೇತ್ರದಲ್ಲಿರುವ ಉದ್ಯಮ ಕ್ಷೇತ್ರದ ಸಾಮಾಜಿಕ ಕಾರ್ಯಕರ್ತರು ಸೇರಿಕೊಂಡು ರೀಬರ್ತ್‌ ಎನ್ನುವ ಸ್ವಯಂಸೇವಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ಮುಖ್ಯವಾಗಿ ಅಂಗಾಂಗದಾನದ ಬಗ್ಗೆ ಜನ ಜಾಗೃತಿ ಮೂಡಿಸುವಲ್ಲಿ ಈ ಸಂಸ್ಥೆ ನಿರೀಕ್ಷೆಗೂ ಮೀರಿ ಶ್ರಮಿಸುತ್ತಿದೆ. ಇದರಲ್ಲಿ ಡಾಕ್ಟರ್‌ಗಳು, ಎಂಜಿನಿಯರ್‌ಗಳು ಸೇರಿದಂತೆ ವಿವಿಧ ಕ್ಷೇತ್ರದ ದಿಗ್ಗಜರು ಕೈಜೋಡಿಸಿ¨ªಾರೆ.  ಪುಣೆ  ರೀಬರ್ತ್‌ ಫೌಂಡೇಶನ್‌ ಆರಂಭಿಸಿದ ಟೋಲ್‌ ಫ್ರೀ ನಂಬರ್‌ 18002747444 ನ್ನು ರಾಜ್ಯ ಸರಕಾರವು ಅಧಿಕೃತ ಅಂಗಾಂಗದಾನದ ಟೋಲ್‌ ಫ್ರೀ ನಂಬರ್‌ ಆಗಿ ನೋಂದಣಿಗೊಳಿಸಿದೆ.  ಮಾತ್ರವಲ್ಲದೆ ಸಂಸ್ಥೆಯ ಅಧ್ಯಕ್ಷರಾದ ಪುಣೆಯ ಹೊಟೇಲ್‌ ಉದ್ಯಮಿ ರಾಜೇಶ್‌ ಆರ್‌. ಶೆಟ್ಟಿ ಅವರನ್ನು ರಾಜ್ಯ ಸರ್ಕಾರವು ಅಂಗಾಂಗ ದಾನದ ಸಂದರ್ಭದಲ್ಲಿ ಸಮನ್ವಯ ಸಮಿತಿಯ ಸದಸ್ಯರಾಗಿಯೂ ನೇಮಕಗೊಳಿಸಿ¨ªಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಗ್ರಾಮೀಣ ಭಾಗಗಳ ಜನರಲ್ಲೂ ಜಾಗೃತಿ ಮೂಡಿಸಿ ಜೀವರಕ್ಷಣೆಗೆ ಆದ್ಯತೆ ನೀಡುವ ಮಾನವೀಯ ಉದ್ದೇಶದಿಂದ ಸಂಸ್ಥೆ ಕಾರ್ಯ ಪ್ರವೃತ್ತವಾಗಲಿದೆ.

ಚಿತ್ರ-ವರದಿ :ಕಿರಣ್‌ ಬಿ. ರೈ ಕರ್ನೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ