Udayavni Special

ಜಿಎಸ್‌ಬಿ ಸೇವಾ ಮಂಡಲ ಮುಂಬಯಿ: 67ನೇ ಗಣೇಶೋತ್ಸವದ 3ನೇ ಸಮಾಲೋಚನ ಸಭೆ


Team Udayavani, Aug 29, 2021, 2:45 PM IST

ಜಿಎಸ್‌ಬಿ ಸೇವಾ ಮಂಡಲ ಮುಂಬಯಿ: 67ನೇ ಗಣೇಶೋತ್ಸವದ 3ನೇ ಸಮಾಲೋಚನ ಸಭೆ

ಸಯಾನ್‌: ಜಿಎಸ್‌ಬಿ ಸೇವಾ ಮಂಡಲ ಮುಂಬಯಿ ಇದರ ವಿಶ್ವವಿಖ್ಯಾತ 67ನೇ ವಾರ್ಷಿಕ ಗಣೇಶೋತ್ಸವವು ಸೆ. 10ರಿಂದ ಸೆ. 14ರ ವರೆಗೆ ಐದು ದಿನಗಳ ಕಾಲ ಕಿಂಗ್‌ಸರ್ಕಲ್‌ನ ಶ್ರೀ ಸುಕೃತೀಂದ್ರ ನಗರದ ಎ. ರಾಮನಾಯಕ್‌ ಹಾಲ್‌ ಹಾಗೂ ಜಿಎಸ್‌ಬಿ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಜರಗಲಿದ್ದು, ಇದರ ಪೂರ್ವ ತಯಾರಿ ಸಭೆಯು ಆ. 21ರಂದು ಸಯಾನ್‌ನ ಶ್ರೀ ಗುರುಗಣೇಶ್‌ ಸಭಾಗೃಹದಲ್ಲಿ ನಡೆಯಿತು.

ವಾರ್ಷಿಕ ಗಣೇಶೋತ್ಸವವು ಶ್ರೀ ಕಾಶೀ ಮಠಾಧೀಶ ವೃಂದಾವನಸ್ಥ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀಮದ್‌ ಸಮ್ಯಮೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ನಡೆಯಲಿದ್ದು, ಮೂರನೇ ಪೂರ್ವಭಾವಿ ಸಭೆಯಲ್ಲಿ ಸೇವಾ ಮಂಡಲದ ಕಾರ್ಯಕಾರಿ ಸಮಿತಿ, ಸ್ವಯಂ ಸೇವಕರು ಉಪಸ್ಥಿತರಿದ್ದರು. ಗಣೇಶೋತ್ಸವ ಆಯೋಜನ ಸಮಿತಿಯ ಸಂಚಾಲಕ ಡಾ| ಭುಜಂಗ ಪೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಸೇವಾ ಮಂಡಲದ ಕಾರ್ಯದರ್ಶಿ ಶಿವಾನಂದ ಭಟ್‌ ಪ್ರಾರ್ಥನೆಗೈದರು.

ಡಾ| ಭುಜಂಗ ಪೈ ಅವರು ವಾಲ್ಕೇಶ್ವರ ಶ್ರೀ ಕಾಶೀ ಮಠದ ಉಭಯ ವೃಂದಾವನಸ್ಥ ಗುರುವರ್ಯರನ್ನು ಪ್ರಾರ್ಥಿಸಿ ಸ್ವಾಗತಿಸಿದರು. ಹಿಂದಿನ ಸಮಾಲೋಚನ ಸಭೆಯ ವರದಿಯನ್ನು ವಾಚಿಸಿ ಅನುಮೋದನೆ ಪಡೆಯಲಾಯಿತು. ಈ ವರ್ಷದ ಗಣೇಶೋತ್ಸವವು ಸರಕಾರಿ ಮಾರ್ಗ ಸೂಚಿಗಳಂತೆ ಜರಗಬೇಕು. ಕೋವಿಡ್‌ ಸಾಂಕ್ರಮಿಕದಿಂದ ರಕ್ಷಣೆ ಪಡೆಯಲು ಸರ್ವರು ಆದಷ್ಟು ಬೇಗ ಕೋವಿಡ್‌ ಲಸಿಕೆಯನ್ನು ಪಡೆಯಬೇಕು. ಸೇವಾ ಮಂಡಲವು ಇತ್ತೀಚೆಗೆ ದಾನಿಗಳ ಸಹಕಾರದಿಂದ ಮುಂಬಯಿಯ ವಿವಿಧ ಸ್ಥಳಗಳಲ್ಲಿ ಉಚಿತ ಕೊರೊನಾ ಲಸಿಕೆ ಅಭಿಯಾನವನ್ನು ಆಯೋಜಿಸಿ ಸಹಕರಿಸಿದೆ ಎಂದು ನುಡಿದು ಸರ್ವರ ಸಹಕಾರ ಅಗತ್ಯವಾಗಿದೆ ಎಂದರು.

ಇದನ್ನೂ ಓದಿ:ಪಶ್ಚಿಮಘಟ್ಟದ ರಮಣೀಯ ತಾಣ ಕ್ಯಾತನಮಕ್ಕಿ

ಸೇವಾ ಮಂಡಲದ ಅಧ್ಯಕ್ಷ ರಮೇಶ್‌ ಭಂಡಾರ್ಕರ್‌ ಅವರು ಮಾತನಾಡಿ, ಗಣೇಶೋತ್ಸವದ ಮಂಟಪ ನಿರ್ಮಾಣದ ಕುರಿತು ಮಾಹಿತಿ ನೀಡಿದರು. ಜತೆ ಸಂಚಾಲಕ ಜಿ. ಡಿ. ರಾವ್‌ ಅವರು ಗಣೇಶ ವಿಗ್ರಹವು ಸರಕಾರಿ ನಿಯಮಂತೆ ನಾಲ್ಕು ಅಡಿ ಮಾತ್ರ ಎತ್ತರ ಇರಬೇಕು. ಕಳೆದ ವರ್ಷ ವಿಗ್ರಹವು ಅತೀ ಸುಂದರವಾಗಿ ಮೂಡಿ ಬಂದಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ನಮ್ಮ ಮಂಡಳಿಯು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ನುಡಿದು ಶುಭಹಾರೈಸಿದರು.

ಗಣೇಶೋತ್ಸವ ಆಯೋಜನ ಸಮಿತಿಯ ಮಾಜಿ ಸಂಚಾಲಕ ಜಿ. ಜಿ. ಪ್ರಭು ಅವರು ಮಾತನಾಡಿ, ಬರುವ ದಿನಗಳಲ್ಲಿ ಸರಕಾರದ ನಿಯಮಾ ವಳಿಯಲ್ಲಿ ಸೂಕ್ತ ಮಾರ್ಪಾಡು ಮಾಡಿ ವಿಜೃಂಭಣೆಯಿಂದ ಗಣೇಶೋತ್ಸವ ಜಗರುವಂತಾಗಬೇಕು ಎಂದು ನುಡಿದು ಹಾರೈಸಿದರು. ಸೇವಾ ಮಂಡಲದ ಟ್ರಸ್ಟಿ ಆರ್‌. ಜಿ. ಭಟ್‌ ಅವರು ಮಾತನಾಡಿ, ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್‌ ನಿಮಿತ್ತ ಲಾಕ್‌ಡೌನ್‌ ಸಮಯದಲ್ಲಿ ತೊಂದರೆಗೀಡಾದ ಅಪಾರ ಮಂದಿಗೆ ಧನ ಸಹಾಯ,ನಿತ್ಯ ಮನೆಯಲ್ಲಿ ಬೇಕಾಗುವ ಸಾಮಾ ಗ್ರಿಗಳ ಕಿಟ್‌, ಉಚಿತ ವ್ಯಾಕ್ಸಿನೇಶನ್‌, ಆಸ್ಪತ್ರೆ ಗಳಲ್ಲಿ ದಾಖಲಾದ ರೋಗಿಗಳ ಸಂಬಂಧಿಕರಿಗೆ ಉಚಿತ ಅನ್ನದಾನ, ಮಹಾರಾಷ್ಟ್ರ ನೆರೆ ಪೀಡಿತರಿಗೆ ನೆರವು ಇತ್ಯಾದಿ ಕಾರ್ಯಗಳಿಗೆ ಸೇವಾ ಮಂಡಲವು ಸಹಕರಿಸಿದೆ ಎಂದರು.

ಸತೀಶ್‌ ರಾಮ ನಾಯಕ್‌ ಅವರು ಸರಕಾರದ ಗಣೇಶೋತ್ಸವದ ನಿಯಮಾವಳಿಯಲ್ಲಿ ಸೂಕ್ತ ಬದಲಾವಣೆಗಾಗಿ ಬಿಎಂಸಿ ಸಮನ್ವಯ ಸಮಿತಿ ಪ್ರಯತ್ನಿಸುತ್ತಿದೆ ಎಂದರು. ಸೇವಾ ಮಂಡಲದ ಜತೆ ಕೋಶಾಧಿಕಾರಿ ವಿಷ್ಣು ಕಾಮತ್‌ ಅವರು ಗಣೇಶೋತ್ಸವ ಭಕ್ತರಿಗೆ ಪೂಜೆ, ಸೇವೆಯನ್ನು ಆ್ಯಪ್‌ ಮೂಲಕ ಬುಕ್‌ ಮಾಡಲು ಉತ್ತೇಜಿಸಬೇಕು ಎಂದರು. ಮಂಡಲದ ಅಧ್ಯಕ್ಷ ರಮೇಶ್‌ ಭಂಡಾರ್ಕರ್‌ ವಂದಿಸಿದರು.

ಟಾಪ್ ನ್ಯೂಸ್

2024ರ ರಣರಂಗಕ್ಕೂ ಮೊದಲಿದೆ 16 ಕದನ

2024ರ ರಣರಂಗಕ್ಕೂ ಮೊದಲಿದೆ 16 ಕದನ

ಮೀನುಗಾರರ ಸಂಕಷ್ಟ ನಿವಾರಿಸದ ಪರಿಹಾರ ನಿಧಿ

ಮೀನುಗಾರರ ಸಂಕಷ್ಟ ನಿವಾರಿಸದ ಪರಿಹಾರ ನಿಧಿ

EXAM

ಫೇಲಾದವರು ಒಂದು ವರ್ಷ ಕಾಯಲೇಬೇಕು; ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಇಲ್ಲ

ಬಂದ್‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ತರವೇ?

ಬಂದ್‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ತರವೇ?

ಬಂದ್‌ ನೀರಸ; ಪಂಜಾಬ್‌, ಹರಿಯಾಣದಲ್ಲಿ ಯಶಸ್ವಿ

ಬಂದ್‌ ನೀರಸ; ಪಂಜಾಬ್‌, ಹರಿಯಾಣದಲ್ಲಿ ಯಶಸ್ವಿ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಕಷ್ಟದಲ್ಲಿರುವ ಸಮಾಜ ಬಾಂಧವರ ಕಣ್ಣೀರೊರೆಸುವ ಧ್ಯೇಯ: ಸುಕುಮಾರ್‌ ಎನ್‌. ಶೆಟ್ಟಿ

ಸಂಕಷ್ಟದಲ್ಲಿರುವ ಸಮಾಜ ಬಾಂಧವರ ಕಣ್ಣೀರೊರೆಸುವ ಧ್ಯೇಯ: ಸುಕುಮಾರ್‌ ಎನ್‌. ಶೆಟ್ಟಿ

ತುಳು ಕೂಟ ಫೌಂಡೇಶನ್‌ ನಲಸೋಪರ ವಾರ್ಷಿಕ ಮಹಾಸಭೆ

ತುಳು ಕೂಟ ಫೌಂಡೇಶನ್‌ ನಲಸೋಪರ ವಾರ್ಷಿಕ ಮಹಾಸಭೆ

ಯಕ್ಷಗಾನ ಕ್ಷೇತ್ರಕ್ಕೆ ಅಜೆಕಾರು ಕಲಾಭಿಮಾನಿ ಬಳಗದ ಕೊಡುಗೆ ಅಪಾರ: ಶಾಂತರಾಮ್‌ ಶೆಟ್ಟಿ 

ಯಕ್ಷಗಾನ ಕ್ಷೇತ್ರಕ್ಕೆ ಅಜೆಕಾರು ಕಲಾಭಿಮಾನಿ ಬಳಗದ ಕೊಡುಗೆ ಅಪಾರ: ಶಾಂತರಾಮ್‌ ಶೆಟ್ಟಿ 

ನೊಂದವರಿಗೆ ನೆರಳಾಗುತ್ತಿರುವ ಒಕ್ಕೂಟದ ಕಾರ್ಯ ಸ್ತುತ್ಯರ್ಹ

ನೊಂದವರಿಗೆ ನೆರಳಾಗುತ್ತಿರುವ ಒಕ್ಕೂಟದ ಕಾರ್ಯ ಸ್ತುತ್ಯರ್ಹ

67ನೇ ವಾರ್ಷಿಕ ಗಣೇಶೋತ್ಸವ ಸಂಪನ್ನ; ಸ್ನೇಹ ಸಮ್ಮಿಲನ

67ನೇ ವಾರ್ಷಿಕ ಗಣೇಶೋತ್ಸವ ಸಂಪನ್ನ; ಸ್ನೇಹ ಸಮ್ಮಿಲನ

MUST WATCH

udayavani youtube

ದೇವಸ್ಥಾನಕ್ಕೆ ಬೀಗ ದೇವರ ದರ್ಶನಕ್ಕಾಗಿ ಬಾಗಿಲ ಬಳಿ ಕಾದು ನಿಂತ ಬಸವ

udayavani youtube

ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ

udayavani youtube

ಭಾರತದಲ್ಲಿ ಹಸಿರು ಕ್ರಾಂತಿ: ಫಲ ಏನಾಯ್ತು?

udayavani youtube

ಪ್ರಿಯಕರನ ಮೋಹಕ್ಕೆ ಬಿದ್ದು ತಾಳಿ ಕಟ್ಟಿದ ಗಂಡನಿಗೇ ಇಟ್ಳು ಮುಹೂರ್ತ

udayavani youtube

Horror, Romance, Comedyಯಲ್ಲಿ ಅನಂತ ನಾಗ್ ಅವ್ರ ಆಯ್ಕೆ ಯಾವುದಂದ್ರೆ…?

ಹೊಸ ಸೇರ್ಪಡೆ

ದ.ಕ., ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ

ದ.ಕ., ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ

ಶಿಲಾನ್ಯಾಸಕ್ಕೆ ವರ್ಷವಾಗುತ್ತಿದ್ದರೂ ಕಾಮಗಾರಿ ಅಪೂರ್ಣ

ಶಿಲಾನ್ಯಾಸಕ್ಕೆ ವರ್ಷವಾಗುತ್ತಿದ್ದರೂ ಕಾಮಗಾರಿ ಅಪೂರ್ಣ

ಹಿರಿಯ ಸಾಹಿತಿಗಳಿಗೆ ಸ್ವಗೃಹದಲ್ಲೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

ಹಿರಿಯ ಸಾಹಿತಿಗಳಿಗೆ ಸ್ವಗೃಹದಲ್ಲೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

ಅಂಚೆ ಇಲಾಖೆ- ಎಲ್‌ಐಸಿ ಒಪ್ಪಂದ

ಅಂಚೆ ಇಲಾಖೆ- ಎಲ್‌ಐಸಿ ಒಪ್ಪಂದ

2024ರ ರಣರಂಗಕ್ಕೂ ಮೊದಲಿದೆ 16 ಕದನ

2024ರ ರಣರಂಗಕ್ಕೂ ಮೊದಲಿದೆ 16 ಕದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.