“ಕೋವಿಡ್ ನಿಯಂತ್ರಣಕ್ಕೆ ಮಾರ್ಗಸೂಚಿಗಳ ಪಾಲನೆ ಅಗತ್ಯ’
Team Udayavani, Apr 18, 2021, 11:53 AM IST
ಮುಂಬಯಿ: ಮಲಾಡ್ ಪಶ್ಚಿಮದ ಮಾರ್ವೆ ರೋಡ್‌ನಲ್ಲಿನ ಚೌಕ್ಸಿ ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್ ಲಸಿಕೆ ಕೇಂದ್ರವನ್ನು ಆರಂಭಿಸಲಾಯಿತು. ಉತ್ತರ ಮುಂಬಯಿ ಸಂಸದ ಗೋಪಾಲ್ ಸಿ. ಶೆಟ್ಟಿ ಅವರು ನೂತನ ಕೇಂದ್ರವನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.
ಕೊರೊನಾ ಸೋಂಕಿನಿಂದ ಜನರನ್ನು ರಕ್ಷಿಸುವಲ್ಲಿ ಕೋವಿಡ್ ಲಸಿಕೆ ಅತ್ಯವಶ್ಯವಾಗಿದೆ. ಈ ಬಗ್ಗೆ ಅನುಮಾನ ಪಡಬೇಕಾಗಿಲ್ಲ. ಕೋವಿಡ್ ಲಸಿಕೆಯು ಸೋಂಕಿನಿಂದ ರಕ್ಷಿಸುವ ಅಗತ್ಯ ಕ್ರಮಗಳಲ್ಲಿ ಒಂದಾಗಿದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕನೂ ಲಸಿಕೆಯನ್ನು ಪಡೆದು ಆರೋಗ್ಯವಂತನಾಗಬೇಕು. ಪ್ರತಿಯೋರ್ವ ನಾಗರಿಕರ ಸ್ವಾಸ್ಥ éವು ಸ್ವಸ್ಥ ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಪೂರಕ. ಕೋವಿಡ್ ಮಾರ್ಗಸೂಚಿಗಳ ಪಾಲನೆ ಕೋವಿಡ್‌ನಿಂದ ಕಾಪಾಡಿಕೊಳ್ಳುವ ಮೊದಲ ವಿಧಾನವಾಗಿದೆ ಎಂದು ಕನ್ನಡಿಗ ಸಂಸದ ಗೋಪಾಲ್ ಶೆಟ್ಟಿ ತಿಳಿಸಿದರು.
ಪರಸ್ಪರ ಸೇರುವಲ್ಲಿ ಅಪಾಯವನ್ನು ಎಳೆದುಕೊಂಡಂತೆ. ಇವೆಲ್ಲವೂಗಳಿಂದ ಸುರಕ್ಷಿತರಾಗಲು ಮಾಸ್ಕ್ ಧರಿಸುವುದು ಅತೀ ಅಗತ್ಯವಾಗಿದೆ. ಆದ್ದರಿಂದ ಜನರು ತಮ್ಮ ಸುರಕ್ಷಿತ ಅಭ್ಯಾಸಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಸೂಕ್ತ ರೀತಿಯಲ್ಲಿ ಬಳಸಿಕೊಂಡು ಸಮಾಜದ ಸಂಪೂರ್ಣ ಕಾಳಜಿ ವಹಿಸಬೇಕು. ಸೋಂಕು ತಡೆಗಟ್ಟುವಿಕೆ ಮತ್ತು ರೋಗ ನಿಯಂತ್ರಣದ ಬಗ್ಗೆ ಸ್ವತಃ ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಸರಕಾರದ ಕಾನೂನು ಪಾಲನೆ ಎಲ್ಲರ ಜವಾಬ್ದಾರಿಯಾಗಬೇಕು ಎಂದು ಅವರು ವಿನಂತಿಸಿದರು.
ಸ್ಥಾನೀಯ ನಗರ ಸೇವಕಿ ಯೋಗಿತಾ ಸುನಿಲ್ ಕೋಲಿ ಮುಂದಾಳತ್ವದಲ್ಲಿ ಆರಂಭಿಸಲ್ಪಟ್ಟ ಲಸಿಕೆ ಕೇಂದ್ರದ ಉದ್ಘಾಟನ ಕಾರ್ಯಕ್ರಮದಲ್ಲಿ ಮುಂಬಯಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಣೇಶ್ ಖಂಕರ್, ಕಾರ್ಯದರ್ಶಿ ವಿನೋದ್ ಶೇಲಾರ್, ಬಿಜೆಪಿ ಧುರೀಣರಾದ ದೀಪಕ ಜೋಶಿ, ನರೇಂದ್ರ ರಾಥೋಡ್ ಮತ್ತು ಮಂಡಲ್ ವಾರ್ಡ್‌ನ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ
ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ; ಪೂರಕ ಸ್ಪಂದನೆ ಎಂದ ಸಚಿವ
ಕೆಲಸಕಿದ್ದ ಮನೆಯಲ್ಲಿ ನಗನಾಣ್ಯ ಕದ್ದ ತಾಯಿ-ಮಗಳು
ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಿದ್ದತೆ ಮುಖ್ಯವೆಂದ ಡಿಕೆಶಿ
ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಗೆ 19 ಕೋ ರೂ ಲಾಭ : ತೇಲ್ಕೂರ