ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನ: ಮುಂಬಯಿಗರಿಂದ ಸಂಕಷ್ಟ ಚತುರ್ದಶಿ ಪೂಜೆ
Team Udayavani, Mar 25, 2021, 11:56 AM IST
ಮುಂಬಯಿ: ದೇವಾಡಿಗ ಜನಾಂಗದ ಕುಲದೇವತೆ ಉಡುಪಿ ಬಾರ್ಕೂರಿನ ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ ಮಾ. 16ರಂದು ಸಂಕಷ್ಟ ಚತುರ್ದಶಿ ಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ಬಾಕೂìರು ಇದರ ಪ್ರಧಾನ ಕಾರ್ಯ ದರ್ಶಿ ನರಸಿಂಹ ಬಿ. ದೇವಾಡಿಗ, ಕೋಶಾಧಿಕಾರಿ ಬಿ. ಜನಾರ್ದನ ದೇವಾಡಿಗ, ವಿಶ್ವಸ್ಥ ಸದಸ್ಯ ನಾರಾಯಣ ಎಂ. ದೇವಾಡಿಗ, ವಿಶ್ವಸ್ಥ ಸದಸ್ಯ ಹಾಗೂ ಮುಂಬಯಿ ಸಮಿತಿಯ ಮುಖ್ಯ ಸಂಚಾಲಕ ಎಚ್. ಮೋಹನ್‌ದಾಸ್, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ರವಿ ಎಸ್. ದೇವಾಡಿಗ, ದೇವಾಡಿಗ ಸಂಘ ಉಡುಪಿ ಅಧ್ಯಕ್ಷ ರತ್ನಾಕರ ದೇವಾಡಿಗ, ರೋನ್ಸ್ ಬಂಟ್ವಾಳ್, ಕೊಡುಗೈದಾನಿಗಳಾದ ಮಲ್ಲಿಕಾ ನಾರಾಯಣ್ ದುಬಾೖ, ಶಿಖಾ ಎನ್. ದೇವಾಡಿಗ, ಗಣೇಶ್ ರಾವ್ ಶಾರದಾ ಭವನ ಮಾಟುಂಗಾ, ವಸಂತಿ ದೇವಾಡಿಗ ಉಡುಪಿ, ಶರ್ಮಿಳಾ ದೇವಾಡಿಗ ಬೈಂದೂರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪೂಜಾವಿಧಿಗಳ ಬಳಿಕ ಏಕನಾಥೇಶ್ವರಿ ದೇವಸ್ಥಾನದ ಬಾಕೂìರು ಅಜ್ಜಿ ಮನೆಯ ಬುಡ್ಡು ರಾಮ ಸೇರಿಗಾರ ಸಭಾಂಗಣದಲ್ಲಿ ಸಮುದಾಯದಲ್ಲಿನ ಯುವ ಪ್ರತಿಭೆ, ಡ್ರೋನ್ ದ್ರೋಣ ಖ್ಯಾತಿಯ ಛಾಯಾಚಿತ್ರಗ್ರಾಹಕ, ವಾಯ್ಸ ಆಫ್ ಕರಾವಳಿ ಇವರ ಆಡಳಿತ ನಿರ್ದೇಶಕ ಕೀರ್ತನ್ ದೇವಾಡಿಗ ಇವ ರನ್ನು ಸಮ್ಮಾನಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಕಿರಣ್ ಭಟ್ ವಿವಿಧ ಪೂಜೆಗಳನ್ನು ನೆರವೇರಿಸಿ ತೀರ್ಥ ಪ್ರಸಾದ ನೀಡಿದರು.
ಎಚ್. ಮೋಹನ್‌ದಾಸ್ ಸ್ವಾಗತಿಸಿ ದರು. ನರಸಿಂಹ ಬಿ. ದೇವಾಡಿಗ ಅವರು ಅತಿಥಿಗಳನ್ನು ಹಾಗೂ ಸಮ್ಮಾನಿ ತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂ ಪಿಸಿದರು. ಜನಾರ್ದನ ದೇವಾಡಿಗ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೋವಿಡ್ ನಿರ್ವಹಣೆ ಹಿನ್ನೆಲೆ ರಾಜ್ಯಗಳಿಗೆ ನೆರವು ನೀಡಿ : ಸೇನೆಗೆ ರಕ್ಷಣ ಸಚಿವರ ಸೂಚನೆ
ಮಿಶ್ರಾ ಸ್ಪಿನ್ ದಾಳಿಗೆ ಮಗುಚಿದ ಮುಂಬೈ : ಡೆಲ್ಲಿಗೆ 6 ವಿಕೆಟ್ಗಳ ಗೆಲುವು
ಕೆಂಪು ಪಟ್ಟಿಗೆ ಸೇರಿದ ಭಾರತ ; ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಧಕ್ಕೆ ಇಲ್ಲ: ಐಸಿಸಿ
ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳು ಮುಂದೂಡಿಕೆ
ಮೋದಿ ಭಾಷಣ ‘ನಿಮ್ಮ ತಲೆ ಮೇಲೆ ನಿಮ್ಮ ಕೈ’ ಎಂಬ ಸಂದೇಶ ನೀಡಿದೆ: ಸಿದ್ದರಾಮಯ್ಯ ಟೀಕೆ