ಮುಂಬಯಿಯಲ್ಲಿ ಮತ್ತೆ ಮಳೆ ಆರ್ಭಟ


Team Udayavani, Jul 16, 2020, 2:39 PM IST

ಮುಂಬಯಿಯಲ್ಲಿ ಮತ್ತೆ ಮಳೆ ಆರ್ಭಟ

ಮುಂಬಯಿ: ಕೋವಿಡ್ ವೈರಸ್‌ ಪ್ರಕೋಪದ ಮಧ್ಯೆ ಮುಂಬಯಿ ಮತ್ತು ಅದರ ಉಪನಗರಗಳಲ್ಲಿ ಬುಧವಾರ ಮುಂಜಾನೆಯಿಂದ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಸಾಮಾನ್ಯ ಜನಜೀವನ ಅಸ್ತವ್ಯಸ್ತಗೋಂಡಿದೆ.

ಮುಂಬಯಿ ಸಹಿತ ಕೊಂಕಣ ಮಹಾರಾಷ್ಟ್ರದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮಂಗಳವಾರ ಸಂಜೆಯೇ ರೆಡ್‌ ಅಲರ್ಟ್‌ ಜಾರಿಗೊಳಿಸಿತ್ತು. ಧಾರಾಕಾರ ಮಳೆಯೊಂದಿಗೆ ರಸ್ತೆಗಳು ಮುಳುಗಡೆಯಾಗುವುದರೊಂದಿಗೆ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಅಂಧೇರಿ ಸಬ್ವೆಯಲ್ಲಿ ಪ್ರವಾಹ ನೀರು ಹರಿದ ಪರಿಣಾಮ ಅಲ್ಲಿ ವಾಹನ ಸಂಚಾರ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.
ಖಾರ್‌ ಸಬ್‌ವೇಯಲ್ಲೂ ಉತ್ತರ ದಿಕ್ಕಿನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಚಾಂದಿವಲಿ ಜಂಕ್ಷನ್‌ ಮತ್ತು ವಡಾಲಾ ಫ್ರೀವೇಯಲ್ಲೂ ಮಳೆಯಿಂದಾಗಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಹಿಂದ್ಮಾತಾದಲ್ಲಿನ ಸ್ಲಿಪ್‌ ರೋಡ್‌ ಮುಚ್ಚಲ್ಪಟ್ಟಿದೆ ಮತ್ತು ಜಲಾವೃತದಿಂದಾಗಿ ವಾಹನ ಸಂಚಾರವನ್ನು ಹಿಂದ್ಮಾತಾ ಸೇತುವೆಯ ಮೇಲೆ ತಿರುಗಿಸಲಾಗಿದೆ ಎಂದು ಮುಂಬಯಿ ಪೊಲೀಸ್‌ ಜಂಟಿ ಪೊಲೀಸ್‌ ಆಯುಕ್ತ (ಸಂಚಾರ) ಮಧುಕರ್‌ ಪಾಂಡೆ ಹೇಳಿದ್ದಾರೆ. ದಾದರ್‌ ಟ್ರಾಮ್‌ ಟರ್ಮಿನಸ್‌ (ಟಿಟಿ), ಎಸ್‌ವಿ ರೋಡ್‌ ಅಂಧೇರಿ, ಸಾಯಿ ನಾಥ್‌ ಸಬ್ವೆ, ಎಸ್‌ಸಿಎಲ್‌ಆರ್‌ ಸೇತುವೆ, ಬಾಂದ್ರಾ ಮತ್ತು ಎಲ್‌ಜೆ ರಸ್ತೆ ಲಿಂಕ್‌ ರೋಡ್‌, ಮಾಹೀಮ್‌ ಜಂಕ್ಷನ್‌, ಖೇತ್ವಾಡಿ, ಸಯಾನ್‌ ರಸ್ತೆ ಸಂಖ್ಯೆ 24 ಮತ್ತು ಗಾಂಧಿ ಮಾರ್ಕೆಟ್‌ ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ. ಕರಾವಳಿ ಕೊಂಕಣ ಪ್ರದೇಶದಲ್ಲಿ ಮಂಗಳವಾರ ಸಂಜೆಯಿಂದ ಸಾದಾರಣ ಮಳೆಯಾಗಿದೆ.

ಎಲ್ಲಿ ಎಷ್ಟು ಮಳೆ?
ಮುಂಬಯಿಯಲ್ಲಿ ಬುಧವಾರ ಮುಂಜಾನೆ 5ರ ವರೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು 150 ಮಿಲಿಮೀಟರ್‌ (ಎಂಎಂ) ಮಳೆಯಾಗಿದೆ. ಬೆಳಗ್ಗೆ 8:30 ರಿಂದ ಮಧ್ಯಾಹ್ನ 12: 30 ರ ನಡುವೆ ಮುಂಬಯಿಯ ಬಾಂದ್ರಾದಲ್ಲಿ 95 ಮಿ.ಮೀ., ಸಾಂತಾಕ್ರೂಜಲ್ಲಿ 63 ಮಿ.ಮೀ., ರಾಮ್‌ ಮಂದಿರ ಪ್ರದೇಶದಲ್ಲಿ 63 ಮಿ.ಮೀ., ಮಹಾಲಕ್ಷ್ಮೀಯಲ್ಲಿ 53 ಮಿ.ಮೀ. ಮತ್ತು ಕೊಲಾಬಾದಲ್ಲಿ 16 ಮಿ.ಮೀ. ಮಳೆ ದಾಖಲಾಗಿದೆ. ಬುಧವಾರ ಬೆಳಗ್ಗೆ 8.30ರ ವರೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ಡಹಾಣುಮತ್ತು ಅಲಿಬಾಗ್‌ (ರಾಯಗಢ) ವೀಕ್ಷಣಾಲಯಗಳಲ್ಲಿ ಕ್ರಮವಾಗಿ 128 ಮಿ.ಮೀ ಮತ್ತು 122.6 ಮಿ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ ರತ್ನಗಿರಿ ವೀಕ್ಷಣಾಲಯದಲ್ಲಿ 101.3 ಮಿ.ಮೀ.ಮಳೆ ದಾಖಲಾದರೆ, ಜಿಲ್ಲೆಯ ಹರ್ಣಾಯಿ ಹವಾಮಾನ ಕೇಂದ್ರವು 89 ಮಿ.ಮೀ. ಮಳೆಯನ್ನು ದಾಖಲಿಸಿದೆ ಎಂದು ಐಎಂಡಿ ಹೇಳಿದೆ. ಥಾಣೆ-ಬೇಲಾಪುರ ಕೈಗಾರಿಕಾ ಸಂಘದ ವೀಕ್ಷಣಾಲಯದಲ್ಲಿ 35.2 ಮಿ.ಮೀ. ಮಳೆ ಮತ್ತು ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ 16.8 ಮಿ.ಮೀ. ಮಳೆಯಾಗಿದೆ ಎಂದು ಐಎಂಡಿ ತಿಳಿಸಿದೆ. ಮುಂದಿನ 18 ಗಂಟೆಗಳಲ್ಲಿ ಮುಂಬಯಿ, ಥಾಣೆ, ರಾಯಗಢ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಅತಿ ಭಾರೀ ಮಳೆಯೊಂದಿಗೆ ಚದುರಿದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಟಾಪ್ ನ್ಯೂಸ್

chikkaballapura news

ವೃದ್ದ ಮಹಿಳೆಯ ಅನುಮಾನಸ್ಪದ ಸಾವು : ಅತ್ಯಾಚಾರ ಆರೋಪ

h vishwanath and siddaramaiah

ಕುರುಬರಿಗೆ ಸಿದ್ದರಾಮಯ್ಯನ ನೋಡಿದ್ರೆ ಇಂಗ್ಲೀಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್

vidhana soudha

‘ಅನುಗ್ರಹ ಯೋಜನೆ’ ಮುಂದುವರಿಸಲು ಸರ್ಕಾರದ ಆದೇಶ

ದಾಂಡೇಲಿ:  ಕೊನೆಗೂ ಪತ್ತೆಯಾದ ವಿನಾಯಕ ನಗರದ ಕಾಳಿ ನದಿಯಲ್ಲಿ ಮೊಸಳೆಯ ವಶದಲ್ಲಿದ್ದ ಬಾಲಕನ ಶವ

ದಾಂಡೇಲಿ: ಕೊನೆಗೂ ಪತ್ತೆಯಾದ ವಿನಾಯಕ ನಗರದ ಕಾಳಿ ನದಿಯಲ್ಲಿ ಮೊಸಳೆಯ ವಶದಲ್ಲಿದ್ದ ಬಾಲಕನ ಶವ

ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ: ಸಿ.ಟಿ.ರವಿ ವಾಗ್ದಾಳಿ

ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ: ಸಿ.ಟಿ.ರವಿ ವಾಗ್ದಾಳಿ

ಕಳ್ಳತನ ಮಾಡ್ತಿರಾ ಗೊತ್ತಿಲ್ಲ:ಆದ್ರೆ ರಸ್ತೆ ದುರಸ್ತಿ ಮಾಡಿ:ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು

ಕಳ್ಳತನ ಮಾಡ್ತಿರಾ ಗೊತ್ತಿಲ್ಲ:ಆದ್ರೆ ರಸ್ತೆ ದುರಸ್ತಿ ಮಾಡಿ:ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು

ಟಿ20 ವಿಶ್ವಕಪ್: ಒಂದೇ ಜಯದಿಂದ ಭಾರತ, ಪಾಕ್, ಕಿವೀಸ್ ಗೆ ಎಚ್ಚರಿಕೆ ರವಾನಿಸಿದ ಅಫ್ಘಾನ್!

ಟಿ20 ವಿಶ್ವಕಪ್: ಒಂದೇ ಒಂದು ಜಯದಿಂದ ಭಾರತ,ಪಾಕ್, ಕಿವೀಸ್ ಗೆ ಎಚ್ಚರಿಕೆ ರವಾನಿಸಿದ ಅಫ್ಘಾನ್!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

Untitled-1

ವಿದ್ಯಾರ್ಥಿಗಳಲ್ಲಿ ದೇಶದ ಅಭಿವೃದ್ಧಿಯ ಹೊಣೆಗಾರಿಕೆ ಇರಲಿ: ದಯಾನಂದ ಶೆಟ್ಟಿ

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

MUST WATCH

udayavani youtube

ದಾಂಡೇಲಿ :ಕಳೆದ ಎರಡು ದಿನಗಳಿಂದ ಬಾಲಕನನ್ನು ಬಾಯಲ್ಲಿಟ್ಟುಕೊಂಡೇ ಓಡಾಡುತ್ತಿತ್ತು ಮೊಸಳೆ

udayavani youtube

ಎಡೆಬಿಡದೆ ಸುರಿದ ಮಳೆಗೆ ಜಲಾವೃತಗೊಂಡ ಮನೆಗಳು

udayavani youtube

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಹೊಸ ಸೇರ್ಪಡೆ

chikkaballapura news

ಕೃಷಿ ಕಾಯ್ದೆತಿದ್ದುಪಡಿ ವಿರುದ್ದ ಹೋರಾಟ ಅಗತ್ಯ

shivamogga news

ಕಪ್ಪು ಪಟ್ಟಿ ಧರಿಸಿ ಶಿಕ್ಷಕರಿಂದ ಸಚಿವರಿಗೆ ಮನವಿ

ballari news

ಬೇಡಿಕೆ ಈಡೇರಿಕೆಗಾಗಿ ಶಿಕ್ಷಕರ ಸಂಘ ಪ್ರತಿಭಟನೆ

chitradurga news

ಆರೋಗ್ಯ ಇಲಾಖೆ ಕೊಡುಗೆ ಸ್ಮರಣೀಯ: ಶಾಸಕ ತಿಪ್ಪಾರೆಡ್ಡಿ

ಕಾರಹಳ್ಳಿ ಕೆರೆ ಅಭಿವೃದ್ಧಿಗೆ 48 ಲಕ್ಷ ರೂ.ಅನುಮೋದನೆ

ಕಾರಹಳ್ಳಿ ಕೆರೆ ಅಭಿವೃದ್ಧಿಗೆ 48 ಲಕ್ಷ ರೂ.ಅನುಮೋದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.