Udayavni Special

ಪ್ರಕಾಶ್‌ ಶೆಟ್ಟಿಗೆ ವಿಜನರಿ ಹೊಟೇಲ್‌ ಓನರ್‌ ಆಫ್‌ದ ಈಯರ್‌ ಪ್ರಶಸ್ತಿ


Team Udayavani, May 31, 2018, 4:39 PM IST

5.jpg

ಮುಂಬಯಿ: ರಾಷ್ಟ್ರದ ಪ್ರತಿಷ್ಠಿತ ಐಡಿಇ ಗ್ಲೋಬಲ್‌ ಪ್ರಸ್ತುತಿಯ ಹಾಸ್ಪಿಟ್ಯಾಲಿಟಿ ಲೀಡರ್’  ಇಂಡಸ್ಟ್ರೀ ಚಾಯ್ಸ ಅವಾರ್ಡ್ಸ್‌ ಇದರ ನಾಲ್ಕನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಮೇ 29ರಂದು  ರಾತ್ರಿ ಸಾಂತಾಕ್ರೂಜ್‌ ಪೂರ್ವದ ಗ್ರಾÂಂಡ್‌ ಹೈಯ್ಯತ್‌ ಸಭಾಗೃಹದ‌ಲ್ಲಿ ನೇರವೇರಿತು.

ಬಂಜಾರ-ಗೋಲ್ಡ್‌ಫಿಂಚ್‌ ಪ್ರಕಾಶಣ್ಣ ಪ್ರಸಿದ್ಧಿಯ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ (ಉಡುಪಿ) ಜಿಲ್ಲೆಯ ಪಡುಬಿದ್ರಿ ಮೂಲದ  ಉದ್ಯಮಿ, ಎಂಆರ್‌ಜಿ   ಸಮೂಹದ ಆಡಳಿತ ನಿರ್ದೇಶಕರಾಗಿರುವ  ಪ್ರಕಾಶ್‌ ಶೆಟ್ಟಿ  ಕೊರಂಗ್ರಪಾಡಿ ಅವರಿಗೆ “ವಿಜನರಿ ಹೊಟೇಲ್‌ ಓನರ್‌ ಆಫ್‌ ದ ಈಯರ್‌'(Visionary Hotel Owner of the Year-2018) ವಾರ್ಷಿಕ ಪ್ರಶಸ್ತಿಯನ್ನು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ  ಐಡಿಇ ಗ್ಲೋಬಲ್‌ ನಿರ್ದೇಶಕರುಗಳಾದ ಕೆ. ಸುರೇಶ್‌ ಮತ್ತು ಎಸ್‌.ಗಣೇಶ್‌ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಸ್ಪ್ರಿಂಗ್‌ಏರ್‌ ಸಂದೀಪ್‌ ಮೆನನ್‌, ನಿತೀನ್‌ ನಾಗ್ರಾಲೆ, ಡೋನ್‌ ಕಬಿರಾಜ್‌, ರಾಜೇಶ್‌ ನಾಯರ್‌, ಪ್ರೇಮ್‌ ರುವೇರಿ ಮತ್ತು ಐಡಿಇ ಗ್ಲೋಬಲ್‌ ಮುಖ್ಯಸ್ಥರು ಉಪಸ್ಥಿತರಿದ್ದು, ವಿವಿಧ ಕ್ಷೇತ್ರಗಳ  ಗಣ್ಯರ ಉಪಸ್ಥಿತಿಯಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ  ರತ್ನಾಕರ ಆರ್‌. ಶೆಟ್ಟಿ ಮುಂಡ್ಕೂರು ಹಾಜರಿದ್ದು ಪ್ರಶಸ್ತಿ ಪುರಸ್ಕೃತ ಪ್ರಕಾಶ್‌ ಶೆಟ್ಟಿ ಅವರ ಮಹತ್ತರ ಸಾಧನೆಯನ್ನು ಪ್ರಶಂಸಿಸಿ  ಶುಭಹಾರೈಸಿದರು. 

ಕೆ. ಸನೀಲ್‌ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರಶಸ್ತಿಗೆ ಭಾಜನರಾದ ಸರ್ವರನ್ನು ಅಭಿನಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಪ್ರಕಾಶ್‌ ಶೆಟ್ಟಿ  ಕೊರಂಗ್ರಪಾಡಿ
ಉಡುಪಿ ಜಿಲ್ಲೆಯ ಪಡುಬಿದ್ರಿ ಮೂಲದ  ಕೊರಂಗ್ರಪಾಡಿ ಮನೆತನದ ಪ್ರಕಾಶ್‌ ಎಂ. ಶೆಟ್ಟಿ  ಅವರು ಕೆ. ಮಾಧವ ಶೆಟ್ಟಿ ಮತ್ತು ರತ್ನಾ ಎಂ. ಶೆಟ್ಟಿ ಅವರ ಪುತ್ರ. ತನ್ನ ಕಾಲೇಜು ಶಿಕ್ಷಣ ಪೂರೈಸಿ ಹೊಟೇಲು ಉದ್ಯಮಕ್ಕೆ ನಾಂದಿ ಹಾಡಿದವರು. ಅನಂತರ ಎಂಆರ್‌ಜಿ ಸಮೂಹ ರೂಪಿಸಿ ದೇಶ ವಿದೇಶಗಳಲ್ಲಿ ಹೊಟೇಲ್‌ ಉದ್ಯಮವನ್ನು ಪಸರಿಸಿ ದರು. ಸರಳ ಸಜ್ಜನಿಕೆಯ, ಶಿಕ್ಷಣ ಪ್ರೇಮಿಯಾಗಿರುವ ಇವರು ಕೊಡುಗೈ ದಾನಿಯಾಗಿಯೂ ಪರಿಚಿತರು.  1997ರಲ್ಲಿ ಕರ್ನಾಟಕದಲ್ಲಿ  ನಡೆದ 4ನೇ ನ್ಯಾಷನಲ್‌ ಗೇಮ್ಸ್‌ ಮತ್ತು 1999ರಲ್ಲಿ ಮಣಿಪುರಾದಲ್ಲಿ ನಡೆಸಲ್ಪಟ್ಟ 5ನೇ ನ್ಯಾಷನಲ್‌ ಗೇಮ್ಸ್‌ಗಳ ಆಹಾರವನ್ನು ಪೂರೈಸಿ  ಹೊಟೇಲ್‌ ಉದ್ಯಮದಲ್ಲಿ ತನ್ನದೇ ಆದ ಸ್ವಂತಿಕೆಯ ಛಾಪು ಮೂಡಿಸಿಕೊಂಡಿದ್ದಾರೆ.

ಸದ್ಯ ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಕಾರ್ಯಾಧ್ಯಕ್ಷರಾಗಿ, ಆಡಳಿತ ನಿರ್ದೇಶಕರಾಗಿ, ಟ್ರಸ್ಟಿ, ಪದಾಧಿಕಾರಿಯಾಗಿ ಸೇವಾ ನಿರತರಾಗಿದ್ದಾರೆ. ಬೆಂಗಳೂರು, ಮಂಗಳೂರು, ದಿಲ್ಲಿ, ಮುಂಬಯಿ, ಗೋವಾ ನಗರಗಳಲ್ಲಿ ಗೋಲ್ಡ್‌ಫಿಂಚ್‌ ಹೊಟೇಲ್‌ಗ‌ಳನ್ನು ಹೊಂದಿರುವ ಇವರು ಪಂಚತಾರಾ ಹೊಟೇಲ್‌, ವಸತಿಗೃಹ, ವ್ಯಾಪಾರ ಸಂಕೀರ್ಣ, ಕಟ್ಟಡ ನಿರ್ಮಾಣ ಸಂಸ್ಥೆಗಳನ್ನು ಮುನ್ನಡೆಸಿ ಸಾವಿರಾರು ಜನರಿಗೆ ಉದ್ಯೋಗ, ಉದ್ಯಮ ಒದಗಿಸಿದ್ದಾರೆ.

ಅವರ ಸಾಧನೆಗಳಿಗೆ ಹೊಟೇಲ್‌ ಉದ್ಯಮಶ್ರೀ ಪುರಸ್ಕಾರ, ಭಾರತ್‌ ಗೌರವ ರತ್ನ ಪುರಸ್ಕಾರ, ಇಂಟರ್‌ನ್ಯಾಶ‌ನಲ್‌ ಗೋಲ್ಡ್‌ ಸ್ಟಾರ್‌ ಮಿಲಿನಮ್‌ ಪುರಸ್ಕಾರ, ಬೆಸ್ಟ್‌ ಇಂಟಲೆಕುcವಲ್‌ ಅವಾರ್ಡ್‌ ಆಫ್‌ ಕಾರ್ಪೊರೇಟ್‌ ಲೀಡರ್‌ಶಿಪ್‌,  ರಾಜೀವ್‌ ಗಾಂಧಿ ಶೀರೋಮನಿ ಪುರಸ್ಕಾರ, ಟಿಪ್ಪು ಸುಲ್ತಾನ್‌ ಪುರಸ್ಕಾರ, ನ್ಯಾಶನಲ್‌ ಅವಾರ್ಡ್‌ ಫಾರ್‌ ಓವರ್‌ ಆಲ್‌ ಅಚೀವ್‌ಮೆಂಟ್‌, ಒಕ್ಕಲಿಗ ರತ್ನ ಪ್ರಶಸ್ತಿ, ತೌಳವಶ್ರೀ ಪ್ರಶಸ್ತಿ, ಕರಾವಳಿ ರತ್ನ ಅವಾರ್ಡ್‌, ನಾಡಪ್ರಭು ಕೆಂಪೇಗೌಡ ಇಂಟರ್‌ನ್ಯಾಶ‌ನಲ್‌ ಅವಾರ್ಡ್‌, ದುಬೈಯಲ್ಲಿ ಮತ್ತು ಕರ್ನಾಟಕ ಪ್ರದೇಶ ಹೊಟೇಲ್‌ ಆ್ಯಂಡ್‌ ರಿಟರ್ನ್ ಅಸೋಸಿಯೇಶನ್‌ನಿಂದ ಉದ್ಯಮರತ್ನ ಪುರಸ್ಕಾಗಳು ಒಲಿದು ಬಂದಿವೆ. ಬಂಟರ ಸಂಘ ಮುಂಬಯಿ ಸಂಸ್ಥೆಯ ನಿಕಟವರ್ತಿಯಾಗಿರುವ ಪ್ರಕಾಶ್‌ ಶೆಟ್ಟಿ ಅವರು ಬಂಟರ ಸಂಘ ಮುಂಬಯಿ ತನ್ನ ಶಿಕ್ಷಣ ಮತ್ತು ಸಮಾಜ ಕಲ್ಯಾಣಾಭಿವೃದ್ಧಿ ಸಮಿತಿಯು ವಾರ್ಷಿಕವಾಗಿ ನಡೆಸುವ  ಸಂಘದ ಬೃಹತ್‌ ಶೆ„ಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರಲ್ಲಿ ಒಬ್ಬರಾಗಿದ್ದಾರೆ.

ಗಣ್ಯರ ಅಭಿನಂದನೆ
“ವಿಜನರಿ ಹೊಟೇಲ್‌ ಓನರ್‌ ಆಫ್‌ ದ ಈಯರ್‌’ ಪ್ರಶಸ್ತಿ ಪುರಸ್ಕೃತ ಪ್ರಕಾಶ್‌ ಶೆಟ್ಟಿ ಅವರಿಗೆ ಚರಿಷ್ಮಾ ಬಿಲ್ಡರ್ನ ಆಡಳಿತ ನಿರ್ದೇಶಕ ಸುಧೀರ್‌ ವಿ. ಶೆಟ್ಟಿ, ತುಂಗಾ ಹೊಟೇಲ್‌ ಸಮೂಹ‌ದ ಆಡಳಿತ ನಿರ್ದೇಶಕ ಸುಧಾಕರ್‌ ಎಸ್‌. ಹೆಗ್ಡೆ, ಸಂಸದ ಗೋಪಾಲ ಸಿ. ಶೆಟ್ಟಿ, ಆಲ್‌ಕಾರ್ಗೋ ಸಮೂಹದ ಶಶಿಕಿರಣ್‌ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಭವಾನಿ ಫೌಂಡೇಶನ್‌ನ ಸಂಸ್ಥಾಪಕಾಧ್ಯಕ್ಷ ಕೆ. ಡಿ. ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ನಗ್ರಿಗುತ್ತು ವಿವೇಕ್‌ ಶೆಟ್ಟಿ, ಬಿ. ವಿವೇಕ್‌ ಶೆಟ್ಟಿ, ರಘುರಾಮ ಕೆ. ಶೆಟ್ಟಿ ಬೆಳಗಾವಿ, ಸಿಎ ಶಂಕರ್‌ ಬಿ. ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಎರ್ಮಾಳ್‌ ಹರೀಶ್‌ ಶೆಟ್ಟಿ, ವಿರಾರ್‌ ಶಂಕರ್‌ ಶೆಟ್ಟಿ, ಜಯರಾಮ ಎನ್‌. ಶೆಟ್ಟಿ, ಸಿಎ ಐ. ಆರ್‌. ಶೆಟ್ಟಿ, ಮಹೇಶ್‌ ಎಸ್‌. ಶೆಟ್ಟಿ ಅವರು ಅಭಿನಂದಿಸಿದ್ದಾರೆ. 

 ಚಿತ್ರ – ವರದಿ : ರೋನ್ಸ್‌ ಬಂಟ್ವಾಳ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮೂವರ ಸಾವು! 52 ಹೊಸ ಪ್ರಕರಣ

ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮೂವರ ಸಾವು! 52 ಹೊಸ ಪ್ರಕರಣ

Rcb

ವಿರಾಟ್ VS ರಾಹುಲ್: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ RCB

ಸೌದಿಯಲ್ಲಿ ಸಿಲುಕಿದ್ದ 32 ಕನ್ನಡಿಗರು ವಾಪಸ್! ಕುಶಲತೆ ಆಧಾರದ ಮೇಲೆ ಉದ್ಯೋಗ: ಡಿಸಿಎಂ ಭರವಸೆ

ಸೌದಿಯಲ್ಲಿ ಸಿಲುಕಿದ್ದ 32 ಕನ್ನಡಿಗರು ವಾಪಸ್! ಕುಶಲತೆ ಆಧಾರದ ಮೇಲೆ ಉದ್ಯೋಗ: ಡಿಸಿಎಂ ಭರವಸೆ

ಆಸ್ಪತ್ರೆಯಿಂದ ಮನೆಗೆ ಮರಳಲು SPB ಕಾತರರಾಗಿದ್ದಾರೆ: S P ಚರಣ್

ಆಸ್ಪತ್ರೆಯಿಂದ ಮನೆಗೆ ಮರಳಲು SPB ಕಾತರರಾಗಿದ್ದಾರೆ: S P ಚರಣ್

instagrma

Instagram Reels ನಿಂದ 3 ಹೊಸ ಫೀಚರ್: ವಿಡಿಯೋ ರೆಕಾರ್ಡ್ ಈಗ ಮತ್ತಷ್ಟು ಸುಲಭ !

500ರೂ. ಕಳ್ಳತನ ಮಾಡಿದ್ದಾನೆ ಎಂದು ಸ್ನೇಹಿತನ ತಾಯಿಯೇ 14ವರ್ಷದ ಹುಡುಗನನ್ನು ಹೊಡೆದು ಕೊಂದಳು

500ರೂ. ಕಳ್ಳತನ ಮಾಡಿದ್ದಾನೆ ಎಂದು ಸ್ನೇಹಿತನ ತಾಯಿಯೇ 14ವರ್ಷದ ಹುಡುಗನನ್ನು ಹೊಡೆದು ಕೊಂದಳು

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಆರೋಗ್ಯ ಸ್ಥಿತಿ ಗಂಭೀರ: ICUಗೆ ದಾಖಲು

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಆರೋಗ್ಯ ಸ್ಥಿತಿ ಗಂಭೀರ: ICUಗೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬಯಿಯಲ್ಲಿ 9,500 ಕಟ್ಟಡಗಳ ಸೀಲ್‌ ಡೌನ್‌

ಮುಂಬಯಿಯಲ್ಲಿ 9,500 ಕಟ್ಟಡಗಳ ಸೀಲ್‌ ಡೌನ್‌

MUMBAI-TDY-1

ರಾಜ್ಯದಲ್ಲಿ11 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ಗ್ರಾಮೀಣ ಆಸ್ಪತ್ರೆ ಬಲಪಡಿಸುವತ್ತ  ಗಮನ ಹರಿಸಿ: ಅಜಿತ್‌

ಗ್ರಾಮೀಣ ಆಸ್ಪತ್ರೆ ಬಲಪಡಿಸುವತ್ತ ಗಮನ ಹರಿಸಿ: ಅಜಿತ್‌

Mumbai-tdy-1

ಕೈಗಾರಿಕೆಗಳಲ್ಲಿ ಆಮ್ಲಜನಕದ ಕೊರತೆ

ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್

ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavaniಹೊಸ ಸೇರ್ಪಡೆ

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪಪಂಗೆ ಮುತ್ತಿಗೆ

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪಪಂಗೆ ಮುತ್ತಿಗೆ

ಈವರೆಗೂ ಸಿಸಿ ರಸ್ತೆ ಕಾಣದ ಚೆನ್ನೂರು!

ಈವರೆಗೂ ಸಿಸಿ ರಸ್ತೆ ಕಾಣದ ಚೆನ್ನೂರು!

ವಾರದಲ್ಲಿ ಬೆಳೆ ಸರ್ವೇ ಕಾರ್ಯ ಮುಗಿಸಲು ಸಲಹೆ

ವಾರದಲ್ಲಿ ಬೆಳೆ ಸರ್ವೇ ಕಾರ್ಯ ಮುಗಿಸಲು ಸಲಹೆ

ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮೂವರ ಸಾವು! 52 ಹೊಸ ಪ್ರಕರಣ

ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮೂವರ ಸಾವು! 52 ಹೊಸ ಪ್ರಕರಣ

ದಲ್ಲಾಳಿಗಳ ವಿರುದ್ಧ ಕ್ರಮಕ್ಕೆ ವಿಜಯಕುಮಾರ ಆಗ್ರಹ

ದಲ್ಲಾಳಿಗಳ ವಿರುದ್ಧ ಕ್ರಮಕ್ಕೆ ವಿಜಯಕುಮಾರ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.