ಐ. ಆರ್‌. ಶೆಟ್ಟಿ ಅಧ್ಯಕ್ಷರಾಗಿರುವುದು ಭಾಗ್ಯ: ಜಯಪ್ರಕಾಶ್‌ ಶೆಟ್ಟಿ

Team Udayavani, Sep 17, 2019, 12:56 PM IST

ಮುಂಬಯಿ, ಸೆ. 15: ಜವಾಬ್‌ ಅಧ್ಯಕ್ಷನಾಗಿ ಪರಿವಾರದ ಜವಾಬ್ದಾರಿಯನ್ನು ಯಾವುದೇ ಲೋಪ-ದೋಷಗಳು ಬಾರದ ರೀತಿಯಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ನಿಭಾಯಿಸಿದ್ದೇನೆಂಬ ಧನ್ಯತೆ, ಆತ್ಮತೃಪ್ತಿ ನನಗಿದೆ. ಜವಾಬ್‌ ಮಾಜಿ ಅಧ್ಯಕ್ಷರುಗಳು, ವಿಶ್ವಸ್ತರು, ಕಾರ್ಯಕಾರಿ ಸಮಿತಿಯ ಸದಸ್ಯರು, ಆಮಂತ್ರಿತ ಸದಸ್ಯರು ನನ್ನ ಪದಾಧಿಕಾರಿಗಳು, ಜವಾಬ್‌ ಪರಿವಾರ ಕಳೆದ ಎರಡು ವರ್ಷಗಳ ಅವಧಿಯಲ್ಲಿ ನನಗೆ ನೀಡಿದ ಪ್ರೀತಿ, ವಿಶ್ವಾಸ, ಸಹಕಾರ, ಪ್ರೋತ್ಸಾಹವನ್ನು ನನ್ನ ಜೀವನಪರ್ಯಂತ ಮರೆಯಲು ಸಾಧ್ಯವಿಲ್ಲ ಎಂದು ಜವಾಬ್‌ನ ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ನುಡಿದರು.

ಸೆ. 14ರಂದು ಅಂಧೇರಿ ಪಶ್ಚಿಮದ ಹೊಟೇಲ್ ಪ್ಯಾಪಿಲಾನ್‌ ಪಾರ್ಕ್‌ ಬ್ಯಾಂಕ್ವೆಟ್ ಹಾಲ್ನಲ್ಲಿ ಜರಗಿದ ಜವಾಬ್‌ನ 18 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜವಾಬ್‌ ಅಧ್ಯಕ್ಷ ಪದವಿಯಿಂದ ಇಂದು ನಿರ್ಗಮಿಸುತ್ತಿದ್ದರೂ ಜವಾಬ್‌ ಜತೆಗಿದ್ದ ಬಾಂಧವ್ಯ ಸಂಬಂಧದ ಕೊಂಡಿ ಗಟ್ಟಿಯಾಗಿಯೇ ಉಳಿದಿದೆ. ಸನ್ಮಿತ್ರ, ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಿಎ ಐ. ಆರ್‌. ಶೆಟ್ಟಿ ಅವರಂತಹ ಅನುಭವಿ, ಪದವೀಧರರು ಜವಾಬ್‌ ಅಧ್ಯಕ್ಷರಾಗಿರುವುದು ನಮ್ಮ ಭಾಗ್ಯ. ಅವರಿಂದ ಜವಾಬ್‌ ಅಭಿವೃದ್ಧಿಯ ಇನ್ನಷ್ಟು ಕಾರ್ಯಗಳು ನಡೆಯಲಿ. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಜವಾಬ್‌ನ ಮುಂದಿನ ಶಕ್ತಿ ಯುವಕರು. ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಯುಶಕ್ತಿಗೆ ಹೊಸ ಸಂಚಲನ ಮೂಡಿ ಬಂದಿದೆ. ಮಾಜಿ ಅಧ್ಯಕ್ಷ ವಿಶ್ವನಾಥ ಹೆಗ್ಡೆ ಅವರು ತೆರೆಮರೆಯಲ್ಲಿದ್ದೇ ಜವಾಬ್‌ ಕಾರ್ಯಚಟುವಟಿಕೆಗಳಿಗೆ ಸ್ಪೂರ್ತಿ ತುಂಬುತ್ತಿದ್ದಾರೆ. ಜವಾಬ್‌ ಸಂಘಟನೆಯಲ್ಲಿ ಮಹಿಳೆಯರ ಪಾತ್ರವೂ ಹಿರಿದಾಗಿದೆ. ಮಹಿಳೆ ಯರು ತಾವಾಗಿಯೇ ಬಂದು ಮಹಿಳಾ ವಿಭಾಗದ ಸ್ಥಾಪನೆಗೆ ಕೊಡುಗೆ ನೀಡಬೇಕು. ಸಮ್ಮಾನ ಸ್ವೀಕರಿಸಿದ, ಪ್ರತಿಭಾ ಪುರಸ್ಕಾರ ಪಡೆದ ಎಲ್ಲರನ್ನು ಅಭಿನಂದಿಸಿದ ಅವರು, ಜವಾಬ್‌ ಮಾದರಿ ಸಂಸ್ಥೆಯಾಗಿ ಬೆಳೆಯಲು ನಾವೆಲ್ಲರೂ ಶ್ರಮಿಸೋಣ ಎಂದರು.

ಕಾರ್ಯಕ್ರಮದಲ್ಲಿ ಹೊಟೇಲ್ ಕ್ಷೇತ್ರದ ಹಿರಿಯ ಸಾಧಕ, ರಾಮಕೃಷ್ಣ ಗ್ರೂಪ್‌ ಆಫ್‌ ಹೊಟೇಲ್ಸ್ ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ, ಜವಾಬ್‌ನ ವಿಶ್ವಸ್ತ ಬೋಳ ಸುಬ್ಬಯ್ಯ ಶೆಟ್ಟಿ ಇವರ ಅನುಪಸ್ಥಿತಿಯಲ್ಲಿ ಪುತ್ರರಾದ ಚಂದ್ರಶೇಖರ್‌ ಎಸ್‌. ಶೆಟ್ಟಿ ಮತ್ತು ಅರುಣ್‌ ಎಸ್‌. ಶೆಟ್ಟಿ ಹಾಗೂ ಜವಾಬ್‌ನ ಕಾರ್ಯಕಾರಿ ಸಮಿತಿಯ ಸದಸ್ಯ, ಕೋಕಿಲಾಬೆನ್‌ ಆಸ್ಪತ್ರೆಯ ವೈದ್ಯಕೀಯ ಸಲಹಾಧಿಕಾರಿ, ವೈದ್ಯ ಡಾ| ಎನ್‌. ಆರ್‌. ಶೆಟ್ಟಿ ಮತ್ತು ಕುಮುದಾ ಎನ್‌. ಶೆಟ್ಟಿ ದಂಪತಿಯನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಗೌರವಿಸಿ ಸಮ್ಮಾನಿಸಲಾಯಿತು.

ಜವಾಬ್‌ನ ಜೊತೆ ಕಾರ್ಯದರ್ಶಿ ಟಿ. ವಿಶ್ವನಾಥ ಶೆಟ್ಟಿ ಮತ್ತು ಜವಾಬ್‌ನ ಕೋಶಾಧಿಕಾರಿ ಅಶೋಕ್‌ ಕುಮಾರ್‌ ಆರ್‌. ಶೆಟ್ಟಿ ಅವರು ಸಮ್ಮಾನಿತರನ್ನು ಪರಿಚಯಿಸಿ ಸಮ್ಮಾನ ಪತ್ರ ವಾಚಿಸಿದರು.

ಡಾ| ಎನ್‌. ಆರ್‌. ಶೆಟ್ಟಿ ಅವರು ಸಮ್ಮಾನ ಸ್ವೀಕರಿಸಿ ಮಾತನಾಡಿ, ಬಂಟ ಸಮುದಾಯದ ಹಿರಿಯ, ಗಣ್ಯ ವ್ಯಕ್ತಿ, ಸಹೃದಯಿ ಬೋಳ ಸುಬ್ಬಯ್ಯ ಶೆಟ್ಟಿ ಅವರೊಂದಿಗೆ ದೊರೆತ ಈ ಸಮ್ಮಾನದಿಂದ ನನ್ನ ಹೃದಯ ತುಂಬಿ ಬಂದಿದೆ. ಜವಾಬ್‌ ಸಂಸ್ಥೆಯು ಪರಿವಾರದ ಸುಖ-ದು:ಖಗಳಲ್ಲಿ ಸದಾ ಭಾಗಿಯಾಗುತ್ತಿರುವುದರ ಜೊತೆಗೆ ಅನೇಕ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವೈದ್ಯಕೀಯ ವಿಚಾರ ಸಂಕಿರಣಗಳನ್ನು ಆಯೋಜಿಸಿ ಆರೋಗ್ಯ ಜ್ಞಾನವನ್ನು ಹೆಚ್ಚಿಸಲು ಕಾರಣವಾಗಿದೆ ಎಂದು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.

ಮಹಾಸಭೆಯಲ್ಲಿ ಎಚ್ಎಸ್‌ಸಿ, ಎಸ್‌ಎಸ್‌ಸಿ, ಸಿಬಿಎಸ್‌ಇ, ವೈದ್ಯಕೀಯ, ಮ್ಯಾನೇಜ್‌ಮೆಂಟ್ ಸ್ಡಡೀಸ್‌ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ತನ್ವಿ ಅಶೋಕ್‌ ಶೆಟ್ಟಿ, ಶ್ರೇಯಾ ಭರತ್‌ ಶೆಟ್ಟಿ, ತ್ರಿವೇಣಿ ಪ್ರವೀಣ್‌ ಶೆಟ್ಟಿ, ಚಿರಾಗ್‌ ಪ್ರವೀಣ್‌ ಕುಮಾರ್‌ ಶೆಟ್ಟಿ, ಪ್ರಥಮ್‌ ಉದಯ್‌ ಶೆಟ್ಟಿ, ಮೆಹಕ್‌ ಶೈಲೇಶ್‌ ಶೆಟ್ಟಿ, ಡಾ| ಅಭಿಷೇಕ್‌ ಗುಣಕರ್‌ ಶೆಟ್ಟಿ, ಕೃಪಾ ಅಶ್ವಿ‌ನ್‌ ರೈ, ರಕ್ಷಾ ವಿಶ್ವನಾಥ್‌ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ಜವಾಬ್‌ನ ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಶೆಟ್ಟಿ ಕೆ. ಇವರು ಸಾಧಕರ ಹೆಸರು ವಾಚಿಸಿದರು. ಆರ್ಥಿಕವಾಗಿ ಹಿಂದುಳಿದ ಸಮಾಜದ 18 ವಿದ್ಯಾರ್ಥಿಗಳಿಗೆ ಜವಾಬ್‌ ವತಿಯಿಂದ ಶೈಕ್ಷಣಿಕ ನೆರವು ವಿತರಿಸಲಾಯಿತು. ಜತೆ ಕಾರ್ಯದರ್ಶಿ ಟಿ. ವಿಶ್ವನಾಥ ಶೆಟ್ಟಿ ವಿದ್ಯಾರ್ಥಿಗಳ ಹೆಸರು ವಾಚಿಸಿದರು.

ಸದಸ್ಯರ ಪರವಾಗಿ ಜವಾಬ್‌ನ ಮಾಜಿ ಅಧ್ಯಕ್ಷ ಶಂಕರ್‌ ಟಿ. ಶೆಟ್ಟಿ, ಮಾಜಿ ಅಧ್ಯಕ್ಷ ಎನ್‌. ಸಿ. ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯ ಡಾ| ಪ್ರಭಾಕರ ಶೆಟ್ಟಿ ಬೋಳ, ಯುವ ವಿಭಾಗದ ಮಹಿಳಾ ಕಾರ್ಯಾಧ್ಯಕ್ಷೆ ರೇಷ್ಮಾ ಆರ್‌. ಶೆಟ್ಟಿ ಅವರು ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ಶ್ಲಾಘಿಸಿ ಸಲಹೆ-ಸೂಚನೆಗಳನ್ನು ನೀಡಿದರು.

ವೈಷ್ಣವಿ ಯೋಗೇಶ್‌ ಶೆಟ್ಟಿ ಪ್ರಾರ್ಥನೆಗೈದರು. ಜವಾಬ್‌ನ ಉಪಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ ಸ್ವಾಗತಿಸಿದರು. ಚುನಾವಣಾ ಆಯ್ಕೆ ಪ್ರಕ್ರಿಯೆಯ ಅಧಿಕಾರಿ ನ್ಯಾಯವಾದಿ ಗುಣಕರ ಡಿ. ಶೆಟ್ಟಿ ಅವರು ಜವಾಬ್‌ನ 2019-2021 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿಎ ಐ. ಆರ್‌. ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.

ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ನ್ಯಾಯವಾದಿ ರತ್ನಾಕರ ಶೆಟ್ಟಿ, ಮೋಹನ್‌ ಶೆಟ್ಟಿ, ರಮೇಶ್‌ ಎನ್‌. ಶೆಟ್ಟಿ, ವಿಜಯ್‌ ಶೆಟ್ಟಿ, ಪ್ರಭಾಕರ ಕೆ. ಶೆಟ್ಟಿ, ನ್ಯಾಯವಾದಿ ಪ್ರದೀಪ್‌ ಶೆಟ್ಟಿ, ಸುಭಾಶ್‌ ಶೆಟ್ಟಿ, ಜಗದೀಶ್‌ ವಿ. ಶೆಟ್ಟಿ, ಎಚ್. ಶೇಖರ್‌ ಹೆಗ್ಡೆ, ರಾಜೇಶ್‌ ಬಿ. ಶೆಟ್ಟಿ, ಟಿ. ವಿಶ್ವನಾಥ ಶೆಟ್ಟಿ, ನ್ಯಾಯವಾದಿ ಡಿ. ಕೆ. ಶೆಟ್ಟಿ, ಸುರೇಂದ್ರ ಕೆ. ಶೆಟ್ಟಿ, ವಾಮನ್‌ ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ ಬೋಳ, ಶ್ರೀಧರ ಡಿ. ಶೆಟ್ಟಿ, ಪ್ರವೀಣ್‌ ಕುಮಾರ್‌ ಆರ್‌. ಶೆಟ್ಟಿ, ವೆಂಕಟೇಶ್‌ ಎನ್‌. ಶೆಟ್ಟಿ, ಬಿ. ಆರ್‌. ಪೂಂಜಾ, ಮಧುಕರ್‌ ಎ. ಶೆಟ್ಟಿ, ಕಿಶೋರ್‌ ಕುಮಾರ್‌ ಶೆಟ್ಟಿ ಕೆ., ಮಹೇಶ್‌ ಎಸ್‌. ಶೆಟ್ಟಿ, ಅಶೋಕ್‌ ಕುಮಾರ್‌ ಆರ್‌. ಶೆಟ್ಟಿ, ಬಿ. ಭಾಸ್ಕರ್‌ ಶೆಟ್ಟಿ ಶಬರಿ, ಭಾಸ್ಕರ್‌ ಶೆಟ್ಟಿ ಕಾರ್ನಾಡ್‌, ನ್ಯಾಯವಾದಿ ಯು. ಶೇಖರ್‌ ಶೆಟ್ಟಿ ಹೀಗೆ ಒಟ್ಟು 26 ಸದಸ್ಯರ ಹೆಸರನ್ನು ಘೋಷಿಸಿ, 6 ಮಂದಿ ಸಹ ಸದಸ್ಯರು ಆಯ್ಕೆಯಾಗಿರುವುದಾಗಿ ಪ್ರಕಟಿಸಲಾಯಿತು.

ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಅವರು ಚುನಾವಣಾಧಿಕಾರಿ ನ್ಯಾಯವಾದಿ ಗುಣಕರ ಡಿ. ಶೆಟ್ಟಿ ಅವರನ್ನು ಗೌರವಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿಎ ಐ. ಆರ್‌. ಶೆಟ್ಟಿ ಅವರನ್ನು ಜಯಪ್ರಕಾಶ್‌ ಶೆಟ್ಟಿ ಅವರು ಗೌರವಿಸಿ ಅಧಿಕಾರ ಹಸ್ತಾಂತರಿಸಿದರು.

ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಶೆಟ್ಟಿ ಕೆ. ಗತ ವಾರ್ಷಿಕ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ಅಶೋಕ್‌ ಆರ್‌. ಶೆಟ್ಟಿ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಎಂ.ಎಸ್‌. ಪ್ರಕಾಶ್‌ ಶೆಟ್ಟಿ ಆ್ಯಂಡ್‌ ಅಸೋಸಿಯೇಟ್ಸ್‌ ಇವರನ್ನು ಲೆಕ್ಕ ಪರಿಶೋಧಕರನ್ನಾಗಿ ನೇಮಿಸಲಾಯಿತು. ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸ್ಥಾಪನೆ ಸ್ವೀಕಾರ ಯೋಗ್ಯ ತಿದ್ದುಪಡಿ ಠರಾವು ಬಗ್ಗೆ ನ್ಯಾಯವಾದಿ ಅಶೋಕ್‌ ಶೆಟ್ಟಿ ವಿವರಿಸಿದರು. ವರದಿ ವರ್ಷದಲ್ಲಿ ನಿಧನರಾದ ಜವಾಬ್‌ನ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೋಶಾಧಿಕಾರಿ ಅಶೋಕ್‌ ಕುಮಾರ್‌ ಆರ್‌. ಶೆಟ್ಟಿ ವಂದಿಸಿದರು. ಮಾಜಿ ಅಧ್ಯಕ್ಷ ವಿಶ್ವನಾಥ ಹೆಗ್ಡೆ ಅವರು ಮಹಾಸಭೆಯ ಯಶಸ್ಸಿಗೆ ಸಹಕರಿಸಿದರು. ಕೊನೆಯಲ್ಲಿ ಜವಾಬ್‌ ವಿಶ್ವಸ್ಥ ರಘು ಎಲ್. ಶೆಟ್ಟಿ ಅವರ ವತಿಯಿಂದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

 

ಚಿತ್ರ- ವರದಿ: ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ