ಗುರುಗಳ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಧನಂಜಯ ಶಾಂತಿ

ಬಿಲ್ಲವರ ಅಸೋಸಿಯೇಶನ್‌ ದಹಿಸರ್‌-ಬೊರಿವಿಲಿ ಸ್ಥಳೀಯ ಕಚೇರಿಯಲ್ಲಿ ಗುರು ಜಯಂತಿ

Team Udayavani, Aug 26, 2021, 1:59 PM IST

ಗುರುಗಳ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಧನಂಜಯ ಶಾಂತಿ

ದಹಿಸರ್‌: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ದಹಿಸರ್‌-ಬೊರಿವಿಲಿ ಸ್ಥಳೀಯ ಕಚೇರಿ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜಯಂತ್ಯುತ್ಸವವು ಬೊರಿವಿಲಿ ಪಶ್ಚಿಮದ ಪ್ಲಾಟ್‌ ನಂಬರ್‌ 134, ಗುರು ಸನ್ನಿಧಿ, ಗೊರೈ ಶಿಂಪೋಲಿ ರೋಡ್‌, ಗೊರೈ ಒಂದರಲ್ಲಿರುವ ಸ್ಥಳೀಯ ಕಚೇರಿಯಲ್ಲಿ ಆ. 23ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಗುರುಮೂರ್ತಿಗೆ ವಿವಿಧ ಪೂಜೆಗಳು, ಅಭಿಷೇಕ ವನ್ನು ನೆರವೇರಿಸಿದ ಶೇಖರ್‌ ಶಾಂತಿ ಉಳ್ಳೂರು ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಸ್ಥಳೀಯ ಕಚೇರಿಯ ಸದಸ್ಯರಾದ ರಮೇಶ್‌ ಡಿ. ಕೋಟ್ಯಾನ್‌, ಉಷಾ ರಮೇಶ್‌ ಕೋಟ್ಯಾನ್‌ ದಂಪತಿ ಪೂಜಾ ವಿಧಿ-ವಿಧಾನದ ಯಜಮಾನತ್ವ ವಹಿಸಿದ್ದರು. ಧಾರ್ಮಿಕ ಕಾರ್ಯ ಕ್ರಮದ ಕೊನೆಯಲ್ಲಿ ಮಂಗಳಾರತಿ ಹಾಗೂ ಸಮಿತಿಯ ಸದಸ್ಯರಿಂದ ಭಜನ ಕಾರ್ಯಕ್ರಮ, ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರ ಕಚೇರಿಯ ಗೌರವ ಕಾರ್ಯದರ್ಶಿ ಧನಂಜಯ ಶಾಂತಿ ಮಾತನಾಡಿ, ನಾರಾಯಣಗುರುಗಳ ಆದರ್ಶ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಇಂದಿನ ಪರಿವರ್ತನೆಯ ಕಾಲಘಟ್ಟ ದಲ್ಲೂ ಸಮಾಜದಲ್ಲಿ ಅಸಮಾನತೆಯ ಧ್ವನಿ ಕೇಳಿ ಬರುತ್ತಿದೆ. ನಾರಾಯಣಗುರುಗಳ ಬೋಧನೆ ಯನ್ನು ನಡವಳಿಕೆ ಮುಖಾಂತರ ನಾವು ಸಮಾಜಕ್ಕೆ ಮಾದರಿಯಾಗಬೇಕು. ದೇಶದಲ್ಲಿ ತನ್ನದೇ ಆದ ಚಳವಳಿಯ ಮೂಲಕ ಜನಪರ ನಿರ್ವಹಣೆ, ಸಾಮಾಜಿಕ ನ್ಯಾಯ, ಅಸ್ಪೃಶ್ಯತೆ ನಿವಾರಣೆಯ ಮೂಲಕ ಕೆಳವರ್ಗದವರನ್ನು ಎತ್ತಿಹಿಡಿದು ಮುಖ್ಯವಾಹಿನಿಗೆ ತಂದವರು ನಾರಾಯಣಗುರುಗಳು. ಮೂರ್ತಿಯಲ್ಲೂ ಭಕ್ತಿಯನ್ನು ಕಾಣಬಹುದು ಎಂಬ ಉದ್ದೇಶದಿಂದ ನಾರಾಯಣಗುರುಗಳ ಮೂರ್ತಿಯನ್ನುಸ್ಥಾಪಿಸುವ ಮೂಲಕ ಸ್ಥಳೀಯ ಕಚೇರಿಯ ವಿಶೇಷ ಕೊಡುಗೈ ದಾನಿ ಜಿ. ಎಂ. ಕೋಟ್ಯಾನ್‌ ಮತ್ತು ಅವರ ಪರಿವಾರಕ್ಕೆ ಹಾಗೂ ಸರ್ವ ಸದ್ಭಕ್ತರಿಗೆ ನಾರಾಯಣಗುರುಗಳು ಸದಾ ಸುಖ-ಸಮೃದ್ಧಿ ಕರುಣಿಸಲೆಂದು ಹಾರೈಸಿದರು.

ಇದನ್ನೂ ಓದಿ:ಬಂಡೀಪುರ ಹೆದ್ದಾರಿ ಅಗಲೀಕರಣಕ್ಕೆ ಅವಕಾಶ ಕೊಡುವುದಿಲ್ಲ: ಅರಣ್ಯ ಸಚಿವ ಉಮೇಶ್ ಕತ್ತಿ

ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಂದ್ರ ಕಚೇರಿಯ ಜತೆ ಕಾರ್ಯದರ್ಶಿ ಕೇಶವ ಕೋಟ್ಯಾನ್‌, ಮಾಜಿ ಗೌರವ ಕಾರ್ಯದರ್ಶಿ ಧರ್ಮಪಾಲ್‌ ಅಂಚನ್‌, ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್‌ ಜಿ. ಪೂಜಾರಿ, ಉಪಕಾರ್ಯಾಧ್ಯಕ್ಷ ರಜಿತ್‌ ಎಲ್‌. ಸುವರ್ಣ, ಜತೆ ಕಾರ್ಯದರ್ಶಿ ವತ್ಸಲಾ ಕೆ. ಪೂಜಾರಿ, ಕೋಶಾಧಿಕಾರಿ ಅಶೋಕ್‌ ಸಾಲ್ಯಾನ್‌, ಜತೆ ಕೋಶಾಧಿಕಾರಿ ಉಮೇಶ್‌ ಜಿ. ಕೋಟ್ಯಾನ್‌, ಭಾರತ್‌ ಬ್ಯಾಂಕ್‌ನ ನಿರ್ದೇಶಕ ಪ್ರೇಮನಾಥ ಕೋಟ್ಯಾನ್‌, ಭಾರತ್‌ ಬ್ಯಾಂಕ್‌ ಬೊರಿವಿಲಿ ಪಶ್ಚಿಮದ ಪ್ರಬಂಧಕಿ ಕುಸುಮಾ, ಉಪ ಪ್ರಬಂಧಕಿ ಇಂದಿರಾ ಪೂಜಾರಿ, ನವೀನ್‌ ಪೂಜಾರಿ, ನ್ಯಾಯವಾದಿ ಸುಧಾಕರ ಪೂಜಾರಿ, ದಯಾನಂದ ಸುವರ್ಣ, ಸದಸ್ಯರಾದ ರಾಘು ಜಿ. ಪೂಜಾರಿ, ಜಯರಾಮ್‌ ಪೂಜಾರಿ, ಯು. ಆರ್‌. ಡಿ. ಕೋಟ್ಯಾನ್‌, ಕೇಶರಂಜನ್‌ ಮೂಲ್ಕಿ, ಸುಂದರಿ ಪೂಜಾರಿ ಸತೀಶ್‌ ಅಮೀನ್‌ ಕಟಪಾಡಿ, ರವಿ ಪೂಜಾರಿ, ಸುಜಾತಾ ಪೂಜಾರಿ, ಕರುಣಾಕರ್‌ ಪೂಜಾರಿ, ವೇದಾ ಸುವರ್ಣ, ಸುಮತಿ ಅಮೀನ್‌, ವಾರಿಜಾ ಕೆ. ಸನಿಲ್‌, ಡಾ| ಶೃತಿ ಕೆ. ಪೂಜಾರಿ ಹಾಗೂ ಇತರ ಸದಸ್ಯರು ಸಹಕರಿಸಿದರು.

ಕಾರ್ಯಕ್ರಮದಲ್ಲಿ ಪೂಜೆಯ ಯಜಮಾನತ್ವ ವಹಿಸಿದ ರಮೇಶ್‌ ಕೋಟ್ಯಾನ್‌ ದಂಪತಿಯ ಸೇವಾರ್ಥಕವಾಗಿ ಗುರು ಪ್ರಸಾದ ಅನ್ನಸಂತರ್ಪಣೆ ನಡೆಯಿತು.

ಚಿತ್ರ-ವರದಿ: ರಮೇಶ್‌ ಉದ್ಯಾವರ್‌

ಟಾಪ್ ನ್ಯೂಸ್

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

1-asdadad

ಹಲವು ದಶಕಗಳ ನಂತರ ಮತ್ತೆ ಕಾಶ್ಮೀರದಲ್ಲಿ ನೆಲೆಸಳಿದ್ದಾಳೆ ಶಾರದೆ

ಪಿಎಫ್ಐ ಜತೆಗೆ ನಂಟು ಪೊಲೀಸ್‌ ಅಧಿಕಾರಿ ಸಸ್ಪೆಂಡ್‌

ಪಿಎಫ್ಐ ಜತೆಗೆ ನಂಟು ಪೊಲೀಸ್‌ ಅಧಿಕಾರಿ ಸಸ್ಪೆಂಡ್‌

ಪ್ರಸಿದ್ಧ ವಾಹಿನಿಗಳಾಗಿರುವ ಜೀ-ಸೋನಿ ವಿಲೀನಕ್ಕೆ ಸಿಸಿಐ ಒಪ್ಪಿಗೆ

ಪ್ರಸಿದ್ಧ ವಾಹಿನಿಗಳಾಗಿರುವ ಜೀ-ಸೋನಿ ವಿಲೀನಕ್ಕೆ ಸಿಸಿಐ ಒಪ್ಪಿಗೆ

1-sadasdd

ಸಿಎಂ ಯೋಗಿ ಚಿರತೆ ಮರಿಗೆ ಹಾಲುಣಿಸುವ ವಿಡಿಯೋ ವೈರಲ್

ಆರ್‌ಟಿಇ ಶುಲ್ಕ ಮರು ಪಾವತಿಗೆ ಕ್ರಿಯಾ ಯೋಜನೆ ರೂಪಿಸಿದ ಶಿಕ್ಷಣ ಇಲಾಖೆ

ಆರ್‌ಟಿಇ ಶುಲ್ಕ ಮರು ಪಾವತಿಗೆ ಕ್ರಿಯಾ ಯೋಜನೆ ರೂಪಿಸಿದ ಶಿಕ್ಷಣ ಇಲಾಖೆ

1-a-dsd-s

ಮೈಸೂರಿನಲ್ಲಿ ಟೂರಿಸಂ ಸರ್ಕಿಟ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ರಾಹಕರಿಗೆ ಅಪ್ರತಿಮ ಸೇವೆಯೇ ನಮ್ಮ ಗುರಿ: ಆನಂದ ಬಿ. ಮೂಲ್ಯ

ಗ್ರಾಹಕರಿಗೆ ಅಪ್ರತಿಮ ಸೇವೆಯೇ ನಮ್ಮ ಗುರಿ: ಆನಂದ ಬಿ. ಮೂಲ್ಯ

ಬಂಟರ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯಲು ಮರೆಯಬೇಡಿ: ಡಿಸಿಎಂ ಫಡ್ನವೀಸ್‌

ಬಂಟರ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯಲು ಮರೆಯಬೇಡಿ: ಡಿಸಿಎಂ ಫಡ್ನವೀಸ್‌

ಗುರುಗಳಿಂದ ಸಮಾಜ ಸುಧಾರಣೆಗೆ ಕಾಯಕಲ್ಪ: ಜಿ. ಕೆ. ಕೆಂಚನಕೆರೆ 

ಗುರುಗಳಿಂದ ಸಮಾಜ ಸುಧಾರಣೆಗೆ ಕಾಯಕಲ್ಪ: ಜಿ. ಕೆ. ಕೆಂಚನಕೆರೆ 

ಬಿಲ್ಲವರ ಘನತೆ, ಗೌರವ, ಅಭಿಮಾನಕ್ಕೆ ಶಕ್ತಿಯಾಗೋಣ: ಎನ್‌. ಟಿ. ಪೂಜಾರಿ

ಬಿಲ್ಲವರ ಘನತೆ, ಗೌರವ, ಅಭಿಮಾನಕ್ಕೆ ಶಕ್ತಿಯಾಗೋಣ: ಎನ್‌. ಟಿ. ಪೂಜಾರಿ

TDY-1

ದೈವೀಶಕ್ತಿಯ ನಂಬಿಕೆ ಬದುಕನ್ನು ಬದಲಾಯಿಸಬಲ್ಲದು: ನಿತ್ಯಾನಂದ ಕೋಟ್ಯಾನ್‌

MUST WATCH

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

udayavani youtube

ದಿನ7 | ಕಾಳರಾತ್ರಿ ದೇವಿ

ಹೊಸ ಸೇರ್ಪಡೆ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

1-asdasdasd

ವಾಡಿ: ದೇವಿಯ ಮುಂದೆ ಬೃಹತ್ ರಾವಣ ಪ್ರತಿಕೃತಿ ದಹನ

1–dsadasd

ಹುಣಸೂರು: ಹಾಡು ಹಗಲೇ ಮನೆ ಮುಂದೆ ಚಿರತೆ ಪ್ರತ್ಯಕ್ಷ; ಜನರಲ್ಲಿಆತಂಕ

1-qwwqewe

ರಾಷ್ಟ್ರೀಯ ಭೂ ಸ್ವಾಧೀನ ಅಧಿಕಾರಿಯ ಸೋಗಿನಲ್ಲಿ ವಂಚನೆ: ಆರೋಪಿ ಬಂಧನ

1-sdsdad

ಕೊರಟಗೆರೆಯ ಈ ಕುಗ್ರಾಮ  ಮೂಲಭೂತ ಸೌಕರ್ಯ ವಂಚಿತವಾಗಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.