ಮೊಗವೀರ ಕೋ.ಆ.ಬ್ಯಾಂಕಿನ ಬೊರಿವಲಿ ಸ್ಥಳಾಂತರಿತ ಶಾಖೆ ಉದ್ಘಾಟನೆ


Team Udayavani, Feb 5, 2018, 4:55 PM IST

0302mum02.jpg

ಮುಂಬಯಿ: ನಗರದ  ಕನ್ನಡಿಗರ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾದ ಮೊಗವೀರ ಕೋ. ಆಪರೇಟಿವ್‌ ಬ್ಯಾಂಕಿನ ಬೊರಿವಲಿ ಪಶ್ಚಿಮದ ಸ್ಥಳಾಂತರಿತ ಶಾಖೆಯ ಉದ್ಘಾಟನಾ ಸಮಾರಂಭವು ಜ.  29 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ನಗರದ ಪ್ರಖ್ಯಾತ ವೈದ್ಯರಾದ ಡಾ| ಹರ್ಷದ್‌ ಜರಿವಾಲಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ಕೆ. ಎಲ್‌. ಬಂಗೇರರವರು  ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದರು. ಅತಿಥಿಗಳು ರಿಬ್ಬನ್‌ ಕತ್ತರಿಸಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.  ಬ್ಯಾಂಕಿನ ಕಾರ್ಯಾಧ್ಯಕ್ಷರಾದ  ಸದಾನಂದ ಎ. ಕೋಟ್ಯಾನ್‌ ಈ ಸಂದರ್ಭದಲ್ಲಿ ಮಾತನಾಡಿ,  ಬ್ಯಾಂಕಿನ ಇತಿಹಾಸ ಹಾಗೂ ನಡೆದು ಬಂದ ದಾರಿಯಲ್ಲಿ ಸಾಧಿಸಿದ ಸಾಧನೆಗಳನ್ನು ಪ್ರಸ್ತಾಪಿಸಿ ಮುಂದಿನ ಯೋಜನೆಗಳಿಗೆ ಸರ್ವರ ಸಹಕಾರ ಇರಲಿ ಎಂದರು.

ಮುಖ್ಯ ಅತಿಥಿ ಡಾ| ಹರ್ಷದ್‌ ಜರಿವಾಲಾ ಮತ್ತು ಗೌರವ ಅತಿಥಿಗಳಾದ ಕೆ. ಎಲ್‌. ಬಂಗೇರ ಅವರು ಮಾತನಾಡಿ, ತಾವು ಇಂತಹ ಉತ್ತಮ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹರ್ಷವಾಗುತ್ತದೆ ಹಾಗೂ ಪ್ರಸ್ತುತ  ಆಡಳಿತ ಮಂಡಳಿ ಬ್ಯಾಂಕಿನ ಪ್ರಗತಿಗೆ ಶಕ್ತಿಮೀರಿ ದುಡಿಯುತ್ತಿರುವುದು ಹಾಗೂ ಉತ್ತಮ ಯೋಜನೆಗಳನ್ನು ರೂಪಿಸಿ ಧನಾತ್ಮಕ ಚಿಂತನೆಗಳನ್ನು ಹೊಂದಿರುವುದು ಶ್ಲಾಘನೀಯ ಎಂದರು.

ಉಪಾಧ್ಯಕ್ಷರಾದ ಧರ್ಮಪಾಲ ಅವರು ಮಾತನಾಡಿ, ಈಗಿನ  ಸ್ಪರ್ಧಾತ್ಮಕ ಯುಗದಲ್ಲಿ ಬ್ಯಾಂಕ್‌ ಸರ್ವ ರೀತಿಯಿಂದಲೂ ಉನ್ನತಿಗಾಗಿ ಶ್ರಮಿಸುತ್ತಿದೆ. ಮುಂದಿನ  ದಿನಗಳಲ್ಲಿ ಬ್ಯಾಂಕ್‌ ಮತ್ತಷ್ಟು ಪ್ರಗತಿ ಪಥದಲ್ಲಿ ಸಾಗುವ ಭರವಸೆ ಇದೆ ಎಂದರು. ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಡಿ. ಶಿರಾಲಿ ಅವರು ಬ್ಯಾಂಕ್‌ ಈಗ ಹೊಸತಾದ ಹಾಗೂ ಉನ್ನತ ಮಟ್ಟದ ಸಾಫ್ಟ್‌ವೇರ್‌ ಅಳವಡಿಸಿದೆ. ಇದರಿಂದ ಗ್ರಾಹಕರಿಗೆ ಶೀಘ್ರ ಮತ್ತು ಮೌಲ್ಯಯುತ ಸೇವೆ ಲಭ್ಯವಾಗಲಿದೆ ಎಂದರು.

ಬೊರಿವಲಿಯ ಸಂಸದರಾದ ಗೋಪಾಲ ಶೆಟ್ಟಿ ಅವರು  ಆಗಮಿಸಿ  ಶುಭ ಹಾರೈಸಿದರು. ಅವರನ್ನು ಉಪ ಕಾರ್ಯಾಧ್ಯಕ್ಷ ಧರ್ಮಪಾಲ ಅವರು ಗೌರವಿಸಿದರು. ಬ್ಯಾಂಕಿನ ನಿರ್ದೇಶಕರಾದ ಜನಾರ್ದನ ಮುಲ್ಕಿ ಮಾಜಿ ಕಾರ್ಯ  ನಿರ್ವಹಣಾಧಿಕಾರಿ ಎಂ. ಸಿ. ಶೆಟ್ಟಿ, ಉದ್ಯಮಿಗಳಾದ ಏಕನಾಥ ಅಮೀನ್‌, ಜಿಜುಭಾಯಿ ಪಟೇಲ್‌ ಬ್ಯಾಂಕಿನ ಪ್ರಗತಿ ಕುರಿತು ಪ್ರಶಂಶಿಸಿದರು.

ಅತಿಥಿಗಳನ್ನು ಸದಾನಂದ ಕೋಟ್ಯಾನ್‌ ಅವರು, ಶಾಲು ಹೊದೆಸಿ ಫಲಪುಷ್ಪ ನೀಡಿ ಗೌರವಿಸಿದರು. ಸಹಾಯಕ ಜನರಲ್‌ ಮ್ಯಾನೇಜರ್‌  ರೋಹಿತ್‌ ದೇಸಾಯಿ ಸರ್ವರನ್ನು ಸ್ವಾಗತಿಸಿದರು. ನಿರ್ದೇಶಕರಾದ ಜಯಶೀಲ ತಿಂಗಳಾಯ ವಂದಿಸಿದರು. ಮುಂಜಾನೆ ಪೂಜಾ ವಿಧಿಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ಗ್ರಾಹಕರು, ಹಿತೈಷಿಗಳು,  ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

ಮುಂದಿನ ಚುನಾವಣೆಯಲ್ಲಿ ಮಠಾಧೀಶರು ಸ್ಪರ್ಧಿಸುವುದು ಖಚಿತ : ರುದ್ರಮುನಿ ಸ್ವಾಮೀಜಿ

ಮುಂದಿನ ಚುನಾವಣೆಯಲ್ಲಿ ಮಠಾಧೀಶರು ಸ್ಪರ್ಧಿಸುವುದು ಖಚಿತ : ರುದ್ರಮುನಿ ಸ್ವಾಮೀಜಿ

ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ

ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ

siddaramaiah

ತಿಳಿಗೇಡಿ ಯುವಕನಿಂದ ಪಠ್ಯ ಪರಿಷ್ಕರಣೆ ಮಾಡಿಸಿದ್ದಾರೆ: ಸಿದ್ದರಾಮಯ್ಯ ಕಿಡಿ

15DKSHi

ಮತಾಂತರ ನಿಷೇಧದ ಸುಗ್ರೀವಾಜ್ಞೆಯು ಉದ್ಯೋಗಗಳನ್ನು ಸೃಷ್ಟಿಸುವುದೇ?: ಡಿಕೆಶಿ ಪ್ರಶ್ನೆ

ಕೆ.ಆರ್‌.ಪೇಟೆ: ಮಗಳ ಪ್ರಾಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ; ಆರೋಪಿ ಶಿಕ್ಷಕ ವಶಕ್ಕೆ

ಕೆ.ಆರ್‌.ಪೇಟೆ: ಮಗಳ ಪ್ರಾಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ; ಆರೋಪಿ ಶಿಕ್ಷಕ ವಶಕ್ಕೆ

ಭಾರಿ ಮಳೆ : ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ : 25,000 ರೂ. ಪರಿಹಾರ : ಸಿಎಂ ಬೊಮ್ಮಾಯಿ

ಭಾರಿ ಮಳೆ : ನೀರು ನುಗ್ಗಿರುವ ಮನೆಗಳಿಗೆ 25,000 ರೂ ಪರಿಹಾರ : ಸಿಎಂ ಬೊಮ್ಮಾಯಿ

1-sdsfsfsf

ಪಂಚರತ್ನ ಕಾರ್ಯಕ್ರಮದ ಪ್ರಚಾರಕ್ಕೆ 123 ವಾಹನಗಳನ್ನು ಖರೀದಿಸಿದ ಜೆಡಿಎಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

ಇಷ್ಟಲಿಂಗ ಪೂಜೆಯಿಂದ ಭವಬಂಧನದ ಮುಕ್ತಿ ಸಾಧ್ಯ

ಇಷ್ಟಲಿಂಗ ಪೂಜೆಯಿಂದ ಭವಬಂಧನದ ಮುಕ್ತಿ ಸಾಧ್ಯ

ಪತ್ರಕರ್ತರಿಂದ ತುಂಬಾ ಪ್ರೇರಿತನಾಗಿರುವೆ

ಪತ್ರಕರ್ತರಿಂದ ತುಂಬಾ ಪ್ರೇರಿತನಾಗಿರುವೆ

ಶತಮಾನದ ಶ್ರೇಷ್ಠ ಸಾಧನೆ “ಗೋಕುಲ’: ಚಂದ್ರಹಾಸ ಕೆ. ಶೆಟ್ಟಿ

ಶತಮಾನದ ಶ್ರೇಷ್ಠ ಸಾಧನೆ “ಗೋಕುಲ’: ಚಂದ್ರಹಾಸ ಕೆ. ಶೆಟ್ಟಿ

ಗೋಕುಲ ಆಧ್ಯಾತ್ಮಿಕ ಆಕರ್ಷಣೆಯ ಕೇಂದ್ರ: ಪಂ| ವಿದ್ಯಾಸಿಂಹಾಚಾರ್ಯ

ಗೋಕುಲ ಆಧ್ಯಾತ್ಮಿಕ ಆಕರ್ಷಣೆಯ ಕೇಂದ್ರ: ಪಂ| ವಿದ್ಯಾಸಿಂಹಾಚಾರ್ಯ

MUST WATCH

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

ಹೊಸ ಸೇರ್ಪಡೆ

1-dsfdsfd

ಮಂಗಳೂರು: ವಿಚ್ಛೇದನಕ್ಕೆ ಸಿದ್ದವಾಗಿದ್ದ ಮಹಿಳೆಯ ಮಾನಭಂಗ ಯತ್ನ; ಆರೋಪಿ ಬಂಧನ

ಸ್ಪ್ಲೆಂಡರ್‌ನಲ್ಲಿ ಯುವಕರ ದೇಶ ಪರ್ಯಟನೆ! ಭಾರತ ಧ್ವಜ ಕಂಡು ಹಲ್ಲೆಗೆ ಮುಂದು

ಸ್ಪ್ಲೆಂಡರ್‌ನಲ್ಲಿ ಯುವಕರ ದೇಶ ಪರ್ಯಟನೆ! ಭಾರತದ ಧ್ವಜ ಕಂಡು ಹಲ್ಲೆಗೆ ಯತ್ನ

ಬೀದಿನಾಯಿಗಳ ಹಾವಳಿ: ಆತಂಕದಲಿ ಸಾರ್ವಜನಿಕರು

ಬೀದಿನಾಯಿಗಳ ಹಾವಳಿ: ಆತಂಕದಲಿ ಸಾರ್ವಜನಿಕರು

ಮುಂದಿನ ಚುನಾವಣೆಯಲ್ಲಿ ಮಠಾಧೀಶರು ಸ್ಪರ್ಧಿಸುವುದು ಖಚಿತ : ರುದ್ರಮುನಿ ಸ್ವಾಮೀಜಿ

ಮುಂದಿನ ಚುನಾವಣೆಯಲ್ಲಿ ಮಠಾಧೀಶರು ಸ್ಪರ್ಧಿಸುವುದು ಖಚಿತ : ರುದ್ರಮುನಿ ಸ್ವಾಮೀಜಿ

chikmagaluru

ಜಿಲ್ಲೆಯ ಸಮಸ್ಯೆಗಳಿಗೆ ಸಿಕ್ಕಿತೇ ಪರಿಹಾರ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.