ಟಿಕೆಟ್‌ ರಹಿತ ಪ್ರಯಾಣಿಕರ ಸಂಖ್ಯೆಏರಿಕೆ

ಉಪನಗರ ಲೋಕಲ್‌ ರೈಲು

Team Udayavani, Jan 9, 2021, 7:33 PM IST

Increase in number of passengers without tickets

ಮುಂಬಯಿ: ಉಪನಗರ ಲೋಕಲ್‌ ರೈಲುಗಳಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರಿಗೆ ಅವಕಾಶವಿ ರುವ ಹಿನ್ನೆಲೆ ಟಿಕೆಟ್‌ ರಹಿತ, ಅನಧಿಕೃತ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿದೆ. ಇಂಥ ಅನಧಿಕೃತ ಪ್ರಯಾಣಿಕ ರನ್ನು ಪತ್ತೆಹಚ್ಚಲು ರೈಲ್ವೇ ಕಣ್ಗಾವಲು ಹೆಚ್ಚಿಸಿದ್ದು, ಟಿಕೆಟ್‌ ರಹಿತ ಪ್ರಯಾ ಣಿಕರಲ್ಲಿ ತೀವ್ರ ಏರಿಕೆ ಕಂಡುಬಂದಿದೆ. 2020ರ ಜುಲೈ ಮತ್ತು 2021ರ ಜ. 5ರ ನಡುವೆ ಲೋಕಲ್‌ ರೈಲುಗಳಲ್ಲಿ ಪ್ರಯಾಣಿಸಲು ಯತ್ನಿಸಿರುವ 77,500 ಅನಧಿಕೃತ ಪ್ರಯಾಣಿಕರ ವಿರುದ್ಧ ಮಧ್ಯ ರೈಲ್ವೇ ಕ್ರಮ ಕೈಗೊಂಡಿದೆ. ಲಾಕ್‌ಡೌನ್‌ಗೆ ಮುಂಚಿತವಾಗಿ 2020ರ ಮಾರ್ಚ್‌ನಲ್ಲಿ ದೈನಂದಿನ ಸುಮಾರು 4.5 ಮಿಲಿಯನ್‌ ಪ್ರಯಾ ಣಿಕರ ಪೈಕಿ ಟಿಕೆಟ್‌ ರಹಿತ ಪ್ರಯಾಣಿಕರ ಸಂಖ್ಯೆಯು 1,000ದಷ್ಟಿತ್ತು.

ಇದೀಗ ದೈನಂದಿನ ಪ್ರಯಾಣಿಕರ ಸಂಖ್ಯೆ 8,00,000ಕ್ಕೆ ಸೀಮಿತಗೊಳಿಸಿರುವಾಗ ಅನಧಿಕೃತ ಪ್ರಯಾಣಿಕರ ಸಂಖ್ಯೆ 1,500ಕ್ಕೆ ಏರಿಕೆಯಾಗಿದೆ. 2020ರ ಜುಲೈ ಮತ್ತು 2021ರ ಜ. 5ರ ನಡುವೆ ಟಿಕೆಟ್‌ ರಹಿತ ಪ್ರಯಾಣಿಕರಿಂದ 1.67 ಕೋಟಿ ರೂ.ಗಳ ದಂಡವನ್ನು ವಸೂಲಿ ಮಾಡಲಾಗಿದೆ. ಲಾಕ್‌ಡೌನ್‌ ಸಡಿಲ ಬಳಿಕ ಲೋಕಲ್‌ ರೈಲುಗಳಲ್ಲಿ ಅಗತ್ಯ ಸೇವಾ ಸಿಬಂದಿ, ವಿಶೇಷ ಚೇತನರು, ಕ್ಯಾನ್ಸರ್‌ ರೋಗಿಗಳಿಗೆ ಜು. 15ರಿಂದ ರೈಲು ಸೇವೆಗಳು ಪುನರಾರಂಭಗೊಂಡವು. ಮಹಿಳಾ ಮತ್ತು ವಕೀಲರಿಗೆ ಕೂಡ ನಿಗದಿತ ಸಮಯದಲ್ಲಿ ಪ್ರಯಾಣಿ ಸಲು ಅವಕಾಶವನ್ನು ನೀಡಲಾಗಿದೆ.

ಇದನ್ನೂ ಓದಿ:ಇಂಡೊನೇಷ್ಯಾ : ಟೇಕಾಫ್ ಆದ ಕೆಲಸಮಯದಲ್ಲೇ 62 ಪ್ರಯಾಣಿಕರನ್ನು ಹೊತ್ತ ವಿಮಾನ ನಾಪತ್ತೆ

ಆದಾಗ್ಯೂ ಅನಧಿಕೃತ ಪ್ರಯಾಣಿಕರ ಸಂಖ್ಯೆ ಇನ್ನೂ ದೊಡ್ಡದಾಗಿದ್ದು, ಇದೀಗ ಅಂಥ ಪ್ರಯಾಣಿಕರ ಸಂಖ್ಯೆ ಒಟ್ಟು ಪ್ರಯಾಣಿಕರಲ್ಲಿ ಶೇ. 30-40 ರಷ್ಟಿದೆ ಎಂದು ರೈಲ್ವೇ ಅಧಿಕಾರಿ ಗಳು ಹೇಳಿದ್ದಾರೆ. ವಲಯ ರೈಲ್ವೇಯು ಪ್ರಯಾಣಿಕರ ತಪಾಸಣೆಯನ್ನು ಹೆಚ್ಚಿಸಿದ್ದು, ಅನಿರೀಕ್ಷಿತ ಟಿಕೆಟ್‌ ಪರಿಶೀಲನೆಗಳನ್ನು ನಡೆಸುತ್ತಿದೆ.

ಜನವರಿಯಲ್ಲಿ ಮಧ್ಯ ರೈಲ್ವೇ ದೈನಂದಿನ 1,500 ಟಿಕೆಟ್‌ ರಹಿತ ಪ್ರಯಾಣದ ಪ್ರಕರಣಗಳನ್ನು ದಾಖಲಿಸಿದೆ. ನವೆಂಬರ್‌ನಿಂದ ಅನಧಿಕೃತ ಪ್ರಯಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಸಾಮಾನ್ಯ ಜನರಿಗೆ ಲೋಕಲ್‌ ರೈಲುಗಳಲ್ಲಿ ಪ್ರಯಾಣಿಸಲು ರಾಜ್ಯ ಸರಕಾರವು ಅನುಮತಿ ನೀಡದ ಕಾರಣ ಜನರು ಬುಕಿಂಗ್‌ ಕಚೇರಿಯಲ್ಲಿ ಟಿಕೆಟ್‌ ನಿರಾಕರಿಸಿದ ಬಳಿಕವೂ ರೈಲಿನಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಎಲ್ಲ ಉಪನಗರ ರೈಲ್ವೇ ತಪಾ ಸಣೆ ಹೆಚ್ಚಿಸಲಾಗಿದೆ ಎಂದು ಮಧ್ಯ ರೈಲ್ವೇ ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ, ದೇಶಕ್ಕೆ ಬಿಜೆಪಿ ಅನಿವಾರ್ಯವಾಗಿದೆ : ಸಿದ್ದು ಸವದಿ

ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ, ದೇಶಕ್ಕೆ ಬಿಜೆಪಿ ಅನಿವಾರ್ಯವಾಗಿದೆ : ಸಿದ್ದು ಸವದಿ

ಪರಿಪೂರ್ಣ ಯಾರ್ಕರ್‌ ಎಸೆಯಲು ನೆಟ್‌ ಅಭ್ಯಾಸ ಸಹಕಾರಿ: ಅರ್ಷದೀಪ್‌

ಪರಿಪೂರ್ಣ ಯಾರ್ಕರ್‌ ಎಸೆಯಲು ನೆಟ್‌ ಅಭ್ಯಾಸ ಸಹಕಾರಿ: ಅರ್ಷದೀಪ್‌ ಸಿಂಗ್‌

ಮದುವೆಗೆ ಅಡ್ಡಿಯಾದ ಪ್ರಿಯತಮೆಯ ಮಗುವನ್ನೇ ಅನಾಥವೆಂದು ಬಿಂಬಿಸಿ ಪೊಲೀಸರಿಗೊಪ್ಪಿಸಿದ ಪ್ರಿಯಕರ!

ಮದುವೆಗೆ ಅಡ್ಡಿಯಾದ ಪ್ರಿಯತಮೆಯ ಮಗುವನ್ನೇ ಅನಾಥವೆಂದು ಬಿಂಬಿಸಿ ಪೊಲೀಸರಿಗೊಪ್ಪಿಸಿದ ಪ್ರಿಯಕರ!

ಕೋವಿಡ್ ನಿರ್ವಹಣೆ: ಪ್ರಧಾನಿ ಮೋದಿ ಯಶಸ್ಸು, ಪ್ರಜಾಪ್ರಭುತ್ವದ ಸಾಧನೆ: ಜೋ ಬೈಡೆನ್ ಶ್ಲಾಘನೆ

ಕೋವಿಡ್ ನಿರ್ವಹಣೆ: ಪ್ರಧಾನಿ ಮೋದಿ ಯಶಸ್ಸು, ಪ್ರಜಾಪ್ರಭುತ್ವದ ಸಾಧನೆ: ಜೋ ಬೈಡೆನ್ ಶ್ಲಾಘನೆ

ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿಗಳು

ಅಕ್ರಮ ಮಕ್ಕಳ ಸಾಗಾಣಿಕೆ: ವಿಜಯಪುರದ ಸ್ಟಾಪ್ ನರ್ಸ್ ಪೊಲೀಸರ ವಶಕ್ಕೆ

ಒಂದು ಪರ್ಸೆಂಟ್ ಲಂಚ: ಆರೋಗ್ಯ ಸಚಿವರನ್ನೇ ವಜಾಗೊಳಿಸಿದ ಪಂಜಾಬ್ ಸಿಎಂ ಮಾನ್

ಒಂದು ಪರ್ಸೆಂಟ್ ಲಂಚ: ಆರೋಗ್ಯ ಸಚಿವರನ್ನೇ ವಜಾಗೊಳಿಸಿದ ಪಂಜಾಬ್ ಸಿಎಂ ಮಾನ್

ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ

ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಗಡ್ಚಿರೋಲಿಯ ಆನೆಗಳ ಮೇಲೂ ರಾಜಕೀಯ ಸವಾರಿ 

ಕಿರು ಸಭಾಗೃಹದ ಲೋಕಾರ್ಪಣೆ ಶ್ಲಾಘನೀಯ: ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ 

ಕಿರು ಸಭಾಗೃಹದ ಲೋಕಾರ್ಪಣೆ ಶ್ಲಾಘನೀಯ: ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ 

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

ಇಷ್ಟಲಿಂಗ ಪೂಜೆಯಿಂದ ಭವಬಂಧನದ ಮುಕ್ತಿ ಸಾಧ್ಯ

ಇಷ್ಟಲಿಂಗ ಪೂಜೆಯಿಂದ ಭವಬಂಧನದ ಮುಕ್ತಿ ಸಾಧ್ಯ

ಪತ್ರಕರ್ತರಿಂದ ತುಂಬಾ ಪ್ರೇರಿತನಾಗಿರುವೆ

ಪತ್ರಕರ್ತರಿಂದ ತುಂಬಾ ಪ್ರೇರಿತನಾಗಿರುವೆ

MUST WATCH

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

ಹೊಸ ಸೇರ್ಪಡೆ

ಸರ್ಕಾರಿ ಪ್ರೌಢಶಾಲೆಯಲಿ ಕಾನ್ವೆಂಟ್‌ ಆಡಳಿತ

ಸರ್ಕಾರಿ ಪ್ರೌಢಶಾಲೆಯಲಿ ಕಾನ್ವೆಂಟ್‌ ಆಡಳಿತ

ಆರ್ಥಿಕ ಸಬಲತೆಗೆ ಹೊಲಿಗೆಯಂತ್ರ ಸಹಕಾರಿ; ಶಾಸಕ ಟಿ. ವೆಂಕಟರಮಣಯ್ಯ

ಆರ್ಥಿಕ ಸಬಲತೆಗೆ ಹೊಲಿಗೆಯಂತ್ರ ಸಹಕಾರಿ; ಶಾಸಕ ಟಿ. ವೆಂಕಟರಮಣಯ್ಯ

hunasooru news

ಮಳೆಗೆ ನಾಗರಹೊಳೆ ಉದ್ಯಾನಕ್ಕೆ ಜೀವಕಳೆ

ಸಂವಿಧಾನದ ಕಾನೂನುಗಳಿಂದ ಕಾರ್ಮಿಕರ ರಕ್ಷಣೆ

ಸಂವಿಧಾನದ ಕಾನೂನುಗಳಿಂದ ಕಾರ್ಮಿಕರ ರಕ್ಷಣೆ

officers

ಅಧಿಕಾರಿಗಳಿಂದ ಮಳೆಹಾನಿ ಪ್ರದೇಶ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.