Udayavni Special

ಜಯ ಸುವರ್ಣರ ಸಮಾಜ ಸೇವೆ ಎಲ್ಲರಿಗೂ ಮಾದರಿ: ಕೃಷ್ಣ ಶೆಟ್ಟಿ

Team Udayavani, Oct 30, 2020, 9:07 PM IST

MUMBAI-TDY-1

ಮುಂಬಯಿ ಅ. 29: ಪರಿಸ್ಥಿತಿಗೆ ಅನುಗುಣವಾಗಿ ಕಾಯಕದ ಜತೆಗೆ ಸಮಾಜ ಸೇವೆಯನ್ನು ಯಾವ ರೀತಿ ಮಾಡಲು ಸಾಧ್ಯ ಎಂಬುದನ್ನು ಜಯ ಸಿ. ಸುವರ್ಣರಿಂದ ಕಲಿಯಬೇಕು. ವ್ಯಕ್ತಿ ಯಾವತ್ತೂ ಶಕ್ತಿಯಾಗಿ ಬೆಳೆದಾಗ ಸಮಾಜ ಬೆಳೆಯುವುದು ಎಂಬುದಕ್ಕೆ ಸುವರ್ಣರು ಸಾಕ್ಷಿಯಾಗಿದ್ದರು. ಬದುಕಿನುದ್ದಕ್ಕೂ ಅವರ ಜನಸೇವೆ, ಸಮಾಜ ಸೇವೆ ಎಲ್ಲರಿಗೂ ಮಾದರಿ. ಬಿಲ್ಲವ ಜನಾಂಗದ ಪ್ರಗತಿ ಜತೆಗೆ ಸಮಾಜದ ಎಲ್ಲ ವರ್ಗಗಳ ಜನರ ಒಡನಾಟ ಅವಿಸ್ಮರಣೀಯ ಎಂದು ಚಾರ್‌ಕೋಪ್‌ ಕನ್ನಡಿಗರ ಬಳಗದ ಅಧ್ಯಕ್ಷ ಎಂ. ಕೃಷ್ಣ ಎನ್‌. ಶೆಟ್ಟಿ ತಿಳಿಸಿದರು.

ಚಾರ್ಕೋಪ್‌ ಕನ್ನಡಿಗರ ಬಳಗದ ವತಿಯಿಂದ ಅ. 28ರಂದು ಚಾರ್ಕೋಪ್‌ ಕಾಂದಿವಿಲಿ ಪಶ್ಚಿಮದ ವಿಜಯ ಹೌಸಿಂಗ್‌ ಕೋ-ಆಪರೇಟಿವ್‌ ಹೌಸಿಂಗ್‌ ಸೊಸೈಟಿಯ ಬಳಗದ ಕನ್ನಡ ಭವನದ ಮಿನಿ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಜಯ ಸಿ. ಸುವರ್ಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿ, ಜಯ ಸುವರ್ಣರು ನಮ್ಮ ನಡುವೆ ಇಲ್ಲದಿದ್ದರೂ ಅವರ ಮಾರ್ಗದರ್ಶನ-ಚಿಂತನೆ ಮುಂದಿನ ಜನಾಂಗಕ್ಕೆ ಮಾದರಿಯಾಗಲಿದೆ. ಅವರ ನಿಧನದ ದುಃಖ ಸಹಿಸಿಕೊಳ್ಳುವ ಶಕ್ತಿ ಭಗವಂತ ಕುಟುಂಬದ ಸದಸ್ಯರಿಗೆ ನೀಡಲಿ. ಇಂಥ ಮಹಾನ್‌ ಚೇತನ ಮತ್ತೂಮ್ಮೆ ಹುಟ್ಟಿ ಬರಲಿ ಎಂದರು.

ಸಮಾಜ ಸೇವಕ, ಗೋರೆಗಾಂವ್‌ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಪಯ್ನಾರು ರಮೇಶ್‌ ಶೆಟ್ಟಿ ಮಾತನಾಡಿ, ಮನುಷ್ಯನಿಗೆ ಹುಟ್ಟು ಆಕಸ್ಮಿಕ, ಸಾವು ನಿಶ್ಚಿತವಾದರೂ ಈ ನಡುವಿನ ಸಮಯದಲ್ಲಿ ಜಯದ ಶಿಖರವನ್ನೇರಿ ಸದೃಢ ಹಣಕಾಸು ಸಂಸ್ಥೆಯೊಂದಿಗೆ ಬಿಲ್ಲವ ಜನಾಂಗಕ್ಕೆ ಮುಖ್ಯಸ್ಥರಾಗಿ, ಸಂಘಟನಾತ್ಮಕ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಜಯ ಸುವರ್ಣರ ನಿಧನ ಬಿಲ್ಲವ ಸಮಾಜ ಮಾತ್ರವಲ್ಲದೆ ತುಳು-ಕನ್ನಡಿಗರಿಗೆ ಬಹುದೊಡ್ಡ ನಷ್ಟ. ಅವರ ಅಗಲುವಿಕೆಯ ದುಃಖ ಸಹಿಸುವ ಶಕ್ತಿ ಭಗವಂತನು ಎಲ್ಲರಿಗೆ ನೀಡಲಿ ಎಂದು ತಿಳಿಸಿದರು

ಕಾರ್ಯಕ್ರಮವನ್ನು ನಿರ್ವಹಿಸಿದ  ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್‌. ಶೆಟ್ಟಿ ಮಾತನಾಡಿ, ಜಯ ಸುವರ್ಣರು ಬ್ರಹ್ಮಶ್ರೀ ನಾರಾಯಣಗುರುಗಳ ತತ್ತ-ಸಿದ್ಧಾಂತ ಪಾಲಿಸುತ್ತ, ಪರೋಪಕಾರಿ ಯಾಗಿ ಬದುಕಿ, ಭಾರತ್‌ ಬ್ಯಾಂಕ್‌ ಸಾಧನೆಯನ್ನು ಮಹಾನಗರದ ಉದ್ದಗಲಕ್ಕೆ ವಿಸ್ತರಿಸಿ ತುಳು-ಕನ್ನಡಿಗರ ಬಾಳಿಗೆ ದಾರಿ ತೋರಿಸಿದರು. ಬಳಗದ ಉತ್ತುಂಗದಲ್ಲಿ ಮಾರ್ಗದರ್ಶಕರಾಗಿ ಸಲಹೆ ನೀಡಿದ್ದರು. ಅವರ ಆತ್ಮ ಭಗವಂತನ ಸಾನ್ನಿಧ್ಯದಲ್ಲಿ ಚಿರಶಾಂತಿ ಪಡೆಯಲಿ. ಅವರ ಕಾರ್ಯ ಸಾಧನೆ ಜನಮಾನಸದಲ್ಲಿ ನೆಲೆ ನಿಲ್ಲಲಿ ಎಂದು ಪುಷ್ಪಾಂಜಲಿ ಅರ್ಪಿಸಿ ನುಡಿನಮನ ಸಲ್ಲಿಸಿದರು.

ವಿಶ್ವಸ್ಥ ಎಂ. ಎಸ್‌. ರಾವ್‌ ಅವರು ಭಾರತ್‌ ಬ್ಯಾಂಕ್‌ ಚಾರ್ಕೋಪ್‌ ಬಳಗಕ್ಕೆ ಜಯ ಸಿ. ಸುವರ್ಣರ ಕೊಡುಗೆ ಬಗ್ಗೆ ಮಾತನಾಡಿದರು. ಸಂಘ-ಸಂಸ್ಥೆಗಳಿಗೆ ಅವರು ನೀಡುತ್ತಿದ್ದ ಮೌಲಿಕ ಸಲಹೆಗಳನ್ನು ಸ್ಮರಿಸಿದರು.  ಬಳಗದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿ ಮಾತನಾಡಿ, ಜಯ ಸಿ. ಸುವರ್ಣರು ಮುಂಬಯಿಗರಿಗೆ ಮಾತ್ರ ಸೀಮಿತವಾಗಿರದೆ ಊರಿನಲ್ಲೂ ಜಾತಿ-ಧರ್ಮ ಭೇದವಿಲ್ಲದೆ ಸಮಾಜ ಸೇವಕರಾಗಿದ್ದರು ಎಂದರು.

ಭಾರತ್‌ ಬ್ಯಾಂಕ್‌ನ ನಿರ್ದೇಶಕ ಪ್ರೇಮನಾಥ್‌ ಎ. ಕೋಟ್ಯಾನ್‌, ಸಮಾಜ ಸೇವಕ ರಜಿತ್‌ ಎಲ್‌. ಸುವರ್ಣ, ಬಳಗದ ಉಪಾಧ್ಯಕ್ಷ ಚಂದ್ರಶೇಖರ್‌ ಶೆಟ್ಟಿ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್‌ ಚೇವಾರ್‌, ಕಾಂದಿವಲಿ ಕನ್ನಡ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಸಬಿತಾ ಜಿ. ಪೂಜಾರಿ ನುಡಿನಮನ ಸಲ್ಲಿಸಿದರು. ಬಳಗದ ಉಪ ಕಾರ್ಯಾಧ್ಯಕ್ಷ ಕೃಷ್ಣ ಅಮೀನ್‌, ಲತಾ ಬಂಗೇರ, ರಮೇಶ್‌ ಬಂಗೇರ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಮೃತರ ಗೌರವಾರ್ಥ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಚಿತ್ರ-ವರದಿ: ರಮೇಶ್‌ ಉದ್ಯಾವರ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

mnl

ಲಷ್ಕರ್‌ ಬೆಂಬಲಿಸಿ ಬೆದರಿಕೆ ಪ್ರಕರಣ ; 3 ತಂಡಗಳಿಂದ ತನಿಖೆ

ಲವ್‌ ಜೆಹಾದ್‌ ನಿಗ್ರಹಿಸುವ ಉ.ಪ್ರ. ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

ಲವ್‌ ಜೆಹಾದ್‌ ನಿಗ್ರಹಿಸುವ ಉ.ಪ್ರ. ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

ಓಲಾ, ಉಬರ್‌ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ

ಓಲಾ, ಉಬರ್‌ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಚೌಕಟ್ಟು ಅಗತ್ಯ: ಡಾ| ಕೆ. ಶಿವನ್‌ ಅಭಿಮತ

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಚೌಕಟ್ಟು ಅಗತ್ಯ: ಡಾ| ಕೆ. ಶಿವನ್‌ ಅಭಿಮತ

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು: ಬೊಮ್ಮಾಯಿ

ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು: ಬೊಮ್ಮಾಯಿ

ನಿವಾರ್‌ ಸೈಕ್ಲೋನ್ ಎಫೆಕ್ಟ್ : ಕಾಕಿನಾಡ ಬೀಚಲ್ಲಿ “ಚಿನ್ನದ ಶೋಧನೆ‌’

ನಿವಾರ್‌ ಸೈಕ್ಲೋನ್ ಎಫೆಕ್ಟ್ : ಕಾಕಿನಾಡ ಬೀಚಲ್ಲಿ “ಚಿನ್ನದ ಶೋಧನೆ‌’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಗತ್ತಿನ ಸ್ವರ್ಗ  ಥೈಲ್ಯಾಂಡ್‌

ಜಗತ್ತಿನ ಸ್ವರ್ಗ  ಥೈಲ್ಯಾಂಡ್‌

ಕೋವಿಡ್‌-19ಗೆ ಸಂಭಾವ್ಯ ಚಿಕಿತ್ಸೆ  ಅಭಿವೃದ್ಧಿಪಡಿಸಿದ ಅನಿಕಾ ಚೆಬ್ರೊಲು

ಕೋವಿಡ್‌-19ಗೆ ಸಂಭಾವ್ಯ ಚಿಕಿತ್ಸೆ  ಅಭಿವೃದ್ಧಿಪಡಿಸಿದ ಅನಿಕಾ ಚೆಬ್ರೊಲು

ಅಮೆರಿಕಾದಲ್ಲಿ  ಹುಬ್ಬಳ್ಳಿ ವೈದ್ಯನ ಸಾಧನೆ

ಅಮೆರಿಕಾದಲ್ಲಿ  ಹುಬ್ಬಳ್ಳಿ ವೈದ್ಯನ ಸಾಧನೆ

ಬೈಡೆನ್‌, ಕಮಲಾ  ಜೋಡಿ; ಭಾರತಕ್ಕೆ ಮಾಡುವುದೇ ಮೋಡಿ

ಬೈಡೆನ್‌, ಕಮಲಾ  ಜೋಡಿ; ಭಾರತಕ್ಕೆ ಮಾಡುವುದೇ ಮೋಡಿ

ವರ್ಷದ ಕೊನೆಯ ತಿಂಗಳ ವಿಶೇಷ

ವರ್ಷದ ಕೊನೆಯ ತಿಂಗಳ ವಿಶೇಷ

MUST WATCH

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM & ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

ಹೊಸ ಸೇರ್ಪಡೆ

mnl

ಲಷ್ಕರ್‌ ಬೆಂಬಲಿಸಿ ಬೆದರಿಕೆ ಪ್ರಕರಣ ; 3 ತಂಡಗಳಿಂದ ತನಿಖೆ

Sajid

ಸಾಜಿದ್‌ ಸುಳಿವು ನೀಡಿದರೆ 37 ಕೋ. ರೂ

ಲವ್‌ ಜೆಹಾದ್‌ ನಿಗ್ರಹಿಸುವ ಉ.ಪ್ರ. ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

ಲವ್‌ ಜೆಹಾದ್‌ ನಿಗ್ರಹಿಸುವ ಉ.ಪ್ರ. ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

ಓಲಾ, ಉಬರ್‌ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ

ಓಲಾ, ಉಬರ್‌ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಚೌಕಟ್ಟು ಅಗತ್ಯ: ಡಾ| ಕೆ. ಶಿವನ್‌ ಅಭಿಮತ

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಚೌಕಟ್ಟು ಅಗತ್ಯ: ಡಾ| ಕೆ. ಶಿವನ್‌ ಅಭಿಮತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.