ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷರಾಗಿ ಎಂ.ಎಂ.ಕೋರಿ ಮರು ಆಯ್ಕೆ

Team Udayavani, Jun 18, 2019, 4:42 PM IST

ಮುಂಬಯಿ: ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಕನ್ನಡಿಗರ ಸಂಘಗಳಲ್ಲೇ ಹಿರಿಯ ಮತ್ತು ಪ್ರತಿಷ್ಠಿತ ಸಂಸ್ಥೆ ಎಂದೆಣಿಸಿ ಒಂಬತ್ತನೇ ದಶಕದತ್ತ ಮುನ್ನಡೆಯುತ್ತಿರುವ ಕರ್ನಾಟಕ ಸಂಘ ಮುಂಬಯಿ ಇದರ 2019-2022ನೇ ಸಾಲಿನ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕಾರ್ಯಕಾರಿ ಸಮಿತಿಯ 6 ಸ್ಥಾನಗಳಿಗೆ ಜೂ. 16 ರಂದು ಚುನಾವಣೆ ನಡೆಯಿತು.

ಹೊರನಾಡಿನಲ್ಲಿ ಎಲ್ಲಾ ಜಾತಿ-ಮತ, ಸಮುದಾಯಗಳ ಪ್ರಾತಿನಿಧ್ಯ ಹೊಂದಿರುವ ಸಂಘದ ಕಾರ್ಯಕಾರಿ ಸಮಿತಿ ಆಯ್ಕೆಗೆ ನಗರದ ಮಾಟುಂಗ ಪಶ್ಚಿಮದ ಟಿ. ಎಚ್‌. ಕಟರಿಯಾ ಮಾರ್ಗದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಆವರಣದಲ್ಲಿ ಪೂರ್ವಾಹ್ನದಿಂದ ಸಂಜೆ ವರೆಗೆ ಮತದಾನ ನಡೆಸಲ್ಪಟ್ಟಿತು. ಶಾಂತಯುತವಾಗಿಯೇ ನಡೆದ ಮತದಾನದಲ್ಲಿ ಸುಮಾರು 500 ಸದಸ್ಯರು ಮತ ಚಲಾಯಿಸಿದರು.

ಹಾಲಿ ಅಧ್ಯಕ್ಷ ಮನೋಹರ ಎಂ. ಕೋರಿ ಅವರು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು 355 ಮತಗಳನ್ನು ಪಡೆದು ವಿಜೇತರೆಣಿಸಿದರು. ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿದ್ದ ರಾಮೇಶ್ವರ ಎನ್‌. ಹತ್ತರRರ್‌ 121 ಮತಗಳನ್ನು ಪಡೆದು ಪರಾಜಿತಗೊಂಡ‌ರು. ಅಧ್ಯಕ್ಷ ಸ್ಥಾನದಲ್ಲಿ 24 ಮತಗಳು ಅಸಿಂಧುಗೊಂಡಿದ್ದವು. ಹಾಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಸೆೇರಿದಂತೆ ಅನೇಕ ಗಣ್ಯ ಸದಸ್ಯರು ಆಗಮಿಸಿ ಮತ ಚಲಾಯಿಸಿದರು. ಎಸ್‌. ಬಿ. ರಾಮಣ್ಣ, ಸುಧಾಕರ ಮೈಂದನ್‌ ಮತ್ತು ಸದಾನಂದ ಅಮೀನ್‌ ಅವರು ಚುನಾವಣಾ ಅಧಿಕಾರಿಗಳಾಗಿದ್ದು ಸಂಜೆ ವೇಳೆಗೆ ಚುನಾವಣಾ ಫಲಿತಾಂಶ ಪ್ರಕಟಿಸಿದರು.

ಸಾಮಾನ್ಯ ವಿಭಾಗದ ಕಾರ್ಯಕಾರಿ ಸಮಿತಿಯ 6 ಸ್ಥಾನಗಳಿಗೆ ಹಾಲಿ ಆಡಳಿತ್ವ ತಂಡದ ಪರವಾಗಿ ಅಭ್ಯರ್ಥಿಗಳಾಗಿದ್ದ ನರಸಿಂಹ ಎಂ. ಗುಡಿ 332 ಮತಗಳು, ಸೋಮನಾಥ ಸಿ. ಹಲಗತ್ತಿ 326, ಸುಂದರ ಸಿ. ಕೋಟ್ಯಾನ್‌ 361, ವಿದ್ಯಾ ವಿ. ಚಿಟಗುಪ್ಪಿ 327 ಮತಗಳನ್ನು ಪಡೆದು ವಿಜೇತರೆಣಿಸಿದರೆ, ಪ್ರತಿಸ್ಪರ್ಧಿಗಳಾಗಿದ್ದ ಹ್ಯಾರಿ ರೋಸಾರಿಯೋ ಸಿಕ್ವೇರ 141 ಮತ್ತು ವಿಶ್ವನಾಥ ಎಸ್‌. ಶೆಟ್ಟಿ ಅವರು 151 ಮತಗಳನ್ನು ಪಡೆದು ಪರಾಭವಗೊಂಡರು.

ಸಂಘದ 85ನೇ ವಾರ್ಷಿಕ ಮಹಾಸಭೆಯು ಜೂ. 23 ರಂದು ಸಂಜೆ 5 ರಿಂದ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ ನಡೆಯಲಿದೆ ಎಂದು ಸಂಘದ ಗೌರವ ಕಾರ್ಯದರ್ಶಿ ಭರತ್‌ಕುಮಾರ್‌ ಪೊಲಿಪು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ನೂತನ ಪದಾಧಿಕಾರಿಗಳು
ಅಧ್ಯಕ್ಷರಾಗಿ ಮನೋಹರ ಎಂ. ಕೋರಿ, ಉಪಾಧ್ಯಕ್ಷರಾಗಿ ಡಾ| ಈಶ್ವರ್‌ ಅಲೆವೂರು, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಡಾ| ಭರತ್‌ಕುಮಾರ್‌ ಪೊಲಿಪು, ಗೌರವ ಜೊತೆ ಕಾರ್ಯದರ್ಶಿಯಾಗಿ ಅಮರೇಶ್‌ ಸಿ. ಪಾಟೀಲ್‌, ಗೌರವ ಕೋಶಾಧಿಕಾರಿಯಾಗಿ ನ್ಯಾಯವಾದಿ ಎಂ. ಡಿ. ರಾವ್‌, ಗೌರವ ಜೊತೆ ಕೋಶಾಧಿಕಾರಿಯಾಗಿ ದಿನೇಶ್‌ ಎ. ಕಾಮತ್‌ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಡಾ| ಎಸ್‌. ಕೆ. ಭವಾನಿ, ಸುಧಾಕರ್‌ ಪಾಲನ್‌, ರಾಜೀವ್‌ ಎನ್‌. ನಾಯಕ್‌, ಲಲಿತಾ ಪಿ. ಅಂಗಡಿ, ಓಂದಾಸ್‌ ಕಣ್ಣಂಗಾರ್‌, ಡಾ| ಮಮತಾ ಟಿ. ರಾವ್‌, ಡಾ| ಜಿ. ಪಿ. ಕುಸುಮಾ, ದುರ್ಗಪ್ಪ ಎಲ್ಲಪ್ಪ ಕೊಟ್ಯಾವರ್‌, ಸುಶೀಲಾ ಎಸ್‌. ದೇವಾಡಿಗ ಸೇರಿದಂತೆ ಒಟ್ಟು 16 ಮಂದಿ ಸದಸ್ಯರ ಮಂಡಳಿ ಕಾರ್ಯನಿರತವಾಗಿದೆ.

ವರದಿ : ರೋನ್ಸ್‌ ಬಂಟ್ವಾಳ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ