Udayavni Special

ಕಾಪು ಮೊಗವೀರ ಸಭಾ ಮುಂಬಯಿ: ವಾರ್ಷಿಕ ಮಹಾಸಭೆ

Team Udayavani, Feb 26, 2019, 1:26 PM IST

2302mum02.jpg

ಮುಂಬಯಿ:ಕಾಪು ಮೊಗವೀರ ಸಭಾ ಮುಂಬಯಿ ಇದರ ವಾರ್ಷಿಕ ಮಹಾಸಭೆಯ ಫೆ. 17ರಂದು ಬೆಳಗ್ಗೆ 9.30ರಿಂದ ಸಾಕಿನಾಕಾದ ಮೆಟ್ರೋ ಸ್ಟೇಷನ್‌ ಬಳಿ ಇರುವ ಸಭಾದ ಕಾರ್ಯಾಲಯದಲ್ಲಿ ಸತೀಶ್‌ ಕುಮಾರ ಎನ್‌. ಕರ್ಕೇರ ಅಧ್ಯಕ್ಷತೆಯಲ್ಲಿ ಜರಗಿತು.

ಆರಂಭದಲ್ಲಿ ವರದಿ ವರ್ಷದಲ್ಲಿ ನಿಧನರಾದ ಸದಸ್ಯರಿಗೆ ಹಾಗೂ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜತೆ ಕಾರ್ಯದರ್ಶಿ ರೂಪೇಶ್‌ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ಬಿ. ಎಸ್‌. ಸಾಲ್ಯಾನ್‌ ಮತ್ತು ಕೋಶಾಧಿಕಾರಿ ಸುಕುಮಾರ್‌ ಕರ್ಕೇರ ಅವರು ಕ್ರಮವಾಗಿ ಮಹಾಸಭಾ ಹಾಗೂ ಅದರ ಸಂಚಾಲಕತ್ವದಲ್ಲಿರುವ ಮೊಗವೀರ ಸದಸ್ಯರ ಸಹಾಯಕ ಸಂಘದ ಹಿಂದಿನ ವರ್ಷದ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು.

ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದ ಬಳಿಕ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಭೆಯಲ್ಲಿ ಕಾಪು ಪಡುಗ್ರಾಮದಲ್ಲಿ ಮಾಡುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ, ಅದಕ್ಕಾಗಿ ಶಾಶ್ವತ ನಿಧಿಯೊಂದನ್ನು ಸ್ಥಾಪಿಸುವ ಬಗ್ಗೆ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು.

ಸದಸ್ಯರ ಪರವಾಗಿ ಡಿ. ಎಲ್‌. ಅಮೀನ್‌, ವಿಶ್ವನಾಥ ಕೋಟ್ಯಾನ್‌, ಸೋಮನಾಥ ಕರ್ಕೇರ, ಪುರುಷೋತ್ತಮ ಎಲ್‌. ಪುತ್ರನ್‌, ಲೋಕೇಶ್‌ ಎಂ. ಕರ್ಕೇರ, ನೀಲಾಧರ ಎಂ. ಸಾಲ್ಯಾನ್‌, ಮೋಹನ್‌ ಮೆಂಡನ್‌, ರಮೇಶ್‌ ಎಂ. ಬಂಗೇರ, ರಮೇಶ್‌ ಟಿ. ಮೆಂಡನ್‌, ಸುಕುಮಾರ್‌ ಮೆಂಡನ್‌, ಆನಂದ ಕೋಟ್ಯಾನ್‌ ಅವರು ಮಾತನಾಡಿ ಸಂಘದ ಪ್ರಗತಿಯ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಭೆಗೆ ಹೊಸ ಸದಸ್ಯರಾಗಿ ಸೇರಿಕೊಂಡ ವಿನೀತ್‌ ಕೋಟ್ಯಾನ್‌ ಮತ್ತು ಯತೀಶ್‌ ಕೋಟ್ಯಾನ್‌ ಅವರನ್ನು ಸ್ವಾಗತಿಸಲಾಯಿತು. ಸತೀಶ್‌ ಕುಮಾರ್‌ ಎನ್‌. ಕರ್ಕೇರ ಅವರು ಮಾತನಾಡಿ, ಅಧಿಕ ಸಂಖ್ಯೆಯಲ್ಲಿ ಹಾಜರಿರುವ ಸದಸ್ಯರನ್ನು ಕಂಡು ಸಂತೋಷವಾಗುತ್ತಿದೆ. ಸಭೆಯು ಸಮಾಜಪರ ಸೇವೆಯು ನಿರಂತರವಾಗಿ ಮುಂದುವರಿಯುವಂತೆ ಮಾಡಲು ಸರ್ವ ಸದಸ್ಯರು ಸಹಕರಿಸಬೇಕು. ಸಭೆಯು ಮಹಿಳಾ ವಿಭಾಗವನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದು, ಮುಂದಿನ ಎರಡು ತಿಂಗಳೊಳಗೆ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದರು.

ಲೇಖಕ, ನಾಟಕಕಾರ ಕಾಪು ಮಹಾಸಭಾ ಇದರ ಲೆಕ್ಕ ಪರಿಶೋಧಕ ಸೋಮನಾಥ ಎಸ್‌. ಕರ್ಕೇರ ಅವರನ್ನು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಲಾಯಿತು. ಜತೆ ಕಾರ್ಯದರ್ಶಿ ರೂಪೇಶ್‌ ಸುವರ್ಣ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

ರಕ್ತದಾನ ಮಾನವೀಯತೆ ಸಾರುವ ಪುಣ್ಯದ ಕೆಲಸ: ಡಾ| ಸತ್ಯಪ್ರಕಾಶ್‌ ಶೆಟ್ಟಿ

ರಕ್ತದಾನ ಮಾನವೀಯತೆ ಸಾರುವ ಪುಣ್ಯದ ಕೆಲಸ: ಡಾ| ಸತ್ಯಪ್ರಕಾಶ್‌ ಶೆಟ್ಟಿ

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ: 49ನೇ ವಾರ್ಷಿಕ ನವರಾತ್ರೋತ್ಸವ ಸಂಪನ್ನ

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ: 49ನೇ ವಾರ್ಷಿಕ ನವರಾತ್ರೋತ್ಸವ ಸಂಪನ್ನ

ಕೊರೊನಾ ದೂರವಾಗಿ ಜನಜೀವನ ಸುಗಮವಾಗಲಿ: ಪ್ರದೀಪ್‌ ಸಿ. ಶೆಟ್ಟಿ

ಕೊರೊನಾ ದೂರವಾಗಿ ಜನಜೀವನ ಸುಗಮವಾಗಲಿ: ಪ್ರದೀಪ್‌ ಸಿ. ಶೆಟ್ಟಿ

samshodhana

ಡಾ.ದಿನೇಶ್ ಶೆಟ್ಟಿಯವರ ಸಂಶೋಧನೆಗೆ ಅಬುಧಾಬಿಯಿಂದ 1 ಮಿಲಿಯನ್ ಅನುದಾನ!

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಪಂಚಾಯತ್‌ನಲ್ಲೇ ಎಲ್ಲ 63 ಅರ್ಜಿ ನಮೂನೆಯ ಹೆಲ್ಪ್ ಡೆಸ್ಕ್

ಪಂಚಾಯತ್‌ನಲ್ಲೇ ಎಲ್ಲ 63 ಅರ್ಜಿ ನಮೂನೆಯ ಹೆಲ್ಪ್ ಡೆಸ್ಕ್

ಸಿಂದಗಿಯಲ್ಲಿ ಯಡಿಯೂರಪ್ಪ ಪ್ರಚಾರ ಆರಂಭ

ಸಿಂದಗಿಯಲ್ಲಿ ಯಡಿಯೂರಪ್ಪ ಪ್ರಚಾರ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.