ಕೈಗಾರಿಕೆಗಳಲ್ಲಿ ಆಮ್ಲಜನಕದ ಕೊರತೆ
Team Udayavani, Sep 20, 2020, 7:45 PM IST
ಪುಣೆ, ಸೆ. 19: ಕೈಗಾರಿಕಾ ಉದ್ದೇಶಕ್ಕಾಗಿ ಕೇವಲ ಶೇ. 20ರಷ್ಟನ್ನು ಆಮ್ಲಜನಕ ಮೀಸಲಿಟ್ಟು ಆಸ್ಪತ್ರೆಗಳಿಗೆ ಶೇ. 80ರಷ್ಟು ಆಮ್ಲಜನಕ ಪೂರೈಕೆ ಮಾಡುವ ರಾಜ್ಯ ಸರಕಾರದ ನಿರ್ಧಾರವು ಪಿಂಪ್ರಿ-ಚಿಂಚ್ವಾಡ್ ಮತ್ತು ಚಾಕನ್ ಪ್ರದೇಶಗಳಲ್ಲಿನ ಕೈಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಉದ್ಯಮದ ಪ್ರತಿನಿಧಿಗಳ ಪ್ರಕಾರ, ಆಮ್ಲಜನಕದ ಪೂರೈಕೆಯಲ್ಲಿನ ಕುಸಿತವು ಉತ್ಪಾದನೆಯನ್ನು ಶೇ. 25ರಷ್ಟು ಇಳಿಸಿದೆ ಎಂದಿದ್ದಾರೆ. ಕೈಗಾರಿಕಾ ಆಮ್ಲಜನಕವನ್ನು ಫ್ಯಾಬ್ರಿಕೇಶನ್, ಪ್ಲಾಸ್ಮಾ ಕತ್ತರಿಸುವುದು, ರಬ್ಬರ್ ಮತ್ತು ಪ್ಲಾಸ್ಟಿಕ್ ಕತ್ತರಿಸುವ ಕಾರ್ಖಾನೆಗಳಲ್ಲಿ ಬಳಸಲಾಗುತ್ತದೆ. ಕೋವಿಡ್ ಪರಿಸ್ಥಿತಿಯಲ್ಲಿ ವೈದ್ಯಕೀಯ ಉದ್ದೇಶಗಳಿಗಾಗಿ ಹೆಚ್ಚುತ್ತಿರುವ ಆಮ್ಲಜನಕದ ಬೇಡಿಕೆಯನ್ನು ಪರಿಹರಿಸಲು, ಸರಕಾರವು ಸೆ. 7ರಂದು ಅಧಿಸೂಚನೆಯನ್ನು ಹೊರಡಿಸಿ, ವೈದ್ಯಕೀಯ ಆಮ್ಲಜನಕದ ಪ್ರಮಾಣವು ಹೆಚ್ಚಾದ ರೂ ಅಗತ್ಯವಿದ್ದಲ್ಲಿ ಆಸ್ಪತ್ರೆಯ ಅಥವಾ ಕೈಗಾರಿಕೆಗಳ ಸರಬರಾಜಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದೆ. ಸರಕಾರದ ಸುತ್ತೋಲೆಯಲ್ಲಿ ಆಮ್ಲಜನಕದ ಬೆಲೆಯೂ ಹೆಚ್ಚಾಗಿದೆ. ಕೈಗಾರಿಕಾ ಆಮ್ಲಜನಕಕ್ಕೆ ಈ ಹಿಂದೆ ಒಂದು ಘನ ಮೀಟರ್‌ಗೆ 20 ರೂ. ಗಳಾಗಿತ್ತು, ಆದರೆ ಪ್ರಸ್ತುತ ಇದರ ದರ 60 ರೂ. ಗಳಿಗೆ ಏರಿಕೆಯಾಗಿದೆ. ಪ್ರತಿದಿನ ಆಮ್ಲಜನಕವನ್ನು ಬಳಸುವ ಹಲವಾರು ಘಟಕಗಳನ್ನು ಹೊಂದಿರುವ ಪಿಂಪ್ರಿ ಮತ್ತು ಚಿಂಚ್ ವಾಡ್ ಸಣ್ಣ ಪ್ರಮಾಣದ ಕೈಗಾರಿಕೆಗಳು ಸೆ. 8ರಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಉದ್ಯಮಕ್ಕೆ ಸಹಾಯ ಕೋರಿ ಪತ್ರ ಬರೆದಿದ್ದಾರೆ.
ಪಿಂಪ್ರಿ-ಚಿಂಚ್ವಾಡ್ ಸಣ್ಣ-ಪ್ರಮಾಣದ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸಂದೀಪ್ ಬೆಲ್ಸಾರೆ ಮಾತನಾಡಿ, ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಸುಮಾರು ಶೇ. 25ರಷ್ಟು ಕೆಲಸಗಳು ಪ್ರಭಾವಿತವಾಗಿವೆ. ಆಮ್ಲಜನಕದ ಮೂಲಕ ವಿವಿಧ ವಸ್ತುಗಳನ್ನು ಕತ್ತರಿಸುವ ಕಾರ್ಯಾಗಾರಗಳನ್ನು ಮಾತ್ರ ನಡೆಸುವವರಿಗೆ ಯಾವುದೇ ಕೆಲಸವನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ. ಕೋವಿಡ್ ಸೋಂಕಿತರಿಗೆ ಆಮ್ಲಜನಕ ಸೌಲಭ್ಯದ ಅಗತ್ಯವಿದೆ ಎಂದು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ. ಆದರೆ ಅನೇಕ ಕೈಗಾರಿಕೆಗಳು ಶೇ. 20ರಷ್ಟು ಹಂಚಿದ ಆಮ್ಲಜನಕ ಕೋಟಾವನ್ನು ಸಹ ಪಡೆಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೈಗಾರಿಕಾ ಸಂಘ ಮುಖ್ಯಮಂತ್ರಿಗೆ ಕಳುಹಿಸಿದ ಪತ್ರದಲ್ಲಿ, ಆಮ್ಲಜನಕ ಸಿಲಿಂಡರ್‌ಗಳ ಬ್ಲ್ಯಾಕ್ ಮಾರಾಟವನ್ನು ಪರಿಶೀಲಿಸಲು, ಆಮ್ಲಜನಕದ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಅದರ ವೆಚ್ಚವನ್ನು ಕಡಿಮೆ ಮಾಡಲು ಆಡಳಿತವನ್ನು ಕೋರುತ್ತದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾರ್ಕೋನಹಳ್ಳಿ ಜಲಾಶಯ ಭರ್ತಿ: ರೈತರಲ್ಲಿ ಮಂದಹಾಸ, ಜಲಾಶಯದ ಒಳಹರಿವು 2200 ಕ್ಯೂಸೆಕ್ಸ್
ಟಿವಿಎಸ್ ನಿಂದ ಹೊಸ ಮಾದರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಿಡುಗಡೆ
ತೈಲ ಸೋರಿಕೆಯಿಂದ ಕಪ್ಪಾದ ಸುಂದರ ಗೋವಾ ಬೀಚ್ : ಓಡಾಡುವುದೇ ಕಷ್ಟಕರ
ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು
ಎಸ್ ಎಸ್ ಎಲ್ ಸಿ ಫಲಿತಾಂಶ; ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಚಿವ ಸುಧಾಕರ್ ಮನವಿ