ಹಣದ ಬದಲಿಗೆ ಭೂಮಿ: ಪೋರ್ಟ್‌ ಟ್ರಸ್ಟ್‌ ಒಪ್ಪಿಗೆ

ಭೂಗತ ಮೆಟ್ರೋ 11 ಯೋಜನೆ

Team Udayavani, Aug 3, 2019, 1:13 PM IST

mumbai-tdy-1

ಮುಂಬಯಿ, ಆ. 2: ವಡಾಲಾ-ಸಿಎಸ್‌ಎಂಟಿ ಮೆಟ್ರೋ -11 ಕಾರಿಡಾರ್‌ ಯೋಜನೆಯ ಭಾಗವಾಗಿರುವ ಶಿವ್ಡಿ-ಸಿಎಸ್‌ಎಂಟಿ ಭೂಗತ ಮೆಟ್ರೋದ ವೆಚ್ಚವನ್ನು ಭರಿಸಲು ಮುಂಬಯಿ ಪೋರ್ಟ್‌ ಟ್ರಸ್ಟ್‌ (ಎಂಬಿಪಿಟಿ) ಕಡೆಗೂ ಒಪ್ಪಿಕೊಂಡಿದೆ. ಆದರೆ, ಎಂಬಿಪಿಟಿ ಈ ವೆಚ್ಚದ ಬದಲಿಗೆ ಹಣವನ್ನು ನೀಡುವ ಬದಲು ಭೂಮಿಯನ್ನು ನೀಡಲಿದೆ ಎಂದು ತಿಳಿಸಿದೆ.

ಭೂಗತ ಮೆಟ್ರೋ ಯೋಜನೆಯ ವೆಚ್ಚವನ್ನು ಪೋರ್ಟ್‌ ಟ್ರಸ್ಟ್‌ ತುಂಬಿಸಿಕೊಡಬೇಕೆಂಬ ಎಂಎಂಆರ್‌ಡಿಎ ಬೇಡಿಕೆಯ ಬಗ್ಗೆ ಮುಂಬಯಿ ಪೋರ್ಟ್‌ ಟ್ರಸ್ಟ್‌ ಹಲವಾರು ದಿನಗಳವರೆಗೆ ಗೊಂದಲಕ್ಕೊಳಗಾಗಿತ್ತು. ಏಕೆಂದರೆ ಪೋರ್ಟ್‌ ಟ್ರಸ್ಟ್‌ಗೆ ತನ್ನ ಸ್ವಂತ ಯೋಜನೆಗಳಿಗೂ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇಂಥದರಲ್ಲಿ ಎಂಎಂಆರ್‌ಡಿಎಯ ಬೇಡಿಕೆಯನ್ನು ಪೂರೈಸಲು ಮುಂಬಯಿ ಪೋರ್ಟ್‌ ಟ್ರಸ್ಟ್‌ ಉತ್ತಮ ಪರಿಹಾರವನ್ನು ಕಂಡುಕೊಂಡಿದೆ. ಭೂಮಿಗತ ಮೆಟ್ರೋದ ವೆಚ್ಚದ ಬದಲಿಗೆ ಎಂಎಂಆರ್‌ಡಿಎಗೆ ಅದೇ ಬೆಲೆಯ ಭೂಮಿಯನ್ನು ನೀಡಲು ಪೋರ್ಟ್‌ ಟ್ರಸ್ಟ್‌ ಸಿದ್ಧವಾಗಿದೆ. ಇದರೊಂದಿಗೆ ಮೆಟ್ರೋ -11 ಯೋಜನೆಗೆ ಉಂಟಾಗಲಿರುವ ಹಣದ ಅಡೆತಡೆಯು ಈಗ ಕೊನೆಗೊಂಡಂತಾಗಿದೆ.

ಎಂಬಿಪಿಟಿ ಈ ಕಾರಿಡಾರ್‌ ಭೂಗತವಾಗಿ ಸಾಗಬೇಕೆಂದು ಬಯಸಿದ್ದರಿಂದಾಗಿ ಹಾಗೂ ಎಂಎಂಆರ್‌ಡಿಎಯು ಅದರ ಹೆಚ್ಚುವರಿ ವೆಚ್ಚವನ್ನು ಎಂಬಿಪಿಟಿಯಿಂದ ಕೇಳಿರುವ ಕಾರಣದಿಂದಾಗಿ ಈ ಯೋಜನೆಯು ಸ್ಥಗಿತಗೊಂಡಿತ್ತು. ಆದರೆ, ಇದೀಗ ಎರಡೂ ಏಜೆನ್ಸಿಗಳು ಒಂದು ತಾತ್ವಿಕ ಒಪ್ಪಂದಕ್ಕೆ ತಲುಪಿವೆ. ಮೆಟ್ರೋ-11 ಕಾರಿಡಾರ್‌ ಅನ್ನು ಭಾಗಶಃ ಭೂಗತ ಮಾಡಲು ಎಂಎಂಆರ್‌ಡಿಎ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಹೆಚ್ಚುವರಿ ಭೂಮಿಯನ್ನು ಒದಗಿಸುವ ಮೂಲಕ ವೆಚ್ಚ ವ್ಯತ್ಯಾಸವನ್ನು ಸರಿದೂಗಿಸಲಾಗುವುದು. ಇದು (ಭೂಮಿ) ಬಹುತೇಕ ನಿಲ್ದಾಣಗಳಿಗೆ ಹತ್ತಿರದಲ್ಲಿರಲಿದೆ ಎಂದು ಎಂಬಿಪಿಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯಕ್ಕೆ ತಾತ್ವಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಕೇಂದ್ರ ಸರಕಾರದಿಂದ ಅನುಮೋದನೆಯ ಅಗತ್ಯವಿದೆ ಎಂದು ಎಂಬಿಪಿಟಿಯ ಅಧ್ಯಕ್ಷ ಸಂಜಯ್‌ ಭಾಟಿಯಾ ಹೇಳಿದ್ದಾರೆ.

ಮೆಟ್ರೋ -11 ನಗರದಲ್ಲಿನ 3ನೇ ಭಾಗಶಃ ಭೂಮಿಗತ ಕಾರಿಡಾರ್‌ ಆಗಿರುತ್ತದೆ. ಅದೇ, ಮೆಟ್ರೋ-7 ಎ (ಅಂಧೇರಿ (ಪೂರ್ವ) -ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಮತ್ತು ಮೆಟ್ರೋ -8 (ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವಿಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)ನಗರದ ಇತರ ಎರಡು ಭಾಗತಃ ಮೆಟ್ರೋ ಮಾರ್ಗಗಳಾಗಿವೆ. 2026ರ ವೇಳೆಗೆ ಈ ಯೋಜನೆ ಪೂರ್ಣಗೊಂಡ ಅನಂತರ ಅಂದಾಜು 11 ಲಕ್ಷ 60 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣಿಸುವ ನಿರೀಕ್ಷೆಯಿದೆ. ಮೆಟ್ರೋ-4ರ ಕೆಲಸ ಪ್ರಾರಂಭವಾಗುವುದರೊಂದಿಗೆ ರಾಜ್ಯ ಕ್ಯಾಬಿನೆಟ್ ಮೆಟ್ರೋ -11ಗೆ ಕೂಡ ಇತ್ತೀಚೆಗೆ ಅನುಮೋದನೆ ನೀಡಿದೆ.

ಟಾಪ್ ನ್ಯೂಸ್

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.