Udayavni Special

ಹೊಟೇಲ್‌ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸೋಣ: ಉದಯ ಶೆಟ್ಟಿ ಪೆಲತ್ತೂರು

ದಿಲೀಪ್‌ ಡೊಳೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Team Udayavani, Jul 12, 2021, 12:35 PM IST

ಹೊಟೇಲ್‌ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸೋಣ: ಉದಯ ಶೆಟ್ಟಿ ಪೆಲತ್ತೂರು

ಮುಂಬಯಿ, ಜು. 11: ಹೊಟೇಲ್‌ ಉದ್ಯಮದ ಯಶಸ್ಸಿನಲ್ಲಿ ಹೊಟೇಲ್‌ ಕಾರ್ಮಿಕರ ಸಹಕಾರ ಬಹಳ ಮಹತ್ತ ರವಾಗಿದೆ. ಆದರೆ ಇಂದು ವಿಶ್ವದಲ್ಲಿ ಭೀತಿ ಉಂಟು ಮಾಡಿರುವ ಕೋವಿಡ್ ಮಹಾಮಾರಿಯು ಹೊಟೇಲ್‌ ಉದ್ಯಮದಲ್ಲಿ ತಲ್ಲಣ ಸೃಷ್ಟಿಸಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಇದರಿಂದ ಹೊಟೇಲ್‌ ಮಾಲಕರು ಮತ್ತು ಕಾರ್ಮಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಮುನ್ನಡೆ ಯೋಣ. ಹೊಟೇಲ್‌ ಕಾರ್ಮಿಕರ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಕರಿಸೋಣ ಎಂದು ಬಂಟರ ಸಂಘ ಮೀರಾ – ಭಾಯಂದರ್‌ ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ, ಕಾಶೀ ಮೀರಾ ಹಾಸ್ಪಿಟಾಲಿಟಿ ಮತ್ತು ಎಂಟರ್‌ ಟೈನ್ಮೆಂಟ್‌ ಅಸೋಸಿಯೇಶನ್‌ ಇದರ ಗೌರವ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಪೆಲತ್ತೂರು ತಿಳಿಸಿದರು.

ಜು. 7ರಂದು ಕಾಶಿಮೀರಾ ಹಾಸ್ಪಿಟಾಲಿಟಿ ಮತ್ತು ಎಂಟರ್‌ಟೈನ್ಮೆಂಟ್‌ ಅಸೋಸಿಯೇಶನ್‌ ಹಾಗೂ ಮೀರಾ-ಭಾಯಂದರ್‌ ನಗರಪಾಲಿಕೆಯ ಆಶ್ರಯದಲ್ಲಿ ಸೆವೆನ್‌ ಸ್ಕ್ವೇರ್‌ ಅಕಾಡೆಮಿ ಶಾಲೆಯಲ್ಲಿ ಮೀರಾ-ಭಾಯಂದರ್‌ ಪರಿಸರದ ಹೊಟೇಲ್‌ ಕಾರ್ಮಿಕರಿಗೆ ಆಯೋಜಿಸಿದ ಉಚಿತ ಕೋವಿಡ್‌ ಲಸಿಕೆ ಶಿಬಿರದ ಮುಂದಾಳತ್ವ ವಹಿಸಿ ಮಾತನಾಡಿದ ಅವರು, ಹೊಟೇಲ್‌ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ ಅವರಲ್ಲಿ ಇರುವ ಆತಂಕ ದೂರ ಮಾಡೋಣ. ನಾವು ನನಗಾಗಿ ಬದುಕುವುದಕ್ಕಿಂತ ನಮಗಾಗಿ ಅಂದರೆ ಸಮಾಜಕ್ಕಾಗಿ ಬದುಕಿದಾಗ ಸಮಾಜ ನಮ್ಮನ್ನು ಸದಾ ನೆನೆಯುತ್ತದೆ.

ಈ ಹಿನ್ನೆಲೆಯಲ್ಲಿ ಜಾಗತಿಕವಾಗಿ ಆತಂಕ ಸೃಷ್ಟಿಸಿರುವ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಆಗಲಿ ಎಂದರು. ವ್ಯಾಕ್ಸಿನೇಶನ್‌ ಶಿಬಿರವನ್ನು ಮೀರಾ- ಭಾಯಂದರ್‌ ನಗರಪಾಲಿಕೆಯ ಮೇಯರ್‌ ಜೋಸ್ನಾ ಹಾಸ್ನಾಲೆ ಹಾಗೂ ಮೀರಾ ಭಾಯಂದರ್‌ ನಗರ ಪಾಲಿಕೆ ಆಯುಕ್ತ ದಿಲೀಪ್‌ ಡೊಳೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೀರಾರೋಡ್‌ ಮಾಜಿ ಶಾಸಕ ನರೇಂದ್ರ ಮೆಹ್ತಾ, ನಗರ ಸೇವಕ ಅರವಿಂದ ಶೆಟ್ಟಿ, ಮೀರಾ -ಭಾಯಂದರ್‌ ನಗರ ಪಾಲಿಕೆ ಆಯುಕ್ತ ದಿಲೀಪ್‌ ಡೊಳೆ, ಮೀರಾ- ಭಾಯಂದರ್‌ ಪಾಲಿಕೆಯ ಸಭಾಗೃಹ ನೇತಾರ ಪ್ರಶಾಂತ್‌ ದಲ್ವಿ, ಡೆಪ್ಯುಟಿ ಮೇಯರ್‌ ಹಸ್ಮುಖ್‌ ಗೆಲೇಟ್‌, ನಗರ ಸೇವಕ ಗಣೇಶ್‌ ಶೆಟ್ಟಿ, ಡಾ| ಅಂಜಲಿ ಪಾಟೀಲ್‌, ಬಂಟರ ಸಂಘ ಮುಂಬಯಿ ಮೀರಾ ಭಾಯಂದರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ
ಶಿವಪ್ರಸಾದ್‌ ಆರ್‌. ಶೆಟ್ಟಿ ಮಾಣಿಗುತ್ತು ಹಾಗೂ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು, ಬಂಟರ ಸಂಘ ಮುಂಬಯಿ ಉನ್ನತ ಶಿಕ್ಷಣ ಸಮಿತಿಯ ಉಪಕಾರ್ಯಾಧ್ಯಕ್ಷ ಕಿಶೋರ್‌ ಕುಮಾರ್‌ ಶೆಟ್ಟಿ ಕುತ್ಯಾರು, ಸೆವೆನ್‌ ಸ್ಕ್ವೇರ್‌ ಅಕಾಡೆಮಿ ಸ್ಕೂಲ್‌ ಪ್ರಾಂಶುಪಾಲೆ ಕವಿತಾ ಹೆಗ್ಡೆ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಗಮಿಸಿದ ಗಣ್ಯರನ್ನು ಕಾಶಿಮೀರಾ ಹಾಸ್ಪಿಟಾಲಿಟಿ ಮತ್ತು ಎಂಟರ್‌ಟೈನ್ಮೆಂಟ್‌ ಅಸೋಸಿಯೇಶನ್‌ ಅಧ್ಯಕ್ಷ ಸಂತೋಷ್‌ ಪುತ್ರನ್‌ ಹಾಗೂ ಪದಾಧಿಕಾರಿಗಳು ಗೌರವಿ ಸಿದರು. ಬೆಳಗ್ಗೆಯಿಂದಲೇ ಸುಮಾರು 600 ಮಂದಿ ಹೊಟೇಲ್‌ ಕಾರ್ಮಿಕರಿಗೆ ಹಾಗೂ ಅವರ ಪರಿವಾರದ ಸದಸ್ಯರಿಗೆ ಕೊರೊನಾ ಲಸಿಕೆಯನ್ನು ನಗರ ಪಾಲಿಕೆಯ ಸಹಕಾರದೊಂದಿಗೆ ಹಾಗೂ ಕಾಶಿಮೀರಾ ಹಾಸ್ಪಿಟಾಲಿಟಿ ಮತ್ತು ಎಂಟರ್‌ಟೈನ್ಮೆಂಟ್‌ ಅಸೋಸಿಯೇಶನ್‌ ಅಧ್ಯಕ್ಷ ಸಂತೋಷ್‌ ಪುತ್ರನ್‌ ಮತ್ತು ಉದಯ ಶೆಟ್ಟಿ ಪೆಲತ್ತೂರು ಮುಂದಾಳ ತ್ವದಲ್ಲಿ ನೀಡಲಾಯಿತು. ಕಾಶಿಮೀರಾ ಹಾಸ್ಪಿಟಾಲಿಟಿ ಮತ್ತು ಎಂಟರ್‌ಟೈನ್ಮೆಂಟ್‌ ಅಸೋಸಿಯೇಶನ್‌ ಕೋಶಾಧಿಕಾರಿ ಗಣೇಶ್‌ ಶೆಟ್ಟಿ, ಜತೆ ಕಾರ್ಯದರ್ಶಿ ಸಾಯಿ ಪ್ರಸಾದ್‌ ಪೂಂಜ, ಸುರೇಶ್‌ ಶೆಟ್ಟಿ, ರಾಜೇಶ್‌ ಕುಂದರ್‌ ಮತ್ತಿತರರು ಸಹಕಾರ ನೀಡಿದರು.

ಕೊರೊನಾ ರೋಗ ಹರಡದಂತೆ ತಡೆಯಲು ಲಸಿಕೆಯೊಂದೇ ರಾಮಬಾಣ ಆಗಿದೆ. ಇದರ ಬಗ್ಗೆ ನಿರ್ಲಕ್ಷ್ಯ ಬೇಡ. ನಾವು ಈಗಾಗಲೇ 500ಕ್ಕೂ ಹೆಚ್ಚು ಆಹಾರದ ಕಿಟ್‌ಗಳನ್ನು ಹೊಟೇಲ್‌ ಕಾರ್ಮಿಕರ ಬಂಧುಗಳಿಗೆ ನೀಡಿದ್ದೇವೆ. ಮುಂದೆಯೂ ನಮ್ಮಿಂದಾಗುವ ಸಹಕಾರ ಖಂಡಿತ ಮಾಡುತ್ತೇವೆ.
-ಸಂತೋಷ್‌ ಪುತ್ರನ್‌, ಅಧ್ಯಕ್ಷರು,
ಕಾಶಿಮೀರಾ ಹಾಸ್ಪಿಟಾಲಿಟಿ ಮತ್ತು
ಎಂಟರ್‌ಟೈನ್ಮೆಂಟ್‌ ಅಸೋಸಿಯೇಶನ್‌
ಮೀರಾರೋಡ್‌

ಟಾಪ್ ನ್ಯೂಸ್

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

dtrrtre

ಜೀವನ ಪರ್ಯಂತ ಪಶ್ಚಾತ್ತಾಪ ಪಡುವೆ: ಅಪಘಾತದಲ್ಲಿ ಸ್ನೇಹಿತೆ ಸಾವಿಗೆ ನಟಿ ಯಶಿಕಾ ಕಣ‍್ಣೀರು

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ

yghy-]

ಕೋವಿಡ್ : ರಾಜ್ಯದಲ್ಲಿಂದು 1674 ಪಾಸಿಟಿವ್ ಪ್ರಕರಣ ಪತ್ತೆ; 38 ಜನರು ಸಾವು

ನೀವು ಯಾರಿಗಾದರೂ ಧನ್ಯವಾದ ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ…

ನೀವು ಯಾರಿಗಾದರೂ ಧನ್ಯವಾದ ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ…

ಭ್ರಷ್ಟಾಚಾರ ಆರೋಪ: ಬಿಎಸ್‌ವೈ ಸೇರಿ ಮತ್ತಿತರರಿಗೆ ಹೈಕೋರ್ಟ್‌ ನೋಟಿಸ್‌

ಭ್ರಷ್ಟಾಚಾರ ಆರೋಪ: ಬಿಎಸ್‌ವೈ ಸೇರಿ ಮತ್ತಿತರರಿಗೆ ಹೈಕೋರ್ಟ್‌ ನೋಟಿಸ್‌

Priyanka Gandhi slams govt over inflation, says stop killing poor

ಹಣದುಬ್ಬರವನ್ನು ಇಳಿಸಿ, ಜನರನ್ನು ಸಾಯಿಸುವುದನ್ನು ನಿಲ್ಲಿಸಿ : ಪ್ರಿಯಾಂಕ ಗಾಂಧಿ ಕಿಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vadetti

ಪ್ರಕೃತಿ ವಿಕೋಪ ಎದುರಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ: ವಾಡೆಟ್ಟಿವಾರ್‌

“ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರ ಸ್ಥಾನ’

“ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರ ಸ್ಥಾನ’

Doctor

ವೈದ್ಯರ ವೃತ್ತಿಯಲ್ಲಿ ನೈತಿಕತೆ ಇರಲಿ: ಕೋಶ್ಯಾರಿ

Meera-road

ಜು. 31: ಶ್ರೀ ಶನಿ ಮಹಾಪೂಜೆ, ಯಕಗಾನ ತರಬೇತಿ ಕೇಂದ್ರ ಉದ್ಘಾಟನೆ

Billava

ಬಿಲವರ ಅಸೋಸಿಯೇಶನ್‌ ಡೊಂಬಿವಲಿ ಸ್ಥಳೀಯ ಕಚೇರಿ: ಗುರುಪೂರ್ಣಿಮೆ ಆಚರಣೆ

MUST WATCH

udayavani youtube

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ರಸ್ತೆ ಬಂದ್ ಮಾಡಿದರೂ ಜನ ಕ್ಯಾರೇ ಎನ್ನಲ್ಲ

udayavani youtube

ಕಿರುಕುಳ ನೀಡಲು ಮುಂದಾದ ವ್ಯಕ್ತಿಯ ಸ್ಕೂಟರ್ ಚರಂಡಿಗೆಸೆದ ಮಹಿಳೆ

udayavani youtube

ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡ ಕೋವಿಡ್ ಸೋಂಕಿನ ಪ್ರಮಾಣ

udayavani youtube

ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ

udayavani youtube

ಸಾವಿರಕ್ಕೂ ಅಧಿಕ ಬಾರಿ ದೇವರನ್ನು ಹೊತ್ತ ಈ ಹಿರಿ ಜೀವ

ಹೊಸ ಸೇರ್ಪಡೆ

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

dtrrtre

ಜೀವನ ಪರ್ಯಂತ ಪಶ್ಚಾತ್ತಾಪ ಪಡುವೆ: ಅಪಘಾತದಲ್ಲಿ ಸ್ನೇಹಿತೆ ಸಾವಿಗೆ ನಟಿ ಯಶಿಕಾ ಕಣ‍್ಣೀರು

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ

3-15

ಕೋವಿಡ್ ಸಂಕಷ್ಟದಲ್ಲಿಯೂ ಕುವೆಂಒಪು ವಿವಿ ಗಮನಾರ್ಹ ಕಾರ್ಯ

yghy-]

ಕೋವಿಡ್ : ರಾಜ್ಯದಲ್ಲಿಂದು 1674 ಪಾಸಿಟಿವ್ ಪ್ರಕರಣ ಪತ್ತೆ; 38 ಜನರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.