Udayavni Special

ಕ್ರೀಡಾ ಸಂಸ್ಕೃತಿ ಹೆಚ್ಚಿಸುವ ಜವಾಬ್ದಾರಿ ನಮ್ಮದಾಗಲಿ: ಮುರಳೀಧರ ಮೊಹೊಲ್‌

ಪುಣೆ ಯು. ಕೆ. ಟೇಕ್ವಾಂಡೊ ಅಕಾಡೆಮಿ ಬ್ಲಾಕ್‌ ಬೆಲ್ಟ್ ಪ್ರದಾನ ಸಮಾರಂಭ

Team Udayavani, Sep 9, 2021, 2:42 PM IST

ಕ್ರೀಡಾ ಸಂಸ್ಕೃತಿ ಹೆಚ್ಚಿಸುವ ಜವಾಬ್ದಾರಿ ನಮ್ಮದಾಗಲಿ: ಮುರಳೀಧರ ಮೊಹೊಲ್‌

ಪುಣೆ: ಯಾವುದೇ ಕ್ರೀಡೆಯಾಗಿರಲಿ ಅದರಲ್ಲಿ ಪಾಲ್ಗೊಳ್ಳುವ ಸ್ಪರ್ಧಾಳುಗಳು ತಮ್ಮ ತಮ್ಮ ಆಯ್ಕೆಗಳ ವಿಭಾಗಗಳಲ್ಲಿ ಸ್ಪರ್ಧಿಸಿ ಪ್ರಶಸ್ತಿ ತಂದು ಕೊಟ್ಟಾಗ ತರಬೇತುದಾರ, ಕ್ರೀಡಾ ಸಂಸ್ಥೆ ಜತೆಯಲ್ಲಿ ಜಿಲ್ಲೆ, ರಾಜ್ಯ, ದೇಶಕ್ಕೆ ಹೆಮ್ಮೆ. ಇಂತಹ ಕಾರ್ಯವನ್ನು ಸಮರ್ಥವಾಗಿ ಮಾಡಲು ಮತ್ತು ಸ್ಪರ್ಧಾರ್ಥಿಗಳನ್ನು ತಯಾರುಗೊಳಿಸಲು ಉತ್ತಮ ತರಬೇತುದಾರರ ಅಗತ್ಯವಿದೆ. ಯು. ಕೆ. ಟೇಕ್ವಾಂಡೊ ಅಕಾಡೆಮಿಯ ಸಂಚಾಲಕ ತರಬೇತುದಾರ ರಾಜೇಶ್‌ ಪೂಜಾರಿ ಇದನ್ನು ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಕ್ರೀಡೆ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಬೇಕಿದೆ. ನಮ್ಮಲ್ಲಿ ಪ್ರತಿಭೆಗಳು ಸಾಕಷ್ಟು ಮಂದಿಯಿದ್ದಾರೆ. ಅವರಿಗೆ ಸಹಕಾರ, ಪ್ರೋತ್ಸಾಹವು ಸರಕಾರದ ಮತ್ತು ಖಾಸಗಿ ಮಟ್ಟದಲ್ಲಿ ದೊರೆಯಬೇಕು. ಈ ನಿಟ್ಟಿನಲ್ಲಿ ಕ್ರೀಡಾ ಸಂಸ್ಕೃತಿಯನ್ನು ಹೆಚ್ಚಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಪುಣೆ ಮಹಾನಗರ ಪಾಲಿಕೆಯ ಮಹಾಪೌರ ಮುರಳೀಧರ ಮೊಹೊಲ್‌ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಪುಣೆಯ ಡಾ| ಶ್ಯಾಮರಾವ್‌ ಕಲ್ಮಾಡಿ ಹೈಸ್ಕೂಲ್‌ನ ಸಭಾಭವನದಲ್ಲಿ ನಡೆದ ಪುಣೆಯ ಹೆಸರಾಂತ ಯು. ಕೆ. ಟೇಕ್ವಾಂಡೊ ಅಕಾಡೆಮಿ ಯ ವಿದ್ಯಾರ್ಥಿಗಳಿಗೆ ಬ್ಲಾಕ್‌ ಬೆಲ್ಟ್ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಂಸ್ಥೆಯ ಮೂಲಕ ಇನ್ನಷ್ಟು ನಮ್ಮ ಪ್ರತಿಭೆಗಳು ಹೊರಬರಲಿ. ಬ್ಲಾಕ್‌ ಬೆಲ್ಟ್ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಕೋರುತ್ತೇನೆ. ಮಕ್ಕಳಿಗೆ ತರಬೇತಿ ನೀಡಿ ಈ ಕಾರ್ಯಕ್ರಮವನ್ನು ಆಯೋಜಿಸಿದ ಸಂಚಾಲಕ ರಾಜೇಶ್‌ ಪೂಜಾರಿ ಅವರ ಕಾರ್ಯ ಶ್ಲಾಘನೀಯ ಎಂದರು.

ಇದನ್ನೂ ಓದಿ:ಕೈಕೊಟ್ಟ ಸರ್ವರ್ :ತಹಶೀಲ್ದಾರ್ ಕಚೇರಿಯಲ್ಲಿ ಜನತೆ ಪರದಾಟ

ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ, ಶ್ಯಾಮ್‌ ರಾವ್‌ ಕಲ್ಮಾಡಿ ಹೈಸ್ಕೂಲ್‌ ಕನ್ನಡ ವಿಭಾಗದ ಪ್ರಾಚಾರ್ಯ ಚಂದ್ರಕಾಂತ್‌ ಹರ್ಕುಡೆ, ಯು. ಕೆ. ಟೇಕ್ವಾಂಡೊ ಅಕಾಡೆಮಿಯ ಅಧ್ಯಕ್ಷ ಭಾನುದಾಸ್‌ ಜೋಷಿ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಅಕಾಡೆಮಿ ಸಂಸ್ಥಾಪಕ ಉಮೇಶ್‌ ಕುಲಕರ್ಣಿ, ಕೋಶಾಧಿಕಾರಿ ದತ್ತ ಪಿಸೆ, ಡಾ| ರಾಜೇಂದ್ರ ಭಾರತಿ, ಮಹೇಶ್‌ ಗುಜರ್‌ ಉಪಸ್ಥಿತರಿದ್ದರು.

ರಾಜೇಶ್‌ ಪೂಜಾರಿ ಅವರು ಮುರಳೀಧರ ಮೊಹೊಲ್‌ ಅವರನ್ನು ಸ್ಮರಣಿಕೆ ನೀಡಿ ಗೌರವಿಸಿ ದರು. ಎಲ್ಲ ಗಣ್ಯರನ್ನು ಅಕಾಡೆಮಿಯ ಸದಸ್ಯರು
ಗೌರವಿಸಿದರು. ರಾಜೇಶ್‌ ಪೂಜಾರಿ ಅವರನ್ನು ಅಕಾಡೆಮಿಯ ವಿದ್ಯಾರ್ಥಿಗಳು ಅಭಿನಂ ದಿಸಿದರು. ಯು. ಕೆ. ಟೇಕ್ವಾಂಡೊ ಅಕಾಡೆಮಿ ಯಿಂದ ತರಬೇತಿ ಪಡೆದು ಬ್ಲಾಕ್‌ ಬೆಲ್ಟ್ ಪಡೆದ ಸುಮಾರು 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಮುರಳೀಧರ ಮೊಹೊಲ್‌ ಮತ್ತು ಗಣ್ಯರು ಬ್ಲಾಕ್‌ ಬೆಲ್ಟ್ ಮತ್ತು ಪ್ರಮಾಣ ಪತ್ರ ಪ್ರದಾನ ಮಾಡಿದರು. ಯೋಗೇಶ್‌ ತೀಕ್‌ ಯು. ಕೆ. ಟೇಕ್ವಾಂಡೊ ಅಕಾಡೆಮಿಯ ಸಾಧನೆ ಮತ್ತು ತರಬೇತಿ ಬಗ್ಗೆ ತಿಳಿಸಿ ಎಲ್ಲರನ್ನು ಸ್ವಾಗತಿಸಿದರು. ಕೇತಕಿ ಆರ್‌. ಪೂಜಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಯು. ಕೆ. ಟೇಕ್ವಾಂಡೊ ಅಕಾಡೆಮಿ ಪುಣೆ ಇದರ ಸಂಚಾಲಕ ಮತ್ತು ಪ್ರಧಾನ ತರಬೇತುದಾರ ರಾಜೇಶ್‌ ಪೂಜಾರಿ ಟೇಕ್ವಾಂಡೊದಲ್ಲಿ ಅಪಾರ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಇವರ ಮೂಲಕ ನಮ್ಮ ಪುಣೆಯಲ್ಲಿ ನೆಲೆಸಿರುವ ತುಳು-ಕನ್ನಡಿಗರ ಮಕ್ಕಳು ಕೂಡಾ ಸಾಧನೆ ಮಾಡುವಂತಾಗಿದೆ. ತುಳು ಕನ್ನಡಿಗರಿಗೆ ಉಚಿತ ಟೇಕ್ವಾಂಡೊ ತರಬೇತಿ ನೀಡುವ ಇಂಗಿತವನ್ನು ರಾಜೇಶ್‌ ಪೂಜಾರಿ ಹೊಂದಿದ್ದು, ಕ್ರೀಡಾ ಕ್ಷೇತ್ರದಲ್ಲಿ ಅಕಾಡೆಮಿ ಇನ್ನಷ್ಟು ಸಾಧನೆ ಮಾಡುವಂತಾಗಲಿ.
-ವಿಶ್ವನಾಥ್‌ ಪೂಜಾರಿ ಕಡ್ತಲ, ಅಧ್ಯಕ್ಷರು, ಬಿಲ್ಲವ ಸಂಘ ಪುಣೆ

ವಿವಿಧ ಸ್ಪರ್ಧೆಗಳಲ್ಲಿ ಪದಕ
ಯು. ಕೆ. ಟೇಕ್ವಾಂಡೊ ಅಕಾಡೆಮಿಯ ಸ್ಥಾಪನೆಯಾಗಿ ಸುಮಾರು 23 ವರ್ಷಗಳಾಗಿವೆ. ಸುಮಾರು 750ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಬ್ಲಾಕ್‌ ಬೆಲ್ಟ್ ಪಡೆದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕ ಪಡೆದಿದ್ದಾರೆ. ಸಂಸ್ಥೆಯು ಉತ್ತಮ ತರಬೇತುದಾರರ ಪ್ರಯತ್ನದಿಂದ ಟೇಕ್ವಾಂಡೊದಲ್ಲಿ ಪುಣೆ ಮತ್ತು ಮಹಾರಾಷ್ಟ್ರದಲ್ಲಿ ಮಾದರಿಯಾಗಿದೆ.
-ಭಾನುದಾಸ್‌ ಜೋಷಿ, ಅಧ್ಯಕ್ಷರು, ಯು. ಕೆ. ಟೇಕ್ವಾಂಡೊ ಅಕಾಡೆಮಿ ಪುಣೆ

ಚಿತ್ರ-ವರದಿ: ಹರೀಶ್‌ ಮೂಡಬಿದ್ರಿ ಪುಣೆ

ಟಾಪ್ ನ್ಯೂಸ್

ಮನೆ ನಿರ್ಮಾಣಕ್ಕೆ ಆಗ್ರಹಿಸಿ ಮಳೆಯನ್ನೂ ಲೆಕ್ಕಿಸದೇ ಡಿಸಿ ಕಛೇರಿ ಎದುರು ಮಹಿಳೆಯರ ಪ್ರತಿಭಟನೆ

ಮನೆ ನಿರ್ಮಾಣಕ್ಕೆ ಆಗ್ರಹಿಸಿ ಮಳೆಯನ್ನೂ ಲೆಕ್ಕಿಸದೇ ಡಿಸಿ ಕಛೇರಿ ಎದುರು ಮಹಿಳೆಯರ ಪ್ರತಿಭಟನೆ

1.2 ಕೋಟಿ ವೈದ್ಯಕೀಯ ಸಲಹೆ; ಟೆಲಿಮೆಡಿಸಿನ್‌ ಬಳಕೆ ಕರ್ನಾಟಕ ನಂ.2

1.2 ಕೋಟಿ ವೈದ್ಯಕೀಯ ಸಲಹೆ; ಟೆಲಿಮೆಡಿಸಿನ್‌ ಬಳಕೆ ಕರ್ನಾಟಕ ನಂ.2

ಪಾಂಡವಪುರ : ಪಿಡಿಓ ಅಮಾನತಿಗೆ ಆಗ್ರಹಿಸಿ ಎರಡನೇ ದಿನವೂ ಮುಂದುವರಿದ ರೈತ ಸಂಘದ ಧರಣಿ

ಪಾಂಡವಪುರ : ಪಿಡಿಓ ಅಮಾನತಿಗೆ ಆಗ್ರಹಿಸಿ ಎರಡನೇ ದಿನವೂ ಮುಂದುವರಿದ ರೈತ ಸಂಘದ ಧರಣಿ

ವೈಜೆಡ್‌ಎಫ್-ಆರ್‌15 ವಿ4.0 ಯಮಹಾ ಬೈಕುಗಳ ಬಿಡುಗಡೆ

ವೈಜೆಡ್‌ಎಫ್-ಆರ್‌15 ವಿ4.0 ಯಮಹಾ ಬೈಕುಗಳ ಬಿಡುಗಡೆ

Untitled-1

ಇಂದು ವಿಶ್ವ ಗುಲಾಬಿ ದಿನ; ಕ್ಯಾನ್ಸರ್‌ ರೋಗಿಗಳಿಗಿರಲಿ  ನಮ್ಮೆಲ್ಲರ ಪ್ರೀತಿಯ ಹಾರೈಕೆ

ವಿಜಯಪುರದಲ್ಲಿ ಆಸ್ಪತ್ರೆಯ ನರ್ಸ್ ಮೂಲಕ ಮಾರಾಟವಾಗಿದ್ದ ಶಿಶು ಹುಬ್ಬಳ್ಳಿಯಲ್ಲಿ ಪತ್ತೆ

ವಿಜಯಪುರದಲ್ಲಿ ಮಾರಾಟವಾಗಿದ್ದ ಶಿಶು ಹುಬ್ಬಳ್ಳಿಯಲ್ಲಿ ಪತ್ತೆ ; ಪ್ರಕರಣ ಸುಖಾಂತ್ಯ

ಈ ಹಿಂದೆ ಒಡೆದ ಎಲ್ಲಾ ದೇವಾಲಯಗಳನ್ನು ಬಿಜೆಪಿ ಪುನರ್ ನಿರ್ಮಾಣ ಮಾಡಲಿದೆ: ಶಾಸಕ ಸೋಮ್

ಈ ಹಿಂದೆ ಒಡೆದ ಎಲ್ಲಾ ದೇವಾಲಯಗಳನ್ನು ಬಿಜೆಪಿ ಪುನರ್ ನಿರ್ಮಾಣ ಮಾಡಲಿದೆ: ಶಾಸಕ ಸೋಮ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇವಿ ಅನುಗ್ರಹದಿಂದ ಸಭಾಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಲಿ: ಅಣ್ಣಿ ಸಿ. ಶೆಟ್ಟಿ

ದೇವಿ ಅನುಗ್ರಹದಿಂದ ಸಭಾಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಲಿ: ಅಣ್ಣಿ ಸಿ. ಶೆಟ್ಟಿ

ಮಾನವೀಯ ಮೌಲ್ಯವುಳ್ಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು: ಸಿಎ ಐ. ಆರ್‌. ಶೆಟ್ಟಿ

ಮಾನವೀಯ ಮೌಲ್ಯವುಳ್ಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು: ಸಿಎ ಐ. ಆರ್‌. ಶೆಟ್ಟಿ

ಸಂಕಷ್ಟದಲ್ಲಿರುವವರಿಗೆ ಸಹಕರಿಸುವುದು ಮನುಷ್ಯ ಧರ್ಮ: ಐಕಳ ಹರೀಶ್‌ ಶೆಟ್ಟಿ

ಸಂಕಷ್ಟದಲ್ಲಿರುವವರಿಗೆ ಸಹಕರಿಸುವುದು ಮನುಷ್ಯ ಧರ್ಮ: ಐಕಳ ಹರೀಶ್‌ ಶೆಟ್ಟಿ

ವಡಾಲ ಶ್ರೀರಾಮ ಮಂದಿರ: ಅನಂತ ಚತುರ್ದಶಿ ವ್ರತಾಚರಣೆ

ವಡಾಲ ಶ್ರೀರಾಮ ಮಂದಿರ: ಅನಂತ ಚತುರ್ದಶಿ ವ್ರತಾಚರಣೆ

ಮಕ್ಕಳ ಪ್ರತಿಭೆಗೆ ವೇದಿಕೆ ನಮ್ಮ ಕರ್ತವ್ಯ: ಚಂದ್ರಹಾಸ್‌ ಕೆ. ಶೆಟ್ಟಿ

ಮಕ್ಕಳ ಪ್ರತಿಭೆಗೆ ವೇದಿಕೆ ನಮ್ಮ ಕರ್ತವ್ಯ: ಚಂದ್ರಹಾಸ್‌ ಕೆ. ಶೆಟ್ಟಿ

MUST WATCH

udayavani youtube

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

udayavani youtube

ವೀಳ್ಯದೆಲೆಯಿಂದ ಸುಂದರ ಹಾರ ತಯಾರಿಸಿ – ಈ ವಿಧಾನ ಅನುಸರಿಸಿ

udayavani youtube

ಬೆಂಗಳೂರಿನ ವಸತಿ ಸಮುಚ್ಚಯದಲ್ಲಿ ಬೆಂಕಿ ಅವಘಡ : ಕಣ್ಣೆದುರೇ ಮಹಿಳೆ ಸಜೀವ ದಹನ

udayavani youtube

ಮೈಮೇಲೆ ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

udayavani youtube

ವಿಧಾನಸಭೆ​ ಕಲಾಪ ನೇರ ಪ್ರಸಾರ : 21-09-2021| Afternoon Session

ಹೊಸ ಸೇರ್ಪಡೆ

ದೇವಿ ಅನುಗ್ರಹದಿಂದ ಸಭಾಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಲಿ: ಅಣ್ಣಿ ಸಿ. ಶೆಟ್ಟಿ

ದೇವಿ ಅನುಗ್ರಹದಿಂದ ಸಭಾಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಲಿ: ಅಣ್ಣಿ ಸಿ. ಶೆಟ್ಟಿ

ಮನೆ ನಿರ್ಮಾಣಕ್ಕೆ ಆಗ್ರಹಿಸಿ ಮಳೆಯನ್ನೂ ಲೆಕ್ಕಿಸದೇ ಡಿಸಿ ಕಛೇರಿ ಎದುರು ಮಹಿಳೆಯರ ಪ್ರತಿಭಟನೆ

ಮನೆ ನಿರ್ಮಾಣಕ್ಕೆ ಆಗ್ರಹಿಸಿ ಮಳೆಯನ್ನೂ ಲೆಕ್ಕಿಸದೇ ಡಿಸಿ ಕಛೇರಿ ಎದುರು ಮಹಿಳೆಯರ ಪ್ರತಿಭಟನೆ

1.2 ಕೋಟಿ ವೈದ್ಯಕೀಯ ಸಲಹೆ; ಟೆಲಿಮೆಡಿಸಿನ್‌ ಬಳಕೆ ಕರ್ನಾಟಕ ನಂ.2

1.2 ಕೋಟಿ ವೈದ್ಯಕೀಯ ಸಲಹೆ; ಟೆಲಿಮೆಡಿಸಿನ್‌ ಬಳಕೆ ಕರ್ನಾಟಕ ನಂ.2

hubballi news

“ಮಕ್ಕಳನ್ನು ಉತ್ತಮ ಕಲಾವಿದರನ್ನಾಗಿ ರೂಪಿಸಿ”

hubballi news

ಆಪರೇಷನ್‌ ಚಿರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.