ಮಲಾಡ್‌ ಶ್ರೀ ದುರ್ಗಾಪರಮೇಶ್ವರಿ ಮಂದಿರ: ಪ್ರತಿಷ್ಠಾ ವರ್ಧಂತಿ

Team Udayavani, Apr 23, 2019, 2:17 PM IST

 

ಮುಂಬಯಿ: ಮಲಾಡ್‌ ಪೂರ್ವದ ತಾನಾಜಿ ನಗರದ ಕುರಾರ್‌ ವಿಲೇಜ್‌ನಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಸಂಚಾಲಕತ್ವದ ಶ್ರೀ ದುರ್ಗಾಪರಮೇಶ್ವರಿ ಮಂದಿರದ 12ನೇ ಪ್ರತಿಷ್ಠಾ ವರ್ಧಂತ್ಯುತ್ಸವವು ಎ. 20ರಂದು ಚಾಲನೆಗೊಂಡಿತು.

ಶನಿವಾರ ರಾತ್ರಿ ಮೊದಲ್ಗೊಂಡು ಸೋಮವಾರ ತನಕ ಶ್ರೀದೇವಿ ಸನ್ನಿಧಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಸೂಡ ರಾಘವೇಂದ್ರ ಭಟ್‌ ಪೌರೋಹಿತ್ಯದಲ್ಲಿ ಸಾಂ ಪ್ರದಾಯಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆ ಸಲ್ಪಡುವ ತ್ರಿದಿನಗಳ ಕಾಲಾವಧಿಯ ಸಂಭ್ರಮಕ್ಕೆ ವಿದ್ವಾನ್‌ ಶ್ರೀ ಶಂಕರನಾ ರಾಯಣ ತಂತ್ರಿ ಡೊಂಬಿವಲಿ ಇವರು ಪೂಜಾದಿಗಳನ್ನು ನೆರವೇರಿಸಿ ಚಾಲನೆ ನೀಡಿದರು.

ಶನಿವಾರ ಬೆಳಗ್ಗೆಯಿಂದ ಧಾ ರ್ಮಿಕ ಕಾರ್ಯಕ್ರಮವಾಗಿ ಮು ಹೂರ್ತ, ವಾಸ್ತು ಪೂಜಾ, ವಾಸ್ತು ಬಲಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ದಿಕಾ³ಲ ಬಲಿ ನಡೆಯಿತು. ರವಿವಾರ ಬೆಳಗ್ಗೆ ಮಹಾಗಣಪತಿ ಹೋಮ, ಶ್ರೀದೇವಿ ಸನ್ನಿಧಿಯಲ್ಲಿ ಕಲಶಾರಾಧನೆ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಕಲಶಾ ಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ಸಮಿತಿಯ ಉಪಾಧ್ಯಕ್ಷರುಗಳಾದ ಪದ್ಮನಾಭ ಟಿ. ಶೆಟ್ಟಿ, ಗಣೇಶ್‌ ಎಲ್‌. ಕುಂದರ್‌, ನರೇಶ್‌ ಆರ್‌. ಕೋಟ್ಯಾನ್‌, ಗೌರವ ಪ್ರಧಾನ ಕಾರ್ಯದರ್ಶಿ ಎಸ್‌. ಬಿ. ಕೋಟ್ಯಾನ್‌, ಗೌರವ ಕೋಶಾಧಿಕಾರಿ ಬಾಬು ಎಂ. ಸುವರ್ಣ, ಜೊತೆ ಕಾರ್ಯದರ್ಶಿ ಗೋಪಾಲ ಬಿ. ಕೋಟ್ಯಾನ್‌, ಜೊತೆ ಕೋಶಾಧಿಕಾರಿಗಳಾದ ದೇವು ಬಿ. ಕೋಟ್ಯಾನ್‌, ಸುರೇಶ್‌ ಎಂ. ಕೋಟ್ಯಾನ್‌, ಗೀತಾ ಸಿ. ಜತ್ತನ್‌, ಸಲಹೆಗಾರರಾದ ನ್ಯಾಯವಾದಿ ಜಗನ್ನಾಥ ಎನ್‌. ಶೆಟ್ಟಿ, ನ್ಯಾಯವಾದಿ ಸೋಮನಾಥ ಬಿ. ಅಮೀನ್‌, ಶಂಕರ್‌ ಎಲ್‌. ಪೂಜಾರಿ, ರಮೇಶ್‌ ಎ. ಕೋಟ್ಯಾನ್‌, ಶಶಿಕಾಂತ್‌ ಟಿ. ಶೆಟ್ಟಿ, ವಿಶೇಷ ಆಮಂತ್ರಿತರಾದ ಪ್ರೇಮನಾಥ ಸಾಲ್ಯಾನ್‌, ಆನಂದ ಕೆ. ಕೋಟ್ಯಾನ್‌ ಲಿಬರ್ಟಿ ಶಿಪ್ಪಿಂಗ್‌, ರಾಜು ಪೂಜಾರಿ ಓರ್ಲೆಮ್‌ ಅವರು ಉಪಸ್ಥಿತರಿದ್ದರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಪ್ರಸಾದ್‌ ಆರ್‌. ಕೋಟ್ಯಾನ್‌, ವತ್ಸಲಾ ಎಸ್‌. ಕೋಟ್ಯಾನ್‌, ಕಲಾವತಿ ಜಿ. ಕೋಟ್ಯಾನ್‌, ಪ್ರದೀಪ್‌ ಪಿ. ಅಂಚನ್‌, ಲತಾ ಜಿ. ಕುಂದರ್‌, ಆಶಾ ಆರ್‌. ಕೊಟ್ಟಾರಿ, ಮೀನಾ ಡಿ. ಕೋಟ್ಯಾನ್‌, ವಾಸು ಎಂ. ಪೂಜಾರಿ, ರತ್ನಾಕರ ಡಿ. ಕೋಟ್ಯಾನ್‌, ವನಜಾ ಜೆ. ಪೂಜಾರಿ, ರೇಖಾ ವಿ. ಜತ್ತನ್‌, ಕವಿತಾ ಆರ್‌. ಭಟ್‌, ಶಕುಂತಲಾ ಬಿ. ಸುವರ್ಣ, ಸುಜಾತಾ ಎಂ. ಶೆಟ್ಟಿ, ಆಮಂತ್ರಿತ ಸದಸ್ಯರಾದ ಯಮುನಾ ಆರ್‌. ಕೋಟ್ಯಾನ್‌, ರಾಧಾ ಎಸ್‌. ಕೋಟ್ಯಾನ್‌, ಲಕ್ಷಿ¾à ಎಚ್‌. ಕೋಟ್ಯಾನ್‌, ಜಯ ಸುಜೀತ್‌, ಸ್ಮಿತಾ ಅಬು, ವಿಶ್ವನಾಥ ಎ. ಬೆಲ್ಚಡ, ಪ್ರೇಮಾ ವಿ. ಪೂಜಾರಿ, ಗಿರಿಜಾ ವಿ. ಶೆಟ್ಟಿ, ಭಾರತಿ ಎಸ್‌. ಕೋಟ್ಯಾನ್‌, ಶಾಂತಾ ಪೂಜಾರಿ, ಸಿದ್ಧರಾಮ ಗೌಡ ಸೇರಿದಂತೆ ಸದಸ್ಯರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಎ. 22ರಂದು ಬೆಳಗ್ಗೆ ಮಹಾಗಣಪತಿ ಹೋಮ, ನವಕ ಕಲಶ ಪ್ರದಾನ, ಕಲಶಾರಾಧನೆ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಮಂತ್ರಕ್ಷತೆ, ಋತ್ವಿಕ್‌ ಸಂಭಾವನೆ, ಪ್ರಸಾದ ವಿತರಣೆ ಇತ್ಯಾದಿ ಕಾರ್ಯಕ್ರಮಗಳು ಜರಗಲಿದ್ದು, ಸಮಸ್ತ ಸದ್ಭಕ್ತ ಬಾಂಧವರು ಆಗಮಿಸಿ ದುರ್ಗಾಪರಮೇಶ್ವರೀ ಮಾತೆಯ ಕೃಪೆಗೆ ಪಾತ್ರರಾಗುವಂತೆ ಗೌರವ ಪ್ರಧಾನ ಕಾರ್ಯದರ್ಶಿ ಎಸ್‌. ಬಿ. ಕೋಟ್ಯಾನ್‌ ಮತ್ತು ಸರ್ವ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ