ಪುಣೆಯ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರ: ಕಲಿಕಾ ವರ್ಗ


Team Udayavani, Aug 29, 2017, 3:32 PM IST

27mum01.jpg

ಪುಣೆ: ಪುಣೆಯ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರವು ಕನ್ನಡೇತರರಿಗಾಗಿ ನಡೆಸಿಕೊಂಡು ಬರುತ್ತಿರುವ ಬೆಳ್ಳಿಹಬ್ಬದ ಕನ್ನಡ ಕಲಿಕಾ ವರ್ಗವನ್ನು ಇತ್ತೀಚೆಗೆ ಹಿರಿಯ ಪತ್ರಕರ್ತ, ಅರ್ಥಪೂರ್ಣ ಮಾಸಿಕದ ಸಂಪಾದಕ ಹಾಗೂ ಮರಾಠಿಯ ಸಕಾಳ್‌ ದಿನಪತ್ರಿಕೆಯ ಮಾಜಿ ಸಂಪಾದಕ ಯಮಾಜಿ ಮಾಲಕರ್‌  ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಿ| ಸಾಣೆ ಗುರೂಜಿ ಅಂತರ್‌ ಭಾರತೀಯ ಸ್ವಪ್ನ ಕಂಡವರು. ಅದನ್ನು ಪ್ರತ್ಯಕ್ಷವಾಗಿ ಕೃತಿಯಲ್ಲಿ ರೂಪಿಸಿದ ಶ್ರೇಯ ಪುಣೆಯ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರಕ್ಕೆ ಸಲ್ಲುತ್ತದೆ. ಕಳೆದ 24 ವರ್ಷಗಳಿಂದ ಪುಣೆಯಲ್ಲಿ ಕನ್ನಡೇತರರಿಗೆ, ವಿಶೇಷವಾಗಿ ಮರಾಠಿಗರಿಗೆ ಕನ್ನಡ ಕಲಿಕಾ ವರ್ಗ ನಡೆಸುತ್ತ ಎರಡೂ ಭಾಷಿಕರಲ್ಲಿ ಅನುಬಂಧವನ್ನು ನೇರವಾಗಿ ಬಿಂಬಿಸುತ್ತಿರುವ ಈ ಉಪಕ್ರಮ ಅನನ್ಯವೂ, ಅನುಪಮವೂ ಆಗಿದೆ ಎಂದರು.

ವ್ಯಾಸ ಮಹಾಭಾರತದ ಪ್ರಭಾವ ಕುಮಾರ ವ್ಯಾಸನ ಮೇಲಾಯಿತಾದರೂ, ಅದೊಂದು ಅನುವಾದಿತ ಕೃತಿಯೆಂದು ಗೋಚರಿಸುವುದಿಲ್ಲ. ಕುಮಾರವ್ಯಾಸ ಮಹಾಭಾರತವನ್ನು ಅನುಪಮ ಅಪೂರ್ವ ಸ್ವರೂಪದ ಮಹಾಕಾವ್ಯವನ್ನಾಗಿ ರೂಪಿಸಿ ಅದಕ್ಕೆ ಸರ್ವತಂತ್ರ ಸ್ವತಂತ್ರ ಮಹಾಕಾವ್ಯದ ನೆಲೆಯಲ್ಲಿ ಸೆರೆಹಿಡಿದ ಶ್ರೇಯ ಗದುಗಿನ ನಾರಾಯಣಪ್ಪ ಅಲಿಯಾಸ್‌ ಕುಮಾರವ್ಯಾಸನಿಗೆ ಸಲ್ಲುತ್ತದೆ. ಈ ಮಹಾಕಾವ್ಯದಲ್ಲಿ ರೂಪುಗೊಳ್ಳುವ ಪ್ರತಿಯೊಂದು ಪಾತ್ರಕ್ಕೆ ಸ್ವತಂತ್ರ ಸ್ಥಾನವನ್ನು ಕಲ್ಪಿಸಿ ಕೃಷ್ಣ ಲೀಲೆಯನ್ನು ಅದ್ಭುತ ಸ್ವರೂಪದಲ್ಲಿ ಬಿಂಬಿಸಿ, ಭಗವತ್‌ ಧರ್ಮವನ್ನು ಎತ್ತಿಹಿಡಿದ ರೀತಿ ಅನುಪಮವಾಗಿದೆ. ಷಟ³ದಿ ಛಂದ ಮರಾಠಿ ಯಲ್ಲಿ ಕನ್ನಡದಷ್ಟು ಪ್ರಭಾವ ಶಾಲಿಯಾಗಿರದ ಕಾರಣ ನಾನು ನನ್ನ ಸಮಗ್ರ ಅನುವಾದ ಕಾರ್ಯವನ್ನು ಸರಳ ಗದ್ಯದಲ್ಲಿ ರಚಿಸಿದ್ದೇನೆ ಎಂದು ಪುಣೆಯ ನೆಸ್‌ ವಾಡಿಯಾ  ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಜಲಗಾಂವ್‌ ಜ್ಞಾನಜ್ಯೋತಿ  ಇನ್‌ಸ್ಟಿಟ್ಯೂಟ್‌ನ ಸಂಚಾಲಕ ಪ್ರೊ| ಗುರುರಾಜ್‌ ಸಿ. ಕುಲಕರ್ಣಿ ನುಡಿದರು.

ಇದೇ ಸಂದರ್ಭದಲ್ಲಿ ಯಮಾಜಿ ಮಾಲಕರ್‌ ಮತ್ತು ಕುಲಕರ್ಣಿ ಅವರನ್ನು ಕೇಂದ್ರದ ಗೌರವ ಕಾರ್ಯದರ್ಶಿ, ಕನ್ನಡ ಕಲಿಕಾ ವರ್ಗದ ಸಂಚಾಲಕ ಕೃ. ಶಿ. ಹೆಗಡೆ ಅವರ ಹಸ್ತದಿಂದ ಸತ್ಕರಿಸಲಾಯಿತು.

ತದನಂತರ, ಪ್ರಾಚಿ ಕುಲಕರ್ಣಿ ಅವರು ಮರಾಠಿಗರಿಗೆ ಪರಿಚಿತವಲ್ಲದ, ಕನ್ನಡದಲ್ಲಿ ಆಳವಾಗಿ ಬೇರುಬಟ್ಟಿರುವ ಗಮಕ ಶೈಲಿಯ ವ್ಯಾಸ ಮಹಾಭಾರತದ ಕೆಲವು ಪದ್ಯಗಳನ್ನು ಸಾದರಪಡಿಸಿ ಪ್ರೇಕ್ಷಕರ ಗಮನ ಸೆಳೆದರು.

2016ರ ಮಾರ್ಚ್‌ನಲ್ಲಿ ಆಯೋಜಿಸಲಾದ ಕನ್ನಡ ಕಲಿಕಾ ವರ್ಗ ಮತ್ತು ಪ್ರಗತ ಕನ್ನಡ ಕಲಿಕಾ ವರ್ಗಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಅಧ್ಯಕ್ಷ ಯಮಾಜಿ ಮಾಲಕರ್‌ ಮತ್ತು ಮುಖ್ಯ ಅತಿಥಿ ಪ್ರೊ| ಗುರುರಾಜ ಸಿ. ಕುಲಕರ್ಣಿ ಅವರ ಹಸ್ತದಿಂದ ಪ್ರಮಾಣಪತ್ರ ಪ್ರದಾನಿಸಲಾಯಿತು. 

ವರ್ಗದ ಶಿಕ್ಷಕ  ವಿಶ್ವನಾಥ ಶೆಟ್ಟಿ ಅವರು ಎರಡೂ ವರ್ಗಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು. ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣ ರಾದ ವಿದ್ಯಾರ್ಥಿಗಳು ಶುದ್ಧ ಕನ್ನಡದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.

ಕೇಂದ್ರದ ಪ್ರಧಾನ ಕಾರ್ಯದರ್ಶಿ, ಕನ್ನಡ ಕಲಿಕಾ ವರ್ಗದ ಸಂಚಾಲಕ ಕೃ. ಶಿ. ಹೆಗಡೆ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಕೇಂದ್ರದ ವಿಶ್ವಸ್ತ ಡಾ| ರಾಘವೇಂದ್ರ ಕಟ್ಟಿ ಮುಖ್ಯ ಅತಿಥಿಯ ಪರಿಚಯ ಮಾಡಿದರು. ಲತಾ ಹಿರೇಮs… ಕಾರ್ಯಕ್ರಮದ ಅಧ್ಯಕ್ಷರ ಪರಿಚಯ ಮಾಡಿದರು. ಅದೇ, ಕನ್ನಡ ಕಲಿಕಾ ವರ್ಗದ ವಿದ್ಯಾರ್ಥಿ ಅರುಣಾ ಸಿ. ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ವಿಶ್ವಸ್ತ ಸಿ. ಎಂ. ಹರ್ಕುಡೆ ವಂದಿಸಿದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.