ಪುಣೆ ಬಿಲ್ಲವ ಸಮಾಜ ಸೇವಾ ಸಂಘದಿಂದ ಬೃಹತ್‌ ರಕ್ತದಾನ ಶಿಬಿರ


Team Udayavani, May 28, 2019, 3:19 PM IST

2705MUM01A

ಪುಣೆ: ಜಗತ್ತಿನ ಪ್ರತಿಯೊಂದು ಜೀವಿಯು ತನ್ನ ಜೀವಿತದ ಅವಧಿಯಲ್ಲಿ ಆರೋಗ್ಯದಾಯಕವಾಗಿ ಬದುಕಲು ಹವಣಿಸುತ್ತದೆ. ಮನುಷ್ಯ ಕೂಡ ಇದಕ್ಕೆ ಬದಲಾಗಿಲ್ಲ. ಮನುಷ್ಯ ಜಾತಿಗೆ ತನ್ನ ಅರೋಗ್ಯ ಕಾಪಾಡಲು ಹಲವಾರು ಮಾರ್ಗಗಳಿವೆ. ಅದನ್ನು ಅನುಸರಿಸಿದರೆ ಆರೋಗ್ಯದಾಯಕ ಜೀವನ ಸಾಧ್ಯ ಎಂದು ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ ನುಡಿದರು.
ಬಿಲ್ಲವ ಸಮಾಜ ಸೇವಾ ಸಂಘ ಪುಣೆ ವತಿಯಿಂದ ಮೇ 26ರಂದು ಪುಣೆಯ ಕರ್ವೆ ರೋಡ್‌ ಹತ್ತಿರದ ಕೇತ್ಕರ್‌ ರೋಡ್‌ನ‌ಲ್ಲಿಯ ಡಾ| ಶ್ಯಾಮ್‌ ರಾವ್‌ ಕಲ್ಮಾಡಿ ಕನ್ನಡ ಹೈಸ್ಕೂಲ್‌ನ ಹಾಲ್‌ನಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನುಷ್ಯನ ಜೀವನದಲ್ಲಿ ಅನಾರೋಗ್ಯ, ಅಪಘಾತ ಎಂಬುವುದು ಯಾವತ್ತೂ ಹೇಳಿ ಬರುವುದಿಲ್ಲ. ಅವೆಲ್ಲವೂ ಅಕಸ್ಮಿಕ. ದೇಹದ ಸಮತೋಲನ ತಪ್ಪಿದಾಗ, ಆಹಾರ ಪದ್ಧತಿಯಲ್ಲಿ ಏರುಪೇರಾದಾಗ, ಅಧುನಿಕ ಜೀವನ ಪದ್ಧತಿಯಿಂದ ಹಾಗೂ ಪ್ರಸ್ತುತ ಕಲುಷಿತ ವಾತಾವರಣದಿಂದ ಮನುಷ್ಯ ಬೇಗನೆ ಅನಾರೋಗ್ಯ ಪೀಡಿತನಾಗುತ್ತಾನೆ. ಅಸಮರ್ಪಕ ಜೀವನ ನಿರ್ವಹಣೆಯಿಂದ ಅಥವಾ ಮನುಷ್ಯ ತಪ್ಪಿನಿಂದ ಅಪಘಾತಗಳು ಕೂಡ ಅಧಿಕಗೊಳ್ಳುತ್ತಿವೆ. ಈ ಎಲ್ಲಾ ಅವಘಡಗಳಿಂದ ಮನುಷ್ಯನ ದೇಹದಿಂದ ಯಥೇತ್ಛವಾಗಿ ಮೊದಲು ಹರಿದುಹೋಗುವುದು ರಕ್ತ.

ರಕ್ತ ಮನುಷ್ಯನ ಜೀವದ ಯಂತ್ರ ಚಾಲನೆಗೆ, ಉಸಿರಾಟಕ್ಕೆ ಬಹು ಮುಖ್ಯವಾಗಿದೆ. ಜೀವ ಉಳಿಸಲು ಮೊದಲಾಗಿ ಬೇಕಾಗುವುದು ರಕ್ತ. ರಕ್ತವನ್ನು ಎಲ್ಲೆಂದರಲ್ಲಿ ಹಣ ಕೊಟ್ಟು ಪಡೆಯಬಹುದು ಎಂದರೆ ಅದು ಅಸಾಧ್ಯದ ಮಾತು. ಕೇವಲ ರಕ್ತ ದಾನಿಗಳು ನೀಡಿದ ರಕ್ತದ ಶೇಖರಣೆ ಇದ್ದರೆ ಮಾತ್ರ ಅಪಾಯದಲ್ಲಿರುವ ವ್ಯಕ್ತಿಗೆ ಸಕಾಲದಲ್ಲಿ ರಕ್ತ ನೀಡಿದರೆ ಜೀವ ಉಳಿಸಬಹುದು ಎಂದರು.

ಮನುಷ್ಯ ತನ್ನ ಜೀವಿತದ ಅವಧಿಯಲ್ಲಿ ಒಂದೋ ಎರಡೋ ದಿನ ಅನ್ನ ಆಹಾರವಿಲ್ಲದೆ ಬದುಕಬಲ್ಲ. ಆದರೆ ತನ್ನ ದೇಹದಲ್ಲಿ ರಕ್ತವಿಲ್ಲದೆ ಕ್ಷಣ ಕಾಲವು ಬದುಕಲು ಸಾಧ್ಯವಿಲ್ಲ. ಇಂತಹ ಶಿಬಿರಗಳಿಂದ ಹಲವು ಜೀವಗಳನ್ನು ಉಳಿಸಿದ ಪುಣ್ಯ ಕಾರ್ಯ ನಮ್ಮಿಂದಾಗುತ್ತದೆ. ರಕ್ತದಾನವೆಂದರೆ ಅದು ಬಹಳ ಶ್ರೇಷ್ಠವಾದುದು ಹಾಗೂ ಜನಸೇವೆಯು ಹೌದು. ಈ ನಿಟ್ಟಿನಲ್ಲಿ ಪುಣೆ ಬಿಲ್ಲವ ಸಮಾಜ ಸೇವಾ ಸಂಘವು ಕಾರ್ಯಪ್ರವೃತ್ತವಾಗಿದೆ. ಸಂಘದ ಹಿರಿಯರ ಸಹಕಾರ ಸಲಹೆಯೊಂದಿಗೆ ನಮ್ಮ ಕಾರ್ಯ ಕಾರಿ ಸಮಿತಿಯ ಸದಸ್ಯರು, ಸಮಾಜದ ಬಂಧುಗಳೊಂದಿಗೆ ಕೂಡಿ ಸಮಾಜಕ್ಕೆ ಸಹಾಯಕವಾಗುವ ಕಾರ್ಯವನ್ನು ಮಾಡುತ್ತಿದ್ದೇವೆ, ಸಂಘದ ವತಿಯಿಂದ ಸಾರ್ವಜನಿಕವಾಗಿ ಆಯೋಜಿಸಿದ್ದ ಇಂದಿನ ಈ ರಕ್ತದಾನ ಶಿಬಿರದಲ್ಲಿ ಪುಣೆಯ ಎಲ್ಲಾ ಸಮಾಜದ ಬಂಧುಗಳು ಬಂದು ರಕ್ತದಾನ ನೀಡಿ ಸಹಕ ರಿಸಿ¨ªಾರೆ. ಅವರೆಲರ್ಲಿಗೂ ಸಂಘದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ವೇದಿಕೆಯಲ್ಲಿ ಶಿಬಿರ ಉದ್ಘಾಟಕರಾದ ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ, ಸಂಘದ ಸ್ಥಾಪಕ ಅಧ್ಯಕ್ಷ ಸುಂದರ್‌ ಪೂಜಾರಿ, ಸಂಘದ ಉಪಾಧ್ಯಕ್ಷರಾದ ಸಂದೇಶ್‌ ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಉಮಾ ಕೆ. ಪೂಜಾರಿ ಅವರು ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ಮೊದಲಿಗೆ ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಶಂಕರ್‌ ಪೂಜಾರಿ ಪ್ರಾರ್ಥನೆಗೈದರು.

ಈ ಶಿಬಿರಕ್ಕೆ ಮುಖ್ಯ ಪುಣೆಯ ಗಣ್ಯ ಉದ್ಯಮಿಗಳಾದ ಬಾಲ ಸಾಹೇಬ್‌ ಚೌಧರಿ, ಬಿಲ್ಡರ್‌ ಅಬಾ ಧುಮಾಲ್‌, ಕುಂದನ್‌ ಘಾಡೆY ಆಗಮಿಸಿದ್ದರು. ಅಲ್ಲದೆ ಪುಣೆಯ ತುಳು-ಕನ್ನಡಿಗ ಪ್ರಮುಖರಾದ ಪುಣೆ ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷ ಶೇಖರ್‌ ಪೂಜಾರಿ, ಪುಣೆ ತುಳು ಕೂಟದ ಅಧ್ಯಕ್ಷ ಮೋಹನ್‌ ಶೆಟ್ಟಿ ಎಣ್ಣೆಹೊಳೆ, ಸಂಘದ ಗೌರವ ಕಾರ್ಯದರ್ಶಿ ಸದಾನಂದ ಬಂಗೇರ ನಮ್ಮ ತುಳುವೆರ್‌ ಸಂಘದ ಅಧ್ಯಕ್ಷ ಸೂರ್ಯ ಪೂಜಾರಿ, ಶ್ಯಾಮ್‌ ಸುವರ್ಣ ಪಿಂಪ್ರಿ, ಜಯ ಆರ್‌. ಪೂಜಾರಿ, ಉದ್ಯಮಿಗಳಾದ ಸುಧಾಕರ ಶೆಟ್ಟಿ, ಜಗದೀಶ್‌ ಶೆಟ್ಟಿ, ನ್ಯಾಯವಾದಿ ರೋಹನ್‌ ಶೆಟ್ಟಿ, ಸಂತೋಷ್‌ ಶೆಟ್ಟಿ, ರಾಕೇಶ್‌ ಶೆಟ್ಟಿ, ಗಿರೀಶ್‌ ಪೂಜಾರಿ, ಪ್ರಶಾಂತ್‌ ಸುವರ್ಣ, ಮಂಜುನಾಥ್‌ ಗೌಡ, ರವಿ ಗೌಡ, ಸುದೀಪ್‌ ಪೂಜಾರಿ, ನೂತನ್‌ ಸುವರ್ಣ, ವಿಶ್ವನಾಥ್‌ ಪೂಜಾರಿ ಅಂಬಿಕಾ, ಸುದರ್ಶನ್‌ ಪೂಜಾರಿ, ಪ್ರಕಾಶ್‌ ಪೂಜಾರಿ ಬೈಲೂರು, ಸಂತೋಷ್‌ ಪೂಜಾರಿ, ಶಿವಪ್ರಸಾದ್‌ ಪೂಜಾರಿ, ಪ್ರವೀಣ್‌ ಪೂಜಾರಿ, ಅಮೋಲ್‌ ಜಾಧವ್‌, ಸಂದೀಪ್‌ ಪೂಜಾರಿ, ಶ್ರೀಶೈಲ ಸಾಲ್ಗರ್‌, ಕೇತಕಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಸುನೀತಾ ಎಸ್‌. ಪೂಜಾರಿ ಮತ್ತು ವನಿತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ವಿಶಾಲಾ ಪಿ. ಪೂಜಾರಿ ಸ್ವಾಗತಿಸಿದರು. ಗೀತಾ ಡಿ. ಪೂಜಾರಿ ವಂದಿಸಿದರು. ಶಿಬಿರದ ಯಶಸ್ಸಗೆ ಸಮಾಜದ ಹಿರಿಯ ಗಣ್ಯರು, ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಪ್ರಮುಖರು, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

ರಕ್ತದಾನ ಶಿಬಿರವನ್ನು ಪಿಂಪ್ರಿ ಚಿಂಚಾÌಡ್‌ ಮಹಾನಗರ ಪಾಲಿಕೆಯ ವೈ. ಸಿ. ಎಂ. ಬ್ಲಿಡ್‌ ಬ್ಯಾಂಕಿನ ವೈದ್ಯಾಧಿಕಾರಿಗಳಾದ ಡಾ| ಶಂಕರ್‌ ಮೊಸಲಿY, ಡಾ| ನೀತಾ ಘಾಡೆY, ಡಾ| ಸ್ವಾತಿ ಪಾಟೀಲ್‌, ಡಾ| ಕಿಶನ್‌ ಗಾಯಕ್ವಾಡ್‌ ಮತ್ತು¤ ತಂಡದವರು ನಡೆಸಿಕೊಟ್ಟರು. ವೈದ್ಯಾಧಿಕಾರಿಗಳು ಹಾಗೂ ಈ ರಕ್ತದಾನ ಶಿಬಿರಕ್ಕೆ ಭೇಟಿ ನೀಡಿದ ಗಣ್ಯರನ್ನು ವಿಶ್ವನಾಥ್‌ ಪೂಜಾರಿ ಕಡ್ತಲ ಮತ್ತು ಪದಾಧಿಕಾರಿಗಳು ಗೌರವಿಸಿದರು.

ಪುಣೆ ಬಿಲ್ಲವ ಸಂಘದ ಪ್ರತಿಯೊಂದು ಜನಸೇವಾ ಕಾರ್ಯಕ್ರಮಗಳು ಸಮಾಜದ ಒಳಿತಿಗಾಗಿ ಮತ್ತು ಅವಶ್ಯವಾಗಿ ಕಷ್ಟದಲ್ಲಿರುವವರಿಗೆ ಸಹಾಯಕವಾಗಲು ನಡೆಯುತ್ತಿವೆ. ಸಂಘದ ಅಧ್ಯಕ್ಷರ ಸಮಾಜ ಸೇವಾ ಮನೋಭಾವದಿಂದ ಹಲವಾರು ಕಾರ್ಯಕ್ರಮಗಳು ಸಾಕಾರಗೊಂಡಿದ್ದು ಸಮಾಜಕ್ಕೆ ಸಹಕಾರಿಯಾಗಿವೆ. ಇನ್ನು ಮುಂದೆಯೂ ಇಂತಹ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿರಲಿ. ತಮಗೆÇÉಾ ನಮ್ಮ ಸಂಪೂರ್ಣ ಸಹಕಾರವಿದೆ.
– ಸುಂದರ್‌ ಪೂಜಾರಿ, ಸ್ಥಾಪಕಾಧ್ಯಕ್ಷರು, ಬಿಲ್ಲವ ಸಂಘ ಪುಣೆ

ಇಂದಿನ ಕಾರ್ಯಕ್ರಮವೆಂದರೆ ರಕ್ತದಾನ. ಅದು ಜನರ ಪಾಲಿಗೆ ಯಾವತ್ತೂ ಬಹು ಮುಖ್ಯವಾಗಿ ಬೇಕಾಗುವಂತದ್ದು. ರಕ್ತದಾನ ಸರ್ವ ಶ್ರೇಷ್ಠವಾದುದು. ರಕ್ತ ದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಕೂಡಾ ಹೌದು. ಇಂತಹ ಅವಕಾಶವನ್ನು ಪುಣೆ ಬಿಲ್ಲವ ಸಂಘದ ಅಧ್ಯಕ್ಷರಾದ ವಿಶ್ವನಾಥ್‌ ಪೂಜಾರಿಯವರ ಉತ್ಸಾಹಿ ಸಮಾಜ ಸೇವಾ ಕಳಕಳಿಯಿಂದ ಆಯೋಜನೆಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ನಾವೆಲ್ಲರೂ ಇದರಲ್ಲಿ ಭಾಗಿಗಳಾಗೋಣ.
– ಸದಾನಂದ ಪೂಜಾರಿ, ಮಾಜಿ ಅಧ್ಯಕ್ಷರು, ಬಿಲ್ಲವ ಸಂಘ ಪುಣೆ

ಚಿತ್ರ-ವರದಿ : ಹರೀಶ್‌ ಮೂಡಬಿದ್ರಿ ಪುಣೆ

ಟಾಪ್ ನ್ಯೂಸ್

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

ಫ‌ಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್

ಫ‌ಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್

ಅಸ್ಸಾಂ ಸಿಎಂಗೆ ಚುನಾವಣಾ ಆಯೋಗ ಎಚ್ಚರಿಕೆ

ಅಸ್ಸಾಂ ಸಿಎಂಗೆ ಚುನಾವಣಾ ಆಯೋಗ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

Untitled-1

ವಿದ್ಯಾರ್ಥಿಗಳಲ್ಲಿ ದೇಶದ ಅಭಿವೃದ್ಧಿಯ ಹೊಣೆಗಾರಿಕೆ ಇರಲಿ: ದಯಾನಂದ ಶೆಟ್ಟಿ

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಸಾರಿಗೆ ನೌಕರರ ಪರ ಅನಿರ್ಧಿಷ್ಟಾವಧಿ ಧರಣಿ

ಸಾರಿಗೆ ನೌಕರರ ಪರ ಅನಿರ್ಧಿಷ್ಟಾವಧಿ ಧರಣಿ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.