ಉಪ್ಲಾ ಗ್ರಾಮದಲ್ಲಿ ಕೋತಿ ಹಾವಳಿ; ಮನೆಗಳಿಗೆ ಹಾನಿ
Team Udayavani, Dec 18, 2020, 8:55 PM IST
ಔರಂಗಾಬಾದ್, ಡಿ. 17: ಜಿಲ್ಲೆಯ ಹಳ್ಳಿಯೊಂದ ರಲ್ಲಿ ಸುಮಾರು 300 ಕೋತಿಗಳು ಅಟ್ಟ ಹಾಸ ಮೆರೆಯುತ್ತಿದ್ದು, ಜನರ ಮೇಲೆ ಹಲ್ಲೆನಡೆಸಿ ಅವರ ಬೆಳೆ ಮತ್ತು ಮನೆಗಳಿಗೆ ಹಾನಿ ಗೊಳಿ ಸುತ್ತಿರುವುದರಿಂದ ಗ್ರಾಮದ ನಿವಾಸಿಗರು ಭಯದಲ್ಲಿ ಬದುಕುತ್ತಿದ್ದಾರೆ.
ಈ ಕೋತಿಗಳು ಉಪ್ಲಾ ಗ್ರಾಮದಲ್ಲಿ ಬಹಳ ಹಿಂದಿನಿಂದಲೂ ವಾಸಿಸುತ್ತಿವೆ, ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಅವುಗಳ ದಾಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಕುರಿತು ಅರಣ್ಯಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನುಸಂಪರ್ಕಿಸಿದಾಗ ಅವರು, ಈವರೆಗೆ ಗ್ರಾಮದಿಂದ ಕೋತಿಗಳ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ.
ಸಿಲ್ಲೋಡ್ ತಾ| ನಲ್ಲಿರುವ ಈ ಸಣ್ಣ ಗ್ರಾಮದಲ್ಲಿ ಕೋತಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದುಮನೆಯ ಅಡಿಗೆಮನೆಗಳಿಗೆ ಪ್ರವೇಶಿಸುವುದು,ಜನರ ಕೈಯಿಂದ ಆಹಾರ ಕಸಿದುಕೊಳ್ಳುವುದುಹಾಗೆಯೇ ಅವರು ವಿರೋಧಿಸಿದಾಗ ಗ್ರಾಮಸ್ಥರ
ಮೇಲೆ ದಾಳಿ ಮಾಡುವುದು ಗ್ರಾಮದಮಹಿಳೆಯರಿಗೆ ಮತ್ತು ಮಕ್ಕಳಿಗೆ ಭೀತಿಯುಂಟುಮಾಡಿದೆ. ಅದಲ್ಲದೆ ಇಲ್ಲಿನ ಮಹಿಳೆಯೊಬ್ಬರು ಒಂದೆರಡು ವರ್ಷಗಳ ಹಿಂದೆ ತಾನು ಕೋತಿ ಯಿಂದ ದಾಳಿಗೊಳಗಾಗಿದ್ದಾಗ ತನಗೆ ತೀವ್ರ ಗಾಯ ಗಳಾಗಿದ್ದವು ಎಂದು ತಿಳಿಸಿದ್ದಾರೆ.ದೊಡ್ಡ ಗುಂಪುಗಳಲ್ಲಿ ಸುತ್ತಾಡುತ್ತಿರುವ ಕೋತಿ ಗಳ ಹಿಂಡಿನಿಂದ ಹಲವಾರು ರೈತರ ಬೆಳೆಗಳುಹಾನಿ ಗೀಡಾಗಿವೆ. ಜನರು ಹಳ್ಳಿಯಲ್ಲಿ ನಡೆ ದಾಡಲು ಕೂಡ ಹೆದರುತ್ತಾರೆ ಎಂದು ಇನ್ನೋರ್ವನಿವಾಸಿ ದೂರಿದ್ದಾರೆ. ಹಲವಾರು ವರ್ಷ ಗಳಿಂದ ಕೋತಿಗಳು ಗ್ರಾಮದಲ್ಲಿ ವಾಸಿಸುತ್ತಿವೆ. ಆದರೆ, ಈಗ ಅವುಗಳ ಸಂಖ್ಯೆ ಮತ್ತು ಕಾಟ ಹೆಚ್ಚಾಗಿದೆ. ಗ್ರಾಮ ದಲ್ಲಿ ಸುಮಾರು 300 ಕೋತಿಗಳಿದ್ದು, ಹೆಚ್ಚಿನ ಮನೆಗಳ ಮೇಲ್ಛಾವಣಿಗಳನ್ನು ಅವು ಮುರಿ ದು ಹಾಕಿವೆ ಎಂದು ಉಪ್ಲಾ ಗ್ರಾಮದ ಸರಪಂಚ್ ಮೀರಾಬಾಯಿ ಸೂರಡ್ಕರ್ ಹೇಳಿದ್ದಾರೆ.
ಹಳ್ಳಿಗೆ ಕೋತಿಗಳು ಎಲ್ಲಿಂದ ಬರುತ್ತವೆ ಎಂದು ಕೇಳಿದಾಗ, ನಮ್ಮ ಸ್ಥಳದ ಬಳಿ ಯಾವುದೇ ಕಾಡು ಇಲ್ಲ, ಆದರೆ ಇಲ್ಲಿಂದ 20-30 ಕಿ.ಮೀ ದೂರ ದಲ್ಲಿ ಕೆಲವು ಬೆಟ್ಟಗಳಿವೆ ಎಂದು ತಿಳಿಸಿದ್ದಾರೆ. ಕೋತಿ ಗಳುಹಳ್ಳಿಯ ಹೊಲಗಳಲ್ಲಿ ಹತ್ತಿ ಮತ್ತು ಮೆಕ್ಕೆಜೋಳವನ್ನು ತಿನ್ನುತ್ತಿದ್ದು ಹಲವಾರು ಬೆಳೆಗಳಿಗೆಹಾನಿಯಾಗಿವೆ ಎಂದು ಇನ್ನೋರ್ವ ಗ್ರಾಮಸ್ಥ ದೂರಿದ್ದಾರೆ. ತಮ್ಮ ಜಮೀನಿನಲ್ಲಿ ಕೆಲಸ ಮಾಡುವಸದಸ್ಯರಿಗೆ ಆಹಾರ ಕೊಂಡೊಯ್ಯುವಾಗ ಕೋತಿಗಳು ಕಸಿದು ಕೊಳ್ಳುತ್ತಿವೆ. ಓಡಿಸಲು ಪ್ರಯತ್ನಿ ಸಿದರೆ, ದಾಳಿ ಮಾಡುತ್ತವೆ ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸಿದಾಗ ಅವರು, ನಾವು ಈವರೆಗೆ ಉಪ್ಲಾ ಗ್ರಾಮದಿಂದ ಕೋತಿಗಳ ಬಗ್ಗೆ ಯಾವುದೇ ದೂರನ್ನು ಸ್ವೀಕರಿಸಿಲ್ಲ. ನಮಗೆ ಯಾವುದೇ ದೂರು ಬಂದರೆ, ನಾವು ಅದರ ಮೇಲೆ ಕಾರ್ಯನಿರ್ವಹಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444