ತುಳುವರು ಎಲ್ಲಿಯೂ ಮಣ್ಣಿನ ಗುಣ ಬಿಡಲಾರರು: ಅರವಿಂದ್‌ ಬೋಳಾರ್‌

ನಮ ತುಳುವೆರ್‌ ಪುಣೆ "ಮಿಸ್ಟರ್‌ ಆ್ಯಂಡ್‌ ಮಿಸ್‌ ಫೇಸ್‌ ಆಫ್‌ ತುಳುನಾಡು -2019' ಮೆಗಾ ಫಿನಾಲೆ

Team Udayavani, Jun 18, 2019, 4:50 PM IST

 

 

ಪುಣೆ: ಮನುಷ್ಯ ಜನ್ಮದಲ್ಲಿ ಹುಟ್ಟಿನಿಂದ ಅಂತ್ಯದವರೆಗಿನ ನಮ್ಮ ಜೀವನ ಎಂಬುವುದು ಒಂದು ರೀತಿಯ ಫ್ಯಾಶನ್‌ ಶೋ ಇದ್ದ ಹಾಗೆ. ನಾವು ಧರಿಸುವ ಬಟ್ಟೆಯಿಂದ ಹಿಡಿದು ನಮ್ಮ ಜೀವನದಲ್ಲಿ ಅಭಿರುಚಿಗೆ ಹಾಗೂ ಕಾಲಕ್ಕೆ ತಕ್ಕಂತೆ ಸ್ಪಂದಿಸುವ ಜೀವನ ಪದ್ಧತಿಯೇ ಇಂದು ಫ್ಯಾಶನ್‌ ಆಗಿ ರೂಪುಗೊಂಡಿದೆ. ಆದರೆ ನಮ್ಮ ಯುವಕ ಯುವತಿಯರಲ್ಲಿ ಅಡಗಿರುವ ಪ್ರತಿಭೆ, ವ್ಯಕ್ತಿತ್ವ, ದೇಹದಾಡ್ಯವನ್ನು ಪ್ರದರ್ಶಿಸಲು ಒಂದು ವೇದಿಕೆ ಬೇಕು. ಅಂತಹ ವೇದಿಕೆಯೇ ಇಂದು ಇಲ್ಲಿ ಮಿಸ್ಟರ್‌ ಆ್ಯಂಡ್‌ ಮಿಸ್‌ ತುಳುನಾಡು ಎಂಬ ಹೆಸರಿನಲ್ಲಿ ಕಾಣುತ್ತಿದ್ದೇವೆ. ಸಂಪ್ರದಾಯ ಬದ್ಧವಾಗಿ ನಮ್ಮ ತುಳುನಾಡಿನ ಉಡುಗೆ ತೊಡುಗೆ ಶೃಂಗಾರದಲ್ಲಿ ಮೂಡಿ ಬಂದ ಇಂದಿನ ಕಾರ್ಯಕ್ರಮವು ಮನಸ್ಸಿಗೆ ಸಂತೋಷ ನೀಡಿದೆ. ಆದರೆ ಇಂದಿನ ಫ್ಯಾಶನ್‌ ಯುಗದಲ್ಲಿ ಹೊಂದಾಣಿಕೆಯು ಆಗತ್ಯವಾಗಿದೆ. ಇಂತಹ ಶೋ ಗಳು ಅನಿವಾರ್ಯವು ಹೌದು. ಜಗತ್ತೇ ಮೆಚ್ಚುವ ಸಂಗತಿ ಎಂದರೆ ತುಳುವರು ಇಂದು ವಿಶ್ವದ ಮೂಲೆ ಮೂಲೆಯಲ್ಲೂ ಇದ್ದು, ಕಠಿಣ ಪರಿಶ್ರಮಿಗಳಾಗಿ ದುಡಿದು ನಮ್ಮ ತುಳುನಾಡ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಮೆಚ್ಚುವಂತದ್ದು. ಅಭಿನಯ ಶಾರದೆ ನನ್ನಲ್ಲಿ ಒಂದು ವಿಶಿಷ್ಟತೆಯನ್ನು ಒದಗಿಸಿ¨ªಾಳೆ. ಅದನ್ನು ತಮ್ಮ ಮುಂದಿಟ್ಟು ಬೇಸರ ಕಳೆಯಲು ನಟಿಸುತ್ತಿದ್ದೇನೆ ಎಂದು ತುಳು ಚಿತ್ರರಂಗದ ಹೆಸರಾಂತ ಕಲಾವಿದ ತುಳುವೆರೆ ಮಾಣಿಕ್ಯ ಬಿರುದಾಂಕಿತ ಅರವಿಂದ ಬೋಳಾರ್‌ ನುಡಿದರು.

ಜೂ. 16ರಂದು ನಮ ತುಳುವೆರ್‌ ಪುಣೆ ಸಂಸ್ಥೆಯ ಸಂಸ್ಥಾಪಕ ಸೂರ್ಯ ಪೂಜಾರಿ ಇವರ ನೇತೃತ್ವದಲ್ಲಿ ತುಳುವರಿಗಾಗಿ ಪ್ರಥಮ ಬಾರಿಗೆ ಬಾಣೇರ್‌ನ ಪುಣೆ ಬಂಟರ ಭವನದಲ್ಲಿ ಜರಗಿದ “ಮಿಸ್ಟರ್‌ ಅÂಂಡ್‌ ಮಿಸ್‌ ಫೇಸ್‌ ಆಫ್‌ ತುಳುನಾಡು-19 ಫ್ಯಾಶನ್‌ ಮೆಗಾ ಫಿನಾಲೆ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಇಷ್ಟು ಎತ್ತರಕ್ಕೆ ಬೆಳೆಯಲು ಕಲಾಭಿಮಾನಿಗಳಿಂದ ಸಿಕ್ಕಿದ ವರವೂ ಹೌದು. ಸಾಧನೆಯಿಂದ ಹೆಸರು ಬರಬೇಕೆ ಹೊರತು ಹೆಸರಿನಿಂದ ಸಾಧನೆಯಾಗುತ್ತೆ ಎಂದು ತಿಳಿಯಬಾರದು. ಸಾಧನೆ ಮಾಡುವ ಛಲವಿದ್ದರೆ ನಿರೀಕ್ಷೆಗೂ ಮೀರಿ ಬೆಳೆಯಬಹುದು. ಸೂರ್ಯ ಪೂಜಾರಿ ಮತ್ತು ತಂಡದವರು ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಮುಂದೆ ಇನ್ನು ಉತ್ತಮೋತ್ತಮ ಕಾರ್ಯಗಳು ನಿಮ್ಮಿಂದಾಗಲಿ ಎಂದು ಹಾರೈಸಿದರು

ನಮ ತುಳುವೆರ್‌ ಸಂಸ್ಥಾಪಕ ಸೂರ್ಯ ಪೂಜಾರಿ ಕಾರ್ಕಳ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ, ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್‌ಬೆಟ್ಟು ಸಂತೋಷ ಶೆಟ್ಟಿ, ಗೌರವ ಅತಿಥಿಗಳಾಗಿ ಥಾಣೆ ಮನಪಾ ಮೇಯರ್‌ ಮೀನಾಕ್ಷಿ ಶಿಂಧೆ ಪೂಜಾರಿ, ಲೋನಾವಾಲ ನಗರ ಪಾಲಿಕೆಯ ಉಪಾಧ್ಯಕ್ಷ ಶ್ರೀಧರ ಪೂಜಾರಿ, ಪುಣೆ ತುಳು ಕೂಟದ ಅಧ್ಯಕ್ಷ ಮೋಹನ್‌ ಶೆಟ್ಟಿ ಎಣ್ಣೆಹೊಳೆ, ಉದ್ಯಮಿ ಸಿ. ಎ. ಗಿರೀಶ್‌ ಪೂಜಾರಿ, ಪುಣೆ ಬಂಟ್ಸ್‌ ಅಸೋಸಿಯೇಶನ್‌ನ ಮಹಿಳಾ ವಿಭಾಗದ ಅಧ್ಯಕ್ಷೆ ದೀಪಾ ಎ. ರೈ, ಸಮಾಜ ಸೇವಕಿ ನೂತನ್‌ ಸುವರ್ಣ, ನಮ ತುಳುವೆರ್‌ ಉಪಾಧ್ಯಕ್ಷ ಅಜಿತ್‌ ಶೆಟ್ಟಿ ಉಪಸ್ಥಿತರಿದ್ದರು.

ಅತಿಥಿ-ಗಣ್ಯರು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಅತಿಥಿ-ಗಣ್ಯರುಗಳನ್ನು ಸೂರ್ಯ ಪೂಜಾರಿ ಮತ್ತು ತಂಡದವರು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ನಮನ ಫ್ರೆಂಡ್ಸ್‌ ಮುಂಬಯಿ ಸಂಸ್ಥಾಪಕ ಪ್ರಭಾಕರ ಬೆಳುವಾಯಿ ಮತ್ತು ಸದಸ್ಯರು ಸೂರ್ಯ ಪೂಜಾರಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸಮ್ಮಾನ ಪತ್ರ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. “ಮಿಸ್ಟರ್‌ ಆ್ಯಂಡ್‌ ಮಿಸ್‌ ಫೇಸ್‌ ಆಫ್‌ ತುಳುನಾಡು -19′ ಕಾರ್ಯಕ್ರಮದ ಆಯೋಜನೆಗೆ ಎÇÉಾ ವಿಧದಲ್ಲಿ ಸಹಕರಿಸಿದ ಮುಂಬಯಿ, ಪುಣೆ ಹಾಗು ಊರಿನ ಮಹಾನಿಯರನ್ನು ಸೂರ್ಯ ಪೂಜಾರಿ ಮತ್ತು ತಂಡದವರು ಪುಷ್ಪಗುತ್ಛ, ಸ್ಮರಣಿಕೆ ನೀಡಿ ಗೌರವಿಸಿದರು.

ಅತಿಥಿಯಾಗಿ ಆಗಮಿಸಿದ ಸಮಾಜ ಸೇವಕಿ ನೂತನ್‌ ಸುವರ್ಣ ಅವರು ಮಾತನಾಡಿ, ಯಾವುದೇ ಕಾರ್ಯಸಿದ್ಧಿಯಾಗಲು ಸ್ವಪರಿಶ್ರಮ ಬೇಕು. ಛಲದಿಂದ ಸಾರ್ಥಕತೆಯನ್ನು ಪಡೆಯಬಹುದು. ಪುಣೆಯಲ್ಲಿ ನಮ್ಮ ತುಳುನಾಡಿನ ಪ್ರತಿಭೆಗಳ ಫ್ಯಾಶನ್‌ ಶೋ ವೈವಿಧ್ಯಮಯವಾಗಿ ನಡೆದಿದೆ. ಮನಸ್ಸಿಗೆ ತುಂಬಾ ಸಂತೋಷವಾಗುತಿದೆ. ಸೂರ್ಯ ಪೂಜಾರಿ ಅವರ ತಂಡದವರ ಪರಿಶ್ರಮವನ್ನು ಮೆಚ್ಚಲೆಬೇಕು ಎಂದು ನುಡಿದು ಅವರನ್ನು ಅಭಿನಂದಿಸಿದರು.

ಇನ್ನೋರ್ವೆ ಅತಿಥಿ ಬಂಟ್ಸ್‌ ಅಸೋಸಿಯೇಶನ್‌ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೀಪಾ ಎ. ರೈ ಅವರು ಮಾತನಾಡಿ, ಈ ಅದ್ಭುತ ಕಲ್ಪನೆಯ ಮತ್ತು ಮನೋರಂಜನೆಯಿಂದ ಕೂಡಿದ ಸ್ಪರ್ಧಾತ್ಮಕವಾದ, ಅಚ್ಚು ಕಟ್ಟಾದ ಕಾರ್ಯಕ್ರಮದ ಬಗ್ಗೆ ಹೊಗಳಲು ಮಾತುಗಳೇ ಬರುತ್ತಿಲ್ಲ. ತುಳುವರಿಗಾಗಿ ಆಯೋಜಿಸಿದ್ದ ಇಂತಹ ಅಪರೂಪಕೊಮ್ಮೆ ನಡೆಯುವ ಸ್ಟೇಜ್‌ ಶೋಗೆ ತಪ್ಪದೆ ತುಳುವರೆಲ್ಲರು ಬರಬೇಕು. ಸೂರ್ಯ ಪೂಜಾರಿ, ಅಜಿತ್‌ ಶೆಟ್ಟಿ, ಸನ್ನಿಧ್‌ ಪೂಜಾರಿಯವರ ಸಾಧನೆ ಇತರರಿಗೆ ಮಾದರಿಯಾಗಿದೆ ಎಂದರು.

ಯಶಸ್ಸಿನ ನಿರೀಕ್ಷೆಯಲ್ಲಿ ಕಾರ್ಯನಿರ್ವಹಿಸಬೇಕು: ಸೂರ್ಯ ಪೂಜಾರಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ನಮ ತುಳುವೆರ್‌ ಸಂಘಟನೆಯ ಸೂರ್ಯ ಪೂಜಾರಿ ಕಾರ್ಕಳ ಅವರು, ಒಬ್ಬ ವ್ಯಕ್ತಿ ತನ್ನಲ್ಲಿರುವ ದೈಹಿಕ ಶಕ್ತಿ, ಭರವಸೆ, ಛಲ ಮತ್ತು ಮನೋಬಲದಲ್ಲಿ ವಿಶ್ವಾಸ ಹೊಂದಿ ಯಾವುದೇ ಕಾರ್ಯಯೋಜನೆಗೆ ಇಳಿದರೆ ಯಶಸ್ಸು ಖಂಡಿತವಾಗಿ ದೊರೆಯುತ್ತದೆ. ಇದಕ್ಕೆ ನಮ್ಮವರು ಬೆನ್ನೆಲುಬಾಗಿ ನಿಂತು ಸಂಪೂರ್ಣ ಪ್ರೋತ್ಸಾಹ ಸಿಕ್ಕಿದರೆ ಅದು ಮತ್ತಷ್ಟು ಗರಿಗೆದರಿ ದೊಡ್ಡ ಮಟ್ಟದಲ್ಲಿ ಬೆಳೆಯಬಹುದು ಎಂಬುವುದಕ್ಕೆ ಇಂದಿನ ಸಮಾರಂಭ ಸಾಕ್ಷಿಯಾಗಿದೆ. ಅಂತರ್‌ಜಾಲದಲ್ಲಿ ಮತ್ತು ಸಾರ್ವಜನಿಕವಾಗಿ ಸಣ್ಣಪುಟ್ಟ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಿ ನನ್ನಲ್ಲಿ ಧೈರ್ಯ ತಂದುಕೊಂಡಿದ್ದೆ. ಆತ್ಮೀಯರ ಸಲಹೆ ಸೂಚನೆಯಂತೆ ಈ ದೊಡ್ಡ ಮಟ್ಟದ ಮಿಸ್ಟರ್‌ ಆ್ಯಂಡ್‌ ಮಿಸ್‌ ಫೇಸ್‌ ಆಫ್‌ ತುಳುನಾಡು ಕಾರ್ಯಕ್ರಮ ಆಯೋಜನೆಗೆ ಪ್ರೇರಣೆಯಾಯಿತು. ನಮ್ಮ ಭರವಸೆ ಫಲ ನೀಡಿತು. ನಮ್ಮ ಸಣ್ಣ ಅಥವಾ ದೊಡ್ಡ ಮಟ್ಟದ ಯಾವುದೇ ಕಾರ್ಯಕ್ರಮವಿರಲಿ ಯಶಸ್ವಿನ ನೀರಿಕ್ಷೆಯೊಂದಿಗೆ ಇಳಿಯಬೇಕು. ಈ ಫ್ಯಾಶನ್‌ ಶೋಗೆ ಅಜಿತ್‌ ಶೆಟ್ಟಿ ಸೇರಿದಂತೆ ನಮ್ಮ ತಂಡವರು, ಕೊರಿಯೋಗ್ರಾಫರ್‌ ಸನ್ನಿಧ್‌ ಪೂಜಾರಿ ಅವರ ಪರಿಶ್ರಮ ಮತ್ತು ಹಿತೈಷಿಗಳ ಸಹಕಾರ ಸಿಕ್ಕಿದೆ ಅವರಿಗೆÇÉಾ ನನ್ನ ಅಭಿನಂದನೆಗಳು ಎಂದು ನುಡಿದರು.
“ಮಿಸ್ಟರ್‌ ಆ್ಯಂಡ್‌ ಮಿಸ್‌ ಫೇಸ್‌ ಆಫ್‌ ತುಳುನಾಡು -19′ ಮೆಗಾ ಫಿನಾಲೆ ಕಾರ್ಯಕ್ರಮದ ಫ್ಯಾಶನ್‌ ಕೊರಿಯೋಗ್ರಾಫರ್‌, ರುದ್ರ ಎಂಟಟೈನ್‌ಮೆಂಟ್‌ನ ಸನ್ನಿಧ್‌ ಪೂಜಾರಿ ಅವರು ಫ್ಯಾಶನ್‌ ಶೋವನ್ನು ನಡೆಸಿಕೊಟ್ಟರು. 12 ಯುವಕರು ಹಾಗು 10 ಯುವತಿಯರು ಕೊನೆಯ ಸುತ್ತಿನ ಸ್ಪರ್ಧಾಕಣದಲ್ಲಿದ್ದರು. ಮಂಗಳೂರು ಡಾನ್ಸ್‌ ಸ್ಟಾರ್‌ ತಂಡದವರಿಂದ ಮತ್ತು ಇತರೆ ತಂಡದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ತುಳುನಾಡಿನ ಹೆಸರಾಂತ ಕಾರ್ಯಕ್ರಮ ನಿರೂಪಕರಾದ ನಿತೇಶ್‌ ಶೆಟ್ಟಿ ಎಕ್ಕಾರ್‌ ಹಾಗೂ ದೀಪಕ್‌ ಶೆಟ್ಟಿ ಅವರು ಕಾರ್ಯಕ್ರಮದ ನಿರ್ವಹಿಸಿದರು.

ದೇವರ ಸೇವೆ ಎಂದು ನಂಬಿ ಸಮಾಜಕ್ಕಾಗಿ ಮಾಡುವ ನಮ್ಮ ಯಾವುದೇ ಕಠಿನ ಕಾರ್ಯವು ಕೈಗೂಡುತ್ತದೆ ಎಂಬುವುದಕ್ಕೆ ಈ ಬಂಟರ ಭವನವೇ ಸಾಕ್ಷಿ. ಈ ಆಡಿಟೋರಿಯಂನಲ್ಲಿ ನಡೆದ ಇಂತಹ ಕಾರ್ಯಕ್ರಮವನ್ನು ತುಳುನಾಡಿನ ಸಂಸ್ಕಾರ, ಸಂಸ್ಕೃತಿಯೊಂದಿಗೆ ಹೊಸ ರೂಪವನ್ನು ಕೊಟ್ಟು ಅದ್ಭುತವಾಗಿ ಸಂಯೋಜಿಸಿದ್ದಾರೆ. ಇದು ಸ್ಪರ್ಧಾ ಕಣದಲ್ಲಿರುವವರಿಗೆ ಪ್ರತಿಷ್ಠೆಗೆ ಪೂರಕವಾಗಿ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗವಾಗಲಿದೆ. ಯುವ ಜನತೆ ಇನ್ನಷ್ಟು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಬಹುದು. ಎಷ್ಟೋ ದಿನದ ಪರಿಶ್ರಮ, ಸವಾಲುಗಳನ್ನು ಎದುರಿಸಿ ಸೂರ್ಯ ಪೂಜಾರಿ ಮತ್ತು ತಂಡದವರು ಉತ್ಕೃಷ್ಟ ಮಟ್ಟದ ಕಾರ್ಯಕ್ರಮವನ್ನು ನೀಡಿ ಮಾದರಿಯಾಗಿದ್ದಾರೆ.
– ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು , ಅಧ್ಯಕ್ಷರು,ಬಂಟರ ಸಂಘ ಪುಣೆ

ಎÇÉಾ ತುಳು ಬಾಂಧವರನ್ನು ಒಟ್ಟು ಸೇರಿಸಿಕೊಂಡು ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮ ಸಂಯೋಜನೆಯಲ್ಲಿ ತುಳುವರ ಚಾಣಾಕ್ಷತೆಯನ್ನು ಮೆಚ್ಚಲೇಬೇಕು. ಕಾರ್ಯಕ್ರಮವನ್ನು ಕಂಡಾಗ ಮನಸ್ಸಿಗೆ ತುಂಬಾ ಸಂತೋಷವಾಗುತ್ತಿದೆ. ತುಳುವರ ವಿವಿಧ ಕಾರ್ಯಕ್ರಮಗಳಿಗೆ ಪ್ರೀತಿ ಪೂರ್ವಕವಾದ ಗೌರವವನ್ನು ನೀಡುತ್ತಾರೆ. ಇಂತಹ ಅಚ್ಚುಕಟ್ಟಾದ ಕಾರ್ಯಕ್ರಮದ ಈ ವೇದಿಕೆಗೆ ಆಹ್ವಾನಿಸಿದಕ್ಕೆ ಅಭಿನಂದನೆಗಳು.
– ಮೀನಾಕ್ಷಿ ಶಿಂಧೆ ಪೂಜಾರಿ, ಮೇಯರ್‌ , ಥಾಣೆ ಮಹಾನಗರ ಪಾಲಿಕೆ

ತುಳು ನಮ್ಮ ಸಂಸ್ಕೃತಿಯ ಯಾವುದೇ ಕಾರ್ಯಕ್ರಮಕ್ಕೆ ಹೋದರು ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ. ತುಳುವರ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ವಿಶೇಷತೆಯನ್ನು ಕಾಣುತ್ತೇನೆ. ಸಂಸ್ಕೃತಿಯ ಜೊತೆ ಜೊತೆಯಲ್ಲಿ ಪ್ರಸ್ತುತಗೊಂಡ ಇಂದಿನ ಕಾರ್ಯಕ್ರಮದಲ್ಲಿ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಆಯೋಜಕರ ಕಾರ್ಯ ಶ್ಲಾಘನೀಯವಾಗಿದೆ.
– ಶ್ರೀಧರ ಪೂಜಾರಿ, ಉಪಾಧ್ಯಕ್ಷರು,
ಲೋನವಾಲ ನಗರ ಪಾಲಿಕೆ

ಪುಣೆಯಲ್ಲಿ ಪ್ರಥಮ ಬಾರಿಗೆ ಇಂತಹ ಕಾರ್ಯಕ್ರಮವನ್ನು ಸೂರ್ಯ ಪೂಜಾರಿ, ಅಜಿತ್‌ ಶೆಟ್ಟಿ, ಸನ್ನಿಧ್‌ ಪೂಜಾರಿ ಅವರು ಉತ್ತಮ ರೀತಿಯಲ್ಲಿ ಆಯೋಜಿಸಿ¨ªಾರೆ. ಸುಮಾರು ಏಳೆಂಟು ತಿಂಗಳುಗಳ ಅವರ ಪರಿಶ್ರಮದ ಫಲ ಇದಾಗಿದೆ. ತುಳುನಾಡಿನ ಭವ್ಯ ಪರಂಪರೆಗೆ ಭಾಷೆ, ಕಲೆ, ಸಂಸ್ಕೃತಿಗೆ ಒತ್ತು ಕೊಟ್ಟು ಮತ್ತು ಮಹತ್ವವನ್ನು ಅರಿತು ಮುಂಬಯಿ, ಪುಣೆ ಮತ್ತು ಊರಿನ ಸ್ಪರ್ಧಾಳುಗಳ ಸಂಗಮ ಆಗುವಂತೆ ಮಾಡಿ¨ªಾರೆ. ಯುವಕ, ಯುವತಿಯರ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಿಕೊಟ್ಟಿ¨ªಾರೆ. ನಮ್ಮ ತುಳುನಾಡಿನ ಸಂಸ್ಕೃತಿಯ ಅನಾವರಣ ಇಲ್ಲಿ ನಡೆದಿದೆ. ಇನ್ನು ಮುಂದೆಯೂ ಉತ್ತಮವಾದ ಕಾರ್ಯಕ್ರಮಗಳು ನಮ ತುಳುವೆರ್‌ ಸಂಘಟನೆಯ ಮೂಲಕ ನಡೆಯುತ್ತಿರಲಿ.
– ವಿಶ್ವನಾಥ್‌ ಪೂಜಾರಿ ಕಡ್ತಲ, ಅಧ್ಯಕ್ಷರು,ಬಿಲ್ಲವ ಸಂಘ ಪುಣೆ

ಚಿತ್ರ-ವರದಿ : ಹರೀಶ್‌ ಮೂಡಬಿದ್ರೆ ಪುಣೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ