ಮನಸ್ಸು ಚಟುವಟಿಕೆಯಿಂದ ಕೂಡಿದಾಗ ಆರೋಗ್ಯ ವೃದ್ಧಿ: ಪ್ರೇಮಾ ರಾವ್‌

ಕನ್ನಡ ಸಂಘ ಸಾಂತಾಕ್ರೂಜ್‌ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

Team Udayavani, Jan 23, 2020, 6:13 PM IST

ಮುಂಬಯಿ : ಧಾರ್ಮಿಕ ಹಿನ್ನಲೆಯಿರುವ ಅರಸಿನ ಕುಂಕುಮ ಕಾರ್ಯಕ್ರಮ ಒಂದು ಕಾಲದಲ್ಲಿ ಮಹಿಳೆಯರ ಮನೆ ಮನೆಗೆ ಹೋಗಿ ನಡೆಸುವ ಪದ್ಧತಿಯಿತ್ತು. ಆದರೆ ಈಗ ಸಮಯದ ಅಭಾವ ಇರುವ ಕಾರಣ ಒಂದೇ ಜಾಗದಲ್ಲಿ ಮಹಿಳೆಯರನ್ನು ಒಗ್ಗೂಡಿಸಿ ಆಚರಿಸುವ ಈ ಸಂಭ್ರಮ ಜೀವಕಳೆ ಹೊಂದಿದೆ.

ಇಲ್ಲಿ ಬಹುಸಂಖ್ಯೆಯ ಮಹಿಳೆಯರಿದ್ದು ಪರಸ್ಪರ ಕುಶಲೋಪರಿ ವಿಚಾರಿಸಿ ಸುಖ-ದುಃಖಗಳಲ್ಲೂ ಭಾಗಿಯಾಗುವ ಅವಕಾಶವೂ ಆಗುತ್ತದೆ. ಇಂತೆಲ್ಲಾ ಕಾರ್ಯಕ್ರಮಗಳಿಂದಾದರೂ ಮಹಿಳೆ ಯರು ತಮ್ಮ ಮನಸ್ಸನ್ನು ಸದಾ ಚಟುವಟಿಕೆ
ಯಲ್ಲಿರಿಸಬೇಕು. ಯೌವ್ವನಾವಸ್ಥೆಯಲ್ಲಾಗಲಿ ಅಥವಾ ವಿಶ್ರಾಂತಿ ಜೀವನದಲ್ಲಾಗಲಿ ನಮ್ಮ
ಬಾಲ್ಯವನ್ನು ಮರುಕಳಿಸಿಕೊಂಡಾಗ ನಾವು ಸ್ವತಃ ಸಂಸ್ಕಾರಯುತ, ಸಂಸ್ಕೃತಿವುಳ್ಳರಾಗುತ್ತೇವೆ. ಯಾವುದೇ ಕಾರ್ಯಕ್ರಮದ ಯಶಸ್ಸಿನ ಮೂಲವೇ ಮನಸ್ಸು ಆಗಿದೆ. ಆದ್ದರಿಂದ ಮಹಿಳೆ ಯರು ಮೂಲ ಮನಸ್ಸುವುಳ್ಳವರಾಗಿರಬೇಕು.

ಮನಸ್ಸು ಚಟುವಟಿಕೆಗಳಿಂದ ಕೂಡಿದಾಗ ಮನುಷ್ಯನು ಆರೋಗ್ಯವಂತನಾಗಿ ನೆಮ್ಮದಿಯ
ಜೀವನ ನಡೆಸಲು ಸಾಧ್ಯವಿದೆ ಎಂದು ಬಿಎಸ್‌ ಕೆಬಿ ಅಸೋಸಿಯೇಶನ್‌ ಗೋಕುಲ ಇದರ
ಮಹಿಳಾ ವಿಭಾಗದ ಅಧ್ಯಕ್ಷೆ ಐ. ಕೆ. ಪ್ರೇಮಾ ಎಸ್‌.ರಾವ್‌ ತಿಳಿಸಿದರು.

ಜ. 21ರಂದು ಸಂಜೆ ಕನ್ನಡ ಸಂಘ ಸಾಂತಾಕ್ರೂಜ್‌ ಸಂಸ್ಥೆಯ ವತಿಯಿಂದ ಸಾಂತಾಕ್ರೂಜ್‌ ವಕೋಲಾದ ಬಾಂದ್ರಾ ಹಿಂದು ಅಸೋಸಿಯೇಶನ್‌ನ ಸಭಾಗೃಹದಲ್ಲಿ ನಡೆದ ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಎಲ್‌. ವಿ. ಅಮೀನ್‌ ಅವರ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಚಿಣ್ಣರ ಬಿಂಬದ ಪ್ರಧಾನ ನಿರ್ದೇಶಕಿ ರೇಣುಕಾ ಪ್ರಕಾಶ್‌ ಭಂಡಾರಿ, ಬಂಟ್ಸ್‌ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್‌ ಹೆಗ್ಡೆ, ಇತರ ಪದಾಧಿಕಾರಿಗಳಾದ ಮನೋರಮಾ ಎನ್‌. ಬಿ. ಶೆಟ್ಟಿ, ಲತಾ ಪ್ರಭಾಕರ್‌ ಶೆಟ್ಟಿ, ರತ್ನಾ ಪಿ. ಶೆಟ್ಟಿ, ಪ್ರಮೋದಾ ಎಸ್‌. ಶೆಟ್ಟಿ ಅವರು ಅತಿಥಿಗಳಾಗಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗೌರವ ಪ್ರಧಾನ ಕೋಶಾಧಿಕಾರಿ ಸುಧಾಕರ್‌ ಉಚ್ಚಿಲ್‌, ಜೊತೆ
ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್‌, ಕಾರ್ಯಕಾರಿ ಸಮಿತಿಯ ಸದಸ್ಯರಾದ ಜಿ.
ಆರ್‌. ಬಂಗೇರಾ, ಶಿವರಾಮ ಎಂ. ಕೋಟ್ಯಾನ್‌, ಸುಮಾ ಎಂ. ಪೂಜಾರಿ, ಶಾಲಿನಿ ಎಸ್‌. ಶೆಟ್ಟಿ,
ವಿಜಯಕುಮಾರ್‌ ಕೆ. ಕೋಟ್ಯಾನ್‌, ಲಿಂಗಪ್ಪ ಬಿ. ಅಮೀನ್‌, ಉಷಾ ವಿ. ಶೆಟ್ಟಿ, ಶಿಕ್ಷಣ
ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್‌, ಕಾರ್ಯದರ್ಶಿ ಶಕೀಲಾ ಪಿ.
ಶೆಟ್ಟಿ, ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಸ್ಥಾನೀಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಮಹಿಳಾವೃಂದದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಾಮಾಜಿಕ
ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ವನಿತಾ ವೈ. ನೋಂಡಾ ಸ್ವಾಗತಿಸಿದರು. ಸಂಘದ ಗೌ| ಪ್ರ| ಕಾರ್ಯದರ್ಶಿ ಸುಜಾತಾ ಆರ್‌. ಶೆಟ್ಟಿ ಪ್ರಸ್ತಾವನೆಗೈದು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ಎನ್‌. ಕೋಟ್ಯಾನ್‌ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟು ವಂದಿಸಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಶೈಲಿನಿ ರಾವ್‌, ಡಾ| ಸಹನಾ ಪೋತಿ ಮತ್ತಿತರ ಗಣ್ಯ ಮಹಿಳೆಯರು ಉಪಸ್ಥಿತರಿದ್ದರು. ಧಾರ್ಮಿಕ ವಿಧಿಯನುಸಾರ ಉಪಸ್ಥಿತ ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ