ಮುಂಬಯಿ: ಪ್ರಕರಣಗಳ ಜತೆ ಚೇತರಿಕೆಯೂ ಹೆಚ್ಚಳ


Team Udayavani, Sep 29, 2020, 6:09 PM IST

ಮುಂಬಯಿ: ಪ್ರಕರಣಗಳ ಜತೆ ಚೇತರಿಕೆಯೂ ಹೆಚ್ಚಳ

ಮುಂಬಯಿ, ಸೆ. 28: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಸ್ಥಿರ ಏರಿಕೆಯ ಮಧ್ಯೆ ಚೇತರಿಕೆ ದರ ಸುಧಾರಿಸುತ್ತಿದ್ದು, ಮುಂಬಯಿಯಲ್ಲಿ ಸೆಪ್ಟೆಂಬರ್‌ ಮಧ್ಯದಲ್ಲಿ ಶೇ. 75ಕ್ಕೆ ಇಳಿದಿದ್ದ ಚೇತರಿಕೆ ಪ್ರಮಾಣ ಮತ್ತೂಮ್ಮೆ ಶೇ. 81ಕ್ಕೆ ಏರಿದೆ. ಕೋವಿಡ್ ಪರೀಕ್ಷೆಯ ಹೆಚ್ಚಳದಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂದು ಬಿಎಂಸಿ ಹೆಚ್ಚುವರಿ ಆಯುಕ್ತ ಸುರೇಶ್‌ ಕಾಕಾನಿ ಹೇಳಿದ್ದು, ಆದರೆ ಚೇತರಿಕೆ ದರ ಉತ್ತಮಗೊಳ್ಳುತ್ತಿದೆ. ಕ್ರಮೇಣ ಬೆಳವಣಿಗೆ ದರವೂ ಸುಧಾರಿಸುತ್ತಿದೆ ಎಂದು ತಿಳಿಸಿದ್ದಾರೆ.

ಸೆಪ್ಟಂಬರ್‌ 26ರ ವರೆಗೆ ಮುಂಬಯಿಯಲ್ಲಿ 1,58,749 ಮಂದಿ ಸೋಂಕಿ ನಿಂದ ಚೇತರಿಸಿಕೊಂಡಿದ್ದು, ಪರಿಣಾಮ ಚೇತರಿಕೆ ಪ್ರಮಾಣವು ಶೇ. 81ಕ್ಕೆ ಏರಿದೆ. ಕೋವಿಡ್ ಬೆಳವಣಿಗೆಯ ದರವು ಶೇ. 1.07ರಷ್ಟಿದ್ದರೆ, ದ್ವಿಗುಣಗೊಳಿಸುವಿಕೆ ಪ್ರಮಾಣ ಸುಧಾರಿಸಿದೆ. ಕೆಲವು ದಿನಗಳ ಹಿಂದೆ ದ್ವಿಗುಣಗೊಳಿಸುವ ದರವು 56 ದಿನಗಳಲ್ಲಿತ್ತು. ಪ್ರಸ್ತುತ 65 ದಿನಗಳಿಗೆ ಏರಿಕೆಯಾಗಿದೆ.

ಬೊರಿವಲಿ, ಮಲಾಡ್‌, ಅಂಧೇರಿಯಲ್ಲಿ ಅತಿ ಹೆಚ್ಚು ಚೇತರಿಕೆ : ಮುಂಬಯಿಯ ಬೊರಿವಲಿ ಮಲಾಡ್ ಮತ್ತು ಅಂಧೇರಿಯಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರಿದ್ದು, ಆದರೆ ಈ ಪ್ರದೇಶಗಳಲ್ಲಿ ಹೆಚ್ಚಿನ ಮಂದಿ ಚೇತರಿಸಿಕೊಂಡಿದ್ದಾರೆ. ಬೊರಿವಲಿ 12,000 ಕೋವಿಡ್ ಸೋಂಕಿತರ ಗಡಿ ದಾಟಿದ ಮೊದಲ ವಾರ್ಡ್‌ ಆಗಿದ್ದು, ಇಲ್ಲಿ 9,613 ಮಂದಿ ಚೇತರಿಸಿಕೊಂಡಿದ್ದಾರೆ. ಮಲಾಡ್‌

ಪ್ರದೇಶದಿಂದಲೂ ಈವರೆಗ 9,519 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಮುಂಬಯಿಯ ಕೋವಿಡ್ ಸಂಖ್ಯೆಯಲ್ಲಿ ಮಲಾಡ್‌ 3ನೇ ಸ್ಥಾನದಲ್ಲಿದೆ. ಇಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 11,403ಕ್ಕೆ ಏರಿದ್ದು, 1,472 ಸಕ್ರಿಯ ಪ್ರಕರಣಗಳಿವೆ. ಅಂಧೇರಿ ಪಶ್ಚಿಮ ಪ್ರದೇಶದಲ್ಲಿ 11,539 ಮಂದಿ ಸೋಂಕಿತರು ಪತ್ತೆಯಾಗಿದ್ದು, ಈ ಪೈಕಿ 9,230 ಮಂದಿ ಚೇತರಿಸಿಕೊಂಡಿದ್ದಾರೆ. 1,914 ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾದರ್‌ ಮತ್ತು ಮಹೀಮ್‌ನಲ್ಲಿ ಹೆಚ್ಚುತ್ತಿರುವ ಸೋಂಕು : ಧಾರಾವಿ, ದಾದರ್‌ ಮತ್ತು ಮಹೀಮ್‌ ವಾರ್ಡ್‌ಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10,302ಕ್ಕೆ ತಲುಪಿದ್ದು, ಇತ್ತೀಚಿನ ದಿನಗಳಲ್ಲಿ ದಾದರ್‌ ಮತ್ತು ಮಹೀಂನಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ಈ ವಾರ್ಡ್ ನಲ್ಲಿರುವ ಕೋವಿಡ್ ಚೇತರಿಕೆ ಸಂಖ್ಯೆ 8,545ಕ್ಕೆ ಏರಿದ್ದು, 1,208 ಸಕ್ರಿಯ ಪ್ರಕರಣಗಳಿವೆ. ಉತ್ತರ ಮುಂಬಯಿಯ ಕಾಂದಿವಲಿ ಪ್ರದೇಶದಲ್ಲಿ 10,094 ಮಂದಿ ಕೋವಿಡ್ ಸೋಮಕಿತರು ಪತ್ತೆಯಾಗಿದ್ದಾರೆ. ಮುಂಬಯಿಯಲ್ಲಿ 8,042 ಮಂದಿ ಸಾವನ್ನಪ್ಪಿದ್ದರೆ, 1,762 ಮಂದಿ ಸೋಂಕಿತರು ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾಂಡೂಪ್‌ ಮತ್ತು ಘಾಟ್ಕೊಪರ್‌ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 9 ಸಾವಿರ ದಾಟಿದ್ದು, 7 ಸಾವಿರಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ. ಗ್ರ್ಯಾಂಟ್‌ ರೋಡ್‌ ವಾರ್ಡ್‌ನಲ್ಲಿ 7 ಸಾವಿರಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿ ಕೋವಿಡ್ ರೋಗಿಗಳ ಸಂಖ್ಯೆ 8 ಸಾವಿರಕ್ಕಿಂತ ಹೆಚ್ಚಿದೆ.

ಮುಲುಂಡ್‌ ಮತ್ತು ಪರೇಲ್‌ ಪ್ರದೇಶದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ 8 ಸಾವಿರಕ್ಕಿಂತ ಹೆಚ್ಚಿದ್ದರೆ, 6 ಸಾವಿರಕ್ಕೂ ಹೆಚ್ಚು ಮಂದಿ ಕೋವಿಡ್ ದಿಂದ ಚೇತರಿಸಿಕೊಂಡಿದ್ದಾರೆ. ವರ್ಲಿ, ಕುರ್ಲಾ ಮತ್ತು ವಡಾಲಾ ಪ್ರದೇಶಗಳಲ್ಲಿ ಕೋವಿಡ್ ದಿಂದ ಚೇತರಿಸಿಕೊಳ್ಳುವವರ ಸಂಖ್ಯೆ 6 ಸಾವಿರಕ್ಕಿಂತ ಹೆಚ್ಚಿದೆ. ಮುಂಬಯಿಯ ಸ್ಯಾಂಡ್‌ಹರ್ಸ್ಡ್ ರೋಡ್‌ ಪ್ರದೇಶದಲ್ಲಿ 1,608 ಮಂದಿ ರೋಗಿಗಳಿದ್ದು, ಇಲ್ಲಿ 1,282 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, 225 ಸಕ್ರಿಯ ಪ್ರಕರಣಗಳಿವೆ.

ಟಾಪ್ ನ್ಯೂಸ್

ಮತಾಂತರ ಯತ್ನ: ಕೇರಳದ ದಂಪತಿ ವಿರುದ್ಧ ಪ್ರಕರಣ ದಾಖಲು

ಮತಾಂತರ ಯತ್ನ: ಕೇರಳದ ದಂಪತಿ ವಿರುದ್ಧ ಪ್ರಕರಣ ದಾಖಲು

ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

Murder-aa

ವಂಡಾರು: ಪತಿಯಿಂದ ಪತ್ನಿ ಕೊಲೆ: ಪ್ರಕರಣ ದಾಖಲು

ಆದಿಉಡುಪಿ: ಇಬ್ಬರಿಗೆ ಬೀದಿ ನಾಯಿ ಕಡಿತ; ಜನರಲ್ಲಿ ಆತಂಕ

ಆದಿಉಡುಪಿ: ಇಬ್ಬರಿಗೆ ಬೀದಿ ನಾಯಿ ಕಡಿತ; ಜನರಲ್ಲಿ ಆತಂಕ

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ

ತೊಕ್ಕೊಟ್ಟು: ಸ್ಕೂಟರ್‌ ಕಳ್ಳರಿಬ್ಬರ ಬಂಧನ

ತೊಕ್ಕೊಟ್ಟು: ಸ್ಕೂಟರ್‌ ಕಳ್ಳರಿಬ್ಬರ ಬಂಧನ

ಮಾರ್ಕೋನಹಳ್ಳಿ ಜಲಾಶಯ ಭರ್ತಿ : ರೈತರಲ್ಲಿ ಮುಖದಲ್ಲಿ ಮಂದಹಾಸ

ಮಾರ್ಕೋನಹಳ್ಳಿ ಜಲಾಶಯ ಭರ್ತಿ: ರೈತರಲ್ಲಿ ಮಂದಹಾಸ, ಜಲಾಶಯದ ಒಳಹರಿವು 2200 ಕ್ಯೂಸೆಕ್ಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

ಇಷ್ಟಲಿಂಗ ಪೂಜೆಯಿಂದ ಭವಬಂಧನದ ಮುಕ್ತಿ ಸಾಧ್ಯ

ಇಷ್ಟಲಿಂಗ ಪೂಜೆಯಿಂದ ಭವಬಂಧನದ ಮುಕ್ತಿ ಸಾಧ್ಯ

ಪತ್ರಕರ್ತರಿಂದ ತುಂಬಾ ಪ್ರೇರಿತನಾಗಿರುವೆ

ಪತ್ರಕರ್ತರಿಂದ ತುಂಬಾ ಪ್ರೇರಿತನಾಗಿರುವೆ

ಶತಮಾನದ ಶ್ರೇಷ್ಠ ಸಾಧನೆ “ಗೋಕುಲ’: ಚಂದ್ರಹಾಸ ಕೆ. ಶೆಟ್ಟಿ

ಶತಮಾನದ ಶ್ರೇಷ್ಠ ಸಾಧನೆ “ಗೋಕುಲ’: ಚಂದ್ರಹಾಸ ಕೆ. ಶೆಟ್ಟಿ

ಗೋಕುಲ ಆಧ್ಯಾತ್ಮಿಕ ಆಕರ್ಷಣೆಯ ಕೇಂದ್ರ: ಪಂ| ವಿದ್ಯಾಸಿಂಹಾಚಾರ್ಯ

ಗೋಕುಲ ಆಧ್ಯಾತ್ಮಿಕ ಆಕರ್ಷಣೆಯ ಕೇಂದ್ರ: ಪಂ| ವಿದ್ಯಾಸಿಂಹಾಚಾರ್ಯ

MUST WATCH

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

ಹೊಸ ಸೇರ್ಪಡೆ

ಶಿರ್ವ: ಗೋ ರಕ್ಷಣೆ ; ಓರ್ವ ಪೊಲೀಸರ ವಶಕ್ಕೆ

ಶಿರ್ವ: ಗೋ ರಕ್ಷಣೆ ; ಓರ್ವ ಪೊಲೀಸರ ವಶಕ್ಕೆ

ಮತಾಂತರ ಯತ್ನ: ಕೇರಳದ ದಂಪತಿ ವಿರುದ್ಧ ಪ್ರಕರಣ ದಾಖಲು

ಮತಾಂತರ ಯತ್ನ: ಕೇರಳದ ದಂಪತಿ ವಿರುದ್ಧ ಪ್ರಕರಣ ದಾಖಲು

ಮಂಗಳೂರು ವಿಮಾನ ನಿಲ್ದಾಣ: ಚಿನ್ನ ಅಕ್ರಮ ಸಾಗಾಟ ಪತ್ತೆ

ಮಂಗಳೂರು ವಿಮಾನ ನಿಲ್ದಾಣ: ಚಿನ್ನ ಅಕ್ರಮ ಸಾಗಾಟ ಪತ್ತೆ

ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

Murder-aa

ವಂಡಾರು: ಪತಿಯಿಂದ ಪತ್ನಿ ಕೊಲೆ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.