ನಾನಿಲ್ತಾರ್‌ ಅಭಿಮಾನಿ ಬಳಗ: ನೂತನ ಪದಾಧಿಕಾರಿಗಳ ಆಯ್ಕೆ

Team Udayavani, Apr 25, 2019, 3:21 PM IST

ಮುಂಬಯಿ: ನಾನಿಲ್ತಾರ್‌ ಅಭಿಮಾನಿ ಬಳಗ ಮುಂಬಯಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು.
ಕಾರ್ಕಳ ಗ್ರಾಮೀಣ ಪ್ರದೇಶ ವಾಗಿರುವ ಮುಂಡ್ಕೂರು ನಾನಿಲ್ತಾರ್‌ ಪರಿಸರದ ಮುಂಬಯಿಯಲ್ಲಿ ನೆಲೆಸಿರುವ ಕುಲಾಲ ಸಮಾಜ ಬಾಂಧವರ ಒಗ್ಗಟ್ಟಿಗಾಗಿ ಸ್ಥಾಪಿಸಿರುವ ನಾನಿಲ್ತಾರ್‌ ಅಭಿಮಾನಿ ಬಳಗವು ವರಮಹಾಲಕ್ಷ್ಮೀ ಪೂಜೆಯನ್ನು ಗೋರೆಗಾಂವ್‌ ಜೋಗೇಶ್ವರಿ ಪರಿಸರದಲ್ಲಿ ಕಳೆದ 9 ವರ್ಷಗಳಿಂದ ನಡೆಸುತ್ತಾ ಬಂದಿದೆ. ಪ್ರಸ್ತುತ ವರ್ಷದ ಪೂಜೆ ಆ. 15ರಂದು ಜೋಗೇಶ್ವರಿ ಪೂರ್ವದ ಮಾಂಗಲ್ಯ ಸಭಾ ಭವನದಲ್ಲಿ ನಡೆಯಲಿದೆ.

ಬಳಗದ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸುಂದರ್‌ ಶ್ರೀಯಾನ್‌, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸುಕುಮಾರ್‌ ಸಾಲ್ಯಾನ್‌, ಉಪಾಧ್ಯಕ್ಷರಾಗಿ ಕೃಷ್ಣ ಮೂಲ್ಯ ನಲಸೋಪರ, ಹರೀಶ್‌ ಮೂಲ್ಯ ಅಂಧೇರಿ, ದಿನೇಶ್‌ ಬಂಗೇರ, ಕೋಶಾಧಿಕಾರಿಯಾಗಿ ಕೇಶವ ಬಂಜನ್‌, ಜತೆ ಕಾರ್ಯದರ್ಶಿಯಾಗಿ ನಾರಾಯಣ್‌ ಮೂಲ್ಯ ವಿರಾರ್‌, ಜತೆ ಕೋಶಾಧಿಕಾರಿಯಾಗಿ ರೇವತಿ ಮೂಲ್ಯ ಅವರು ಆಯ್ಕೆಯಾದರು.
ಸಲಹೆಗಾರರಾಗಿ ಶಂಕರ ವೈ. ಮೂಲ್ಯ, ವಸಂತಿ ಸುಂದರ್‌ ಶ್ರೀಯಾನ್‌, ಸರೋಜಾ ಎಚ್‌. ಮೂಲ್ಯ, ಉಷಾ ಎಸ್‌. ಸಾಲ್ಯಾನ್‌, ನಳಿನಿ ಎನ್‌. ಮೂಲ್ಯ ವಿರಾರ್‌ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಶಂಕರ ವೈ. ಮೂಲ್ಯ, ವಸಂತಿ ಎಸ್‌. ಶ್ರೀಯಾನ್‌ ಅವರು ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮವನ್ನು ಕೃಷ್ಣ ಮೂಲ್ಯ ಅವರು ನಿರೂಪಿಸಿ ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

  • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

  • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

  • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...

  • ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ...

  • ಕುಂದಾಪುರ: ಮಳೆ ನೀರಿಂಗಿಸುವ ಮೂಲಕ ನೀರನ್ನು ಕಾದಿಟ್ಟು ಕೊಳ್ಳಿ. ಪ್ರತಿಯೊಬ್ಬರೂ ನೀರುಳಿ ಸುವ ನಿಟ್ಟಿನಲ್ಲಿ ನಿಮ್ಮದೇ ಆದ ಕೊಡುಗೆಗಳನ್ನು ನೀಡಿ. ನೀರು ಎಂದರೆ...