ಶ್ರದ್ಧಾ ಭಕ್ತಿಯಿಂದ ನವರಾತ್ರಿ ಉತ್ಸವ ಸಂಪನ್ನ

Team Udayavani, Oct 14, 2019, 4:56 PM IST

ಪುಣೆ, ಅ. 13: ಪುಣೆಯ ಜನವಾಡಿ ಗೋಖಲೆ ನಗರದಲ್ಲಿರುವ ಶ್ರೀ ದುರ್ಗಾಕಾಳಿ ದೇವಿಯ ಮಂದಿರದಲ್ಲಿ 33ನೇ ವರ್ಷದ ನವರಾತ್ರಿ ಮಹೋತ್ಸವವು ಸೆ. 29ರಿಂದ ಅ. 8 ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಲಿಂಗಪ್ಪ ಪೂಜಾರಿಯವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ನಡೆಯಿತು.

ಅ.29ರಂದು ವೇದಮೂರ್ತಿ ಮಧುಕರ ಭಟ್‌ ಇವರು ಪುಣ್ಯಾಹವಾಚನ, ಬಿಂಬಶುದ್ಧಿ, ತ್ರಿನಾರಿಕೇಳ ಗಣಪತಿ ಹೋಮ ನಂತರ ಕಲಶ ಸ್ಥಾಪನೆ ನೆರವೇರಿಸಿದರು.

ಪ್ರತೀ ದಿನ ರಾತ್ರಿ ಭಕ್ತಾದಿಗಳಿಂದ ಭಜನ ಕಾರ್ಯಕ್ರಮ, ಶ್ರೀ ದೇವಿಯ ದರ್ಶನ ಹಾಗೂ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಅ. 8ರಂದು ದಸರಾ ವಿಶೇಷ ಪೂಜಾ ಕಾರ್ಯಕ್ರಮ ನಡೆದವು. ಭಕ್ತಾದಿಗಳಿಂದ ಭಜನ ಕಾರ್ಯಕ್ರಮ, ಲಿಂಗಪ್ಪ ಪೂಜಾರಿ ಅವರಿಂದ ಶ್ರೀ ದೇವಿ ದರ್ಶನ ಸೇವೆ, ಗಣೇಶ್‌ ಹೆಗ್ಡೆ ಅಗತ್ಯ ಅವರ ಪ್ರಾಯೋಜಕತ್ವದಲ್ಲಿ ಸಾರ್ವಜನಿಕ ಅನ್ನಂಸಂತರ್ಪಣೆ ನಡೆಯಿತು. ಸ್ಥಳೀಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.

ನವರಾತ್ರಿ ಸಂದರ್ಭದ ಕಾರ್ಯಕ್ರಮಕ್ಕೆ ಬಂಟ್ಸ್‌ ಅಸೋಸಿಯೇಶನ್‌ ಪುಣೆ ಉಪಾಧ್ಯಕ್ಷ ಗಣೇಶ್‌ ಹೆಗ್ಡೆ, ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ, ತುಳುಕೂಟದ ಅಧ್ಯಕ್ಷ ಮೋಹನ್‌ ಶೆಟ್ಟಿ ಎಣ್ಣೆಹೊಳೆ, ಮಹಾಗಣಪತಿ ಯಕ್ಷಗಾನ ಮಂಡಳಿ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು, ದಿನೇಶ್‌ ಪೂಜಾರಿ ಗಾಂಧಿ ಭವನ್‌, ರಮೇಶ್‌ ಶೆಟ್ಟಿ ಎನ್‌ಐಬಿಎಂ, ಶ್ರೀಧರ ಶೆಟ್ಟಿ , ಪಾಂಡುರಂಗ ಪೂಜಾರಿ, ಸತೀಶ್‌ ಪೂಜಾರಿ ಗುರುದತ್ತ, ವಿಶ್ವನಾಥ ಪೂಜಾರಿ ಕಪಿಲ, ನಾರಾಯಣ ಶೆಟ್ಟಿ, ಆನಂದ್‌ ಶೆಟ್ಟಿ, ದಿನೇಶ್‌ ಶೆಟ್ಟಿ ಉಜಿರೆ, ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ಸದಾಶಿವ ಸಾಲ್ಯಾನ್‌, ಶಿವರಾಮ ರೈ, ಉದಯ್‌ ಶೆಟ್ಟಿ ರಾಮ್‌ ನಗರ, ಶಂಕರ್‌ ಶೆಟ್ಟಿ, ಜಯಕರ ಶೆಟ್ಟಿ, ಗೋವರ್ಧನ್‌ ಶೆಟ್ಟಿ, ಸುನಿಲ್‌ ಪೂಜಾರಿ, ಸಂಜೀವ ಪೂಜಾರಿ ಮಯೂರ ಕಾಲನಿ,  ಜಗನ್ನಾಥ ಮೂಲ್ಯ, ಅರುಣ್‌ ಪೂಜಾರಿ, ಯಾದವ್‌ ಶೆಟ್ಟಿ, ಚೇತನ್‌ ಶೆಟ್ಟಿ, ಜಗನ್ನಾಥ್‌ ಶೆಟ್ಟಿ ಚಂದನ್‌ ನಗರ ಅವರು ಸಹಕಾರ ನೀಡಿದರು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಿದರು. ಮಂದಿರದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

 

 ಚಿತ್ರ –ವರದಿ: ಕಿರಣ್‌ ಬಿ. ರೈ ಕರ್ನೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ