ಚಿತ್ರ ವೀಕ್ಷಣೆಗಾಗಿ ಕಾಯುತ್ತಿರುವ ಅನಿವಾಸಿ ಕನ್ನಡಿಗರು; ಇನ್ನೂ ತೆರೆಯದ ಚಿತ್ರಮಂದಿರಗಳು

ಲಾಕ್‌ ಡೌನ್‌ ಆದ ಬಳಿಕ ಹೊರದೇಶಗಳಲ್ಲಿ ಯಾವುದೇ ಥಿಯೇಟರ್‌ ಗಳಲ್ಲಿ ಕನ್ನಡ ಸಿನೆಮಾಗಳು ತೆರೆ ಕಂಡಿಲ್ಲ.

Team Udayavani, Mar 20, 2021, 11:11 AM IST

Cinema

ವಿದೇಶಗಳಲ್ಲಿ ಯಾವುದಾದರೂ ಭಾರತೀಯ ಚಲನಚಿತ್ರಗಳು ಅದರಲ್ಲೂ ಮುಖ್ಯವಾಗಿ ಕನ್ನಡ ಚಿತ್ರಗಳು ಬಿಡುಗಡೆ ಯಾಗುತ್ತಿದೆ ಎಂದರೆ ಇಲ್ಲಿ ನೆಲೆಸಿರುವ ಕನ್ನಡಿಗರೆಲ್ಲರ ಮನಸ್ಸು  ಆ ದಿನಕ್ಕಾಗಿ ಅತ್ಯುತ್ಸಾಹದಿಂದ ಕಾಯುತ್ತಿರುತ್ತದೆ. ಆ ದಿನ ಬಿಡುವು ಇದೆ ಎಂದಾದರೆ ಸಾಕು ಮುಂಗಡವಾಗಿ ಟಿಕೆಟ್‌ ಕಾದಿರಿಸಿ ಮೊದಲ ದಿನವೇ ಮನೆ ಮಂದಿ, ಸ್ನೇಹಿತರನ್ನು ಸೇರಿಸಿಕೊಂಡು ಚಿತ್ರಮಂದಿರಗಳಿಗೆ ಹೋಗಿ ಚಿತ್ರ ನೋಡಿ ಬರುವುದೇ ಒಂದು ಸಂಭ್ರಮ. ಆದರೆ ಈ ಸಂಭ್ರಮಕ್ಕೀಗ ಕಳೆದ ಒಂದು ವರ್ಷದಿಂದ ಬ್ರೇಕ್‌ ಬಿದ್ದಿದೆ.

2020ರಲ್ಲಿ ಕೋವಿಡ್‌- 19 ಸಾಂಕ್ರಾಮಿಕವು ಜಗತ್ತಿನಾದ್ಯಂತ ಪಸರಿಸಿದಾಗ ಹಲವಾರು ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮವನ್ನೇ ಬೀರಿತು. ಇದರಲ್ಲಿ ಚಲನಚಿತ್ರೋದ್ಯ ಮವೂ ಸೇರಿಕೊಂಡಿದೆ. ಪರಿಣಾಮ ಹಲವಾರು ಕಡೆಗಳಲ್ಲಿ ವಿವಿಧ ಹಂತಗಳಲ್ಲಿ ಚಿತ್ರಮಂದಿರಗಳನ್ನು ಮುಚ್ಚಲಾಯಿತು, ಸಾರ್ವಜನಿಕರು ಹೆಚ್ಚಾಗಿ ಸೇರುವ ಉತ್ಸವಗಳನ್ನು ರದ್ದು ಪಡಿಸಲಾಯಿತು ಅಥವಾ ಮುಂದೂಡಲಾಯಿತು. ಹಲವಾರು ಚಲನಚಿತ್ರ ಬಿಡುಗಡೆಗಳಿಗೆ ದಿನಾಂಕ ನಿಗದಿಯಾ ಗಿತ್ತಾದರೂ ಅದನ್ನು ಅನಿರ್ದಿಷ್ಟವಾಗಿ ಮುಂದೂಡಲಾಯಿತು. ಚಿತ್ರಮಂದಿರಗಳು ಮುಚ್ಚಿದ್ದರಿಂದ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಶತಕೋಟಿ ಡಾಲರ್‌ ಗಳು ಕುಸಿತ ಕಂಡಿರುವುದು ಅಂಕಿ ಅಂಶಗಳಿಂದ ಬಯಲಾಗಿದೆ.

ಲಾಕ್‌ ಡೌನ್‌ ಕಾರಣದಿಂದ ಸುಮಾರು 10 ತಿಂಗಳ ಅನಂತರ ಕರ್ನಾಟಕ ಸರಕಾರವು ಅಂತಿಮವಾಗಿ ಶೇ.100ರಷ್ಟು ಆಕ್ಯುಪೆನ್ಸಿಯೊಂದಿಗೆ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿತು. ಚಲನಚಿತ್ರ ನಿರ್ಮಾಪಕರು ತಮ್ಮ ಮುಂಬರುವ ಚಿತ್ರಗಳ ಬಿಡುಗಡೆ ದಿನಾಂಕಗಳನ್ನು ಲಾಕ್‌ ಮಾಡುವುದರೊಂದಿಗೆ ಭಾರತೀಯ ಚಿತ್ರರಂಗವು ನಿಧಾನವಾಗಿಯಾದರೂ ಸ್ಥಿರತೆಯತ್ತ ಸಾಗುತ್ತಿದೆ. ಆದರೆ ಪ್ರಪಂಚದಾದ್ಯಂತ ಇನ್ನೂ ಈ ರೀತಿಯ ಬೆಳ ವಣಿಗೆಗಳಾಗಿಲ್ಲ.  ಪ್ರಸ್ತುತ ಯುಕೆ ಮತ್ತು ಯುರೋಪ್‌ ಭಾಗಗಳಲ್ಲಿ  ಚಿತ್ರಮಂದಿರಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಅಮೆರಿಕ ಚಿತ್ರಮಂದಿರಗಳು ಭಾಗಶಃ ತೆರೆದಿವೆ. ದುಬೈ ಗರಿಷ್ಠ ಸಾಮರ್ಥ್ಯದ ಶೇ. 50ರಷ್ಟು  ಮತ್ತು ತೀವ್ರ ಮುನ್ನೆಚ್ಚರಿಕೆ ಕ್ರಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಅನೇಕ ವರ್ಷಗಳಿಂದ ವಿದೇಶಗಳಲ್ಲಿ  ಕನ್ನಡ ಚಲನಚಿತ್ರಗಳನ್ನು ಸ್ಯಾಂಡಲ್‌ ವುಡ್‌ ಎಂಟರ್ ಟೈನ್‌ ಮೆಂಟ್‌ ಯುಕೆಯು ಬಿಡುಗಡೆ ಮಾಡುತ್ತಿದ್ದು, ಸುಮಾರು ಒಂದು ವರ್ಷದಿಂದ ಯಾವುದೇ ಚಿತ್ರಗಳನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ವಿಶ್ವದಾದ್ಯಂತ ಎನ್‌ ಆ ರ್‌ಐ ಕನ್ನಡಿಗರಿಗೆ ಥಿಯೇಟರ್‌ ಗಳಲ್ಲಿ ಚಲನಚಿತ್ರಗಳನ್ನು ನೋಡಲು ಸಾಧ್ಯವಾಗಿಲ್ಲ. ಕೆಲವು ದೇಶಗಳಲ್ಲಿ ಮೇ ಅಥವಾ ಜೂನ್‌ ವೇಳೆಗೆ ಸೀಮಿತ ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳನ್ನು ತೆರೆಯುವ ನಿರೀಕ್ಷೆಯಿದೆ.

ಅನೇಕ ಕನ್ನಡ ಚಲನ ಚಿತ್ರ ನಿರ್ಮಾಪಕರು ಮುಖ್ಯವಾಗಿ ಪುನೀತ್‌ ನಟಿಸಿರುವ ಯುವ ರತ್ನ, ದರ್ಶನ್‌ ಅಭಿನಯದ ರಾಬರ್ಟ್‌, ಸುದೀಪ್‌ ಅವರ ಕೋಟಿಗೊಬ್ಬ 3 ಮತ್ತು ಯಶ್‌ ಅವರ ಕೆಜಿಎಫ್ ಅಧ್ಯಾಯ 2 ಚಿತ್ರಗಳ ಬಿಡುಗಡೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಆದರೆ ವಿಶ್ವದಾದ್ಯಂತ ಚಲನಚಿತ್ರ ವಿತರಕರಿಗೆ ಈ ಸಿನೆಮಾವನ್ನು ವಿದೇಶಿ ವಿತರಣೆಗಾಗಿ ಖರೀದಿಸಲು ಮುಂದಾಗಿಲ್ಲ. ಕೋವಿಡ್‌ ಲಸಿಕೆ ಸಾಮಾನ್ಯ ಜನರಿಗೆ ಸಿಗುವವರೆಗೂ ಜನರು ಚಲನಚಿತ್ರ ಮಂದಿರಗಳಿಗೆ ಬರುತ್ತಾರೆ ಎನ್ನುವ ವಿಶ್ವಾಸವೂ ಇಲ್ಲ.

ವಿಶ್ವದಾದ್ಯಂತ ಬಿಡುಗಡೆಯಾಗಿ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದಿರುವ ಕೆಜಿಎಫ್ ಅಧ್ಯಾಯ- 1ರ ಮುಂದುವರಿದ ಭಾಗ ಕೆಜಿಎಫ್ ಅಧ್ಯಾಯ- 2 ಜುಲೈನಲ್ಲಿ ಬಿಡುಗಡೆಯಾಗುತ್ತದೆ ಎಂದು ಎಲ್ಲ ವಿದೇಶಿ ಕನ್ನಡಿಗರು ಕಾಯುತ್ತಿದ್ದಾರೆ. ಯುಕೆ ಯಲ್ಲಿ ಕೆಜಿಎ ಫ್- 1ಹೆಚ್ಚು ಪ್ರದರ್ಶನಗಳನ್ನು ಕಂಡಿತ್ತು. ಈ ಮೊದಲು ಅನೇಕ ಚಲನಚಿತ್ರಗಳು ಬಿಡುಗಡೆಯಾಗಿತ್ತು. ಅನೇಕ ಬಾರಿ ಚಲನಚಿತ್ರದಲ್ಲಿ ಖ್ಯಾತಿ ಪಡೆದವರಿಗಾಗಿಯೇ ಮೊದಲ ಪ್ರದರ್ಶನಗಳನ್ನು ಅದ್ಧೂರಿಯಾಗಿ ಲಂಡನ್‌ ನಲ್ಲಿ ಏರ್ಪಡಿಸಲಾಗಿತ್ತು. ಇದಕ್ಕಾಗಿ ಅನೇಕ ತಾರೆ ಯರು ಭೇಟಿ ನೀಡಿದ್ದಾರೆ.

ಮುಖ್ಯವಾಗಿ ಶಿವರಾಜ್‌ ಕುಮಾರ್‌, ರಕ್ಷಿತ್‌ ಶೆಟ್ಟಿ, ಪ್ರಕಾಶ್‌ ರಾಜ್‌, ನಿರ್ದೇಶಕರಾದ ಯೋಗ ರಾಜ್‌ ಭಟ್‌, ಸುನಿ, ಪಿ.ವಾಸು, ಲಿಂಗದೇವರು ಮತ್ತು ಇನ್ನೂ ಅನೇಕರು ಪ್ರೀಮಿಯರ್‌ ಪ್ರದರ್ಶನಗಳಿಗೆ ಹಾಜರಾಗಿದ್ದರು. ಅವರೊಂದಿಗೆ ಅನೇಕ ಅನಿವಾಸಿ ಕನ್ನಡಿ ಗರು ಕುಳಿತು ಸಿನೆಮಾ ವೀಕ್ಷಣೆ ಮಾಡಿ , ಈ ಕುರಿತು ಸಂವಾದಗಳನ್ನೂ ನಡೆಸಿದ್ದರು. ಆದರೆ ಲಾಕ್‌ ಡೌನ್‌ ಆದ ಬಳಿಕ ಹೊರದೇಶಗಳಲ್ಲಿ ಯಾವುದೇ ಥಿಯೇಟರ್‌ ಗಳಲ್ಲಿ ಕನ್ನಡ ಸಿನೆಮಾಗಳು ತೆರೆ ಕಂಡಿಲ್ಲ. ಇದರಿಂದ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ಸಿನೆಮಾ ನೋಡುವ ಅವಕಾಶ ಮಾತ್ರವಲ್ಲ ತಮ್ಮ ಮೆಚ್ಚಿನ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ಗಾಯಕರೊಂದಿಗೆ ಮಾತುಕತೆ ನಡೆಸುವ ಅವಕಾಶವೂ ಸಿಗುತ್ತಿಲ್ಲ. ಹೀಗಾಗಿ ಯಾವಾಗ ಥಿಯೇಟರ್‌ ಗಳಲ್ಲಿ  ಚಲನ ಚಿತ್ರ ಪ್ರದರ್ಶನಕ್ಕಿರುವ ತೊಡಕುಗಳು ದೂರವಾಗು ವುದೋ?, ಯಾವಾಗ ಮನೆ ಮಂದಿ, ಸ್ನೇಹಿತರೊಡಗೂಡಿ ಚಿತ್ರ ಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳನ್ನು ದೊಡ್ಡ ಪರದೆಯಲ್ಲಿ ನೋಡಬಹುದೋ ಎನ್ನುವುದನ್ನು ಸಾಕಷ್ಟು ನಿರೀಕ್ಷೆಗಳೊಂದಿಗೆ ಬಹುತೇಕ ಅನಿವಾಸಿ ಕನ್ನಡಿಗರು ಕಾಯುವಂತಾಗಿದೆ.

– ರಮೇಶ್‌ ಬಾಬು, ಲಂಡನ್‌

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.