ವಡಾಲದಲ್ಲಿ ಪರ್ತಗಾಳಿ ಮಠದ ಶಿಷ್ಯ ಸ್ವೀಕಾರ ಸಂಭ್ರಮ


Team Udayavani, Jan 26, 2018, 5:10 PM IST

2-ggg.jpg

ಮುಂಬಯಿ: ವಡಾಲಾದ ಶ್ರೀರಾಮನ ಮಂದಿರದೊಂದಿಗೆ ಶ್ರೀ  ದ್ವಾರಕನಾಥ ಶ್ರೀಗಳ ಸಂಕಲ್ಪ ಪೂರ್ಣವಾಗಿದೆ. ಪರ್ತಗಾಳಿ ಮಠವು ಪ್ರಸನ್ನ, ಪ್ರಶಾಂತ ವಾತಾವರಣ ನಿರ್ಮಿಸಿದಂತೆ ಮುಂಬಯಿಯಲ್ಲಿನ ವಡಲಾದ ಈ ಮಂದಿರವು ಧಾರ್ಮಿಕ ಮಧ್ಯವರ್ತಿಯಾಗಿದೆ. ಆ ಮೂಲಕ ಗುರುವರಿಯರ ಧರ್ಮ ನಿಷ್ಠೆ ಸಂಪನ್ನವಾಗಿದೆ. ಸಾರಸ್ವತ ಸಮಾಜಕ್ಕೆ ಗಾಯತ್ರಿ ಜಪವು ಮುಖ್ಯವಾಗಿದೆ. ಅಧ್ಯಾತ್ಮದಲ್ಲೇ ಗುರುಪರಂಪರೆ ಬೇರುಬಿಟ್ಟು ಬೆಳೆದು ನಿಂತಿದ್ದು,  ಇದೇ ಭಾರತೀಯ ಧರ್ಮ ಶ್ರೇಷ್ಠತೆಯಾಗಿದೆ. ಇಂತಹ ಗುರು ಪರಂಪರೆಗೆ ನಿಷ್ಠವಾಗಿ ಮುನ್ನಡೆದಾಗಲೇ ಮೂಲಸ್ವರೂಪವನ್ನು  ಸ್ಥಾಯಿಯನ್ನಾಗಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಅಧ್ಯಾತ್ಮ ಸೊಗಡು ಮುಂಬಯಿ ನೆಲದಲ್ಲಿದೆ. ಮಹಾರಾಷ್ಟ್ರವು ಸದ್ಧರ್ಮಶೀಲಾ ನಾಡಾಗಿದೆ ಎನ್ನುವುದ‌ಕ್ಕೆ ನನ್ನ ಸನ್ಯಾಸ ದೀಕ್ಷೆಯೇ ಸಾಕ್ಷಿ. ಕಾರಣ ಇದೇ ರಾಮಮಂದಿರದ ಪಾವನ ಕ್ಷೇತ್ರದಲ್ಲಿ ನನಗೆ ಗುರುದೀಕ್ಷೆ ಸಿದ್ಧಿಸಿದೆ. ತಮ್ಮೆಲ್ಲರ ಧರ್ಮಶ್ರದ್ಧೆಯಿಂದ ಭವಿಷ್ಯತ್ತಿನ್ನುದ್ದಕ್ಕೂ ಪರ್ತಗಾಳಿ ಸಂಸ್ಥಾನದ ಗುರು ಪರಂಪರೆ ಪ್ರಕಾಶಮಾನವಾಗಿ ಬೆಳಗ‌ಲಿ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಗೋವಾ ಇದರ ಮಠಾಧೀಪತಿ ಶ್ರೀಮದ್‌ ವಿದ್ಯಾಧಿರಾಜತೀರ್ಥ ಶ್ರೀಪಾದ್‌ ವಡೇರ್‌ ಸ್ವಾಮೀಜಿ ನುಡಿದರು.

ಜೀವೋತ್ತಮ ಮಠದ 23ನೇ ಯತಿವರ್ಯ ಸನ್ಯಾಸದೀûಾ ಸ್ವರ್ಣಮಹೋತ್ಸವದ ಶುಭಾವಸರದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ವಡಾಲ ಮುಂಬಯಿ ಸಮಿತಿ, ಜಿಎಸ್‌ಬಿ ಗಣೇಶೋತ್ಸವ  ಸಮಿತಿ ವಡಾಲ ಹಾಗೂ ನೂರಾರು ಭಕ್ತಾಭಿಮಾನಿಗಳು ಜ. 25 ರಂದು ಸಂಜೆ ವಡಾಲದ ದ್ವಾರಕಾನಾಥ ಭವನದಲ್ಲಿ ಭಕ್ತಿಪೂರ್ವಕವಾಗಿ ಪ್ರದಾನಿಸಿದ ಗುರುವಂದನಾ ಗೌರವ ಸ್ವೀಕರಿಸಿ ವಿದ್ಯಾಧಿರಾಜತೀರ್ಥ ಶ್ರೀಪಾದರು ಸದ್ಭಕ್ತರನ್ನು ಅನುಗ್ರಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸಮನ್ವಯ ಪರಸ್ಪರ ಸಾಮರಸ್ಯತ್ವವಿದೆ. ತತ್ವ ಸಿದ್ಧಾಂತ, ಪ್ರತಿಪಾದನೆಗಳ ದೃಷ್ಟಿಯಿಂದ ಭಿಭಿನ್ನವಾಗಿದ್ದರೂ ಒಟ್ಟಾರೆ ಎಲ್ಲಾ ಧರ್ಮಗಳ ಉದ್ದೇಶವೊಂದೆ. ನಮ್ಮ ಜೀವನವನ್ನು ಸತ್ಕಾರ್ಯದ ಅನುಷ್ಠಾನಕ್ಕೆ ಮೀಸಲಾಗಿಡಬೇಕು. ಇಂತಹ ಜೀವನಾದರ್ಶಕ್ಕೆ ಗುರುಸಂಸ್ಥಾನಗಳು ಪೂರಕವಾಗಿವೆ. ಆದ್ದರಿಂದ  ಜೀವನ ವಿಧಾನ ಬೋಧಿಸುವ ಗುರುಪೀಠ, ಧರ್ಮಗುರುಗಳಲ್ಲಿ ನಿಕಟವಾಗಿದ್ದು ಸಂಸ್ಕಾರಯುತ ಬದುಕನ್ನು ರೂಢಿಸಿಕೊಳ್ಳಿರಿ ಎಂದು ಕರೆನೀಡಿದರು.

ಶ್ರೀ ಸಂಸ್ಥಾನ ಜೀವೋತ್ತಮ ಮಠದ ಪಟ್ಟಶಿಷ್ಯ  ವಿದ್ಯಾಧೀಶ ತೀರ್ಥ ಸ್ವಾಮೀಜಿ  ಅವರ ದಿವ್ಯೋಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಮಂದಿರದ ಪ್ರಧಾನ ಅರ್ಚಕ ಶ್ರೀ ಸುಧಾಮ ಅನಂತ ಭಟ್‌ ಮತ್ತು ಪುರೋಹಿತರು ಪೂಜಾಧಿಗಳನ್ನು ನೆರವೇರಿಸಿದರು. ಗೋವಿಂದ ಎಸ್‌. ಭಟ್‌ ಮತ್ತು ಎನ್‌. ಎನ್‌. ಪಾಲ್‌ ಪಾದಪೂಜೆಗೈದು  ಸ್ವಾಮೀಜಿ ಅವರನ್ನು ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 5 ಲಕ್ಷ ರೂ. ಹಾಗೂ ರಾಮ ಮಂದಿರ ವಡಲಾ ವತಿಯಿಂದ 51 ಗ್ರಾಂ ಚಿನ್ನದ ನಾಣ್ಯ ಅರ್ಪಿಸಿ ಗೌರವಿಸಿದರು.

ಗುರುವಿಗೆ ಎಲ್ಲಿ ಗೌರವ ಸಿಗುತ್ತದೋ ಅಲ್ಲಿ ಶಿಷ್ಯರಿಗೆ ಆನಂದವಾಗುತ್ತದೆ. ಗುರುವಿದ್ದಾಗ ಗುರಿ ಸುಲಭವಾಗಿ ತಲುಪಲು ಸಾಧ್ಯ. ಗುರುವಿನಿಂದ ಜೀವನದ ಉತ್ಕರ್ಷ ಹೆಚ್ಚುತ್ತದೆ. ಗುರುಗಳು ಶಿಲ್ಪಕಾರನಂತೆ, ಅಜ್ಞಾನವಿಲ್ಲದ ವ್ಯಕ್ತಿಗೆ ಭವಿಷ್ಯ ರೂಪಿಸುವ ಗುರು ಶ್ರೇಷ್ಠರು. ಕಾಯಕ ಸಿದ್ಧವಾಗಲು ಗುರುವಿನ ಪ್ರೇರಣೆ ಅಗತ್ಯವಾಗುತ್ತದೆ. ಗುರುವಿನ ಜ್ಞಾನರ್ಜನೆಯ ಆಳ ದೇವನೊಬ್ಬನೇ ಬಲ್ಲವನಾಗಿರುತ್ತಾನೆ. ಸ್ವಾಮಿ ನಿಷ್ಠೆಯಿಂದ ಭಕ್ತಿಮಾರ್ಗವು ಸುಲಭವಾಗುವುದು. ಆದ್ದರಿಂದ ಭೌತವಾದಿ ನಾಗರಿಕತೆಯ ಅಟ್ಟಹಾಸಕ್ಕೆ ತೆರೆಯೆಳೆದು ಅಧ್ಯಾತ್ಮಿಕತೆಯನ್ನು ಬೆಳೆಸುವು ಅಗತ್ಯವಿದೆ. ನಮ್ಮಲ್ಲಿನ ಸಾಂಸ್ಕೃತಿಕ, ಧಾರ್ಮಿಕ ಆಕ್ರಮಣಗಳನ್ನು ತಡೆದಾಗ ಅಧ್ಯಾತ್ಮಿಕ ಜಾಗೃತಿ ತನ್ನಷ್ಠಕ್ಕೇ ಮೂಡಲು ಸಾಧ್ಯವಾಗುತ್ತದೆ ಎಂದು ಶ್ರೀ ವಿದ್ಯಾಧೀಶ ಸ್ವಾಮೀಜಿ ಅವರು ನುಡಿದರು.

ಶ್ರೀ  ರಾಮ ಮಂದಿರ ವಡಲಾ ಮುಂಬಯಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಲ್ಲಾಸ್‌ ಡಿ. ಕಾಮತ್‌, ಕಾರ್ಯದರ್ಶಿ ಅಮೊಲ್‌ ವಿ. ಪೈ, ಕೋಶಾಧಿಕಾರಿ ಶಾಂತರಾಮ ಎ. ಭಟ್‌ ಮತ್ತು ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಮುಕುಂದ್‌ ಕಾಮತ್‌,  ಕೋಶಾಧಿಕಾರಿ ರಾಜೀವ್‌ ಶೆಣೈ, ವಿಶ್ವಸ್ಥ ಸದಸ್ಯರುಗಳಾದ  ಜಿ. ಎಸ್‌. ಪಿಕೆÛ, ಉಮೇಶ್‌ ಪೈ, ಗುರುದತ್ತ್ ನಾಯಕ್‌ ಸೇರಿದಂತೆ ಉಭಯ ಸಂಸ್ಥೆಯ ಸದಸ್ಯರು, ಮಹಿಳಾ ಸೇವಕರ್ತೆಯರು, ನೂರಾರು ರಾಮ ಸೇವಕರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಶ್ರೀಗಳಿಗೆ ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು.

ವೈದಿಕರಾದ ವೇದಮೂರ್ತಿ ಮೋಹನ್‌ದಾಸ್‌ ಆಚಾರ್ಯ, ವೇದಮೂರ್ತಿ  ಸುಧಾಮ ಭಟ್‌, ವೇದಮೂರ್ತಿ ಆನಂತ್‌ ಭಟ್‌ ದೇವಸ್ತುತಿಯೊಂದಿಗೆ ಸಮಾರಂಭವು ಪ್ರಾರಂಭಗೊಂಡಿತು. ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎನ್‌. ಎನ್‌. ಪಾಲ್‌ ಸ್ವಾಗತಿಸಿ ಶ್ರೀಗಳ ಧಾರ್ಮಿಕ ಸೇವೆ ಸ್ಮರಿಸಿದರು. ಶ್ರೀ ರಾಮ ಮಂದಿರ ವಡಾಲ  ಮುಂಬಯಿ ಸಮಿತಿಯ  ಅಧ್ಯಕ್ಷ ಗೋವಿಂದ ಎಸ್‌. ಭಟ್‌ ಪ್ರಸ್ತಾವನೆಗೈದರು.  ರಂಜನ್‌ ಸಿ. ಭಟ್‌ ಕಾರ್ಯಕ್ರಮ ನಿರೂಪಿಸಿದರು.

 ಚಿತ್ರ-ವರದಿ:ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.