Udayavni Special

ಕುಟುಂಬ ಪಕ್ಷಗಳಾಗಿ ಪರಿವರ್ತನೆ: ಪ್ರಕಾಶ್‌

ಕಾಂಗ್ರೆಸ್‌, ಬಿಜೆಪಿ, ಶಿವಸೇನೆ, ಎನ್‌ಸಿಪಿ

Team Udayavani, Jul 29, 2019, 12:47 PM IST

mumbai-tdy-3

ಮುಂಬಯಿ, ಜು. 28: ಕಾಂಗ್ರೆಸ್‌, ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ಕುಟುಂಬ ಪಕ್ಷಗಳಾಗಿ ಮಾರ್ಪಟ್ಟಿವೆ ಮತ್ತು ತಮ್ಮ ನಡುವೆ ಅಧಿಕಾರವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿವೆ ಎಂದು ಶುಕ್ರವಾರ ವಂಚಿತ ಬಹುಜನ ಆಘಾಡಿ (ವಿಬಿಎ) ನಾಯಕ ಪ್ರಕಾಶ್‌ ಅಂಬೇಡ್ಕರ್‌ ಹೇಳಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬೇಡ್ಕರ್‌ ಅವರು ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಥವಾ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ತಮ್ಮ ಪಕ್ಷ ಏಕೆ ಆಸಕ್ತಿ ಹೊಂದಿಲ್ಲ ಎಂಬ ಬಗ್ಗೆಯೂ ಕಾರಣಗಳನ್ನೂ ನೀಡಿದರು.

ಕಾಂಗ್ರೆಸ್‌ ಒಂದು ಕುಟುಂಬ ಪಕ್ಷವಾಗಿ ಮಾರ್ಪಟ್ಟಿದೆ ಮತ್ತು ಅವರು ಕುಟುಂಬದೊಳಗೆ ಅಧಿಕಾರವನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಬಿಜೆಪಿ ಮತ್ತು ಶಿವಸೇನೆಗೆ ಹೋದ ಕಾಂಗ್ರೆಸ್‌ ನಾಯಕರು ಇದೀಗ ಆ ಎರಡೂ ಪಕ್ಷಗಳನ್ನೂ ಕುಟುಂಬ ಪಕ್ಷಗಳನ್ನಾಗಿ ಮಾಡಿದ್ದಾರೆ. ಈ ಕುಟುಂಬಗಳು ನಾಲ್ಕು ಪಕ್ಷಗಳಲ್ಲಿ ತಮ್ಮ ಬಲೆಯನ್ನು ಹರಡಿವೆ ಎಂದವರು ಹೇಳಿದ್ದಾರೆ. ವಿಬಿಎ ರಾಜ್ಯದ ಎಲ್ಲಾ 288 ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸಲು ಯೋಚಿಸುತ್ತಿದೆ ಎಂದು ಅಂಬೇಡ್ಕರ್‌ ತಿಳಿಸಿದ್ದಾರೆ. ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿ ಕುರಿತು ಮಾತನಾಡಿದ ಅವರು, ಕೆಲವು ಕಾಂಗ್ರೆಸ್‌ ನಾಯಕರು ಪಕ್ಷದ ಸಭೆಯಲ್ಲಿ ಅದು ಎನ್‌ಸಿಪಿಯ ಮತಗಳನ್ನು ಪಡೆಯುತ್ತಿಲ್ಲ ಎಂದು ಹೇಳಿದ್ದಾರೆ ಎಂದರು. ಎನ್‌ಸಿಪಿಯ ಜತೆಗೆ ವಿಬಿಎಯ ಮೈತ್ರಿ ಸಾಧ್ಯತೆ ಕುರಿತು ಮಾತನಾಡಿದ ಅಂಬೇಡ್ಕರ್‌ ಅವರು, ಎನ್‌ಸಿಪಿ ಜತೆಗಿನ ಮೈತ್ರಿ ಒಪ್ಪಂದವು ಕಾಂಗ್ರೆಸ್‌ಗೆ ಪ್ರಯೋಜನಕಾರಿಯಲ್ಲದಿದ್ದಾಗ, ಎನ್‌ಸಿಪಿಯ ಮೈತ್ರಿ ನಮಗೆ ಹೇಗೆ ಪ್ರಯೋಜನಕಾರಿಯಾಗಬಲ್ಲದು? ಹಾಗಾಗಿ, ಎನ್‌ಸಿಪಿ ಜತೆಗೆ ಮೈತ್ರಿ ಮಾಡಿಕೊಳ್ಳದಿರಲು ನಾವು ಈಗಾಗಲೇ ನಿಲುವನ್ನು ತೆಗೆದುಕೊಂಡಿದ್ದೇವೆ ಎಂದರು. ಕಾಂಗ್ರೆಸ್‌ ಬಗ್ಗೆ ಹೇಳುವುದಾದರೆ, ಎಪ್ರಿಲ್-ಮೇ ಲೋಕಸಭಾ ಚುನಾವಣೆಗೆ ವಿಬಿಎ ಅದರ ಜತೆಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿತ್ತು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದವರು ಹೇಳಿದ್ದಾರೆ.

 

ಇದಲ್ಲದೆ, ಕಾಂಗ್ರೆಸ್‌ ಈಗ ರಾಜಕೀಯ ನೈತಿಕತೆಯನ್ನು ಹೊಂದಿಲ್ಲ. ಅವರು ನಮ್ಮನ್ನು ಬಿಜೆಪಿಯ ಬಿ ತಂಡ ಎಂದು ಆರೋಪಿಸಿದ್ದರು ಮತ್ತು ಈಗ ಅವರು (ಕಾಂಗ್ರೆಸ್‌ ನಾಯಕರು) ಮಾಧ್ಯಮ ಮತ್ತು ದೂರದರ್ಶನದ ಮೂಲಕ ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೆಂದು ಹೇಳಿಕೊಳ್ಳುತ್ತಿದ್ದಾರೆ. ಮೊದಲು ನೀವು ( ಕಾಂಗ್ರೆಸ್‌) ವಿಬಿಎಯ ಸ್ಥಾನಮಾನ ಏನು ಎಂಬುದನ್ನು ಸ್ಪಷ್ಟಪಡಿಸಿ ಎಂದು ದಲಿತ ನಾಯಕ ಅಂಬೇಡ್ಕರ್‌ ನುಡಿದಿದ್ದಾರೆ. ನಾವು ಬಿಜೆಪಿಯ ಬಿ ತಂಡ ಎಂದು ನೀವು (ಕಾಂಗ್ರೆಸ್‌) ಭಾವಿಸಿದರೆ, ನಾವು ನಿಮ್ಮನ್ನು ಮೈತ್ರಿಗಾಗಿ ನೇರವಾಗಿ ದೇವೇಂದ್ರ ಫಡ್ನವೀಸ್‌ ಅವರೊಂದಿಗೆ ಮಾತನಾಡುವಂತೆ ಮಾಡುತ್ತಿದ್ದೆವು. ವಿಬಿಎಯನ್ನು ಏಕೆ ಮಾಧ್ಯಮವನ್ನಾಗಿ ಮಾಡಬೇಕು ಎಂದವರು ಕಾಂಗ್ರೆಸ್‌ಗೆ ಪ್ರತ್ಯುತ್ತರಿಸಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Pandya”ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

“ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

ಲಂಡನ್‌ನಲ್ಲಿ ಲಸಿಕೆ ಪ್ರಯೋಗ

ಲಂಡನ್‌ನಲ್ಲಿ ಲಸಿಕೆ ಪ್ರಯೋಗ

5.87 ಕೋಟಿ ಅಮೆರಿಕನ್ನರ ಅಂಚೆ ಮತ

5.87 ಕೋಟಿ ಅಮೆರಿಕನ್ನರ ಅಂಚೆ ಮತ

IPL-2

ಪ್ಲೇಆಫ್ ಹೋರಾಟದಲ್ಲಿ ಪಂಜಾಬ್‌ ಮೇಲುಗೈ

ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ

ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ

ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್‌

ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್‌

ಸಂಸಾರಕ್ಕೆ ಒಪ್ಪದ ಪ್ರಿಯಕರ: ಯುವತಿ ಆತ್ಮಹತ್ಯೆ

ಸಂಸಾರಕ್ಕೆ ಒಪ್ಪದ ಪ್ರಿಯಕರ: ಯುವತಿ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai-tdy-1

ಧಾರ್ಮಿಕ ಆಚರಣೆಗಳಿಗೂ ಆದ್ಯತೆ: ಸಂತೋಷ್‌ ಶೆಟ್ಟಿ

MUMBAI-TDY-1

ಪಲಿಮಾರು ಶ್ರೀಗಳ ಚಿಂತನೆಗಳಿಗೆ ಕೈಜೋಡಿಸೋಣ: ಸಚ್ಚಿದಾನಂದ ರಾವ್‌

0000

ಶ್ರೀ ಮಹಾವಿಷ್ಣು ದೇವಸ್ಥಾನದ ಜ್ಞಾನ ಮಂದಿರ: ಶರನ್ನವರಾತ್ರಿ ಮಹೋತ್ಸವ

ನವಿ ಮುಂಬಯಿ: 2.50 ಲಕ್ಷ ಕೋವಿಡ್‌ ಪರೀಕ್ಷೆ

ನವಿ ಮುಂಬಯಿ: 2.50 ಲಕ್ಷ ಕೋವಿಡ್‌ ಪರೀಕ್ಷೆ

mumbai-tdy-1

ಗ್ರಾಮದ ಒಳಿತಿಗೆ ಶ್ರಮಿಸೋಣ: ಸುರೇಶ್‌ ಕಾಂಚನ್‌

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

“ಸಾಂಪ್ರದಾಯಿಕ ಪದ್ಧತಿಗೆ ಆಧುನಿಕ ಸ್ಪರ್ಶದಿಂದ ಕೃಷಿಯಲ್ಲಿ ಕ್ರಾಂತಿ’

“ಸಾಂಪ್ರದಾಯಿಕ ಪದ್ಧತಿಗೆ ಆಧುನಿಕ ಸ್ಪರ್ಶದಿಂದ ಕೃಷಿಯಲ್ಲಿ ಕ್ರಾಂತಿ’

ಯಕ್ಷಗಾನದಿಂದ ಜ್ಞಾನದ ಆರಾಧನೆ: ಡಾ| ನಿರಂಜನ ಭಟ್‌

ಯಕ್ಷಗಾನದಿಂದ ಜ್ಞಾನದ ಆರಾಧನೆ: ಡಾ| ನಿರಂಜನ ಭಟ್‌

Pandya”ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

“ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ದಸ್ತಗಿರಿ

ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ದಸ್ತಗಿರಿ

ಕರಾವಳಿ: ಸಂಭ್ರಮದ ನವರಾತ್ರಿ, ದಸರಾ ಸಮಾಪನ

ಕರಾವಳಿ: ಸಂಭ್ರಮದ ನವರಾತ್ರಿ, ದಸರಾ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.