Udayavni Special

ಗೋವುಗಳ ಮೂಲಕ ಭಗವಂತ ನೆಲೆ: ಪೇಜಾವರ ಶ್ರೀ


Team Udayavani, Nov 15, 2020, 1:35 PM IST

Mumbai-tdy-1

ಮುಂಬಯಿ, ನ. 14: ಭಗವಂತ ಎಲ್ಲಿಬೇಕೋ ಅಲ್ಲಿ ಅವತರಿಸಬಲ್ಲನು. ಇಂತಹ ಭಗವಂತ ಕೃಷ್ಣನಾಗಿ ಮಧುರೆಯಲ್ಲಿ ಅವತರಿಸಿ  ಅಲ್ಲಿಯೂ ನಿಲ್ಲದೆ ಊರನ್ನು ತೊರೆದಿದ್ದ. ಎಲ್ಲಿ ಗೋವುಗಳ ಹಿಂಸೆ ನಡೆಯುತ್ತಿದೆಯೋ ಅಲ್ಲಿ ನಾನಿರಲು ಯೋಗ್ಯನಲ್ಲ, ಗೋವಿನ ಮಹತ್ವವನ್ನು ಜಗತ್ತಿಗೆ ತೋರಿಸಬೇಕು ಎಂದು ಕಂಸನ ರಾಜ್ಯ ತೊರೆದಿದ್ದ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು.

ಸಾಂತಾಕ್ರೂಜ್‌ ಪೂರ್ವದ ಪೇಜಾವರ ಮಠದ ಮಧ್ವ ಭವನದ ಶ್ರೀಕೃಷ್ಣನ ಸಾನ್ನಿಧ್ಯದಲ್ಲಿ ನ. 13ರಂದು ಗೋಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಕಂಸನ ರಾಜ್ಯದಲ್ಲಿ ಗೋಹತ್ಯೆ ನಿರಂತರವಾಗಿ ನಡೆಯುತ್ತಿತ್ತು. ಯಾಕೆಂದರೆ ನಾವು ಅಸುರರು ಎಂದು ಆತ‌ನಿಗೆ ಅರಿವಿತ್ತು. ದೇವತೆಗಳು ನಮ್ಮ ವಿರೋಧಿಗಳು, ಅವರನ್ನು ಬಗ್ಗುಬಡಿಯಬೇಕು. ಆದರೆ ಅವರು ಸ್ವರ್ಗಲೋಕದಲ್ಲಿದ್ದು, ಅವರೊಂದಿಗೆ ಹೇಗೆ ಹೋರಾಟ ನಡೆಸುವುದು ಎಂಬ ಚಿಂತೆ ಕಂಸನನ್ನು ಕಾಡುತ್ತಿತ್ತು. ಆದ್ದರಿಂದ ಅವರಿಗೆ ಪೂರೈಕೆಯಾಗುವ ಆಹಾರವನ್ನೇ ನಿಲ್ಲಿಸಿದರೆ ಸರಿಯಾದ ಪಾಠ ಕಲಿಸಬಹುದು ಎಂದು ಕಂಸ ದೇವತೆಗಳ ಆಹಾರಕ್ಕೆ ತಡೆಯೊಡ್ಡಿದ್ದನು. ಗೋವಿನ ತುಪ್ಪ ದೇವತೆಗಳ ಆಹಾರವಾಗಿತ್ತು. ಅದನ್ನೇ ನಾಶ ಮಾಡಿದರೆ ದೇವತೆಗಳು ಆಹಾರವಿಲ್ಲದೆ ಕ್ಷೀಣಿಸುತ್ತಾರೆ. ಅದಕ್ಕಾಗಿ ಗೂವುಗಳನ್ನೆಲ್ಲ ಸಂಹಾರ ಮಾಡಿದ್ದ. ಎಲ್ಲಿ ಗೋವುಗಳ ಹಿಂಸೆ ನಡೆಯುತ್ತಿದೆಯೋ ಅಲ್ಲಿ ನಾನು ಇರುವುದಿಲ್ಲ ಅನ್ನುವುದನ್ನು ಜಗತ್ತಿಗೆ ತೋರಿಸಬೇಕು ಎಂದು ಕಂಸನ ರಾಜ್ಯ ಮಧುರಾ ನಗರವನ್ನು ಶ್ರೀಕೃಷ್ಣ ತೊರೆದಿದ್ದ. ನೇರವಾಗಿ ನಂದಾಗೋಕುಲಕ್ಕೆ ಬಂದ ಶ್ರೀಕೃಷ್ಣ ಆ ಮೂಲಕ ಜಗತ್ತಿಗೆ ಸಂದೇಶ ನೀಡಿದ ಎಂದು ತಿಳಿಸಿದರು.

ನಾವು ನಮ್ಮ ಮನೆಯಲ್ಲಿ ಭಗವಂತನು ಇರಬೇಕು ಅಂದುಕೊಂಡರೆ, ನಾವು ಗೋವುಗಳ ಪೋಷಣೆ ಮಾಡಬೇಕು. ಆಗ ಭಗವಂತ ನಮ್ಮ ಮನೆ-ಮನಗಳಲ್ಲೂ ಉಳಿಯುತ್ತಾನೆ. ಗೋವುಗಳ ಪೋಷಣೆ ನಡೆಯುವಲ್ಲಿ ನಾವು ಕೈಜೋಡಿಸಬೇಕು. ಉಡುಪಿ ಜಿಲ್ಲೆಯ ಬ್ರಹ್ಮಾವರ ಸೀತಾ ನದಿ ಮತ್ತು ದಕ್ಷಿಣಕ್ಕೆ ಕುಂಜಾಲು ನೀಲಾವರ ಇಲ್ಲಿ ಉಡುಪಿ ಪೇಜಾವರ ಮಠದ ಗೋಶಾಲೆ ಇದೆ. ಇದು ಶ್ರೀಕೃಷ್ಣೆ$çಕ್ಯ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ದೂರದೃಷ್ಟಿತ್ವದ ಯೋಜನೆಯಾಗಿದೆ. ಬೀದಿಯಲ್ಲಿರುವ ಮತ್ತು ವಯಸ್ಸಾದ ಹಸುಗಳಿಗೆ ಇದು ಆರೈಕೆಯ ತಾಣವಾಗಿದೆ. ಈ ಗೋಶಾಲೆಯಲ್ಲಿ ಸಾವಿರಾರು ಗೋವುಗಳಿಗೆ ಆಶ್ರಯ ನೀಡಲಾಗಿದೆ. ಇಲ್ಲಿ ಸರೋವರ ನಾಮದ ಕೆರೆ ನಿರ್ಮಿಸಿ ಕೆರೆಯ ಮಧ್ಯದಲ್ಲಿ ಶ್ರೀಕೃಷ್ಣನ ದೇವಾಲಯವನ್ನು ನಿರ್ಮಿಸಲಾಗಿದೆ ಎಂದರು.

ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ಪ್ರಕಾಶ ಆಚಾರ್ಯ ರಾಮಕುಂಜ ಮತ್ತು ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಪೂಜಾಧಿಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಬಿ. ಆರ್‌. ಗುರುಮೂರ್ತಿ, ಅವಿನಾಶ್‌ ಶಾಸ್ತ್ರಿ, ಪೇಜಾವರ ಮಠದ ಹರಿ ಭಟ್‌ ಪುತ್ತಿಗೆ, ನಿರಂಜನ್‌ ಗೋಗೆr, ಅದಮಾರು ಮಠ ಮುಂಬಯಿ ಶಾಖಾ ಪ್ರಬಂಧಕ ಪಡುಬಿದ್ರಿ ವಿ. ರಾಜೇಶ್‌ ರಾವ್‌, ಶ್ರೀನಿವಾಸ ಭಟ್‌ ಪರೇಲ್‌, ಪುರೋಹಿತರಾದ ಅರವಿಂದ ಬನ್ನಿಂತ್ತಾಯ, ವಿಷ್ಣುತೀರ್ಥ ಸಾಲಿ, ಪವನ್‌ ಭಟ್‌, ಆದಿತ್ಯ ಕಾರಂತ, ರಾಮಕೃಷ್ಣ ದಾಂಬ್ಳೆ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಶಾಂತಿ, ಪ್ರಭಾತ್‌ ಕಾಲನಿ ಸಾರ್ವಜನಿಕ ಗಣೇಶೋತ್ಸವ ಮಂಡಳದ ಅಧ್ಯಕ್ಷ ಶೇಖರ್‌ ಜೆ. ಸಾಲ್ಯಾನ್‌, ಸಮಾಜ ಸೇವಕರಾದ ವೈ. ಟಿ. ಶೆಟ್ಟಿ, ಜಗದಾಂಬಾ ಶೆಟ್ಟಿ, ಎಸ್‌. ಸೌಭಾಗ್ಯಾ, ದೀಪಕ್‌ ಗಟ್ಟಿ, ಚಂದ್ರಕಾಂತ್‌ ಚೌಧುರಿ ಮೊದಲಾದವರು  ಉಪಸ್ಥಿತರಿದ್ದರು.

 

ಚಿತ್ರ – ವರದಿ : ರೋನ್ಸ್‌ ಬಂಟ್ವಾಳ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಈ ರಾಶಿಯವರಿಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆ ಕೊನೆಗೊಳ್ಳುವ ಸೂಚನೆ!

ಈ ರಾಶಿಯವರಿಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆ ಕೊನೆಗೊಳ್ಳುವ ಸೂಚನೆ!

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

Village

ವ್ಯಾಜ್ಯಮುಕ್ತ, ಭಯಮುಕ್ತ ರಾಜ್ಯ ನಮ್ಮದಾಗಲಿ…

Sportsಟಿ20: ಸರಣಿ ಗೆಲುವಿನತ್ತ ಭಾರತದ ದಿಟ್ಟ ಹೆಜ್ಜೆ

ಟಿ20: ಸರಣಿ ಗೆಲುವಿನತ್ತ ಭಾರತದ ದಿಟ್ಟ ಹೆಜ್ಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಎಂಸಿ ಪ್ರಾರಂಭಿಸಿದ 244 ಉಚಿತ ಕೋವಿಡ್‌ ಪರೀಕ್ಷಾ ಕೇಂದ್ರಗಳಿಗೆ ಉತ್ತಮ ಪ್ರತಿಕ್ರಿಯೆ

ಬಿಎಂಸಿ ಪ್ರಾರಂಭಿಸಿದ 244 ಉಚಿತ ಕೋವಿಡ್‌ ಪರೀಕ್ಷಾ ಕೇಂದ್ರಗಳಿಗೆ ಉತ್ತಮ ಪ್ರತಿಕ್ರಿಯೆ

ತೇಲುವ ವಿದ್ಯುತ್‌ ಸ್ಥಾ ವರ ನಿರ್ಮಾಣಕ್ಕೆ ಮುಂದಾದ ಬಿಎಂಸಿ

ತೇಲುವ ವಿದ್ಯುತ್‌ ಸ್ಥಾ ವರ ನಿರ್ಮಾಣಕ್ಕೆ ಮುಂದಾದ ಬಿಎಂಸಿ

ವಿಶಿಷ್ಟ ಪರಿಕಲ್ಪನೆಯ ಸಾಹಿತ್ಯ ಕಾರ್ಯಕ್ರಮ ನಿರಂತರವಾಗಿ ನಡೆಯಲಿ: ನಂದಳಿಕೆ ನಾರಾಯಣ ಶೆಟ್ಟಿ

ವಿಶಿಷ್ಟ ಪರಿಕಲ್ಪನೆಯ ಸಾಹಿತ್ಯ ಕಾರ್ಯಕ್ರಮ ನಿರಂತರವಾಗಿ ನಡೆಯಲಿ: ನಂದಳಿಕೆ ನಾರಾಯಣ ಶೆಟ್ಟಿ

ವಿದ್ಯಾದಾನ ಮನುಷ್ಯನ ಏಳಿಗೆಗೆ ಅತೀ ದೊಡ್ಡ ದಾನ: ರಾಜೇಂದ್ರ ಕುಮಾರ್‌

ವಿದ್ಯಾದಾನ ಮನುಷ್ಯನ ಏಳಿಗೆಗೆ ಅತೀ ದೊಡ್ಡ ದಾನ: ರಾಜೇಂದ್ರ ಕುಮಾರ್‌

NEWBORN

ಆಚಾರ್ಯ ಎಲೈವ್‌: ನವಜಾತ ಶಿಶುವಿನ ಆರೈಕೆ, ಅಂತರಾಷ್ಟ್ರೀಯ ವಿಚಾರ ಸಂಕಿರಣ

MUST WATCH

udayavani youtube

ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ

udayavani youtube

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ | Udayavani

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

ಹೊಸ ಸೇರ್ಪಡೆ

ಈ ರಾಶಿಯವರಿಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆ ಕೊನೆಗೊಳ್ಳುವ ಸೂಚನೆ!

ಈ ರಾಶಿಯವರಿಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆ ಕೊನೆಗೊಳ್ಳುವ ಸೂಚನೆ!

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.