ಪೊಯಿಸರ್ ಜಿಮ್ಖಾನದ 18ನೇ ವಾರ್ಷಿಕ ಕ್ರೀಡಾಕೂಟ
Team Udayavani, Dec 3, 2018, 12:30 PM IST
ಮುಂಬಯಿ: ಪೊಯಿಸರ್ ಜಿಮ್ಖಾನದ ವತಿಯಿಂದ 18ನೇ ವಾರ್ಷಿಕ ಕ್ರೀಡಾಕೂಟವು ನ. 24 ರಂದು ಪ್ರಾರಂಭಗೊಂಡಿದ್ದು, ಡಿ.2 ರವರೆಗೆ ನಡೆಯಲಿದೆ.
ಪೊಯಿಸರ್ ಜಿಮ್ಖಾನ ಮೈದಾನ ದಲ್ಲಿ ಈ ಕ್ರೀಡಾಕೂಟವು ಜರ ಗುತ್ತಿದ್ದು, ಉತ್ತರ ಮುಂಬಯಿ ಕ್ರೀಡಾ ಮಹೋತ್ಸವ ಲಾಂಭನದಲ್ಲಿ ಆಯೋಜಿಸಲಾಗಿದ್ದು, ವೈವಿಧ್ಯ ಮಯ ಕ್ರೀಡೆಗಳು ದಿನಂಪ್ರತೀ ಅದ್ದೂರಿಯಾಗಿ ನಡೆಯುತ್ತಿದೆ.
ನ. 24ರಂದು ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾ ಗಿತ್ತು. ಒಟ್ಟು 16 ತಂಡಗಳು ಪಾಲ್ಗೊಂಡಿದ್ದು, ಫೈನಲ್ನಲ್ಲಿ ಕಾಂದಿವಲಿಯ ಸ್ವಾಮಿ ವಿವೇಕಾನಂದ ಶಾಲೆ ಹಾಗೂ ಆಕ್ಸ್ಫರ್ಡ್ ಶಾಲಾ ತಂಡಗಳು ಸೆಣಸಾಡಿದ್ದವು.
ಸ್ವಾಮೀ ವಿವೇಕಾನಂದ ಶಾಲಾ ತಂಡದ ಕ್ಯಾಪ್ಟನ್ ಆಯುಷ್ ಜೆಟ್ವಾ ಇವರ 94 ರನ್ನುಗಳ ನೆರವಿನಿಂದ ತಂಡವು ವಿಜಯಮಾಲೆಯನ್ನು ತನ್ನದಾಗಿಸಿಕೊಂಡಿತು.
ಸ್ವಾಮಿ ವಿವೇಕಾನಂದ ತಂಡವು ಬಾರಿಸಿದ 209 ರನ್ನುಗಳಿಗೆ ವಿರುದ್ಧ ವಾಗಿ ಆಕ್ಸ್ಫರ್ಡ್ ತಂಡವು 188 ರನ್ಗಳಿಗೆ ಸರ್ವಪತನವನ್ನು ಕಂಡಿತು. ವಿಜೇತ ತಂಡಗಳಿಗೆ ಗಣ್ಯರು ಪ್ರಶಸ್ತಿ ಪ್ರದಾನಿಸಿದರು. ಕ್ರೀಡಾಕೂಟದ ಯಶಸ್ಸಿಗೆ ಸಹಕರಿ ಸುವಂತೆ ಪೊಯಿಸರ್ ಜಿಮಾ^ನದ ಉಪಾಧ್ಯಕ್ಷ, ಸಂಘಟಕ ಕರುಣಾಕರ ಶೆಟ್ಟಿ ಅವರು ತಿಳಿಸಿದ್ದಾರೆ.
ಚಿತ್ರ-ವರದಿ : ರಮೇಶ್ ಉದ್ಯಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?