ಪುಣೆ ಬಂಟ್ಸ್‌ ಅಸೋಸಿಯೇಶನ್‌ನಿಂದ ಪ್ರತಿಭಾ ಪುರಸ್ಕಾರ ಶೈಕ್ಷಣಿಕ ನೆರವು

Team Udayavani, Jul 12, 2019, 4:03 PM IST

ಪುಣೆ:ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸ ಪಡೆದು ಭವಿಷ್ಯವನ್ನು ಆಯ್ದು ಕೊಳ್ಳುವಲ್ಲಿ ಸೀಮಿತವಾದ ಆಯ್ಕೆಗಳಿದ್ದವು. ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಭವಿಷ್ಯದಲ್ಲಿ ತಾನೇನಾಗಬೆಂದು ಚಿಂತಿಸಿ, ಮುಂದಡಿಯಿ ಡಲು ವಿಪುಲವಾದ ಆಯ್ಕೆಗಳಿದ್ದು ಮಕ್ಕಳು ಉನ್ನತವಾದ ಗುರಿಯೊಂದಿಗೆ ಯೋಗ್ಯ ಆಯ್ಕೆಯನ್ನು ಮಾಡಿದರೆ ಭವಿಷ್ಯ ಉಜ್ವಲ ವಾಗಲಿದೆ ಎಂದು ಪುಣೆಯ ಖ್ಯಾತ ದಂತವೈದ್ಯ ಡಾ| ವಿವೇಕ್‌ ಹೆಗ್ಡೆ ನುಡಿದರು.

ಜು. 7ರಂದು ಪುಣೆ ಸ್ವಾರ್‌ಗೆಟ್‌ ಹತ್ತಿರದಲ್ಲಿರುವ ಮರಾಠ ಚೇಂಬರ್‌ ಆಫ್‌ ಕಾಮರ್ಸ್‌ ಸಭಾಂಗಣದಲ್ಲಿ ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಆಶ್ರಯದಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ, ಶೈಕ್ಷಣಿಕ ನೆರವು ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಜೀವನದಲ್ಲಿ ಉನ್ನತ ಗುರಿ, ಸ್ಪಷ್ಟತೆ, ಸಾಧಿಸುವ ಛಲ, ಪ್ರಯತ್ನಶೀಲತೆ ಹಾಗೂ ಏಕಾಗ್ರತೆ ಇದ್ದರೆ ಯಶಸ್ಸನ್ನು ಸಾಧ್ಯವಾಗುತ್ತದೆ. ನಮ್ಮ ಸಮಾಜದ ಬಹಳಷ್ಟು ಮಕ್ಕಳು ವಿದ್ಯೆಯಲ್ಲಿ ಉತ್ತಮ ಸಾಧನೆ ಮಾಡಿರುವುದನ್ನು ಕಂಡಾಗ ಸಂತೋಷವಾಗುತ್ತಿದೆ. ಅಂತೆಯೇ ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ ಸಾಮಾಜಿಕ ಚಿಂತನೆಯ ನೆಲೆಗಟ್ಟಿನಲ್ಲಿ ಉತ್ತಮ ಕಾರ್ಯಗಳಾಗುತ್ತಿರುವುದು ಅಭಿನಂದನೀಯವಾಗಿದೆ. ನಮ್ಮ ಸಮಾಜದಲ್ಲಿ ಸಮಾಜ ಸೇವೆಯ ಕಾರ್ಯಗಳು ನಡೆಯುವಷ್ಟು ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಬಂಟ ಸಾಮಾಜದವರೆಂಬ ಹೆಮ್ಮೆ ನಮಗೆಲ್ಲರಿಗೂ ಇದೆ. ಈ ಸಂಘ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಸೇವೆ ನಡೆಸುವಂತಾಗಲಿ ಎಂದರು.
ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ನಾರಾಯಣ ಕೆ. ಶೆಟ್ಟಿ, ಸುಭಾಶ್ಚಂದ್ರ ಹೆಗ್ಡೆ ಕಟ್ಟಿಂಗೇರಿಮನೆ, ಜಯ ಶೆಟ್ಟಿ ಮಿಯ್ನಾರು, ಸಂಘದ ಉಪಾಧ್ಯಕ್ಷರಾದ ಗಣೇಶ್‌ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಅರವಿಂದ ರೈ, ಕೋಶಾಧಿಕಾರಿ ದಿನೇಶ್‌ ಶೆಟ್ಟಿ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೀಪಾ ಅರವಿಂದ ರೈ, ಮಹಿಳಾ ವಿಭಾಗದ ಕಾರ್ಯದರ್ಶಿ ಉಷಾ ಯು. ಶೆಟ್ಟಿ ಅವರು ಉಪಸ್ಥಿತರಿದ್ದರು. 2018-2019ನೇ ಶೈಕ್ಷಣಿಕ ಸಾಲಿನಲ್ಲಿ 10 ಹಾಗೂ 12 ನೇ ತರಗತಿಯಲ್ಲಿ ಶೇ. 80 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಬಂಟ ಸಮಾಜದ ವಿದ್ಯಾರ್ಥಿಗಳನ್ನು ಈ ಸಂದರ್ಭ ದಲ್ಲಿ ಸತ್ಕರಿಸಲಾಯಿತು. ಆರ್ಥಿಕವಾಗಿ ತೀರಾ ಬಡತನದಲ್ಲಿರುವ ಸಮಾಜ ಬಾಂಧವರ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ವಿತರಿಸಲಾಯಿತು.

ಡಾ| ವಿವೇಕ್‌ ಹೆಗ್ಡೆ ಅವರನ್ನು ಸಂಘದ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆ, ಪುಷ್ಪಗುತ್ಛ ನೀಡಿ ಸಮ್ಮಾನಿಸಲಾಯಿತು. ಯುವ ವಿಭಾಗದ ಕಾರ್ಯಾಧ್ಯಕ್ಷೆ ನಮ್ರತಾ ಜಯ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಸಮಿತಿಯ ವರದಿಯನ್ನು ವಾಚಿಸಿದರು. ಅಕ್ಷತಾ ಅರವಿಂದ ರೈ ಹಾಗೂ ಪ್ರಜ್ಞಾ ಆನಂದ್‌ ಶೆಟ್ಟಿ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ನೆರವಿನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಧಾನ ಕಾರ್ಯದರ್ಶಿ ಅರವಿಂದ ರೈ ಸ್ವಾಗತಿಸಿದರು. ಶಾಲಿನಿ ಮಹೇಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೆಮೂ¤ರು ಸುಧಾಕರ ಶೆಟ್ಟಿ ಪ್ರಾರ್ಥಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಅಧ್ಯಕ್ಷರಾದ ವಿಜಯ್‌ ಎಸ್‌. ಶೆಟ್ಟಿ ಬೋರ್ಕಟ್ಟೆ, ಪಿಂಪ್ರಿ-ಚಿಂಚಾÌಡ್‌ ತುಳು ಸಂಘದ ಅಧ್ಯಕ್ಷ ಹರೀಶ್‌ ಶೆಟ್ಟಿ ಕುರ್ಕಾಲ್‌, ಬಾಲಕೃಷ್ಣ ಶೆಟ್ಟಿ ಹಡಪ್ಸರ್‌, ಉಷಾ ಕುಮಾರ್‌ ಶೆಟ್ಟಿ, ರೋಹಿತ್‌ ಶೆಟ್ಟಿ ನಗ್ರಿಗುತ್ತು, ಸುಧೀರ್‌ ಶೆಟ್ಟಿ, ದಿನೇಶ್‌ ಶೆಟ್ಟಿ ಎನ್‌ಐಬಿಎಂ, ಭಾಸ್ಕರ್‌ ಶೆಟ್ಟಿ, ದಿನೇಶ್‌ ಶೆಟ್ಟಿ ಬಜಗೋಳಿ, ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆಯರಾದ ಸುಜಾತಾ ಎಸ್‌. ಹೆಗ್ಡೆ, ಸುಧಾ ಎನ್‌. ಶೆಟ್ಟಿ, ಸರೋಜಿನಿ ಜೆ. ಶೆಟ್ಟಿ, ಮಲ್ಲಿಕಾ ಆನಂದ್‌ ಶೆಟ್ಟಿ, ಸದಸ್ಯರಾದ ಪೂರ್ಣಿಮಾ ಶೆಟ್ಟಿ, ಪ್ರಸಾದಿನಿ ಎಸ್‌. ಶೆಟ್ಟಿ, ಅಮಿತಾ ಯು. ಶೆಟ್ಟಿ ಮತ್ತು ರೇಷ್ಮಾ ಆರ್‌. ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸತೀಶ್‌ ಶೆಟ್ಟಿ ಎರವಾಡ, ತಾರಾನಾಥ ರೈ ಸೂರಂಬೈಲ್‌, ನಿಖೀಲ್‌ ನಾರಾಯಣ ಶೆಟ್ಟಿ, ಅಕ್ಷತ್‌ ಅರವಿಂದ್‌ ರೈ ಹಾಗೂ ಪ್ರತೀûಾ ಆನಂದ್‌ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ನಮ್ಮ ಸಂಘ ಆರಂಭವಾದಂದಿನಿಂದಲೂ ಕಲಿಯುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಸಂಘದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸಂಘದ ಹಿತಚಿಂತಕ ದಾನಿಗಳು ಈ ಕಾರ್ಯಕ್ಕೆ ಬೆಂಬಲಿಸಿ ಆರ್ಥಿಕ ನೆರವನ್ನು ನೀಡುತ್ತಾ ಬಂದಿದ್ದು ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಇಂದು ಬಹು ಸಂಖ್ಯೆಯಲ್ಲಿ ನಮ್ಮ ಸಮಾಜದ ವಿದ್ಯಾರ್ಥಿಗಳು ಇಲ್ಲಿ ಉಪಸ್ಥಿತರಿರುವುದನ್ನು ಕಂಡಾಗ ನಿಜವಾಗಿಯೂ ಸಂತಸವಾಗುತ್ತಿದೆ. ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗವೂ ಸಂಘದ ಪ್ರತಿಯೊಂದು ಕಾರ್ಯಗಳನ್ನು ಅಚ್ಚುಕಟ್ಟಾಗಿ ನೆರವೇರಿಸಲು ಸರ್ವ ಸಹಕಾರ ನೀಡುತ್ತಿರುವುದು ಸಂಘದ ಅಭಿವೃದ್ಧಿಗೆ ಪೂರಕವಾಗಿದೆ. ಮುಂದೆಯೂ ನಿಮ್ಮೆಲ್ಲರ ಸಹಕಾರ ನಿರಂತರವಾಗಿರಲಿ..
– ಆನಂದ್‌ ಶೆಟ್ಟಿ ಮಿಯ್ನಾರು, ಅಧ್ಯಕ್ಷರು, ಬಂಟ್ಸ್‌ ಅಸೋಸಿಯೇಶನ್‌ ಪುಣೆ

ಚಿತ್ರ -ವರದಿ :ಕಿರಣ್‌ ಬಿ. ರೈ ಕರ್ನೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ