Udayavni Special

ಪ್ರತಿಷ್ಠಿತ ‘ಓಂ ಜೈ ಶಂಕರ್‌’ ಪ್ರಶಸ್ತಿ ಪ್ರದಾನ

ಅಕ್ಕಲ್ಕೋಟೆ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಕ್ಕೆ

Team Udayavani, Aug 4, 2019, 1:57 PM IST

mumbai-tdy-3

ಸೊಲ್ಲಾಪುರ, ಆ. 3: ತೀರ್ಥಕ್ಷೇತ್ರ ಅಕ್ಕಲ್ಕೋಟೆ ನಗರದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೆಜಯರಾಜೆ ಭೋಸ್ಲೆ ಅವರಿಗೆ ರಾಜ್ಯದ ಧಾರ್ಮಿಕ ಕ್ಷೇತ್ರದ ಪ್ರತಿಷ್ಠಿತ ಪುಣೆಯ ಓಂ ಜೈ ಶಂಕರ್‌ ಪ್ರತಿಷ್ಠಾನ್‌ ವತಿಯಿಂದ ರಾಜ್ಯ ಮಟ್ಟದ ಓಂ ಜೈ ಶಂಕರ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅನ್ನಛತ್ರ ಮಂಡಳದ ಹಳೆಯ ಮಹಾಪ್ರಸಾದ ಗೃಹದಲ್ಲಿ ಶ್ರೀ ಶಂಕರ್‌ ಮಹಾರಾಜ್‌ ಭಕ್ತರ 4ನೇ ಸ್ನೇಹ ಸಮಾವೇಶದಲ್ಲಿ ನಾಸಿಕ್‌ನ ಮಾಧವನಾಥ ಮಹಾರಾಜರ ಹಸ್ತದಿಂದ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೆಜಯರಾಜೆ ಭೋಸ್ಲೆ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.

ಜನ್ಮೆ ಜಯರಾಜೆ ಭೋಸ್ಲೆ ಅವರ ಅವರ ನೇತೃತ್ವದಲ್ಲಿ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳವನ್ನು 1988 ರಲ್ಲಿ ಗುರುಪೂರ್ಣಿಮೆಯಂದು ಸ್ಥಾಪಿಸಿದರು. ಇಂದು ಸುಮಾರು 15ರಿಂದ 20 ಸಾವಿರ ಸ್ವಾಮಿ ಭಕ್ತರು ಪ್ರತಿದಿನ ಮಹಾಪ್ರಸಾದ ಸ್ವೀಕರಿಸುತ್ತಿದ್ದಾರೆ. ಅನ್ನದಾಸೋಹದೊಂದಿಗೆ ಮಂಡಳದ ವತಿಯಿಂದ ಸಮಾಜಸೇವೆ ಕಾರ್ಯ ಮಾಡಲಾಗುತ್ತಿದೆ. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಮಂಡಳದ ಕೊಡುಗೆ ಅಪಾರವಾಗಿದೆ. ಮಂಡಳದ ನಿಯೋಜಿತ ಮಹಾಪ್ರಸಾದ ಗೃಹ ಐದು ಅಂತಸ್ತಿನ ಕಟ್ಟಡದ ಕಾರ್ಯ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಅನ್ನಛತ್ರದಲ್ಲಿ ಸ್ವಚ್ಛತೆಗೆ ಮಹತ್ವ ನೀಡಲಾಗಿದೆ. ಆದ್ದರಿಂದ ಜನ್ಮೆಜಯರಾಜೆ ಭೋಸ್ಲೆ ಅವರ ಕಾರ್ಯವನ್ನು ಗುರುತಿಸಿ ಪುಣೆಯ ಸಂಸ್ಥೆಯು ಈ ಪ್ರಶಸ್ತಿಯನ್ನು ಪ್ರದಾನಿಸಿದೆ.

ಈ ಸಂದರ್ಭದಲ್ಲಿ ಶ್ರೀ ವಿಶ್ವೇಶ್ವರ ಸ್ವಾಮಿ ಮಹಾರಾಜ್‌ ಮಂಗಲ್ ಭಕ್ತ ಸೇವಾ ಮಂಡಳದ ಅಧ್ಯಕ್ಷ ರಾರಾಭಾವು ಕೊಠಾರಿ, ಡಾ| ಜಾನ್‌ ಡೂಯಿಂಗ್‌ ಹೇಗ್‌ ಜರ್ಮನಿ, ಸುರೇಖಾ ಪುರಾಣಿಕ್‌, ಸದ್ಗುರು ಪಿಟಲ್ ಮಹಾರಾಜ್‌, ಹಿರಿಯ ಲೇಖಕ ಡಾ| ಯಶ್ವಂತ್ರಾವ್‌ ಪಾಟೀಲ್, ಡಾ| ರಾಧಿಕಾ ಪಾರಾಸನಿಸ್‌, ಹಿರಿಯ ಚಿಂತಕ ಆನಂದ್‌ ಜೋಗದಂಡ್‌, ಡಾ| ಶಾಮಾ ಕುಲಕರ್ಣಿ ನಾಸಿಕ್‌, ಎಚ್.ಪಿ. ಮಾಧವನಾಥ ಮಹಾರಾಜ್‌ ಪಾಥರ್ಡಿ, ಪೇಂಟರ್‌ ಕಾಕಾ ಕಡ್ಲಾಸ್ಕರ್‌, ಬಾರ್ವೇಕಾಕಾ ನಾಸಿಕ್‌, ಸುರೇಂದ್ರ ಭಾನೋಸೆ, ಬೃಜೇಶ್‌ ಅಯ್ಯರ್‌ ಪುಣೆ, ಮಿಲಿಂದ್‌ ಮಗರ್‌ ನಾಸಿಕ್‌, ವಿಜಯ್‌ ಕೇದಾರಿ ಮಹಾರಾಜ್‌, ಅನಿಲ್ ದಕ್ಸಿತ್‌ ಮಹಾರಾಜ್‌ ಪುಣೆ, ಡಾ| ರಾಜೇಂದ್ರ ಮುಲೆ ನಾಸಿಕ್‌, ಘೋಟ್ವಾಡೆಕರ್‌ ಮಹಾರಾಜ್‌ ಪುಣೆ, ಗೋಪಾಲ್ ದಾಲ್ವಿ, ಅಜಿತ್‌ ದೇಶಮುಖ್‌, ಅಂಜಲಿ ಮರೋಡ್‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗಾಗಿ ಓಂ ಜೈ ಶಂಕರ್‌ ಪ್ರತಿಷ್ಠಾನ್‌ ಅಧ್ಯಕ್ಷ ಪಪ್ಪಾ ಪುರಾಣಿಕ್‌, ಬಾಲಕಿಸಾನ್‌ ರಾಠಿ, ಗಜಾನನ ಪತ್ಕಿ, ರಮೇಶ್‌ ಅನ್ನಾ ಉಮರಗೆ, ಡಾ| ಅಮಿತ್‌ ಶೇಷ, ವಿಜಯ್‌ ಸರಾಫ್‌, ಧನಶ್ರೀ ಘೋರ್ಪಡೆ, ವಿವೇಕಾ ಟಕಲೆ, ದೀಪಕ್‌ ಸೋನಾರ್‌, ವೈಭವ್‌ ಪಾಂಡೆ, ಶ್ರೀಪಾದ್‌ ಪುರಾಣಿಕ್‌,ಅಜಿತ್‌ ಕ್ಷೀರ್‌ಸಾಗರ್‌ ಮೊದಲಾದವರುಸಹಕರಿಸಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

US-ELECTION

ಹೇಗಿದೆ ಅಮೆರಿಕನ್‌ ಚುನಾವಣ ಕಣ?

ಥಾರ್‌ ಮರುಭೂಮಿಯಲ್ಲೂ ನದಿ: 1,72,000 ವರ್ಷಗಳ ಹಿಂದೆ ಹರಿಯುತ್ತಿದ್ದ ನದಿ ಕುರುಹು ಪತ್ತೆ

ಥಾರ್‌ ಮರುಭೂಮಿಯಲ್ಲೂ ನದಿ: 1,72,000 ವರ್ಷಗಳ ಹಿಂದೆ ಹರಿಯುತ್ತಿದ್ದ ನದಿ ಕುರುಹು ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನವಿ ಮುಂಬಯಿ: 2.50 ಲಕ್ಷ ಕೋವಿಡ್‌ ಪರೀಕ್ಷೆ

ನವಿ ಮುಂಬಯಿ: 2.50 ಲಕ್ಷ ಕೋವಿಡ್‌ ಪರೀಕ್ಷೆ

mumbai-tdy-1

ಗ್ರಾಮದ ಒಳಿತಿಗೆ ಶ್ರಮಿಸೋಣ: ಸುರೇಶ್‌ ಕಾಂಚನ್‌

ಸಾಮಾಜಿಕ ಸ್ಪಂದನೆಗೆ ಹೆಚ್ಚು ಒತ್ತು ನೀಡಲಿ: ಎಂ. ಕೃಷ್ಣ ಎನ್‌. ಶೆಟ್ಟಿ

ಸಾಮಾಜಿಕ ಸ್ಪಂದನೆಗೆ ಹೆಚ್ಚು ಒತ್ತು ನೀಡಲಿ: ಎಂ. ಕೃಷ್ಣ ಎನ್‌. ಶೆಟ್ಟಿ

ಲಾಕ್‌ಡೌನ್‌: ಜನರ ನೆರವಿಗೆ ನಿಂತ ರೋಹನ್‌ ಶೆಟ್ಟಿ

ಲಾಕ್‌ಡೌನ್‌: ಜನರ ನೆರವಿಗೆ ನಿಂತ ರೋಹನ್‌ ಶೆಟ್ಟಿ

mumbai-tdy-1

ಕೋವಿಡ್‌ ಮಾರ್ಗಸೂಚಿ ಅನುಸರಿಸಿ ದೇವರ ದರ್ಶನ: ಸಚ್ಚಿದಾನಂದ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.