Udayavni Special

ಪುಣೆ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಹುತಾತ್ಮರಿಗೆ ಶ್ರದ್ಧಾಂಜಲಿ


Team Udayavani, Feb 26, 2019, 1:39 PM IST

2402mum04.jpg

ಪುಣೆ: ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಪುಣೆ ವತಿಯಿಂದ ಫೆ. 19ರಂದು ಹೊಟೇಲ್‌ ನ್ಯೂ ಸಾಗರ್‌ ವಾರ್ಜೆ ಇಲ್ಲಿ ಇತ್ತೀಚೆಗೆ  ಜಮ್ಮು ಕಾಶ್ಮೀರದ  ಪುಲ್ವಾಮದಲ್ಲಿ  ಭಯೋತ್ಪಾದಕರ ದುಷ್ಕೃತ್ಯಕ್ಕೆ ಬಲಿಯಾದ ಸಿಆರ್‌ಪಿಎಫ್‌ ಯೋಧರಿಗಾಗಿ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ  ನಾಟ್ಯಗುರು ಮದಂಗಲ್ಲು ಆನಂದ ಭಟ್‌, ಪುಣೆ ತುಳುಕೂಟದ ಗೌರವಾಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಇವರು ಉಪಸ್ಥಿತರಿದ್ದು ದೀಪ ಹಚ್ಚಿಟ್ಟು ಹುತಾತ್ಮರಿಗೆ ಪುಷ್ಪ ನಮನಗಳನ್ನು ಸಲ್ಲಿಸಿದರು.

ಈ ಸಂದರ್ಭ ಪಾಂಗಾಳ ವಿಶ್ವನಾಥ ಶೆಟ್ಟಿ ಮಾತನಾಡಿ,  ಫೆ. 14ರಂದು ಮೋಸದಿಂದ ನಮ್ಮ ಸೈನಿಕರನ್ನು ಬಲಿಪಡೆದ ನರರಾಕ್ಷಸರ ಕೃತ್ಯವನ್ನು ದೇಶವಾಸಿಗಳೆಲ್ಲರೂ ಯಾವುದೇ ಭೇದಭಾವ ಮಾಡದೆ ಖಂಡಿಸಲೇಬೇಕಾಗಿದೆ. ಹುತಾತ್ಮರಾದ ನಮ್ಮ ಹೆಮ್ಮೆಯ ಸೈನಿಕರ ಕುಟುಂಬದೊಂದಿಗೆ ನಾವೆಲ್ಲರೂ ದುಃಖದ ಘಳಿಗೆಯಲ್ಲಿದ್ದೇವೆ.  ಇಂತಹ ಕೃತ್ಯಗಳು ಇನ್ನೆಂದೂ ನಡೆಯದಿರಲೆಂದು ನಾವು ದೇವರಲ್ಲಿ ಪ್ರಾರ್ಥಿಸುತ್ತಾ ಅಗಲಿದ ವೀರಯೋಧರ ಆತ್ಮಗಳಿಗೆ ಭಗವಂತ ಚಿರಶಾಂತಿ ನೀಡಲಿ ಎಂದು ಎರಡು ನಿಮಿಷಗಳ  ಮೌನ ಪ್ರಾರ್ಥನೆಯನ್ನು ಸಲ್ಲಿಸೋಣ. ಇದು ದೇಶದ ನಾಗರಿಕರಾದ ನಮ್ಮೆಲ್ಲರ ಕರ್ತವ್ಯವೆಂದು ಭಾವಿಸುತ್ತೇನೆ ಎಂದರು.

ನಾಟ್ಯಗುರು ಮದಂಗಲ್ಲು ಆನಂದ ಭಟ್‌ ಅವರು ಮಾತನಾಡಿ,  ಇಂದು ನಾವು ನೆಮ್ಮದಿಯಿಂದ ದೇಶದಲ್ಲಿ ಯಾವುದೇ ಭಯವಿಲ್ಲದೆ ಬದುಕಲು ನಮ್ಮ ದೇಶರಕ್ಷಣೆ ಹೊತ್ತ ಸೈನಿಕರೇ ಕಾರಣ. ಅವರು  ಇಂದು ಭಯೋತ್ಪಾದಕರ ಕುಕೃತ್ಯಕ್ಕೆ ಬಲಿಯಾಗಿದ್ದು ನಮಗೆಲ್ಲರಿಗೂ ಅತೀವ ನೋವಿನ ಸಂಗತಿಯಾಗಿದೆ. ಅವರ ಕುಟುಂಬದ ದುಃಖದಲ್ಲಿ ನಾವೆಲ್ಲರೂ ಸಮಾನ ದುಃಖೀಗಳಾಗಿದ್ದೇವೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲಿ. ನಮ್ಮ ದೇಶದ ಪ್ರಧಾನ ಮಂತ್ರಿಗಳು ಮಾಡುವ ಉತ್ತಮ ಕಾರ್ಯಗಳನ್ನು ನಾವೆಲ್ಲರೂ ಬೆಂಬಲಿಸೋಣ ಎಂದು ನುಡಿದರು.

ಈ ಸಂದರ್ಭ ಸಂಘದ ಕಲಾವಿದರಾದ ವಾಸು ಕುಲಾಲ್‌ ವಿಟ್ಲ, ಸುಕೇಶ್‌ ಶೆಟ್ಟಿ ಎಣ್ಣೆಹೊಳೆ, ನಯನಾ ಸಿ. ಶೆಟ್ಟಿ, ಗೀತಾ ಡಿ. ಪೂಜಾರಿ, ಸರಸ್ವತಿ ಸಿ. ಕುಲಾಲ್‌, ಸಹನಾ ಸಿ. ಕುಲಾಲ…, ಪ್ರತೀûಾ ಡಿ.  ಪೂಜಾರಿ, ರೀಷ್ಮಾ  ಆರ್‌. ಶೆಟ್ಟಿ,  ಸದಸ್ಯರಾದ  ಸಾಧು ಶೆಟ್ಟಿ, ನಿತಿನ್‌ ಶೆಟ್ಟಿ, ಪ್ರಭಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಪುಷ್ಪ ನಮನಗಳನ್ನು ಸಲ್ಲಿಸಿದರು. 

ಚಿತ್ರ-ವರದಿ: ಕಿರಣ್‌ ರೈ ಕರ್ನೂರು

ಟಾಪ್ ನ್ಯೂಸ್

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

Singhu border murder- Accused Nihang Saravjeet Singh sent to 7-day judicial custody

ಸಿಂಘು ಗಡಿ ಹತ್ಯೆ ಪ್ರಕರಣ:- ಆರೋಪಿ ನಿಹಾಂಗ್‌ ಸರ್ವಜೀತ್ ಗೆ 7 ದಿನ ಪೊಲೀಸ್‌ ಕಸ್ಟಡಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

b-c-nagesh

1 ರಿಂದ 5ರ ವರೆಗೆ ಶಾಲೆ ಆರಂಭಕ್ಕೆ ಸರ್ವ ಸಿದ್ದತೆ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ದೂರವಾಗಿ ಜನಜೀವನ ಸುಗಮವಾಗಲಿ: ಪ್ರದೀಪ್‌ ಸಿ. ಶೆಟ್ಟಿ

ಕೊರೊನಾ ದೂರವಾಗಿ ಜನಜೀವನ ಸುಗಮವಾಗಲಿ: ಪ್ರದೀಪ್‌ ಸಿ. ಶೆಟ್ಟಿ

samshodhana

ಡಾ.ದಿನೇಶ್ ಶೆಟ್ಟಿಯವರ ಸಂಶೋಧನೆಗೆ ಅಬುಧಾಬಿಯಿಂದ 1 ಮಿಲಿಯನ್ ಅನುದಾನ!

Untitled-1

ನವರಾತ್ರಿ ಪ್ರಯುಕ್ತ ಡೊಂಬಿವಲಿಯಲ್ಲಿ  ಸೀರೆಗಳ ವಿಶೇಷ ಪ್ರದರ್ಶನ, ಮಾರಾಟ

ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ಮಹಿಳಾ ವಿಭಾಗದಿಂದ ದಸರಾ ಸಂಭ್ರಮಾಚರಣೆ

ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ಮಹಿಳಾ ವಿಭಾಗದಿಂದ ದಸರಾ ಸಂಭ್ರಮಾಚರಣೆ

ಚಾರ್ಕೋಪ್‌ ಕನ್ನಡಿಗರ ಬಳಗ: 22ನೇ ವಾರ್ಷಿಕ ಶಾರದಾ ಮಹಾಪೂಜೆ ಸಂಪನ್ನ

ಚಾರ್ಕೋಪ್‌ ಕನ್ನಡಿಗರ ಬಳಗ: 22ನೇ ವಾರ್ಷಿಕ ಶಾರದಾ ಮಹಾಪೂಜೆ ಸಂಪನ್ನ

MUST WATCH

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

ಹೊಸ ಸೇರ್ಪಡೆ

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

nayi

ಸಿಸಿ ಕ್ಯಾಮರಾ, ಸಾಮಾಜಿಕ ಜಾಲತಾಣಗಳಿಂದ ನಾಯಿಮರಿ ಪತ್ತೆ!

h1 n1 hospital

ಎಚ್‌1ಎನ್‌1: ಪ್ರತ್ಯೇಕ ವಾರ್ಡ್‌ ತೆರೆಯಲು ಸೂಚನೆ

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ ಗೌಳಿ ಪ್ರತಿಭೆ

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ ಗೌಳಿ ಪ್ರತಿಭೆ

ಬನ್ನಿಮಹಾಕಾಳಿ ದೇವಿಗೆ ವಿಶೇಷ ಪೂಜೆ

ಬನ್ನಿಮಹಾಕಾಳಿ ದೇವಿಗೆ ವಿಶೇಷ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.