Udayavni Special

ಪುಣೆ ಬಂಟರ ಸಂಘದ ವಿಶೇಷ  ಸಭೆ


Team Udayavani, Nov 16, 2018, 4:34 PM IST

1511mum08.jpg

ಪುಣೆ: ಪುಣೆ ಬಂಟರ  ಸಂಘದ ಕಾರ್ಯಕಾರಿ ಸಮಿತಿಯ  ಸಭೆಯೊಂದು ಸಂಘದ ಓಣಿ ಮಜಲು ಜಗನ್ನಾಥ ಶೆಟ್ಟಿ ಬಂಟರ ಭವನದ ಮೀಟಿಂಗ್‌ ಹಾಲ್‌ನಲ್ಲಿ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್‌ ಬೆಟ್ಟು ಸಂತೋಷ್‌ ಶೆಟ್ಟಿಯವರ ಅಧ್ಯಕ್ಷತೆ ಯಲ್ಲಿ ಜರಗಿತು.

ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆಯವರು ಕಳೆದ ಸಭೆಯ ವರದಿಯನ್ನು ಸಭೆಯ ಮುಂದಿಟ್ಟರು. ಗೌರವ ಕೋಶಾಧಿಕಾರಿ ಎರ್ಮಾಳ್‌ ಚಂದ್ರಹಾಸ್‌ ಶೆಟ್ಟಿ  ಆರ್ಥಿಕ ವ್ಯವಹಾರಗಳ ಮಾಹಿತಿಯನ್ನು ನೀಡಿದರು. ಭವನದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು ಮಾತನಾಡಿ,  ಕಳೆದ ನಾಲ್ಕು ವರ್ಷಗಳ ನನ್ನ ಅಧ್ಯಕ್ಷತೆಯ ಕಾಲಾವಧಿಯಲ್ಲಿ  ಪುಣೆ ಬಂಟರ ಸಂಘವು ಐತಿಹಾಸಿಕವಾದ ಕೆಲಸ ಗಳನ್ನು ಸಾಧಿಸಿದೆ ಎಂಬ ಅಭಿಮಾನ ನಮ್ಮದಾಗಿದೆ. ನೂತನ ಭವನ ನಿರ್ಮಾಣ ಸಂಘದ ಯಶಸ್ಸಿನ ಮೈಲುಗÇÉಾಗಿದ್ದು ಎಲ್ಲಕ್ಕಿಂತ ಮುಖ್ಯವಾಗಿ ಈ ಭವನ ನಿರ್ಮಿಸಲು ಕಾರಣೀಭೂತರಾದ ಸರ್ವ ದಾನಿಗಳನ್ನು ನಾವು ಭವಿಷ್ಯದಲ್ಲಿ ಯಾವತ್ತೂ ಮರೆಯದೆ ಗೌರವಗಳನ್ನು ಸಲ್ಲಿಸುತ್ತಿರಬೇಕಾಗಿದೆ. ಮುಂದೆ ಬರುವಂತಹ ಹೊಸ ಕಾರ್ಯಕಾರಿ ಸಮಿತಿಯಿರಲಿ, ಅಧ್ಯಕ್ಷರು ಯಾರೇ ಆಗಲಿ ಆದರೆ  ಭವನದ ದಾನಿಗಳ ಕೊಡುಗೆಯನ್ನು ನೆನಪಿಡುವ  ಕಾರ್ಯ ಆಗಬೇಕಾಗಿದೆ.  ಅದೇ ರೀತಿ ಸಮಾಜದ ಅಭ್ಯುದಯದ ಕನಸಿ ನೊಂದಿಗೆ ಆರಂಭಿಸಿದ ಮಹತ್ವಾಕಾಂಕ್ಷೆಯ ಕಲ್ಪವೃಕ್ಷ ಯೋಜನೆ ಸಮಾಜದ ಎಲ್ಲ ಸ್ಥರದ ಜನರಿಗೆ, ಮುಖ್ಯವಾಗಿ ಅಗತ್ಯವಿರುವ  ಜನರಿಗೆ ಆಶಾದಾಯಕವಾಗಿ ಕಾರ್ಯಾ ಚರಿಸಬೇಕಾಗಿದೆ. ಸುಮಾರು 5 ಕೋಟಿ ರೂಪಾಯಿಗಳ  ಆರಂಭಿಕ ಯೋಜನೆ ಇದಾಗಿದ್ದು ಈಗಾಗಲೇ ಎರಡು ಕೋಟಿ ರೂಪಾಯಿಗಳ ನೆರವು ಲಭಿಸಿದ್ದು  ಭವಿಷ್ಯದಲ್ಲಿ  ಸಮಾಜಮುಖೀ ಕಾರ್ಯಗಳಿಗೆ  ದಾನಿಗಳ ನೆರವಿನೊಂದಿಗೆ  ಸಮಾಜಕ್ಕೆ ಹಿತಕಾರಿಯಾಗಿ ಉತ್ತಮ ಯೋಜನೆಯಾಗಿ ಮೂಡಿಬರಲಿ ಎಂಬ ಆಶಯ ನಮ್ಮದಾಗಿದೆ. ಕೇವಲ ಭವನ ನಿರ್ಮಿಸಿ ನಾವು ವಿರಮಿಸುವಂತಾಗಬಾರದು. ಈ ಭವನವನ್ನು ಸುವ್ಯವಸ್ಥಿತ ರೀತಿಯಲ್ಲಿ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.  ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಳ್ಳದೆ ಒಗ್ಗಟಿನ ಮಂತ್ರ ನಮ್ಮದಾಗಬೇಕು. ಕಳೆದ ನಾಲ್ಕು ವರ್ಷಗಳಿಂದ ಸಂಘದ ಕಾರ್ಯ ದೇವರ ಕಾರ್ಯವೆಂದು ಭಾವಿಸಿ ಸಂಘದ ಸರ್ವ ಕಾರ್ಯಗಳಲ್ಲಿ ಹೆಗಲಿಗೆ ಹೆಗಲು ನೀಡಿ ಸಹಕಾರ ನೀಡಿದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಗಳಿಗೆ ಹೃದಯಾಂತರಾಳದ ಕೃತಜ್ಞತೆಗಳು.  ಸಂಘದೊಂದಿಗೆ, ಸಮಾಜದೊಂದಿಗೆ ನಮ್ಮ ನಿರಂತರ ಸಂಪರ್ಕ, ಸದ್ಭಾವನೆ, ಸೌಹಾರ್ದತೆ   ಮುಂದುವರಿಯಲಿ ಎಂದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಮಾಧವ ಆರ್‌. ಶೆಟ್ಟಿ, ಪದಾಧಿಕಾರಿಗ ಳಾದ ಚಂದ್ರಶೇಖರ ಶೆಟ್ಟಿ ನಿಟ್ಟೆ, ವಿವೇಕಾನಂದ್‌ ಶೆಟ್ಟಿ ಆವರ್ಸೆ, ಶಶೀಂದ್ರ  ಶೆಟ್ಟಿ, ಪ್ರವೀಣ್‌ ಶೆಟ್ಟಿ ಪುತ್ತೂರು, ಪ್ರಶಾಂತ್‌ ಶೆಟ್ಟಿ ಹೆರ್ಡೆಬೀಡು, ಸತೀಶ್‌ ಶೆಟ್ಟಿ, ಗಣೇಶ್‌ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ವಿಶ್ವನಾಥ ಶೆಟ್ಟಿ, ರಂಜಿತ್‌ ಶೆಟ್ಟಿ, ಪ್ರಶಾಂತ್‌ ಎ. ಶೆಟ್ಟಿ, ಸುಜಿತ್‌ ಶೆಟ್ಟಿ ಮಹಿಳಾ ವಿಭಾಗದ  ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಕಾರ್ಯದರ್ಶಿ ಸುಲತಾ ಎಸ್‌. ಶೆಟ್ಟಿ, ಕೋಶಾಧಿಕಾರಿ ಸುಚಿತ್ರಾ ಎಸ್‌. ಶೆಟ್ಟಿ, ಸಂಘದ ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ  ದಿನೇಶ್‌ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ಗಣೇಶ್‌ ಪೂಂಜಾ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್‌ ಶೆಟ್ಟಿ ಬೈಲೂರು, ಕಾರ್ಯದರ್ಶಿ ಶೇಖರ್‌ ಸಿ. ಶೆಟ್ಟಿ ಉಪಸ್ಥಿತರಿದ್ದರು. 

ಚಿತ್ರ-ವರದಿ: ಕಿರಣ್‌ ಬಿ.ರೈ ಕರ್ನೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶಿಕ್ಷಣ ಸಂವಾದ: ದೇಸೀ ಜ್ಞಾನದತ್ತ ಹೊರಳಿದ ಭಾರತದ ಹೊಸ ಶಿಕ್ಷಣ ನೀತಿ…

ಶಿಕ್ಷಣ ಸಂವಾದ: ದೇಸೀ ಜ್ಞಾನದತ್ತ ಹೊರಳಿದ ಭಾರತದ ಹೊಸ ಶಿಕ್ಷಣ ನೀತಿ…

ಇನ್ನೂ ಮುಗಿದಿಲ್ಲ ವಸತಿ ನಿಲಯ ಗೊಂದಲ!

ಇನ್ನೂ ಮುಗಿದಿಲ್ಲ ವಸತಿ ನಿಲಯ ಗೊಂದಲ!

ಹೊಸ ಸಮುದ್ರದ ಸೃಷ್ಟಿಗೆ ಕಾರಣವಾಗಲಿದೆಯೇ ಆಫ್ರಿಕಾದ ಬಿರುಕು?

ಹೊಸ ಸಮುದ್ರದ ಸೃಷ್ಟಿಗೆ ಕಾರಣವಾಗಲಿದೆಯೇ ಆಫ್ರಿಕಾದ ಬಿರುಕು?

ಕೈಸೇರಲಿದೆ ಇ-ಪಾಸ್‌ಪೋರ್ಟ್‌

ಕೈಸೇರಲಿದೆ ಇ-ಪಾಸ್‌ಪೋರ್ಟ್‌

ಎಸೆಸೆಲ್ಸಿ ಪೂರಕ ಪರೀಕ್ಷೆ: ಅರ್ಜಿ ಆಹ್ವಾನ

ಎಸೆಸೆಲ್ಸಿ ಪೂರಕ ಪರೀಕ್ಷೆ: ಅರ್ಜಿ ಆಹ್ವಾನ

ಖಾಸಗಿ ರೈಲುಗಳಿಗೆ ಇರಲಿದೆ ಕೇಂದ್ರದ ನಿಗಾ; ನಿಯಮಗಳ ಪ್ರಕಟ; ಸಮಯ ಪಾಲನೆಗೆ ಇರಲಿದೆ ಬಿಗಿ ಕ್ರಮ

ಖಾಸಗಿ ರೈಲುಗಳಿಗೆ ಇರಲಿದೆ ಕೇಂದ್ರದ ನಿಗಾ; ನಿಯಮಗಳ ಪ್ರಕಟ; ಸಮಯ ಪಾಲನೆಗೆ ಇರಲಿದೆ ಬಿಗಿ ಕ್ರಮ

ವಿದ್ಯುತ್‌ ಬೇಡಿಕೆ ಕುಸಿತ; ಮೊದಲ ಬಾರಿ ಆರ್‌ಟಿಪಿಎಸ್‌ ಬಂದ್‌!

ವಿದ್ಯುತ್‌ ಬೇಡಿಕೆ ಕುಸಿತ; ಮೊದಲ ಬಾರಿ ಆರ್‌ಟಿಪಿಎಸ್‌ ಬಂದ್ ‌!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬಯಿ: ಸೋಂಕಿತರನ್ನು ಕಾಡುತ್ತಿರುವ ಮಧುಮೇಹ

ಮುಂಬಯಿ: ಸೋಂಕಿತರನ್ನು ಕಾಡುತ್ತಿರುವ ಮಧುಮೇಹ

ಕೊಂಕಣಕ್ಕೆ 200 ವಿಶೇಷ ರೈಲುಗಳ ಸಂಚಾರ

ಕೊಂಕಣಕ್ಕೆ 200 ವಿಶೇಷ ರೈಲುಗಳ ಸಂಚಾರ

ಮುಂಬಯಿ: 1ಲಕ್ಷ ದಾಟಿದ ಚೇತರಿಸಿಕೊಂಡವರ ಸಂಖ್ಯೆ

ಮುಂಬಯಿ: 1ಲಕ್ಷ ದಾಟಿದ ಚೇತರಿಸಿಕೊಂಡವರ ಸಂಖ್ಯೆ

MUMBAI-TDY-1

ರೈತರ ಸಾಲಮನ್ನಾ ಯೋಜನೆ 26 ಲಕ್ಷ ಮಂದಿಗೆ ಲಾಭ: ಪಾಟೀಲ್‌

ಹೆಚ್ಚಿನ ಪರೀಕ್ಷೆ: ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ  ಭಾರೀ ಇಳಿಕೆ

ಹೆಚ್ಚಿನ ಪರೀಕ್ಷೆ: ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ

MUST WATCH

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik

udayavani youtube

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Making

udayavani youtube

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆಹೊಸ ಸೇರ್ಪಡೆ

ಶಿಕ್ಷಣ ಸಂವಾದ: ದೇಸೀ ಜ್ಞಾನದತ್ತ ಹೊರಳಿದ ಭಾರತದ ಹೊಸ ಶಿಕ್ಷಣ ನೀತಿ…

ಶಿಕ್ಷಣ ಸಂವಾದ: ದೇಸೀ ಜ್ಞಾನದತ್ತ ಹೊರಳಿದ ಭಾರತದ ಹೊಸ ಶಿಕ್ಷಣ ನೀತಿ…

ಇನ್ನೂ ಮುಗಿದಿಲ್ಲ ವಸತಿ ನಿಲಯ ಗೊಂದಲ!

ಇನ್ನೂ ಮುಗಿದಿಲ್ಲ ವಸತಿ ನಿಲಯ ಗೊಂದಲ!

ವೀಸಾ ನಿಯಮ ರಿಯಾಯಿತಿ; ಹೊಸ ಕ್ರಮಗಳನ್ನು ಪ್ರಕಟಿಸಿದ ಅಮೆರಿಕ ಸರಕಾರ

ವೀಸಾ ನಿಯಮ ರಿಯಾಯಿತಿ; ಹೊಸ ಕ್ರಮಗಳನ್ನು ಪ್ರಕಟಿಸಿದ ಅಮೆರಿಕ ಸರಕಾರ

ಸುಪ್ರೀಂ ತೀರ್ಪು ಸಮಾನತೆಯ ಹಾದಿಯಲ್ಲಿ

ಸುಪ್ರೀಂ ತೀರ್ಪು ಸಮಾನತೆಯ ಹಾದಿಯಲ್ಲಿ

ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರು; ಉತ್ತರ ಪ್ರದೇಶ ಸರಕಾರ ನಿರ್ಧಾರ

ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರು; ಉತ್ತರ ಪ್ರದೇಶ ಸರಕಾರ ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.