ಪುಣೆಯಲ್ಲಿ ಕೋರ್ದಬ್ಬು ಬಾರಗ-ತನ್ನಿಮಾನಿಗ ಯಕ್ಷಗಾನ ಪ್ರದರ್ಶನ,ಸಮ್ಮಾನ

Team Udayavani, Sep 9, 2018, 3:26 PM IST

ಪುಣೆ:  ನಮ್ಮ ಕರಾವಳಿ ಕರ್ನಾಟಕದ ಭವ್ಯ ಸುಂದರ ಯಕ್ಷಗಾನ  ಎಂಬುದು ಇಂದು ನಮ್ಮೊಂದಿಗೆ ಕಂಗೊಳಿಸುತ್ತಿರುವ ಶ್ರೇಷ್ಠ ಕಲೆ. ಹಲವಾರು ವರ್ಷಗಳ ಇತಿಹಾಸವುಳ್ಳ ಈ ಯಕ್ಷಗಾನ ಎನ್ನುವುದು ಕೇವಲ ಮನೋರಂಜನೆಯಲ್ಲ. ನಮ್ಮ ದೇಶದ ಸಂಸ್ಕೃತಿಯ ಆರಾಧನೆಯ ಅಂಗವಾಗಿದೆ. ನಮ್ಮ ನಡೆ, ಆಚರಣೆ, ಜನಪದ, ಧಾರ್ಮಿಕ, ಪೌರಾಣಿಕ,  ಸಂಸ್ಕೃತಿ-ಸಂಸ್ಕಾರ, ಸಾಮಾಜಿಕ ಆಗು ಹೋಗುಗಳ ಆಗರವಾಗಿದೆ. ಯಕ್ಷಗಾನದ  ಹುಟ್ಟಿನಿಂದ  ಇಂದಿನವರೆಗೂ ಸುಮಾರು 10 ಗಂಟೆಗಳ ಕಾಲ  ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವಂಥಹ ಶಕ್ತಿ   ಕಲೆಯೊಂದಕ್ಕಿ ದ್ದರೆ  ಅದು  ಯಕ್ಷಗಾನ  ಮಾತ್ರ. ಕಲೆಯ  ಎಲ್ಲ  ಪ್ರಕಾರಗಳು  ಅಂದರೆ ನಾಟ್ಯ, ಅಭಿನಯ, ಆಕರ್ಷಕ ಉಡುಗೆ, ಬಣ್ಣ, ಮುಖವರ್ಣಿಕೆ, ಮಾತುಗಾರಿಕೆ, ಪದ್ಯ, ಗದ್ಯ, ಹಾಡುಗಾರಿಕೆಯ ಸಮ್ಮಿಶ್ರಣವೇ ಯಕ್ಷಗಾನವಾಗಿದೆ ಎಂದು ನಿಡ್ಲೆ ಶ್ರೀ ಮಹಾ ಗಣಪತಿ ಯಕ್ಷಗಾನ ಮಂಡಳಿಯ  ಸಂಚಾಲಕ  ಗೋವಿಂದ ಭಟ್‌ ನಿಡ್ಲೆ ಹೇಳಿದರು.

ಪುಣೆಯ ಖ್ಯಾತ ಪುರೋಹಿತರಾದ ಶ್ರೀ ರಾಘವೇಂದ್ರ ಭಟ್‌ ಪಿಂಪ್ರಿ ಇವರ ಪ್ರಾಯೋಜಕತ್ವದ ಮತ್ತು ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್‌  ಶೆಟ್ಟಿ ಅವರ    ವ್ಯವಸ್ಥಾಪಕತ್ವದಲ್ಲಿ  ಹಾಗೂ ಪದಾಧಿಕಾರಿಗಳ ಸಂಪೂರ್ಣ ಸಹಕಾರದೊಂದಿಗೆ  ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರು ಕಟೀಲು ಧರ್ಮಸ್ಥಳ ಮೇಳದ ಖ್ಯಾತ  ಕಲಾವಿದರ ಕೂಡುವಿಕೆಯಿಂದ   ಸೆ. 6 ರಂದು ಪುಣೆಯ ಕೇತ್ಕರ್‌ರೋಡ್‌ನ‌ ಡಾ| ಶ್ಯಾಮ್‌ ರಾವ್‌ ಕಲ್ಮಾಡಿ ಕನ್ನಡ ಹೈಸ್ಕೂಲ್‌ನ ಸಭಾಗೃಹದಲ್ಲಿ ಆಯೋಜಿಸಿದ್ದ  ಕೋರ್ದಬ್ಬು ಬಾರಗ -ತನ್ನಿ ಮಾನಿಗ ಯಕ್ಷಗಾನ ಪ್ರದರ್ಶನದ ಮಧ್ಯೆ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಂಸ್ಕೃತಿಕ  ನಗರ ಪುಣೆಯಲ್ಲಿ  ಯಕ್ಷಕಲಾ ಪೋಷಕ ಪ್ರವೀಣ್‌ ಶೆಟ್ಟಿ ಅವರಂತಹ  ಮಹಾನ್‌   ವ್ಯಕ್ತಿಗಳಿಂದ  ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ ಅ ಮೂಲಕ ನಮ್ಮ ಮಂಡಳಿಯ ಯಕ್ಷಗಾನ ಪ್ರದರ್ಶನಕ್ಕೆ ಸದವಕಾಶವನ್ನು ಪ್ರತಿ ವರ್ಷ ನೀಡುತ್ತಿ¨ªಾರೆ. ಅಲ್ಲದೆ ತನ್ನ ಸ್ವಂತ ಪರಿಶ್ರಮದಿಂದ ಯಕ್ಷಗಾನದ ಬೆಳವಣಿಗೆಗೆ ಉಳಿಸಿ ಬೆಳೆಸುವಂತಹ ಮಹಾನ್‌ ಕಾರ್ಯವನ್ನು ಮಾಡುತ್ತಿ¨ªಾರೆ. ಪುಣೆಯ ಕಲಾಭಿಮಾನಿಗಳ ಸಹಕಾರ  ಕೂಡಾ ತುಂಬಾ ಮೆಚ್ಚುವಂತದ್ದು. ನಮ್ಮ ಮೇಳದ  ಮೇಲಿನ ತಮ್ಮೆಲ್ಲರ  ಪ್ರೀತಿಗೆ ಧನ್ಯವಾದಗಳು ಎಂದು ನುಡಿದರು.

ಕರುಣಾಕರ ಶೆಟ್ಟಿಗಾರ್‌ ಕಾಶಿಪಟ್ಣ  ಅವರ  ಭಾಗವತಿಕೆ ಮತ್ತು ಪಡ್ರೆ ಶ್ರೀಧರ,  ನೆರೋಲ್‌ ಗಣಪತಿ ನಾಯಕ್‌ ಅವರ ಚೆಂಡೆ ಮೃದಂಗದ ಮುಮ್ಮೇಳದೊಂದಿಗೆ ಯಕ್ಷರಂಗದ ಘಟಾನುಘಟಿ ಕಲಾವಿದರಾದ ಕುಂಬ್ಳೆ  ಶ್ರೀಧರ್‌ ರಾವ್‌, ನಿಡ್ಲೆ ಗೋವಿಂದ ಭಟ್‌, ಅಮ್ಮುಂಜೆ ಮೋಹನ್‌, ಉದಯಕುಮಾರ್‌ ಅಡ್ಯನಡ್ಕ, ಬಾಲಕೃಷ್ಣ ಮಣಿಯಾಣಿ, ಕೆದಿಲ ಜಯರಾಂ ಭಟ್‌, ಉಮಾಮಹೇಶ್ವರ ಭಟ್‌, ಶಿವಪ್ರಸಾದ್‌ ಭಟ್‌, ಪುತ್ತೂರು ಗಂಗಾಧರ, ಅರಳ ಗಣೇಶ್‌ ಶೆಟ್ಟಿ, ನವೀನ್‌ ಶೆಟ್ಟಿ, ಕೊಕ್ಕಡ ಆನಂದ್‌, ಗೌತಮ್‌ ಹಾಗೂ ಇನ್ನಿತರ ಉದಯೋನ್ಮುಖ ಕಲಾವಿದರ ಕೂಡುವಿಕೆಯಲ್ಲಿ ನಡೆದ  ಈ ಯಕ್ಷಗಾನ ಪ್ರದರ್ಶನವು    ಕಲಾಭಿ ಮಾನಿಗಳನ್ನು ರಂಜಿಸಿತು.

ನಿಡ್ಲೆ ಮೇಳದ ಸಂಚಾಲಕ  ಗೋವಿಂದ ಭಟ್‌ ನಿಡ್ಲೆ ಇವರನ್ನು   ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪರವಾಗಿ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು ಮತ್ತು ಪುಣೆ ಮಂಡಳಿಯ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು  ಸಮ್ಮಾನಿಸಿದರು. 

ಈ ಸಂದರ್ಭದಲ್ಲಿ  ಮಂಡಳಿಯ ಪ್ರಮುಖರಾದ ಉಪಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು, ಕೋಶಾಧಿಕಾರಿ ಶ್ರೀಧರ ಶೆಟ್ಟಿ  ಕÇÉಾಡಿ, ರಾಜ್‌ಕುಮಾರ್‌ ಶೆಟ್ಟಿ  ಮಿಯ್ನಾರು, ಜಯ ಶೆಟ್ಟಿ ಮಿಯ್ನಾರು, ಆನಂದ ಶೆಟ್ಟಿ ಮಿಯ್ನಾರು, ರಾಮಣ್ಣ ರೈ ಪುತ್ತೂರು, ಮದಂಗಲ್‌ ಆನಂದ ಭಟ್‌,  ಗೋವರ್ಧನ್‌ ಶೆಟ್ಟಿ, ಶ್ಯಾಮ್‌ ಸುವರ್ಣ, ಪ್ರಿಯಾ ದೇವಾಡಿಗ, ನೂತನ್‌ ಸುವರ್ಣ ಉಪಸ್ಥಿತರಿದ್ದರು.

ಈ ಯಕ್ಷಗಾನ ಪ್ರದರ್ಶನಕ್ಕೆ  ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು, ಪ್ರಮುಖರಾದ ವಿಶ್ವನಾಥ್‌ ಶೆಟ್ಟಿ, ಚಂದ್ರಶೇಖರ್‌ ಶೆಟ್ಟಿ ನಿಟ್ಟೆ, ಶ್ರೀ ಅಯ್ಯಪ್ಪ ಸ್ವಾಮಿ  ಸೇವಾ ಸಮಿತಿ ಕಾತ್ರಜ್‌ ಅಧ್ಯಕ್ಷ ಸುಭಾಶ್‌ ಶೆಟ್ಟಿ ಮತ್ತು ವಿವಿಧ  ಸಂಘ ಸಂಸ್ಥೆಗಳ ಪದಾಧಿಕಾರಿಗಳು  ಉಪಸ್ಥಿತರಿದ್ದರು. ಅಲ್ಲದೆ ಹೆಚ್ಚಿನ ಸಂಖ್ಯೆಯ  ಯಕ್ಷ ಕಲಾಭಿಮಾನಿಗಳು  ಪಾಲ್ಗೊಂಡಿದ್ದರು. ಮಂಡಳಿಯ ಜೊತೆ ಕಾರ್ಯದರ್ಶಿ ರಾಮಣ್ಣ ರೈ ಪುತ್ತೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಂಡಳಿಯ ಪ್ರಿಯಾ ದೇವಾಡಿಗ ವಂದಿಸಿದರು. ಕೊನೆಯಲ್ಲಿ ಶ್ರೀಧರ ಶೆಟ್ಟಿ ಅವರ  ಪ್ರಾಯೋಜಕತ್ವದಲ್ಲಿ  ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

ಚಿತ್ರ-ವರದಿ: ಹರೀಶ್‌ ಮೂಡಬಿದ್ರಿ ಪುಣೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ