ದೈವಗಳ ಪುನಃಪ್ರತಿಷ್ಠೆ, ಕಲಶಾಭಿಷೇಕ
Team Udayavani, Feb 12, 2021, 8:23 PM IST
ಹಿರಿಯಡಕ (ಹೆಬ್ರಿ), ಫೆ. 11: ಇತಿಹಾಸ ಪ್ರಸಿದ್ಧ ಬಸ್ತಿ ಬೊಮ್ಮರಬೆಟ್ಟು ಮೂಲ ವರ್ತೆ ಕಲ್ಕುಡ ದೈವಸ್ಥಾನ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಇದೀಗ ದೈವಗಳ ಪುನಃಪ್ರತಿಷ್ಠೆ ಹಾಗೂ ಕಲಶಾಭಿಷೇಕದ ಸಂಭ್ರಮದಲ್ಲಿದೆ.
ವರ್ತೆ ಕಲ್ಕುಡದ ಮೂಲವೇ ಬಸ್ತಿ
ಉಡುಪಿ ಜಿಲ್ಲೆ ಬೊಮ್ಮರಬೆಟ್ಟು ಗ್ರಾಮದ ಬಸ್ತಿ ಎಂಬ ಕ್ಷೇತ್ರದ ಮೂಲ ಸ್ಥಾನದಲ್ಲಿ ನೆಲೆಯಾದ ವರ್ತೆ ಕಲ್ಕುಡ ಕ್ಷೇತ್ರಿಯ ಅಧ್ಯಯನದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದು ಮೂಲ ವರ್ತೆ ಕಲ್ಕುಡ ಸ್ಥಾನ ಎಂದು ಪ್ರಸಿದ್ಧಿ ಪಡೆದಿದೆ. ವಿಶೇಷ ಕಾರ್ನಿಕದ ಶಕ್ತಿ ಸಾನ್ನಿಧ್ಯ ಹೊಂದಿ
ರುವ ಬಸ್ತಿ ವರ್ತೆ ಕಲ್ಕುಡ ದೈವಸ್ಥಾನ ಉಡುಪಿ ಜಿಲ್ಲೆ ಮಾತ್ರವಲ್ಲದೆ ಇತರ ಜಿಲ್ಲೆಗಳ ಭಕ್ತರು ಈ ಕ್ಷೇತ್ರಕ್ಕೆ ಹರಕೆ ಸೇವೆ ಸಲ್ಲಿಸುತ್ತಾರೆ. ಸನ್ನಿಧಿಯಲ್ಲಿ ಹಗಲು ಪನಿಯಾರ(ಪ್ರತಿ ಮಂಗಳವಾರ)ಸಂಕ್ರಾತಿ ಪೂಜೆ, ಹರಕೆ ಹೂವಿನ ಪೂಜೆ, ಕಾಲಾವಧಿ ನೇಮ ಮತ್ತು ಹರಕೆ ನೇಮ ನಡೆಯುತ್ತದೆ.ಜೀರ್ಣೋದ್ಧಾರ ಸಹಕಾರ
ಇತಿಹಾಸ ಪ್ರಸಿದ್ಧ ಬೊಮ್ಮರಬೆಟ್ಟು ಬಸ್ತಿಯಲ್ಲಿ ಪೂಜಿಸುತ್ತಾ ಬಂದಿರುವ ವರ್ತೆ ಕಲ್ಕುಡ ದೈವಸ್ಥಾನ ಈಗಾಗಲೇ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಮುತ್ತೂರು ಮೋಹನದಾಸ ಹೆಗ್ಡೆಯವರ ಸಾರಥ್ಯದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುಯಿಲಾಡಿ ಸುರೇಶ್‌ನಾಯಕ್, ಉಪಾಧ್ಯಕ್ಷ ರವಿ ಶೆಟ್ಟಿ ಬಸ್ತಿ, ಅರ್ಚಕ ಶೇಖರ ಶೆಟ್ಟಿ ಬಸ್ತಿ ಹಾಗೂ ಸಮಿತಿಯ ಗೌರವಾಧ್ಯಕ್ಷರು, ಸರ್ವ ಸದಸ್ಯರ ಮುಂದಾಳತ್ವದಲ್ಲಿ ದಾನಿಗಳ, ಗ್ರಾಮಸ್ಥರ ಹಾಗೂ ಭಕ್ತರ ಸಹಕಾರದಿಂದ ಪುನಃಪ್ರತಿಷ್ಠೆ, ಕಲಶಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳ ಸಿದ್ಧತೆ ನಡೆಯುತ್ತಿದೆ.
ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಮೊದಲ ಹಂತದ ಕಾಮಗಾರಿಯಾಗಿ ದೈವದ ಗುಡಿಯ ಮೇಲ್ಚಾವಣಿ ಶಿಲಾಮಯಗೊಳಿಸಿ ಇದರ ಜತೆಯಲ್ಲಿ ಸುತ್ತು ಪೌಳಿಯನ್ನು ನವೀಕರಿಸಿ ಇದೀಗ ಶಾಶ್ವತಅಡುಗೆ ಕೋಣೆ ನಿರ್ಮಾಣ, ನೆಲಹಾಸು ಮೊದಲಾದ ಕಾಮಗಾರಿಗಳು ಪೂರ್ಣಗೊಂಡಿವೆ.
ಸಿರಿ ಸಿಂಗಾರ ನೇಮ
ದೈವಸ್ಥಾನದಲ್ಲಿ ಫೆ. 17ರಂದು ರಾತ್ರಿ 7ರಿಂದ ವಿವಿಧ ಭಜನ ಮಂಡಳಿಗಳಿಂದ ಕುಣಿತ ಭಜನ ಕಾರ್ಯಕ್ರಮ, 8ರಿಂದ ಅನ್ನಸಂತರ್ಪಣೆ ಹಾಗೂ 10ರಿಂದ ವರ್ತೆ ಕಲ್ಕುಡ ದೈವಗಳ ಸಿರಿಸಿಂಗಾರ ನೇಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಹೊಸ ಸೇರ್ಪಡೆ
Live Update; ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ, ಸಭಾತ್ಯಾಗಕ್ಕೆ ಕಾಂಗ್ರೆಸ್ ನಿರ್ಧಾರ
ಮೀಸಲಿಗಾಗಿ ಪಂಚಮಸಾಲಿ ಹೋರಾಟ : ಸ್ವಾಮೀಜಿ ಮನವೊಲಿಕೆಗೆ ತೆರೆಮರೆ ಯತ್ನ?
ಕೊಡಗಿನಲ್ಲಿ ವ್ಯಾಘ್ರ ಅಟ್ಟಹಾಸ: 8 ವರ್ಷದ ಬಾಲಕನನ್ನು ಕೊಂದು ಹಾಕಿದ ಹುಲಿ
ಸುದ್ದಿ ಸುತ್ತಾಟ : ಹನಿಟ್ರ್ಯಾಪ್ ಮಾಯಾಜಾಲದ ಹಿಂದೆ – ಮುಂದೆ
ಬಜೆಟ್ ಗೂ ಮುನ್ನ ಬಿಎಸ್ ವೈ ಗೆ ಪ್ರತಿಭಟನೆ ಬಿಸಿ: ಸಿಎಂ ನಿವಾಸದೆದುರು ಮಹಿಳೆಯರ ಪ್ರತಿಭಟನೆ