ರಾಯನ್ಸ್‌ ಶಿಕ್ಷಣ ಸಂಸ್ಥೆಗೆ “ಲೀಡಿಂಗ್‌  ಸ್ಕೂಲ್ಸ್‌ ಆಫ್‌ ಇಂಡಿಯಾ’ ಪ್ರಶಸ್ತಿ

Team Udayavani, Jul 9, 2019, 5:07 PM IST

ಮುಂಬಯಿ: ಲೀಡಿಂಗ್‌ ಸ್ಕೂಲ್ಸ್‌ ಕಾರ್ಪೋರೇಶನ್‌ ಯುಎಸ್‌ಎ ಸಂಸ್ಥೆಯು ಇತ್ತೀಚೆಗೆ ನವ ದೆಹಲಿಯ ಖಾಸಗಿ ಹೊಟೇಲೊಂದರಲ್ಲಿ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೇಶದ ಪ್ರತಿಷ್ಠಿತ ರಾಯನ್‌ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ವಿದ್ಯಾಲಯಗಳ ಉತ್ತಮ ಶಿಕ್ಷಣ ಗುಣಮಟ್ಟ ಮತ್ತು ಇತರ ಪಠ್ಯೇತರ‌ ಚಟುವಟಿಕೆಗಳ ಗಣನೀಯ ಸಾಧನೆಗೆ “ಲೀಡಿಂಗ್‌ ಸ್ಕೂಲ್ಸ್‌ ಆಫ್‌ ಇಂಡಿಯಾ’ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೀಡಿಂಗ್‌ ಸ್ಕೂಲ್ಸ್‌ ಕಾರ್ಪೋರೇಶನ್‌ನ ರಾಷ್ಟ್ರೀಯ ಮುಖ್ಯಸ್ಥೆ ಸಬೀನಾ ಸೆಗಲ್‌ ಉಪಸ್ಥಿತರಿದ್ದು ರಾಯನ್‌ ಇಂಟರ್‌ನ್ಯಾಷನಲ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್ಸ್‌ನ ಪ್ರವರ್ತಕಿ ಮೇಡಂ ಗ್ರೇಸ್‌ ಪಿಂಟೊ, ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ರಾಯನ್‌ ಎ.ಪಿಂಟೋ ಅವರಿಗೆ ಪ್ರಶಸ್ತಿಯನ್ನು ಪ್ರಧಾನಿಸಿ ಅಭಿನಂದಿಸಿ ಶುಭ ಹಾರೈಸಿದರು.
ರಾಯನ್‌ ಸಂಸ್ಥೆಗಳು ಜಾಗತೀಕರಣದ ಆಧುನಿಕ ಶಿಕ್ಷಣಕ್ಕೆ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದು, ಮಕ್ಕಳ ಮನೋವಿಕಾಸ ಮತ್ತು ಕ್ರೀಡೆ ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿ ಸರ್ವೋತ್ಕೃಷ್ಟ ಶಿಕ್ಷಣಾಲಯವಾಗಿಸಿದೆ. 1976ರಲ್ಲಿ ರಾಯನ್‌ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮೂಹ ಸ್ಥಾಪಿಸಿದ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಆಗಸ್ಟಿನ್‌ ಎಫ್‌. ಪಿಂಟೋ ಅವರ ಕಂಡ ಕನಸು ನನಸಾಗಿದ್ದು, ಪ್ರಸ್ತುತ 137 ಅಂತಾರಾಷ್ಟ್ರೀಯ ಶಾಲೆಗಳು ಹಾಗೂ ಸುಮಾರು 2,70,000 ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ಪಡೆಯುವುದರ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪರಿಣತರಾಗಿ ಭವಿಷ್ಯತ್ತಿನಲ್ಲಿ ಧುರೀಣ ನಾಯಕರಾಗಲು ಸಂಸ್ಥೆ ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ಒಳ್ಳೆಯ ಶಿಕ್ಷಣ ಬರೇ ಪಠ್ಯ ಪುಸ್ತಕದಲ್ಲಿ ಮಾತ್ರವಲ್ಲ ವಿಶ್ವದ ಅರಿವಿನ ಇನ್ನಿತರ ಕ್ರೀಯಾಶೀಲ ಚಟುವಟಿಕೆಗಳಲ್ಲೂ ಸಿಗುತ್ತದೆ ಎಂದು ತಿಳಿದ ಸಂಸ್ಥೆಯು ಶಿಕ್ಷಣಕ್ಕೆ ರಾಷ್ಟ್ರದಲ್ಲೇ ಮೊದಲ ದರ್ಜೆಯ ಮಾನ್ಯತೆಗೆ ಪಾತ್ರವಾಗಿದೆ.

ಈ ಶುಭಾವಸರದಲ್ಲಿ ಮೇಡಂ ಗ್ರೇಸ್‌ ಪಿಂಟೋ ಅವರು ಹರ್ಷ ವ್ಯಕ್ತಪಡಿಸಿ ಮೊದಲಿಗೆ ನಾನು ದೇವರಿಗೆ ವಂದಿಸುವೆ. ರಾಯನ್‌ ಸಂಸ್ಥೆಯ ಕಾರ್ಯನಿರತ ಶಿಕ್ಷಕ ವೃಂದಕ್ಕೆ ನಾನು ಅಭಿವಂದಿಸುವೆೆ. ಶಿಕ್ಷಕರು ಮತ್ತು ಶಿಕ್ಷಕೇತರ ವೃಂದವು ವಿದ್ಯಾರ್ಥಿಗಳಿಗೆ ನೀಡುವ ಸ್ಫೂರ್ತಿ, ಮೂಡಿಸುವ ಆಸಕ್ತಿ, ಮೌಲ್ಯಯುತ ಪ್ರೇರಣೆ ಮತ್ತು ಉತ್ತಮ ವಿದ್ಯಾಭ್ಯಾಸ ನೀಡಿ ಪ್ರೋತ್ಸಾಹಿಸುವ ಉದ್ದೇಶದ ಫಲವಾಗಿ ಇಂತಹ ಸಾಧನೆ ಸಾಧ್ಯವಾಗಿದೆ. ಭವಿಷ್ಯತ್ತಿನುದ್ದಕ್ಕೂ ವಿದ್ಯಾರ್ಥಿಗಳನ್ನು ಮತ್ತಷ್ಟು ಪ್ರೇರೇಪಿಸಿ ಅತ್ಯುತ್ತಮ ನಾಗರಿಕರನ್ನಾಗಿಸುವಲ್ಲಿ ಮೌಲಿಕ ಶಿಕ್ಷಣ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ