ಸಾಂತಾಕ್ರೂಜ್‌ ಪೂ. ಬಿಲ್ಲವ ಭವನದಲ್ಲಿ ಸಂಭ್ರಮಾಚರಣೆ

Team Udayavani, Aug 11, 2019, 1:46 PM IST

ಮುಂಬಯಿ, ಆ. 10: ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್‌ ಅಸೋಸಿಯೇಶನ್‌ ಲಿಮಿಟೆಡ್‌ ಸಂಸ್ಥೆಯ ಸಹಕಾರಿ ಕ್ಷೇತ್ರದ ಸೇವೆಗಾಗಿನ ‘ಸರ್ವೋತ್ಕೃಷ್ಟ ಬ್ಯಾಂಕ್‌’ ಪುರಸ್ಕಾರಕ್ಕೆ ಭಾಜನವಾದ ತುಳು-ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಇದರ ಸಾಧನೆಗಾಗಿ ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಪ್ರತಿಷ್ಠಿತ ಗೌರವಕ್ಕಾಗಿ ಸಂಭ್ರಮಾಚರಣೆಯನ್ನು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ನಡೆಯಿತು.

ದಾದರ್‌ ಪ್ರಭಾದೇವಿಯಲ್ಲಿನ ವೊವ್ಜ್ ಬ್ಯಾಂಕ್ವೆಟ್ ಸಭಾಗೃಹದಲ್ಲಿ ‘ಸರ್ವೋತ್ಕೃಷ್ಟ ಬ್ಯಾಂಕ್‌’ ಪುರಸ್ಕಾರ ಸ್ವೀಕೃತ ಬ್ಯಾಂಕ್‌ ಮಂಡಳಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರದೊಂದಿಗೆ ನೇರವಾಗಿ ಸಾಂತಕ್ರೂಜ್‌ನ ಅಸೋಸಿಯೇಶನ್‌ ಭವನಕ್ಕೆ ಆಗಮಿಸಿ ಅಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಸನ್ನಿಧಿಯಲ್ಲಿ ಪೂಜೆ ನೆರವೇರಿಸಿತು. ಪುರಸ್ಕೃತ ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್‌. ಮೂಲ್ಕಿ ಅವರನ್ನು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಅಧ್ಯಕ್ಷ ಚಂದ್ರಶೇಖರ್‌ ಎಸ್‌. ಪೂಜಾರಿ ಅವರು ಸ್ವಾಗತಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ದಯಾನಂದ್‌ ಆರ್‌. ಪೂಜಾರಿ, ಶ್ರೀನಿವಾಸ ಆರ್‌. ಕರ್ಕೇರ, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್‌ ಎನ್‌. ಕೋಟ್ಯಾನ್‌, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಅಶೋಕ್‌ ಕುಕ್ಯಾನ್‌ ಸಸಿಹಿತ್ಲು, ವಿದ್ಯಾ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ಆರ್‌. ತೋನ್ಸೆ, ಭಾರತ್‌ ಬ್ಯಾಂಕಿನ ನಿರ್ದೇಶಕರಾದ ಜ್ಯೋತಿ ಕೆ. ಸುವರ್ಣ, ಗಂಗಾಧರ್‌ ಜೆ. ಪೂಜಾರಿ, ಪ್ರೇಮನಾಥ್‌ ಪಿ. ಕೋಟ್ಯಾನ್‌, ಬ್ಯಾಂಕಿನ ಪ್ರಧಾನ ಪ್ರಬಂಧಕರಾದ ವಿದ್ಯಾನಂದ ಎಸ್‌. ಕರ್ಕೇರ, ದಿನೇಶ್‌ ಬಿ. ಸಾಲ್ಯಾನ್‌, ಬಿಲ್ಲವರ ಭವನದ ಪ್ರಬಂಧಕ ಭಾಸ್ಕರ್‌ ಟಿ. ಪೂಜಾರಿ, ಲೀಲಾಧರ್‌ ಸುವರ್ಣ ಅಡ್ವೆ ಸೇರಿದಂತೆ ಅಸೋಸಿಯೇಶನ್‌ನ ಇತರ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚರ್ಯರ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ