ಶಾಹಡ್‌ ಬಿರ್ಲಾಗೇಟ್‌ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ವಾರ್ಷಿಕ ಮಹಾಪೂಜೆ

Team Udayavani, Apr 23, 2019, 2:46 PM IST

ಕಲ್ಯಾಣ್‌: ಶ್ರೀ ನಿತ್ಯಾನಂದ ಮಿತ್ರ ಮಂಡಳಿ ಸಂಚಾಲಕತ್ವದ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾಗೇಟ್‌ ಶಾಹಡ್‌ ಇದರ 57ನೇ ವಾರ್ಷಿಕ ಮಹಾಪೂಜೆಯು ಎ. 12ರಿಂದ ಆರಂಭಗೊಂಡಿದ್ದು, ಎ. 20ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಎ. 20ರವರೆಗೆ ಭಜನಾ ಸಪ್ತಾಹ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮೂಹಿಕ ಚಂಡಿಕಾಯಾಗ ಇತ್ಯಾದಿ ಪೂಜಾ ಕೈಂಕರ್ಯಗಳು ಡೊಂಬಿವಲಿಯ ಶ್ರೀ ಶಂಕರ ನಾರಾಯಣ ತಂತ್ರಿ ಅವರ ನೇತೃತ್ವದಲ್ಲಿ ಜರಗಿತು. ಎ. 19 ರಂದು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, 108 ಸೀಯಾಳಾಭಿಷೇಕ, ಮಂಜುನಾಥ ಶೆಟ್ಟಿ ದಂಪತಿ ಇವರಿಂದ ತುಲಾಭಾರ ಸೇವೆ, ನವಗ್ರಹ ಶಾಂತಿ, ಪಂಚವಿಂಶತಿ ಕಲಶಾರಾಧನೆ, ಪ್ರಧಾನ ಹೋಮ, ಶ್ರೀ ಪ್ರಸನ್ನ ಗಣಪತಿ ದೇವರಿಗೆ ನವಕಲಶಾರಾಧನೆ, 25ರ

ಕಲಶಾಭಿಷೇಕ, ಪ್ರಧಾನ ಹೋಮ, ಅವಭೃತ ಬಲಿ, ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ 1ರಿಂದ ಅನ್ನದಾನ ನಡೆಯಿತು. ಅನ್ನಸಂತರ್ಪಣೆಯಲ್ಲಿ ನೂರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಸಂಜೆ ರಥ ಕಲಶಾರಾಧನೆ, ಪ್ರಧಾನ ಹೋಮ, ರಥೋತ್ಸವ ಉತ್ಸವ ಬಲಿ, ಪ್ರಸಾದ ವಿತರಣೆ ನಡೆಯಿತು. ಸಂಜೆ ಕುಂಕುಚಾಮಾರ್ಚನೆ, ದೇವಿ ಸನ್ನಿಧಿಯಲ್ಲಿ ಮಹಾಪೂಜೆ, ರಂಗಪೂಜೆ, ಅನ್ನದಾನ ಸೇವೆ ನಡೆಯಿತು. ಎ. 20ರಂದು ಬೆಳಗ್ಗೆ ಸಾಮೂಹಿಕ ಚಂಡಿಕಾ ಯಾಗ, ಪೂರ್ಣಾಹುತಿ, ಬ್ರಾಹ್ಮಣ ಸುವಾಸಿನಿ ಆರಾಧನೆ, ದಂಪತಿ ಪೂಜೆ, ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ ಮಹಾ ಅನ್ನದಾನ ಇನ್ನಿತರ ಕಾರ್ಯಕ್ರಮಗಳು ನಡೆದವು.

ಸಂಜೆ ಶೋಭಾಯಾತ್ರೆ, ಅಷ್ಟಾವಧಾನ ಸೇವೆ, ಕಟ್ಟೆಪೂಜೆ, ಪ್ರಸಾದ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಅನ್ನ

ಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ಶ್ರೀ ನಿತ್ಯಾನಂದ ಭಜನಾ ಮಂಡಳಿಯ ಕಾರ್ಯಾಧ್ಯಕ್ಷ ಚಂದ್ರಕಾಂತ್‌ ಶೆಟ್ಟಿ, ಅಧ್ಯಕ್ಷ ಕರುಣಾಕರ ಶೆಟ್ಟಿ, ಉಪಾಧ್ಯಕ್ಷ ರಾಜೇಶ್‌ ಶೆಟ್ಟಿ, ಕಾರ್ಯದರ್ಶಿ ಜಗದೀಶ್‌ ಶೆಟ್ಟಿ ಬೆಳಂಜೆ, ಕೋಶಾಧಿಕಾರಿ ಯುವರಾಜ್‌ ಪೂಜಾರಿ, ಜತೆ ಕಾರ್ಯದರ್ಶಿ ಪ್ರೇಮ್‌ ಕುಮಾರ್‌ ಎಸ್‌. ರೈ, ಜತೆ ಕೋಶಾಧಿಕಾರಿ ಸದಾನಂದ ಐ. ಸಾಲ್ಯಾನ್‌, ಯುವ ವಿಭಾಗದ ಅಧ್ಯಕ್ಷ ದೀಪಕ್‌ ಬಂಗೇರ, ಸಾಂಸ್ಕೃತಿಕ ವಿಭಾಗದ ಅನಿಲ್‌ ಶೆಟ್ಟಿ, ಅರುಣ್‌ ಎನ್‌. ಜೋಗಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರವೀಣಾ ಶೆಟ್ಟಿ, ಯಕ್ಷಕಲಾ ಸಂಸ್ಥೆಯ ಅಧ್ಯಕ್ಷ ಹರೀಶ್‌ ಶೆಟ್ಟಿ, ಕಾರ್ಯದರ್ಶಿ ರಾಜೇಶ್‌ ಕೋಟ್ಯಾನ್‌, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್‌ ಶೆಟ್ಟಿ ಶೃಂಗೇರಿ, ನಾರಾಯಣ ಪೂಜಾರಿ, ನಿತ್ಯಾನಂದ ಭಜನಾ ಮಂಡಳಿಯ ಸದಸ್ಯರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

  • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

  • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

  • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...

  • ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ...

  • ಕುಂದಾಪುರ: ಮಳೆ ನೀರಿಂಗಿಸುವ ಮೂಲಕ ನೀರನ್ನು ಕಾದಿಟ್ಟು ಕೊಳ್ಳಿ. ಪ್ರತಿಯೊಬ್ಬರೂ ನೀರುಳಿ ಸುವ ನಿಟ್ಟಿನಲ್ಲಿ ನಿಮ್ಮದೇ ಆದ ಕೊಡುಗೆಗಳನ್ನು ನೀಡಿ. ನೀರು ಎಂದರೆ...