ಶ್ರೀ ಕಾಶೀ ಮಠಾಧೀಶ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ದಿನಾಚರಣೆ

Team Udayavani, Apr 25, 2019, 3:07 PM IST

ಮುಂಬಯಿ: ಜಿಎಸ್‌ಬಿ ಸಮಾಜದ ಗುರುವರ್ಯದ ಶ್ರೀ ಕಾಶೀ ಮಠಾಧೀಶ ವೃಂದಾವನಸ್ಥ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ದಿನಾಚರಣೆಯು ಎ. 20 ರಂದು ವಾಲ್ಕೇಶ್ವರದ ಶ್ರೀ ಕಾಶೀ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 9ರಿಂದ ನೈರ್ಮಲ್ಯ ವಿಸರ್ಜನೆ, ಗಂಗಾಜಲ, ಪಂಚಾಮೃತ ಅಭಿಷೇಕ, ಸೀಯಾಳಾಭಿಷೇಕ ನಡೆಯಿತು. ಪ್ರಾತಃಕಾಲದ ಶೋಡಷೋಪಚಾರದ ಪೂಜೆಯ ಬಳಿಕ ಸಮಾಧಿ ಮೇಲಿನ ಹನುಮಂತ ದೇವರ ಗಂಧಲೇಪನ ನಡೆಯಿತು. ಇದೇ ಸಂದರ್ಭದಲ್ಲಿ ಜಿಎಸ್‌ಬಿ ಸಭಾ ಮುಂಬಯಿ ಇವರಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅನಂತರ ಪ್ರಸಾದ ವಿತರಣೆ, ಸಮಾರಾಧನೆ ನಡೆಯಿತು. ಮಧ್ಯಾಹ್ನ 12ರಿಂದ ಪುಷ್ಪಾಲಂಕಾರ ಪೂಜೆ, ಮಹಾಆರತಿ ಪೂಜೆ ಸಂಪನ್ನಗೊಂಡಿತು. ಬಳಿಕ ಸರ್ವರಿಗೂ ಪ್ರಸಾದ ವಿತರಣೆ ನಡೆದು ಸಮಾರಾಧನೆ ಜರಗಿತು. ಸಂಜೆ 6ರಿಂದ ದೀಪಾಲಂಕಾರ, ಶ್ರೀ ಭುವನೇಂದ್ರ ಕೃಪಾಪೋಷಿತ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ರಾತ್ರಿ 8 ರಿಂದ ವಸಂತ ಪೂಜೆ ನಡೆಯಿತು.

ಅನಂತರ ಗುರುಗಳ ಗುಣಗಾನ ಜರಗಿತು. ಪೂಜ್ಯ ಗುರುವರ್ಯರ ಪ್ರವಚನದ ಸಂದರ್ಭ ಅಪಾರ ಶಿಷ್ಯವರ್ಗದವರು ಪಾಲ್ಗೊಂಡು ನುಡಿನಮನ ಸಲ್ಲಿಸಿದರು. ರಾತ್ರಿ ಶ್ರೀ ಕಾಶೀಮಠದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಕಾರ್ಯಕ್ರಮದ ಯಶಸ್ಸಿಗೆ ಶ್ರೀ ಕಾಶೀ ಮಠದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಮುಂಬಯಿಯ ಜಿಎಸ್‌ಬಿ ಸಮಾಜ ಬಾಂಧವರು, ಸಮಾಜದ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು, ಸ್ವಯಂಸೇವಕರು ಇನ್ನಿತರರು ಸಹಕರಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ