ಡೊಂಬಿವಲಿ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲದ ಭವನಗಳ ಲೋಕಾರ್ಪಣೆ

Team Udayavani, Jun 11, 2019, 4:30 PM IST

ಮುಂಬಯಿ: ಪ್ರಪಂಚದ ಜೀವ ಸಂಕುಲಗಳಲ್ಲಿ ಬುದ್ಧಿವಂತ ಪ್ರಾಣಿ ಎನಿಸಿದ ಮಾನವನು ಸಂಘಜೀವಿ. ಕಷ್ಟಮಯ ಜೀವನ ಸಾಗಿಸುತ್ತಿದ್ದ ನಮ್ಮ ಹಿರಿಯರು, ಮುಂಬಯಿ ಪ್ರಾಂತಕ್ಕೆ ಆಗಮಿಸಿ ಕರ್ಮಭೂಮಿಯನ್ನಾಗಿಸಿ ಅಂದಿನ ಸಂಘರ್ಷಮಯ ವಾತಾವರಣದಲ್ಲೂ ಕುಲಗುರು, ಗುರುಪೀಠ, ಕುಲದೇವರ ಸ್ಮರಣೆಯಂತಹ ಶುದ್ಧ ಭಾವನೆಗಳನ್ನು ಬೆಳೆಸಿಕೊಂಡರು. 2018ರ ಅಕ್ಷಯ ತೃತೀಯದಂದು ಮಹಾಗಣಪತಿ ದೇವಸ್ಥಾನಕ್ಕೆ ಬಂದಿ¨ªೆವು. ಕಿಂಚಿತ್‌ ಸಮಯಾವಕಾಶದಲ್ಲಿ ನಿರ್ಮಾಣಗೊಂಡ ಈ ಸೇವಾ ಭವನಗಳು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಿ ಸಮಾಜಮುಖೀ ಕಾರ್ಯ, ಸಾಂಘಿಕ ಚಟುವಟಿಕೆಗಳಿಂದ ಯಶಸ್ಸು ಗಳಿಸಲಿ ಎಂದು ಕವಳೆ ಮಠಾಧೀಶ ಶ್ರೀ ಶಿವಾನಂದ ಸರಸ್ವತೀ ಮಹಾರಾಜ್‌ ಸ್ವಾಮೀಜಿಯವರು ನುಡಿದರು.

ಮೇ 31ರಂದು ಡೊಂಬಿವಲಿ ಪೂರ್ವದ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲದಲ್ಲಿ ಎರಡು ನೂತನ ಮಹಡಿಗಳಾದ ಗುರುಕೃಪಾ ಮತ್ತು ನಾರಾಯಣ ಕೃಪಾ ಸೇವಾಭವನಗಳನ್ನು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕವಳೆ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತೀ ಮಹಾರಾಜ್‌ ಇವರು ತಮ್ಮ ದಿವ್ಯಹಸ್ತದಿಂದ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಶುಭ ಹಾರೈಸಿ, ಮುಂಬಯಿಯಲ್ಲಿನ ಒತ್ತಡ, ಸಂಘರ್ಷಮಯ ಬದುಕಿನಲ್ಲಿಯೂ ಹುಟ್ಟೂರಿನ ಸೆಳೆತ, ಅಲ್ಲಿನ ದೇವಸ್ಥಾನಗಳ ಬಗ್ಗೆ ಪ್ರೀತಿ, ಕಾಳಜಿಯಯನ್ನು ಗಮನಿಸಿದ್ದೇವೆ. ಈಶ್ವರನ ಅಸ್ತಿತ್ವವನ್ನು ಸ್ವೀಕರಿಸಿದ ಜೀವನ ನೈತಿಕತೆಯಿಂದ ಕೂಡಿ ಉನ್ನತಿಯತ್ತ ಸಾಗುತ್ತದೆ. ಇಂದು ದೀಕ್ಷೆಯ 25ರ ಸಂಭ್ರಮವನ್ನು ಆಚರಿಸಿದ ಈ ಕ್ಷಣವು ನಮ್ಮ ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳಿಗೆ ಸಂದ ವಿಶೇಷ ಗೌರವವಾಗಿದೆ ಎಂದರು.

ಪ್ರಾತಃಕಾಲ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಜಯ ಘೋಷಗಳ ಮೂಲಕ ಸ್ವಾಗತಿಸಲಾಯಿತು. ಮಕ್ಕಳು, ಮಹಿಳೆಯರೂ ಸೇರಿದಂತೆ ಶಿಷ್ಯವರ್ಗದವರು ಪಾರಂಪರಿಕ ತೊಡುಗೆಯಲ್ಲಿ ಭಾಗವಹಿಸಿದ್ದರು. ಗುರುವರ್ಯರ ಸನ್ಯಾಸ ದೀಕ್ಷೆಯ ರಜತವರ್ಷ ಆಚರಣೆಯ ಸಂದರ್ಭದಲ್ಲಿ ಸೇವಾಮಂಡಲದ ವತಿಯಿಂದ ಪಾದಪೂಜೆ ಹಾಗೂ ಸಮಸ್ತ ಶಿಷ್ಯವರ್ಗದ ಪರವಾಗಿ ಗೌರವಾರ್ಪಣೆ-ಗುರುವಂದನಾ ಕಾರ್ಯಕ್ರಮ ಜರಗಿತು. ಮಂಡಲದ ಅಧ್ಯಕ್ಷ ಲಕ್ಷ್ಮಣ್‌ ವಿನಾಯಕ್‌ ಅವರು ನೆನಪಿನ ಕಾಣಿಕೆಗಳನ್ನು ಶ್ರೀಗಳಿಗೆ ಅರ್ಪಿಸಿದರು.

ಅಪರಾಹ್ನ ಎಲ್‌. ವಿ. ನಾಯಕ್‌ ಅಧ್ಯಕ್ಷತೆಯಲ್ಲಿ ಜರಗಿದ ಧರ್ಮಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಜತೆ ಆಯುಕ್ತ ಎಂ. ಗೋಕುಲ್‌ದಾಸ್‌ ನಾಯಕ್‌ ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ದೇಶದಾದ್ಯಂತ ಇರುವ ರಾಜಾಪುರ ಸಾರಸ್ವತ ಸಮಾಜದ ಪ್ರತಿನಿಧಿಗಳು ಉಪಸಿuತರಿದ್ದರು.

ಕಳೆದ 33 ವರ್ಷಗಳಿಂದ ಸಂಸ್ಥೆಯ ಅಧ್ಯಕ್ಷರಾಗಿರುವ ಲಕ್ಷ್ಮಣ್‌ ವಿ. ನಾಯಕ್‌ ಅವರು ಮಾತನಾಡಿ, ಕಮಿಟಿಯು ನಿಮಿತ್ತ ಮಾತ್ರ. ಈ ನೂತನ ಭವನಗಳ ನಿರ್ಮಾಣವು ಮಹಾರಾಷ್ಟ್ರದಾದ್ಯಂತ ಇರುವ ಸಹೃದಯಿ ದಾನಿಗಳಿಂದ ಸಾಧ್ಯ ಎನಿಸಿದೆ. ಜನರಿಂದ ಜನರಿಗೋಸ್ಕರ ನಿರ್ಮಿತವಾದ ಈ ಭವನಗಳಲ್ಲಿ ಧರ್ಮ, ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸೇವಾಕಾರ್ಯಗಳು ನಿರಂತರ ಜರಗಬೇಕೆಂಬ ಉದ್ದೇಶ ನಮ್ಮದು ಎಂದರು.

ಕಾರ್ಯದರ್ಶಿ ರವೀಂದ್ರನಾಥ್‌ ಜಿ. ನಾಯಕ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 1986ರಲ್ಲಿ ಲಕ್ಷ್ಮೀàನಾರಾಯಣ ಭಟ್‌ರಿಂದ ಬೀಜಾಂಕುರಗೊಂಡ ಸೇವಾಮಂಡಲದ ಕನಸು ಸಾಕಾರಗೊಂಡು 2001ರಲ್ಲಿ ವರದ ಸಿದ್ಧಿ ಸೇವಾ ಭವನ, 2011 ರಲ್ಲಿ ಮಹಾಗಣಪತಿ ಮಂದಿರ ಮತ್ತು ಇಂದು ಎರಡು ನೂತನ ಭವನಗಳು ಲೋಕ ಕಲ್ಯಾಣದ ಉದ್ದೇಶದಿಂದ ನಿರ್ಮಿತಗೊಂಡು ಲೋಕಾರ್ಪಣೆಗೊಂಡಿವೆ. ಸಂಸ್ಥಾನ ಗೌಡಪಾದಾಚಾರ್ಯ ಮೂಲ ಪರಂಪರೆಯಿಂದ ಬೆಳಗಿ ಬಂದ ಸಾರಸ್ವತರ ಕೇಂದ್ರೀಯ ಮಠ ಕವಳೆ ಮಠಾಧೀಶರ ಆಶೀರ್ವಾದದಿಂದ ಈ ಸತ್ಕಾರ್ಯಗಳು ಜರಗುತ್ತಿವೆ ಎಂದರು.

ನೂತನ ವಾಸ್ತು ನಿರ್ಮಾಣ ಸಾಗಿಬಂದ ಬಗ್ಗೆ ಉಪಾಧ್ಯಕ್ಷ ಮಾಧವ್‌ ಪಿ. ನಾಯಕ್‌ ಹಾಗೂ ಖರ್ಚು ವಿವರಗಳ ಮಾಹಿತಿಯನ್ನು ಕೋಶಾಧಿಕಾರಿ ಋ‌ಂಜಯ್‌ ಬಿಪಾಟ್ಕರ್‌ ಅವರು ವಿವರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲ್ಲಡ್ಕ ವಿಠಲ ನಾಯಕ್‌ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಜರಗಿತು. ಭಕ್ತಾದಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಚಿತ್ರ-ವರದಿ: ರವಿಶಂಕರ್‌ ಡಹಾಣೂರೋಡ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್‌ ನಾಯಕತ್ವ ಬದಲಾವಣೆಗೆ ಕೈ ನಾಯಕರು ಈಗ ಗಂಭೀರ ಚಿಂತನೆ ನಡೆಸಿದ್ದು, ಜಿಲ್ಲಾ ಅಧ್ಯಕ್ಷರ ಬದಲಾವಣೆಗಾಗಿಯೇ ಕೆಪಿಸಿಸಿಯಿಂದ ನೇಮಕಗೊಂಡಿದ್ದ...

  • ಬೆಳಗಾವಿ: ಸಹೋದರ ಲಖನ್ ಜಾರಕಿಹೊಳಿಗೆ ಒಳ್ಳೆಯದಾಗಲಿ. ಅವನು ಸತೀಶ್ ಜಾರಕಿಹೊಳಿ ಜೊತೆಗೆ ಸೇರಿ ಹಾಳಾಗುವುದು ಬೇಡ. ಲಖನ್ ಶಾಸಕ ಆದ್ರೆ ಮೊದಲು ಸಂತೋಷ ನಾನು ಪಡುತ್ತೇನೆ...

  • ಕುಂದಗೋಳ: ಸರ್ಕಾರಿ ಕಾರ್ಯಕ್ರಮಕ್ಕೆ ನಮ್ಮನ್ನು ಏಕೆ ಕರೆಯುತ್ತಿಲ್ಲ ಎಂದು ತಾಪಂ ಸರ್ವ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಪಂ...

  • ಧಾರವಾಡ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಂಬಾಕು ತನಿಖಾ ದಳ ದಿಂದ 21ಕ್ಕೂ ಹೆಚ್ಚು ದಿಢೀರ್‌ ದಾಳಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ...

  • ಧಾರವಾಡ: ಕೋಟಿ ಕೋಟಿ ರೂಪಾಯಿ ಸುರಿದು ಕಟ್ಟಿದ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಆದರೆ ಅಲ್ಲಲ್ಲಿ ಸೋರುತ್ತಿದೆ. ನೆಲ ಮಹಡಿಯಲ್ಲಿಯೋ ಚರಂಡಿ ನೀರು ಮತ್ತು ಮಳೆ...