ಸೌತ್‌ ವೆಲ್ಫೇರ್‌ ಅಸೋಸಿಯೇಶನ್‌ ಪಿಂಪ್ರಿ-ಚಿಂಚ್ವಾಡ್‌ ವಾರ್ಷಿಕ ದಿನಾಚರಣೆ


Team Udayavani, Mar 27, 2019, 6:53 AM IST

2603mum04

ಪುಣೆ: ಸನಾತನ ಹಿಂದೂ ಸಂಸ್ಕೃತಿಯನ್ನು ಹೊಂದಿರುವ ಈ ಭಾರತ ದೇಶದ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಪುಣ್ಯವಂತರು. ಜಗತ್ತಿಗೆ ಶಾಂತಿಯ ಪ್ರತೀಕದಂತಿರುವ ಭಾರತದ ಮೇಲೆ ಸಾವಿರಾರು ವರ್ಷಗಳ ಹಿಂದಿನಿಂದಲೂ ಆಕ್ರಮಣ ಆಗುತ್ತಲೇ ಇದೆ. ಸಂಪತ್ತು, ಐಶ್ವರ್ಯ, ಶಿಲ್ಪಕಲೆ, ಸಂಸ್ಕೃತಿ ಮೊದ ಲಾದ ಸರ್ವ ವಿಧದಲ್ಲೂ ಜಗತ್ತಿನ ಅತ್ಯಂತ ಶ್ರೀಮಂತ ಭಂಡಾರವಾಗಿದ್ದ ಭಾರತ ವಿದೇಶಿಗರಿಂದ ಆಕ್ರಮಣಕ್ಕೆ ಒಳಗಾಗುತ್ತಲೇ ಬಂದಿದೆ.

ಭಾರತೀಯರ ಧರ್ಮ ಸಹಿಷ್ಣುತೆ ಎಂಬುವುದು ಅಚಲವಾದುದು ಹಾಗೂ ಅಷ್ಟೇ ಪವಿತ್ರತೆಯಾಗಿದೆ. ನಾವಾಗಿ ಯಾರ ಮೇಲು ಆಕ್ರಮಣ ಮಾಡಿದವರಲ್ಲ. ಆಕ್ರಮಣ ನಡೆದರೆ ಮಂಡಿಯೂರಿ ಶರಣಾದವರು ನಾವಲ್ಲ. ಅಷ್ಟೇ ವೇಗವಾಗಿ ಪ್ರತ್ಯುತ್ತರವನ್ನು ನಿಡುವಂಥಹ ದೃಧ ನಿರ್ಧಾರವನ್ನು ಹೊಂದಿದವರು ಭಾರತೀಯರು. ಹಿಂದೂ ಸಂಸ್ಕೃತಿಯ ಮೇಲೆ ಆಕ್ರಮಣ ನಡೆದಾಗಲೂ ಕೂಡ ದಿಟ್ಟತನದಿಂದ ಹೋರಾಡಿ ನಮ್ಮತನವನ್ನು ಉಳಿಸಿಕೊಂಡವರು ನಾವು. ತಮ್ಮ ಜಾತೀಯತೆ, ಕಲೆ, ಸಂಸ್ಕೃತಿಯನ್ನು ಉಳಿಸಿಕೊಂಡು ಇಂದಿಗೂ ಮೆರೆಯುತಿರುವ ದೇಶವೊಂದಿದ್ದರೆ ಅದು ಭಾರತ. ಮಹಾರಾಷ್ಟ್ರದ ಶಿವಾಜಿ ಮಹಾರಾಜ್‌, ಕರ್ನಾಟಕದ ಕಿತ್ತೂರು ಚೆನ್ನಮ್ಮ, ವಿಜಯ ನಗರ ಅರಸರು, ಉತ್ತರದಲ್ಲಿ ರಾಣಾ ಪ್ರತಾಪ್‌ ಸಿಂಗ್‌, ಜಾನ್ಸಿ ರಾಣಿ ಲಕ್ಷ್ಮೀ ಬಾಯಿ, ಪಂಜಾಬ್‌ನ ಗುರು ಗೋವಿಂದ್‌ ಸಿಂಗ್‌ ಮೊದಲಾದವರು ಜನ್ಮ ಭೂಮಿ ಮತ್ತು ಧರ್ಮ ರಕ್ಷಣೆಗಾಗಿ ಹೋರಾಡಿ ಮಡಿ ದವರು. ಭಾರತಿಯ ಧರ್ಮ ಸಂಸ್ಕೃತಿಯನ್ನು ಕಲಿತು ಕೆಲವು ದೇಶಗಳು ಅವನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡಿವೆ. ಇದನ್ನು ಸೌತ್‌ ಈಸ್ಟ್‌ ದೇಶಗಳಲ್ಲಿ ನಾವು ಇಂದಿಗೂ ಕಾಣಬಹುದು.

ಭಾರತ ಭೂಮಿಯಲ್ಲಿ ಎÇÉಾ ಧರ್ಮ ಜಾತಿಯವರಿಗೂ ಬದು ಕುವ ಹಕ್ಕನ್ನು ಕೊಟ್ಟಿದೆ. ಇದು ನಮ್ಮ ಭಾರತದ ಹಿಂದೂ ಸಂಸ್ಕೃತಿ, ಒಗ್ಗಟ್ಟು ಎಂಬುವುದು ವ್ಯಕ್ತಿ ಎಲ್ಲಿಯೇ ಇರಲಿ ಹೇಗೆಯೇ ಇರಲಿ ಮತ ಧರ್ಮವನ್ನು ಮಿರಿ ಇರಬೇಕು. ನಮ್ಮ ಇತಿಹಾಸ ಯಾವುದೇ ಇರಲಿ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ರಾಮ ಮಂದಿರ ನಿರ್ಮಾಣವಾಗಿಯೇ ತೀರುತ್ತದೆ. ಇದಕ್ಕೆಲ್ಲಾ ಎಲ್ಲರಲಿಯು ದೇಶಭಕ್ತಿಯ ಹೃದಯವಂತಿಕೆ ಇರಬೇಕು. ಎಂದು ಭಾರತ ಸರಕಾರದ ರಾಜ್ಯ ಸಭಾ ಸದಸ್ಯ ಸುಬ್ರಹ್ಮಣ್ಯನ್‌ ಸ್ವಾಮಿ ಅವರು ಹೇಳಿದರು.

ಮಾ. 24ರಂದು ಭೋಸ್ರಿಯ ಗಣೇಶ್‌ ನಗರ, ಎಂಐಡಿಸಿ ಕ್ವಾಲಿಟಿ ಸರ್ಕಲ್‌ ಹಾಲ್‌ನಲ್ಲಿ ಜರಗಿದ ಪಿಂಪ್ರಿ-ಚಿಂಚಾÌಡ್‌ ನಗರದ ದಕ್ಷಿಣ ಭಾರತೀಯರ ಸಂಘಟನೆಯಾದ ಸೌತ್‌ ವೆಲ್ಫೆàರ್‌ ಅಸೋಸಿಯೇಶನ್‌ ಪಿಂಪ್ರಿ-ಚಿಂಚಾÌಡ್‌ ಇದರ ದ್ವಿತೀಯ ವಾರ್ಷಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನ, ದ್ಯಾನ, ಶಸ್ತ್ರ, ಧನ, ಭೂಮಿ ಎಂಬ ಈ ಶಕ್ತಿಯ ಮೇಲೆ ನಮ್ಮವರು ನಿಂತಿ¨ªಾರೆ. ಜ್ಞಾನಿ ಮತ್ತು ತ್ಯಾಗಿ ಯಾವಾಗಲು ಎತ್ತರದಲ್ಲಿರುವಂತೆ ದ್ಯಾನದಿಂದ ಜ್ಞಾನವನ್ನು ಸಂಪಾದಿಸಿದ ಋಷಿ ಪರಂಪರೆಯ ಈ ದೇಶ ಕೂಡ ಅಷ್ಟೇ ಶ್ರೇಷ್ಠತೆಯನ್ನು ಹೊಂದಿದೆ. ಧನ ಸರ್ವರಿಗೂ ಅಗತ್ಯವಾದರೆ ಧನವನ್ನು ತನಗೆ ಬೇಕಾದಷ್ಟನ್ನು ಇಟ್ಟು ಪರರಿಗೆ ದಾನ ನಿಡುವವ ನಿಜವಾದ ಧಾನಿಯಾ ಗುತ್ತಾನೆ. ಭೂಮಿಯ ರಕ್ಷಣೆಯಲ್ಲಿ ನಿಂತವನಿಗೆ ಕ್ಷತ್ರೀಯನಾಗಿ ಶಸ್ತ್ರವನ್ನು ಹಿಡಿಯುವ ಅನಿವಾರ್ಯತೆ ಇದೆ. ಜ್ಞಾನಿಯಾದವನು ಅರ್ಥಿಕ, ವಿಜ್ಞಾನ ಕ್ಷೇತ್ರದಲ್ಲಿ ಸೇವೆಯನ್ನು ಮಾಡುತ್ತಾನೆ. ಈ ಐದು ಅಂಶಗಳು ನಮ್ಮ ಮಣ್ಣಿನ ಗುಣದಿಂದ ಹುಟ್ಟಿನೊಂದಿಗೆ ಪ್ರತಿಯೋರ್ವರಲ್ಲೂ ಬರಬೇಕು. ಈ ಪುಣ್ಯ ಭೂಮಿಯಲ್ಲಿ ಸ್ತ್ರೀಯರಿಗೆ ಕೂಡ ಪುರಾತನ ಕಾಲದಿಂದಲೂ ಮಹತ್ವವನ್ನು ಶ್ರೇಷ್ಠತೆಯನ್ನು ಕೊಟ್ಟಿದೆ. ನಮ್ಮ ಮೂಲ ಸಂಸ್ಕೃತಿಯಲ್ಲಿಯೇ ಸ್ತಿÅàಗೆ ಪೂಜ್ಯನೀಯ ಸ್ಥಾನಮಾನವಿದೆ. ಪುರುಷನಿಗೆ ಪೂರಕವಾಗಿರುವಳು ಸ್ತ್ರೀ ಅದರೂ, ಮಹಾ ಕಷ್ಟ ಕಾಲದಲ್ಲಿ ರಕ್ಷಣೆಗೆ ಬಂದವಳು ಸ್ತ್ರೀ ಎಂಬುವುದನ್ನು ಪುರಾಣಗಳಲ್ಲಿ ಅಥವಾ ದೇವ ದೇವತೆಗಳಲ್ಲಿ ನಾವು ಕಾಣಬಹುದು ಎಂದು ನುಡಿದು, ಸೌತ್‌ ವೆಲ್ಫೆàರ್‌ ಅಸೋಸಿಯೇಶನ್‌ನ ಸಮಾಜಪರ ಕಾರ್ಯಕ್ರಮಗಳು ಅಭಿನಂದನೀಯ ಎಂದರು.

ವೇದಿಕೆಯಲ್ಲಿ ಪಿಂಪ್ರಿ-ಚಿಂಚಾÌಡ್‌ ಸೌತ್‌ ವೆಲ್ಫೆàರ್‌ ಅಸೋಸಿಯೇಶನ್‌ನ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಕಾರ್ಯಕಾರಿ ಸಮಿತಿ ಕಾರ್ಯಾಧ್ಯಕ್ಷ ರಾಕೇಶ್‌ ನಾಯರ್‌, ಪಿಂಪ್ರಿ-ಚಿಂಚಾÌಡ್‌ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಕನ್ನಡಿಗ ವಿಲಾಸ್‌ ಮಡಿಗೆರಿ, ಕಾರ್ಪೊರೇಟರ್‌ ಕೇರಳಿಗ ಬಾಬು ನಾಯರ್‌, ಅಸೋಸಿಯೇಶನ್‌ನ ಕಾರ್ಯದರ್ಶಿ ಸುನಿಲ್‌ ಗೋಪಿನಾಥ್‌, ಕೋಶಾಧಿ ಕಾರಿ ಬಾಲಚಂದ್ರ ಶೆಟ್ಟಿ, ಕಾರ್ತಿಕ್‌ ಕೃಷ್ಣನ್‌ ಉಪಸ್ತಿತರಿದ್ದರು. ರಾಕೇಶ್‌ ನಾಯರ್‌ ಸ್ವಾಗತಿಸಿದರು. ಅಸೋಸಿ ಯೇಶನ್‌ನ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತಾನಾಡಿದರು.

ಸುಬ್ರಹ್ಮಣ್ಯನ್‌ ಸ್ವಾಮೀ ಅವರನ್ನು ಸೌತ್‌ ವೆಲ್ಫೆàರ್‌ ಅಸೋಸಿಯೇಶನ್‌ನ ವತಿಯಿಂದ ಶಾಲು ಹೊದೆಸಿ, ಪುಷ್ಪಗುಚ್ಚ, ಸ್ಮರಣಿಕೆಯನ್ನಿತ್ತು ಅಧ್ಯಕ್ಷ ಪದ್ಮನಾಭ ಶೆಟ್ಟಿ ಸಮ್ಮಾನಿಸಿ ಗೌರವಿಸಿದರು. ಸಮಾರಂಭದಲ್ಲಿ ಪರಿಸರದ ದಕ್ಷಿಣ ಭಾರತೀಯರಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜ ಸೇವಕಿ ನೂತನ್‌ ಸುವರ್ಣ, ವರ್ಷಾ ಅನಂತ ರಾಮನ್‌, ಜಯಶ್ರೀ ನಾಗರಾಜನ್‌ , ನಿರ್ಮಲಾ ಕೃಷ್ಣ ಕುಮಾರ್‌, ವೈದೇಹಿ ರಾಜಾರಾಂ ಹಾಗು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು, ಶಿವಲಿಂಗ ಧವಳೇಶ್ವರ್‌, ಅರ್‌. ಎಸ್‌. ಕುಮಾರ್‌, ಪಿ. ಎನ್‌. ಕೆ. ನಾಯರ್‌ ಅವರನ್ನು ಪಂಚರತ್ನ ಪ್ರಶಸ್ತಿಯನ್ನು ಸುಭ್ರಹ್ಮಣ್ಯ ಸ್ವಾಮೀ ಹಾಗೂ ಪದಾಧಿಕಾರಿಗಳು ಪ್ರದಾನಿಸಿ ಶುಭಹಾರೈಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಭಾರತೀಯ ನಾಲ್ಕು ರಾಜ್ಯಗಳ ಶೈಲಿಯಲ್ಲಿ ನೃತ್ಯ, ಗಾಯನ ವೈಭವ ನಡೆಯಿತು. ಸಮಾರಂಭದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು, ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಅಧ್ಯಕ್ಷ ವಿಜಯ ಶೆಟ್ಟಿ ಬೋರ್ಕಟ್ಟೆ, ಉಪಾಧ್ಯಕ್ಷ ರಾಕೇಶ್‌ ಶೆಟ್ಟಿ, ಪಿಂಪ್ರಿ-ಚಿಂಚಾÌಡ್‌ ತುಳುಕೂಟದ ಅಧ್ಯಕ್ಷ ಹರೀಶ್‌ ಶೆಟ್ಟಿ ಕುರ್ಕಾಲ್‌, ಪಿಂಪ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ್‌ ಶೆಟ್ಟಿ, ಎರ್ಮಾಳ್‌ ವಿಶ್ವನಾಥ್‌ ಶೆಟ್ಟಿ, ಎರ್ಮಾಳ್‌ ಸೀತಾರಾಮ್‌ ಶೆಟ್ಟಿ, ಪ್ರಮುಖರಾದ ರಮೇಶ್‌ ಶೆಟ್ಟಿ, ಸುಧಾಕರ ಶೆಟ್ಟಿ ಪೆಲತ್ತೂರು ಮತ್ತು ನಾಲ್ಕು ರಾಜ್ಯಗಳ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗು ಹೆಚ್ಚಿನ ಸಂಖ್ಯೆಯ ದಕ್ಷಿಣ ಭಾರತೀಯರು ಉಪಸ್ಥಿತರಿದ್ದರು.

ಸೌತ್‌ ವೆಲ್ಫೆàರ್‌ ಅಸೋಸಿಯೇಶನ್‌ನ ಪ್ರಮುಖ ಪದಾಧಿಕಾರಿಗಳಾದ ರಾಕೇಶ್‌ ಶೆಟ್ಟಿ, ಪ್ರಸಾದ್‌ ನಾಯರ್‌, ಅರ್‌. ಪ್ರಭಾಕರನ್‌, ಗಣೇಶ್‌ ಅಂಚನ್‌, ವೇಣು ಅಂಬಲಪುಜØ, ಅಭಿಲಾಷ ಸವಿಧಾನ್‌, ದೀಪಕ್‌ ನಾಯರ್‌, ಅವಿನಾಶ್‌ ಹೊಸಮನಿ, ರೋಶಿತ್‌ ರವೀಂದ್ರ, 1ಸದಸ್ಯರಾದ ದಿಲೀಪ್‌ ನಾಯರ್‌, ರಾಜೇಶ್‌ ವಲ್ಸನ್‌, ಸತ್ಯನಾಥನ್‌ ನಂಬಿಯಾರ್‌, ಜಯಾನಂದ ಶೆಟ್ಟಿ, ಸತೀಶ್‌ ಐಯ್ಯರ್‌, ಅಭಿನಂದ, ಶಶಿ ನಂಬಿಯಾರ್‌, ಮುರ್ಗೆಶ್‌ ಗಿರಿಸಾಗರ್‌, ಮನು ರಾಜನ್‌, ಸಂತೋಷ್‌ ಆಯಾರ್ಪುಲ್ಲಿ, ಪ್ರಜೀಶ್‌ ಪದ್ಮನ್‌ ಮೊದಲಾದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಶ್ರುತಿ ಶಶಿಧರನ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪಿಂಪ್ರಿ-ಚಿಂಚಾÌಡ್‌ ನಗರದಲ್ಲಿ ವಿವಿಧ ಕ್ಷೇತ್ರಗಳ ಉದ್ದಿಮೆದಾರರು, ಉದ್ಯೋಗಿಗಳು ಸೇರಿದಂತೆ ಸುಮಾರು 7 ಲಕ್ಷಕ್ಕಿಂತಲೂ ಹೆಚ್ಚಿನ ದಕ್ಷಿಣ ಭಾರತೀಯರು ವಾಸವಾಗಿ¨ªಾರೆ. ಅಂತೆಯೇ ಅವರ ಪ್ರತಿಯೊಂದು ರಾಜ್ಯದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಭಾಷಾ ಸಂಘಟನೆಗಳಿವೆ. ಎಲ್ಲಾ ರಾಜ್ಯಗಳ ಜನರನ್ನು ಒಂದುಗೂಡಿಸಿದ ಸಂಘಟನೆಯಾಗಿ ಸೌತ್‌ ವೆಲ್ಫೆàರ್‌ ಅಸೋಸಿಯೇಶನ್‌ ಅಸ್ತಿತ್ವಕ್ಕೆ ಬಂದು ಆ ಮೂಲಕ ದಕ್ಷಿಣದ ರಾಜ್ಯಗಳ ಜನರಿಗೆ ಸಹಾಯಕವಾಗಳು ಕಾರ್ಯನಿರ್ವಹಿಸುತ್ತಿದೆ. ನಮ್ಮ ಪ್ರತಿಯೊಂದು ರಾಜ್ಯದ ಜನರ ಅಚಾರ ವಿಚಾರ, ಕಲೆ -ಸಂಸ್ಕೃತಿ, ಆಚರಣೆಗಳನ್ನು ಒಟ್ಟಾಗಿ ಬೆರೆತು ಆಚರಿಸುವ ಮೂಲಕ ಸೋದರತ್ವವನ್ನು ಬೆಳೆಸಬೇಕು. ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಕೊಡುಗೆಯನ್ನು ಸಲ್ಲಿಸುವಂತಹ ದೃಢ ಸಂಕಲ್ಪ ಈ ಸಂಸ್ಥೆಯದ್ದಾಗಿದೆ. ಈ ಸಂಸ್ಥೆ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಬೇಕಾಗಿದೆ. ನಾಲ್ಕು ರಾಜ್ಯಗಳ ಜನರ ಒಗ್ಗಟ್ಟಿನ ಒಂದು ಸಂಸ್ಥೆ ಎಂದರೆ ಅದು ಅಷ್ಟೇ ಬಲಯುತವಾಗಿ ಸದೃಢವಾಗಬೇಕು.
– ಪದ್ಮನಾಭ ಶೆಟ್ಟಿ,
ಅಧ್ಯಕ್ಷರು, ಸೌತ್‌ ವೆಲ್ಫೆàರ್‌ ಅಸೋಸಿಯೇಶನ್‌ ಪಿಂಪ್ರಿ-ಚಿಂಚ್‌ವಾಡ್‌

ಚಿತ್ರ-ವರದಿ : ಹರೀಶ್‌ ಮೂಡಬಿದ್ರಿ

ಟಾಪ್ ನ್ಯೂಸ್

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

Untitled-1

ವಿದ್ಯಾರ್ಥಿಗಳಲ್ಲಿ ದೇಶದ ಅಭಿವೃದ್ಧಿಯ ಹೊಣೆಗಾರಿಕೆ ಇರಲಿ: ದಯಾನಂದ ಶೆಟ್ಟಿ

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.