ವಾಲ್ಕೇಶ್ವರ ಕವಳೆ ಮಠಕ್ಕೆ ಶ್ರೀ ಕೈವಲ್ಯ ಮಠಾಧೀಶರ ಆಗಮನ

Team Udayavani, May 25, 2019, 1:33 PM IST

ಮುಂಬಯಿ: ಮುಂಬಯಿ ದಕ್ಷಿಣ ಭಾಗದ ಬಾಣಗಂಗಾ ಪರಿಸರದ ವಾಲ್ಕೇಶ್ವರದ ಶ್ರೀ ಶಾಂತಾದುರ್ಗಾ ದೇವಳ ಕವಳೆ ಮಠದ ವತಿಯಿಂದ ನಡೆಯಲಿರುವ ಸಮಾಜದ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶರ ದೀಕ್ಷಾ ಸಮಾರಂಭದ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಪರಮಪೂಜ್ಯ ಶ್ರೀಮದ್‌ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ಮೇ 22ರಂದು ವಾಲ್ಕೇಶ್ವರದ ಕವಳೆ ಮಠಕ್ಕೆ ಆಗಮಿಸಿದರು.

ಈ ಸಂದರ್ಭದಲ್ಲಿ ಶ್ರೀಗಳನ್ನು ಮಠದ ಪದಾಧಿಕಾರಿಗಳು ಸ್ವಾಗತಿಸಿದರು. ಶ್ರೀಗಳು ವಿಶೇಷ ಪೂಜೆ ನೆರವೇರಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕವಳೆ ಮಠದ ಭೂಷಣ್‌ ಜ್ಯಾಕ್‌, ಕಿರಣ್‌ ವೈದ್ಯ, ಕಮಲಾಕ್ಷ ಸರಾಫ್‌, ಪ್ರಮೋದ್‌ ಗಾಯೊ¤ಂಡೆ, ಟಿ. ವಿ. ಶೆಣೈ, ಸಮೀರ್‌ ನಾಡಕರ್ಣಿ ಇನ್ನಿತರ ಪದಾಧಿಕಾರಿಗಳು, ಸಮಾಜ ಬಾಂಧವರು, ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ದೀಕ್ಷಾ ಸಮಾರಂಭದ ರಜತ ಮಹೋತ್ಸವ
ವಾಲ್ಕೇಶ್ವರದ ಶಾಂತಾದುರ್ಗ ದೇವಳ ಕವಳೆ ಮಠದ ವತಿಯಿಂದ ಮೇ 26ರಂದು ಮುಂಬಯಿಯ ದಾದರ್‌ ಪೂರ್ವದ ಕಿಂಗ್ಸ್‌ ಜಾರ್ಜ್‌ ಸ್ಕೂಲಿನ ಬಿ.ಎನ್‌. ವೈದ್ಯ ಸಭಾಗೃಹದಲ್ಲಿ ಸಂಜೆ 5 ಗಂಟೆಯಿಂದ ಅತಿ ವಿಜೃಂಭಣೆಯಿಂದ ಸ್ವಾಮೀಜಿ ಅವರ ದೀಕ್ಷಾ ಸಮಾರಂಭದ ರಜತ ಮಹೋತ್ಸವವನ್ನು ಆಚರಿಸಲಾಗುವುದು. ಅಂದು ಸಂಜೆ ಪರಮಪೂಜ್ಯ ಗುರುವರ್ಯರನ್ನು ಭಕ್ತ ಸಮಾಜ ಬಾಂಧವರು ರಾಜಾ ಶಿವಾಜಿ ವಿದ್ಯಾಲಯ ದಾದರ್‌ಗೆ ಸ್ವಾಗತಿಸಲಿದ್ದಾರೆ.

ಈ ಸಂದರ್ಭದಲ್ಲಿ ಭಕ್ತಿ ಸಂಗೀತ ರಸ
ಮಂಜರಿಯನ್ನು ಆಯೋಜಿಸಲಾಗಿದೆ. ಅನಂತರ ಸ್ವಾಮೀಜಿಯವರು ಸಮಾಜ ಬಾಂಧವರನ್ನು ಉದ್ದೇಶಿಸಿ ಆಶೀರ್ವಚನ ನೀಡಲಿದ್ದಾರೆ. ಅಂತೆಯೇ ಶಾಂತಾದುರ್ಗ ದೇವಿಯ 54ನೇ ವರ್ಧಾಪನಾ ಮಹೋತ್ಸವ ಮೇ 26ರಿಂದ ಮೇ 29ರ ವರೆಗೆ ಸಂಭ್ರಮದಿಂದ ನಡೆಯಲಿದೆ. ಮೇ 29 ರಂದು ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿÉ ದೇವಿಯ ಪಲ್ಲಕ್ಕಿ ಸೇವೆ ನಡೆಯಲಿದೆ. ಮೇ 26ರಂದು ದೀಕ್ಷಾ ಸಮಾರಂಭದಲ್ಲಿ ಭಾಗವಹಿಸಲಿಚ್ಛಿಸುವವರು ಮುಂಚಿತವಾಗಿ ಹೆಸರು ನೋಂದಾಯಿಸಿ
ಕೊಳ್ಳಬೇಕು ಎಂದು ಮಠದ ಸಮಿತಿ ಸದಸ್ಯ, ವಕ್ತಾರ ಕಮಲಾಕ್ಷ ಸರಾಫ್‌ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕನ್ನಡ ದೃಶ್ಯ ಜಗತ್ತನ್ನು ಕಲಾತ್ಮಕವಾಗಿ ಶ್ರೀಮಂತಗೊಳಿಸಿದ ಕೆಲವೇ ಕೆಲವು ನಿರ್ದೇಶಕರ ಪೈಕಿ ಗಿರೀಶ್‌ ಕಾಸರವಳ್ಳಿ ಕೂಡ ಒಬ್ಬರು. ಚೊಚ್ಚಲ ನಿರ್ದೇಶನ, "ಘಟಶ್ರಾದ್ಧ'...

  • ಬೆಂಗಳೂರು: ರಾಜ್ಯಾದ್ಯಂತ ಅನುಷ್ಠಾನದಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳ ಕಾರ್ಯನಿರ್ವಹಣೆ ಸಂಬಂಧ ಸೂಕ್ತ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ....

  • ರಘುರಾಮನು ವನರಾಮನಾಗಿ ಆರಾಮದಿಂದ ಇದ್ದ ಸ್ಥಳವೇ ಚಿತ್ರಕೂಟ. ರಾಮ, ಲಕ್ಷ¾ಣ, ಸೀತೆಯರ ಚಿತ್ತಾಪಹಾರ ಮಾಡಿದ್ದ ಚಿತ್ರಕೂಟವು ಪ್ರವಾಸಿಗರ ಚಿತ್ತವನ್ನೂ ಅಪಹರಿಸುವಷ್ಟು...

  • ಮಂಗಳೂರು: ಪಾಶ್ಚಾತ್ಯ ಪ್ರಭಾವದಿಂದಾಗಿ ಭಾರತೀಯ ಸಂಗೀತವು ಸ್ವಲ್ಪ ಮಂಕಾಗಿ ಕಂಡರೂ ಮತ್ತೆ ಚಿಗುರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|...

  • ಇಂದು ದೌರ್ಜನ್ಯಗಳಿಗೆ ಮೇರೆಗಳಿಲ್ಲ. ದೆಹಲಿಯಲ್ಲೋ, ಹೈದರಾಬಾದ್‌ನಲ್ಲೋ ಹೆಣ್ಣಿನ ಮೇಲೆ ಹಾಗಾಯ್ತಲ್ಲ ಎನ್ನುತ್ತಾ ಕಳವಳಿಸುತ್ತಿರುವಾಗಲೇ, ಬೆಂಗಳೂರಿನಲ್ಲಿ...