ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನದಿಂದ ಪೇಜಾವರ ಶ್ರೀಗಳಿಗೆ ತುಲಾಭಾರ ಸೇವೆ

Team Udayavani, Jul 7, 2019, 4:24 PM IST

ಮುಂಬಯಿ: ದೇವರು ಮಂದಿರದಲ್ಲಿ ಮಾತ್ರವಲ್ಲ ಎಲ್ಲರಲ್ಲಿಯೂ, ಎಲ್ಲೆಡೆಯಲ್ಲಿಯೂ ಇದ್ದಾನೆ. ಭಗವಂತನ ಆರಾಧನೆಯಿಂದ ಲೋಕಕ್ಕೆ ಕಲ್ಯಾಣ, ಲೋಕದ ಆರಾಧನೆ ಮಾಡಿದರೆ ಭಗವಂತನಿಗೆ ಸಂತೋಷವಾಗುತ್ತದೆ. ಭಗವಂತನ ಆರಾಧನೆಯಿಂದ ಸಮಾಜ ಕಲ್ಯಾಣವಾಗುತ್ತದೆ ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನುಡಿದರು.

ಸಾಂತಾಕ್ರೂಜ್‌ ಪೂರ್ವದ ಪೇಜಾವರ ಮಠದಲ್ಲಿ ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನ ಮುಂಬಯಿ ಹಾಗೂ ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಮತ್ತು ಮುಂಬಯಿ ಮಹಾನಗರದ ತುಳು-ಕನ್ನಡಿಗ ಭಕ್ತಾಭಿಮಾನಿಗಳ ವತಿಯಿಂದ ಜೂ. 29ರಂದು ನಡೆದ ಸ್ವಾಮೀಜಿಯವರ ರಜತ ತುಲಾಭಾರ ಸೇವೆಯಲ್ಲಿ ಆಶೀರ್ವಚನ ನೀಡಿದ ಅವರು, ಮಹಾನಗರದಲ್ಲಿ ಶ್ರೀ ಕೃಷ್ಣನ ಮಂದಿರ ನಿರ್ಮಾಣಗೊಳ್ಳುತ್ತಿದ್ದು, ಇದು ಕೇವಲ ತುಳು-ಕನ್ನಡಿಗರಿಗೆ ಮಾತ್ರವಲ್ಲ, ಮುಂಬಯಿಯ ಎಲ್ಲ ಸಮುದಾಯಕ್ಕೆ ಪ್ರಾಯೋಜಕಾರಿಯಾಗಲಿ. ದೇವರ ಅನುಗ್ರಹದಿಂದ ತನ್ನ ಈ ಪ್ರಾಯದಲ್ಲೂ ತುಲಾಭಾರ ಸೇವೆಯು ಯಶಸ್ವಿಯಾಗಿ ನಡೆದಿದೆ. ಇದು ಶ್ರೀ ಕೃಷ್ಣನಿಗೆ ಅರ್ಪಣೆಯಾಗಲಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕನ್ನಡಿಗ ಕಲಾವಿದರ ಪರಿಷತ್ತು ಇದರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ ಇವರು ಮಾತನಾಡಿ, ನಮ್ಮ ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿಗಳಂತಹ ಮಹಾನ್‌ ವ್ಯಕ್ತಿಗಳು ಉಡುಪಿಗೆ ಹೋಗಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆಯುತ್ತಿದ್ದಾರೆ. ಅಂತಹ ಸ್ವಾಮೀಜಿಯವರು ಮುಂಬಯಿಗೆ ಆಗಮಿಸಿ ನಮ್ಮ ಮುಂದೆ ಆಶೀರ್ವಚನ ನೀಡುತ್ತಿರುವುದನ್ನು ಕಂಡಾಗ ನಾವು ಭಾಗ್ಯವಂತರು ಎನ್ನಬೇಕಾಗಿದೆ. ಡಾ| ಸುರೇಶ್‌ ರಾವ್‌ ಅವರು ಕಟೀಲಿನಲ್ಲಿ ಕೋಟ್ಯಂತರ ರೂ. ಗಳ ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಿಸಿ ಪೇಜಾವರ ಶ್ರೀಗಳ ಅನುಗ್ರಹ ಮತ್ತು ಆಶೀರ್ವಾದದಿಂದ ಜನಸಾಮಾನ್ಯರ ಸೇವೆ ಮಾಡುತ್ತಿರುವ ಇವರ ಎಲ್ಲಾ ಕಾರ್ಯಗಳು ಶ್ರೀ ಕೃಷ್ಣನಿಂದಾಗಿ ಎಣಿಸಿರುವುದಕ್ಕಿಂತಲೂ ಹೆಚ್ಚು ಯಶಸ್ವಿಯಾಗಲಿದೆ ಎಂದು ಹೇಳಿದರು.

ಮತ್ತೋರ್ವ ಅತಿಥಿ ಬಿಎಸ್‌ಕೆಬಿ ಅಸೋಸಿಯೇಶನ್‌ ಅಧ್ಯಕ್ಷ ಡಾ| ಸುರೇಶ್‌ ರಾವ್‌ ಅವರು ಮಾತನಾಡಿ, ಗೋಕುಲದ ಯೋಜನೆಗಳು ಇಷ್ಟೊಂದು ಪ್ರಗತಿಪಥದಲ್ಲಿ ಸಾಗಬೇಕಾದರೆ ಶ್ರೀ ಕೃಷ್ಣನ ರೂಪದಲ್ಲಿ ಪೇಜಾವರ ಶ್ರೀಗಳೇ ಸಾರಥಿಯಾಗಿ ನಿಂತಿದ್ದಾರೆ. ಗೋಕುಲದ ಶ್ರೀ ಕೃಷ್ಣ ಮಂದಿರದ ಕೆತ್ತನೆಯ ಕೆಲಸದಲ್ಲಿ ಕೃಷ್ಣನ ಎಲ್ಲ ರೂಪಗಳು ಕಾಣಲಿದ್ದೇವೆ ಎಂದು ಮಂದಿರದ ವಿಶೇಷತೆಯನ್ನು ವಿವರಿಸಿದರು.

ಬಂಟರ ಸಂಘ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ ಅವರು ಮಾತನಾಡಿ,
ನಮಗೆಲ್ಲರಿಗೂ ಶ್ರೀ ಕೃಷ್ಣನ ದರ್ಶನ ಪಡೆದಂತಾಗಿದೆ. ಪೇಜಾವರ ಶ್ರೀಗಳನ್ನು ದೊಡ್ಡ ಮಟ್ಟದಲ್ಲಿ ಸಮ್ಮಾನಿಸಬೇಕು ಎನ್ನುವ ಕೈರಬೆಟ್ಟು ವಿಶ್ವನಾಥ ಭಟ್‌ ಅವರ ಯೋಜನೆ, ಯೋಚನೆ ಸಫಲಗೊಂಡಿದೆ ಎಂದು ನುಡಿದರು.

ವೇದಿಕೆಯಲ್ಲಿ ಸುರೇಶ್‌ ಶೆಟ್ಟಿ ಯೆಯ್ನಾಡಿ, ಸೋನಿ ಸ್ಟೀಲ್‌ನ ಪಾಂಡುರಂಗ ಶೆಟ್ಟಿ, ಗಾಣಿಗ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಜಗನ್ನಾಥ ಗಾಣಿಗ, ಸಿಎ ಸುಧೀರ್‌ ಆರ್‌. ಎಲ್‌. ಶೆಟ್ಟಿ, ಉದ್ಯಮಿ ವಿಶ್ವನಾಥ ಶೆಟ್ಟಿ ಕಾಪು, ನಟ-ನಿರ್ದೇಶಕ ಮನೋಹರ ಶೆಟ್ಟಿ ನಂದಳಿಕೆ, ಪ್ರತಿಷ್ಠಾನದ ಕೋಶಾಧಿಕಾರಿ ಅವಿನಾಶ್‌ ಶಾಸ್ತ್ರೀ, ಟ್ರಸ್ಟಿಗಳಾದ ಸುಮಾ ವಿ. ಭಟ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಸುನಂದಾ ಉಪಾಧ್ಯಾಯ, ಕಾರ್ಯದರ್ಶಿ ಸುಶೀಲಾ ದೇವಾಡಿಗ ಅವರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಸಂಸ್ಥಾಪಕ ಕೈರಬೆಟ್ಟು ವಿಶ್ವನಾಥ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಭಕ್ತರಿಂದ ತುಲಾಭಾರ ಸೇವೆ, ಯತಿಕುಲ ಚಕ್ರವರ್ತಿ ಪೇಜಾವರ ಶ್ರೀಗಳಿಗೆ ನಡೆಸುವಂತೆ ಆಯಿತು. ಪ್ರತಿಷ್ಠಾನ ವಿವಿಧ ರೀತಿಯಲ್ಲಿ ಸಮಾಜದ ಅಶಕ್ತರಿಗೆ ಸಹಕಾರ ನೀಡುತ್ತಿದೆ ಎಂದರು.

ಕಾರ್ಯದರ್ಶಿ ಸುಶೀಲಾ ದೇವಾಡಿಗ ಮತ್ತು ಡಾ| ಕರ್ನೂರು ಮೋಹನ್‌ ರೈ ಕಾರ್ಯಕ್ರಮ ನಿರ್ವಹಿಸಿದರು. ಮಧೆÌàಷ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಕು| ನಿಖೀತಾ ಎಸ್‌. ಅಮೀನ್‌ ತಂಡದಿಂದ ನೃತ್ಯ ವೈಭವ ನಡೆಯಿತು. ಕಾರ್ಯಕ್ರಮಕ್ಕೆ ಕುಕ್ಕೆಹಳ್ಳಿ ಸದಾನಂದ ಶೆಟ್ಟಿ, ಶಶಿಧರ ಬಿ. ಶೆಟ್ಟಿ, ಶೇಖರ್‌ ಸಸಿಹಿತ್ಲು, ಜನಾರ್ದನ ಸಾಲ್ಯಾನ್‌, ನವೀನ್‌ ಪಡುಇನ್ನ, ಪ್ರಭಾಕರ ಬೆಳುವಾಯಿ, ಬಾಲಚಂದ್ರ ಭಟ್‌ ಮೊದಲಾದವರು ಸಹಕರಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್‌ ಗಾಂಧಿ ವಸತಿ ನಿಗಮದ ಬದಲು ಮತ್ತೆ...

  • ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ...

  • ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್‌ ಪಾವತಿ ಗಳನ್ನು ಕಾರ್ಡ್‌ ಅಥವಾ ಆ್ಯಪ್‌ಗ್ಳ ಮೂಲಕ ಮಾಡುತ್ತಿದ್ದಾರೆ....

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...