Udayavni Special

ವಡಾಲದ ಶ್ರೀ ರಾಮ ಮಂದಿರ: ಶ್ರೀ ರಾಮನವಮಿ ಉತ್ಸವ


Team Udayavani, Apr 23, 2021, 11:13 AM IST

Sri Ramanavami Festival

ಮುಂಬಯಿ: ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವಡಾಲ ಕತ್ರಾಕ್‌ ರಸ್ತೆಯ ದ್ವಾರಕನಾಥ ಭವನದ ಶ್ರೀರಾಮ ಮಂದಿರದಲ್ಲಿ ಎ. 21ರಂದು 56ನೇ ವಾರ್ಷಿಕ ಶ್ರೀ ರಾಮ ನವಮಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.ಶ್ರೀ ರಾಮನಾಮ ಸಂಕೀರ್ತನೆಯೊಂದಿಗೆ ಮರ್ಯಾದ ಪುರುಷೋತ್ತಮ ಭಗವಾನ್‌ ಶ್ರೀ ರಾಮ ನವಮಿ ಮಹೋತ್ಸವ ಸರಳವಾಗಿ ಆಚರಿಸಲಾಯಿತು.

ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆಯಿಂದ ಪ್ರಧಾನ ಆರ್ಚಕ ವೇ|ಮೂ| ಗೋವಿಂದ ಆಚಾರ್ಯ ಅವರ ಸಾರಥ್ಯದಲ್ಲಿ ದೇವತಾ ಪ್ರಾರ್ಥನೆ, ಮಹಾ ಮಂಗಳಾರತಿ, ರಾತ್ರಿ ಪೂಜೆಯೊಂದಿಗೆ ವಾರ್ಷಿಕ ಉತ್ಸವ ನೆರವೇರಿಸಿದವು. ಶ್ರೀ ರಾಮನ ಉತ್ಸವ ಮೂರ್ತಿಯನ್ನು ತೊಟ್ಟಿಲಲ್ಲಿರಿಸಿ ನಾಮಕರಣೋತ್ಸವ ನೆರವೇರಿಸಿ ಸಾಂಪ್ರದಾಯಿಕವಾಗಿ ರಾಮ ಜನ್ಮೋತ್ಸವ ಆಚರಿಸಲಾಯಿತು.ವೇ|ಮೂ| ಸುಧಾಮ ಭಟ್‌, ವೇ|ಮೂ| ಅನಂತ ಭಟ್‌, ವೇ|ಮೂ| ಭರತೇಶ್‌ ಭಟ್‌ ಕಟಪಾಡಿ, ಸಹ ಪುರೋಹಿತರು ಮತ್ತು ಮಂದಿರದ ವೈಧಿಕ ವರ್ಗದವರು ವಿವಿಧ ಪೂಜೆಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು.

ಶ್ರೀ ರಾಮ ಮಂದಿರ ಸಮಿತಿ ವಡಾಲ ಇದರ ಸಾಂಸ್ಕೃತಿಕ ಹಾಗೂ ಧಾರ್ಮಿಕ ಉಪ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮಂದಿರದ ಮಹಿಳಾ ವಿಭಾಗದ ಸದಸ್ಯೆಯರು, ರಾಮಭಕ್ತರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಈ ಸಂದರ್ಭದಲ್ಲಿ ಜಿಎಸ್‌ಬಿ ಸೇವಾ ಮಂಡಲ ಕಿಂಗ್‌ಸರ್ಕಲ್‌ ಇದರ ಮುಖ್ಯಸ್ಥ ಸತೀಶ್‌ ರಾಮ ನಾಯಕ್‌, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಮುಂಬಯಿ ವಡಾಲ ಸಮಿತಿಯ ಕಾರ್ಯಾಧ್ಯಕ್ಷ ಮುಕುಂದ್‌ ವೈ. ಕಾಮತ್‌, ಉಪ ಕಾರ್ಯಾಧ್ಯಕ್ಷ ಎನ್‌. ಎನ್‌. ಪಾಲ್‌, ಜತೆ ಕೋಶಾಧಿಕಾರಿ ಪ್ರವೀಣ್‌ ಕಾಮತ್‌, ಮಹೇಶ್‌ ಭಂಡಾರ್ಕರ್‌, ಕಮಲಾಕ್ಷ ಜಿ. ಸರಾಫ್‌, ಹರೀಶ್ಚಂದ್ರ ಶ್ಯಾನ್‌ಭಾಗ್‌, ಅನ್ಮೋಲ್‌ ನಾಯಕ್‌ ಸೇರಿದಂತೆ ಇತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ವಿವಿಧ ಸೇವೆಗಳನ್ನಿತ್ತು ಸಹಕರಿಸಿದರು.ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

Udaya Garudachar Statement On war Room and Bed Blocking

ಬಿಬಿಎಂಪಿ ವಾರ್ ರೂಂನಲ್ಲಿ ಒಂದು ಕೋಮಿನ ವಿರುದ್ಧ ದುರ್ವತನೆ ತೋರಿಲ್ಲ: ಉದಯ್ ಗರುಡಾಚಾರ್

covid effect

ಜಿಲ್ಲೆಯಲ್ಲಿ 1,550ಕ್ಕೂ ಹೆಚ್ಚು ಜನ ಘರ್‌ ವಾಪ್ಸಿ

battele-ground

ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್ ಆಡಲು ಈ ನಿಯಮಗಳನ್ನು ಪಾಲಿಸಲೇಬೇಕು !

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

COVID-19: Why India is Pfizer’s shot at redemption

ಜಗತ್ತಿನ ದುಬಾರಿ  ಕೋವಿಡ್ ಲಸಿಕೆ  ಫೈಜರ್..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suresh Kotyan appeals for medical help

ಸುರೇಶ್‌ ಕೋಟ್ಯಾನ್‌ ವೈದ್ಯಕೀಯ ನೆರವಿಗೆ ಮನವಿ

Blood donation camp

ಜಿಎಸ್‌ಬಿ ಸೇವಾ ಮಂಡಲ ಸಯಾನ್‌: ರಕ್ತದಾನ ಶಿಬಿರ

City servant Sridhar Poojary

ಅಮಾಯಕರಿಗೆ ಹಣ ಮರಳಿಸಿ ಕೊಟ್ಟ ನಗರ ಸೇವಕ ಶ್ರೀಧರ್‌ ಪೂಜಾರಿ

Let the work go on for the name to last forever

ಹೆಸರು ಶಾಶ್ವತವಾಗಿ ಉಳಿಯುವಂತೆ ಕೆಲಸ ನಡೆಯಲಿ: ದೇವದಾಸ್‌ ಕುಲಾಲ್‌

The only poet Paramadeva “

“ಸಮಗ್ರ ಮಹಾಭಾರತವನ್ನು ಕನ್ನಡಕ್ಕೆ ಕೊಟ್ಟ ಏಕೈಕ ಕವಿ ಪರಮದೇವ”

MUST WATCH

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

udayavani youtube

ಮಂಗಳೂರಿನ ಪದವಿನಂಗಡಿಯಲ್ಲಿ ಬೈಕ್ ಗಳ ನಡುವೆ ಅಪಘಾತಭೀಕರ ಅಪಘಾತದ ದೃಶ್ಯ

udayavani youtube

ಹೋಂ ಐಸೋಲೇಷನ್ ಸಂದರ್ಭ ನಾವು ಹೇಗಿರಬೇಕು ?

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

ಹೊಸ ಸೇರ್ಪಡೆ

ದ್ವಿಚಕ್ರ ವಾಹನಗಳಿಂದ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ

ದ್ವಿಚಕ್ರ ವಾಹನಗಳಿಂದ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ

ಶಾಂತಿಮೊಗರು: ಪ್ರಗತಿಯಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ

ಶಾಂತಿಮೊಗರು: ಪ್ರಗತಿಯಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ

7-18

ಬೆಡ್‌-ಆಕ್ಸಿಜನ್‌ ಪೂರೈಕೆಗೆ ಕ್ರಮ ಕೈಗೊಳ್ಳಿ

7-17

ಎಲ್ಲರೂ ಒಟ್ಟಾಗಿ ಶ್ರಮಿಸಿ ಕೊರೊನಾ ತಡೆಯೋಣ

7-16

ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ಲಮಾಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.