52ನೇ ವಾರ್ಷಿಕ ಉತ್ಸವ ಸಂಭ್ರಮಿಸಿದ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ


Team Udayavani, Feb 5, 2019, 4:00 PM IST

0401mum02.jpg

ಮುಂಬಯಿ: ಶನೈಶ್ವರನ ನಾಮ ಕೇಳಿ ಭಯಬೀಳುವ, ಆವಶ್ಯಕತೆಯಿಲ್ಲ. ಕಾರಣ ಶನೈಶ್ವರನು ಜಾತಕದಲ್ಲಿರುವ ಸ್ಥಾನಗಳ ಪ್ರಕಾರ ಜನ್ಮಶನಿ, ದ್ವಾದಶ ಶನಿ, ಅಂತಹ ಸ್ಥಾನಗಳ ಪ್ರಕಾರ ಸ್ವಲ್ಪ ಕಷ್ಟನಷ್ಟಗಳನ್ನು ಪ್ರಾಪ್ತಿಸಿದರೂ ಆತನಿಗೆ ಶ್ರದ್ಧಾಭ‌ಕ್ತಿಯಿಂದ ಪೂಜಿಸಿದರೆ ಶನೈಶ್ವರನು ನಮ್ಮೆಲ್ಲಾ ಇಷ್ಟರ್ಥಗಳನ್ನು ಪೂರೈಸಿ ನೆಮ್ಮದಿಯ ಜೀವನ ಪ್ರಾಪ್ತಿಸುವನು. ಸಪ್ತಮ ಶನಿ ಮತ್ತು ಅಷ್ಟಮಿ ಶನಿ, ಅರ್ಧಾಷ್ಟಮಿ ಶನಿ ಕೇಳಿಕೊಂಡಗಲೇ  ಭಯಪಟ್ಟು ಮೈ ಕಂಪಿಸುವುದಕ್ಕಿಂತ ಅಸಲಿಗೆ ಶನೀಶ್ವರನನ್ನು ಆರಾಧಿಸಿ ಪುಣ್ಯಗಳನ್ನು ಪ್ರಾಪ್ತಿಸಿಕೊಳ್ಳಬೇಕು. ಈಶ್ವರ ಎಂಬ ಶಬ್ದ ಎಲ್ಲಿ ಇರುತ್ತದೆಯೋ ಅಲ್ಲಿ ಐಶ್ವರ್ಯದ ಭೋಳಾತತ್ವ ಇರುತ್ತದೆ.  ಆದ್ದರಿಂದ ಶನೈಶ್ವರಸ್ವಾಮಿಯನ್ನು ಶನಿ ಎಂದು ಕರೆಯದೆ   ಶನೈಶ್ವರನ ನಾಮದಿಂದ ಸ್ತುತಿಸಿರಿ. ಕಾರಣ ಸಂಕಟಮುಕ್ತಿಗೆ ಶನಿದೇವರೇ ವಾರಸುದಾರನು ಎಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್‌.ಕೋಟ್ಯಾನ್‌ (ಶಾಂತಿ) ತಿಳಿಸಿದರು.

ಉಪನಗರ ಖಾರ್‌ ಪೂರ್ವದ ಸಾಯಿಬಾಬಾ ರಸ್ತೆಯಲ್ಲಿನ ಜವಾಹರ್‌ನಗರದ ಪಹೆಲ್ವಾನ್‌ ಚಾಳ್‌ನಲ್ಲಿನ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ ತನ್ನ 52ನೇ ವಾರ್ಷಿಕ ಉತ್ಸವವನ್ನು ಫೆ. 3ರಂದು ಅಪರಾಹ್ನ ಸಾಂತಕ್ರೂಜ್‌ ಪೂರ್ವದ ಬಿಲ್ಲವರ ಭವನದ ಸಭಾಗೃಹದಲ್ಲಿ ಸಂಭ್ರಮಿಸಿದ್ದು, ಧನಂಜಯ ಶಾಂತಿ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸೇವಾ ಸಮಿತಿ ಅಧ್ಯಕ್ಷ ಶಂಕರ್‌ ಕೆ. ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ಭಾರತ್‌ ಬ್ಯಾಂಕ್‌ನ ನಿರ್ದೇಶಕ ಪ್ರೇಮನಾಥ್‌ ಪಿ.ಕೋಟ್ಯಾನ್‌, ಸಮಾಜ ಸೇವಕಿ ವಾರಿಜಾ ಎಸ್‌. ಕರ್ಕೇರ  ಅತಿಥಿಗಳಾಗಿ ಹಾಗೂ ಸೇವಾ ಸಮಿತಿ ಗೌರವ ಅಧ್ಯಕ್ಷ  ಶ್ರೀಧರ್‌  ಜೆ.ಪೂಜಾರಿ, ಉಪಾಧ್ಯಕ್ಷ ದೇವೆಂದ್ರ ವಿ.
ಬಂಗೇರ, ಕಾರ್ಯಧ್ಯಕ್ಷ ಆರ್‌.ಡಿ.ಕೋಟ್ಯಾನ್‌,ಜತೆ ಕಾರ್ಯದರ್ಶಿಗಳಾದ ಜನಾರ್ದನ ಎನ್‌.ಸಾಲ್ಯಾನ್‌, ಹರೀಶ್‌ ಕೋಟ್ಯಾನ್‌ ಕಾಪು, ಗೌ| ಪ್ರ| ಕೋಶಾಧಿಕಾರಿ ನಾಗೇಶ್‌ ಜಿ.ಸುವರ್ಣ, ಮಹಿಳಾ ಸಮಿತಿ ಮುಖ್ಯಸ್ಥರಾದ ಕೇಸರಿ ಬಿ.ಅಮೀನ್‌, ಶೋಭಾ ವಿ.ಕೋಟ್ಯಾನ್‌, ಲೀಲಾವತಿ ವೈ. ಹೆಜ್ಮಾಡಿ ಮತ್ತು ಶಾರದಾ ಎಸ್‌.ಪೂಜಾರಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿಜಯ್‌ ಎನ್‌.ಸಾಲ್ಯಾನ್‌, ವಿಶ್ವಸ್ತ ಸದಸ್ಯರು ಹಾಗೂ ಇತರ ಪದಾಧಿಕಾರಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು.

ಶನಿದೇವರನ್ನು ಪ್ರಸನ್ನಗೊಳಿಸುವ ವಾರವೇ ಶನಿವಾರ. ಆ ದಿನ ಶನಿದೋಷವುಳ್ಳವರು ಶನಿ ಪೂಜೆ ಮಾಡುವುದು ವಾಡಿಕೆ. ದುಃಖ ಹಾಗೂ ದೌರ್ಭಾಗ್ಯವನ್ನು ದೂರ ಮಾಡಲು ಶನಿವಾರ ನೀಲಿ ಬಣ್ಣದ ಪುಷ್ಪ ಜೊತೆಗಿರಿಸುವ, ಎಳ್ಳನ್ನು ದಾನ ಮಾಡುವ ವಾಡಿಕೆಯಿದೆ. ಶನಿದೇವರು ಕೊಡುವ ಕಷ್ಟಗಳಿಗಿಂತಲೂ ನೀಡುವ ವರಗಳ ಬಗ್ಗೆ ತಿಳಿಯುವ ಅಗತ್ಯವಿದೆ. ಇದನ್ನೆಲ್ಲಾ ತಿಳಿದ ಪೂರ್ವಜರು ಇಂತಹ ಧಾರ್ಮಿಕ ಶಕ್ತಿ ತುಂಬುವ ಸಂಸ್ಥೆಗಳನ್ನು ಹುಟ್ಟುಹಾಕಿ ನಮಗೆಲ್ಲಾ ದಾರಿದೀಪವಾಗಿದ್ದಾರೆ ಎಂದು ಶಂಕರ್‌ ಸುವರ್ಣ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಅತಿಥಿಗಳು ಸಮಿತಿ ಉಪ ಕಾರ್ಯಾಧ್ಯಕ್ಷ ಜಯರಾಮ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ವಾಸು ಎಸ್‌.ಕೋಟ್ಯಾನ್‌, ಭೋಜ ಸಿ.ಪೂಜಾರಿ, ಕಾರ್ಯಕ್ರಮ ಸಮಿತಿ ಕಾರ್ಯದರ್ಶಿ ಹರಿಶ್ಚಂದ್ರ ಶೆಟ್ಟಿ ಇವರಿಗೆ ಸಾಧಕ ಸನ್ಮಾನ ಪ್ರದಾನಿಸಿ ಗೌರವಿಸಿದರು ಹಾಗೂ ಸುಮಾರು 21 ಮಹಿಳಾ ಕಾರ್ಯಕರ್ತೆಯರಿಗೆ ಸತ್ಕರಿಸಿ ಅಭಿನಂದಿಸಿದರು. ಸಮಿತಿ ಸದಸ್ಯರು ಮತ್ತು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ, ಕಿರು ನಾಟಕ, ಭಾÅಮರಿ ಯಕ್ಷನƒತ್ಯ ಕಲಾನಿಲಯ ಇದರ ಖಾರ್‌ ವಿಭಾಗದ ಕಲಾವಿದರು “ಭಸ್ಮಾಸುರ ಮೋಹಿನಿ’ ಯಕ್ಷಗಾನ ನೃತ್ಯರೂಪಕ ಪ್ರದರ್ಶಿಸಿದರು. ಹರಿಶ್ಚಂದ್ರ ಶೆಟ್ಟಿ ಮತ್ತು ಸಚಿನ್‌ ಪೂಜಾರಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕು| ದೀಪಾ ಸಾಲ್ಯಾನ್‌ ಪ್ರಾರ್ಥನೆ ಹಾಡಿದರು. ಸೇವಾ ಸಮಿತಿ  ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್‌ ಹೆಜ್ಮಾಡಿ ಸ್ವಾಗತಿಸಿ ಪ್ರಸ್ತಾವನೆಗೈದ‌ು ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಗೌರವ ಕೋಶಾಧಿಕಾರಿ, ಮಂದಿರದ ಅರ್ಚಕ ನಾಗೇಶ್‌ ಜಿ.ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ರಮೇಶ್‌ ಎನ್‌.ಪೂಜಾರಿ ವಂದಿಸಿದರು. 

 ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

ಟಾಪ್ ನ್ಯೂಸ್

ಸಿನಿಮಾ ನಟಿ ಮೇಲೆ ಹಲ್ಲೆ : ಮಾಜಿ ಪ್ರಿಯಕರ ಸೆರೆ

ಸಿನಿಮಾ ನಟಿ ಮೇಲೆ ಹಲ್ಲೆ : ಮಾಜಿ ಪ್ರಿಯಕರ ಸೆರೆ

ಕೋವಿಡ್ ಲಸಿಕೆ ಪಡೆದವರಿಗಷ್ಟೇ ಹಾಸನಾಂಬೆ ದರ್ಶನ ಭಾಗ್ಯ

ಕೋವಿಡ್ ಲಸಿಕೆ ಪಡೆದವರಿಗಷ್ಟೇ ಹಾಸನಾಂಬೆ ದರ್ಶನ ಭಾಗ್ಯ

ಮಂಗಳೂರಿನಲ್ಲಿ ಮೂರು ದಿನ ನೀರಿಲ್ಲ

ಮಂಗಳೂರಿನಲ್ಲಿ ಮೂರು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಬಂಟ್ವಾಳ: ವ್ಯಕ್ತಿ ಮೃತಪಟ್ಟ 6 ತಿಂಗಳ ಬಳಿಕ ಮೊಬೈಲ್ ಗೆ ಬಂತು ಲಸಿಕೆ ಪೂರ್ಣಗೊಂಡ ಸಂದೇಶ.!

ಬಂಟ್ವಾಳ: ವ್ಯಕ್ತಿ ಮೃತಪಟ್ಟ 6 ತಿಂಗಳ ಬಳಿಕ ಮೊಬೈಲ್ ಗೆ ಬಂತು ಲಸಿಕೆ ಪೂರ್ಣಗೊಂಡ ಸಂದೇಶ.!

hdk

1994ರಲ್ಲಿ ಜನತಾದಳ ಅಧಿಕಾರಕ್ಕೆ ಬರಲು ನನ್ನ ಪಾತ್ರವೇ ದೊಡ್ಡದು: ಹಳೆಯ ಇತಿಹಾಸ ಕೆದಕಿದ HDK

ಸಬ್ ಮರೈನ್ ಮಾಹಿತಿ ಸೋರಿಕೆ; ನೌಕಾಪಡೆ ಕಮಾಂಡರ್ ಹಾಗೂ ಇಬ್ಬರು ನಿವೃತ್ತ ಅಧಿಕಾರಿಗಳ ಸೆರೆ

ಸಬ್ ಮರೈನ್ ಮಾಹಿತಿ ಸೋರಿಕೆ; ನೌಕಾಪಡೆ ಕಮಾಂಡರ್ ಹಾಗೂ ಇಬ್ಬರು ನಿವೃತ್ತ ಅಧಿಕಾರಿಗಳ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

Untitled-1

ವಿದ್ಯಾರ್ಥಿಗಳಲ್ಲಿ ದೇಶದ ಅಭಿವೃದ್ಧಿಯ ಹೊಣೆಗಾರಿಕೆ ಇರಲಿ: ದಯಾನಂದ ಶೆಟ್ಟಿ

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ಸಿನಿಮಾ ನಟಿ ಮೇಲೆ ಹಲ್ಲೆ : ಮಾಜಿ ಪ್ರಿಯಕರ ಸೆರೆ

ಸಿನಿಮಾ ನಟಿ ಮೇಲೆ ಹಲ್ಲೆ : ಮಾಜಿ ಪ್ರಿಯಕರ ಸೆರೆ

incident held at shivamogga

ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ಕೋವಿಡ್ ಲಸಿಕೆ ಪಡೆದವರಿಗಷ್ಟೇ ಹಾಸನಾಂಬೆ ದರ್ಶನ ಭಾಗ್ಯ

ಕೋವಿಡ್ ಲಸಿಕೆ ಪಡೆದವರಿಗಷ್ಟೇ ಹಾಸನಾಂಬೆ ದರ್ಶನ ಭಾಗ್ಯ

incident held at hanooru

ಗಾಂಜಾ ಬೆಳೆದಿದ್ದ ಜಮೀನಿನ ಮೇಲೆ ದಾಳಿ ನಡೆಸಿ 40 ಕೆ.ಜಿ ಹಸಿ ಗಾಂಜಾ ವಶ: ಆರೋಪಿ ಪರಾರಿ

ಮಂಗಳೂರಿನಲ್ಲಿ ಮೂರು ದಿನ ನೀರಿಲ್ಲ

ಮಂಗಳೂರಿನಲ್ಲಿ ಮೂರು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.