ಸೈಂಟ್‌ ಪೀಟರ್  ಅಸೋಸಿಯೇಶನ್‌ ಬಾರ್ಕೂರು ಸಂತ ದಿನಾಚರಣೆ


Team Udayavani, Jul 12, 2018, 4:55 PM IST

1007mum08.jpg

ಮುಂಬಯಿ: ಸೈಂಟ್‌ ಪೀಟರ್  ಅಸೋಸಿಯೇಶನ್‌ ಬಾರ್ಕೂರು ಮುಂಬಯಿ ಇದರ ವತಿಯಿಂದ ತನ್ನ ಸಂಸ್ಥೆಯ ಪೋಷಕ “ಸೈಂಟ್‌ ಪೀಟರ್‌’ ಅವರ ಸ‌ಂತ ದಿನಾಚರಣೆಯು ಜು. 8 ರಂದು  ಪೂರ್ವಾಹ್ನ ಅಂಧೇರಿ ಪೂರ್ವದ ಮರೋಲ್‌ ವಿಜಯನಗರದ ವಿನ್ಸೆಂಟ್‌ ಡಿ’ಪಲೋಟ್ಟಿ ಚರ್ಚ್‌ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಬೆಳಗ್ಗೆ ವಿನ್ಸೆಂಟ್‌ ಡಿ’ಪಲೋಟ್ಟಿ ಚರ್ಚ್‌ನಲ್ಲಿ ವಿನ್ಸೆಂಟ್‌ ಡಿ’ಪಲೋಟ್ಟಿ ಇಗರ್ಜಿಯ ಧರ್ಮಗುರು  ರೆ| ಫಾ| ಬಾಲ್‌ರಾಜ್‌ ಸಂತ ಪೀಟರ್‌ಗೆ ಕೃತಜ್ಞತಾ ಪೂಜೆ ನೆರವೇರಿಸಿ  ಆಶೀರ್ವಚನ ನೀಡಿ, ಸಂತರನ್ನು ನೆನಪಿಸಿ ಮೊರೆಹೋಗುವುದು ಸರಿಯಲ್ಲ. ಬದಲಾಗಿ ದೈನಂದಿನವಾಗಿ ದೇವರನ್ನು ಸ್ತುತಿಸಿ ಪ್ರಾರ್ಥಿಸುವ ಮನೋಭಾವ ರೂಢಿಸಿಕೊಳ್ಳುವ ಅಗತ್ಯವಿದೆ. ಏಸುಕ್ರಿಸ್ತರಿಗೆ ಸಾಮೀಪ್ಯದ ಮತ್ತು ಪರಮಾಪ್ತ ಶಿಷ್ಯನಾಗಿದ್ದ ಸಂತ ಪೀಟರ್‌ ಅವರು ತಮ್ಮ ಸಂಸ್ಥೆಯ ಪೋಷಕರಾಗಿದ್ದು, ಅವರ ಪ್ರೇರಣೆ ಪಡೆದು ತಾವೂ ಸಮಾಜದ ಎಲ್ಲರಲ್ಲೂ ಅತ್ಮೀಯತೆಯ ಜೀವನ ರೂಪಿಸಿ ಕೊಂಡು ಬದುಕು ಹಸನುಗೊಳಿಸಿರಿ ಎಂದರು.

ಬಳಿಕ ಚರ್ಚ್‌ ಸಭಾಗೃಹದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಅಸೋಸಿಯೇಶನ್‌ನ ಅಧ್ಯಕ್ಷ ಐವಾನ್‌ ರೆಬೆಲ್ಲೋ ಅಧ್ಯಕ್ಷತೆಯಲ್ಲಿ ನಡೆದ 28 ನೇ ವಾರ್ಷಿಕ ಪೋಷಕ ಸಂತದಿನಾಚರಣಾ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಲ್ಲಿ ಕ್ವಾಡ್ರಸ್‌ ಅವರು ಉಪಸ್ಥಿತರಿದ್ದು ಮಾತನಾಡಿ, ಅಸೋಸಿಯೇಶನ್‌ನ ಸದಸ್ಯರೆಲ್ಲರೂ ಹƒದಯ ಶ್ರೀಮಂತಿಕೆಯುಳ್ಳವರು ಎನ್ನುವುದಕ್ಕೆ ಅಭಿಮಾನ ಪಡುತ್ತೇನೆ. ಸಾಂಘಿಕವಾಗಿ ಕೂಡಿ ತೆರೆಮರೆಯಲ್ಲಿದ್ದೇ ಸೇವಾ ನಿರತ ಈ ಸಂಸ್ಥೆ ಇತರ ಸಂಸ್ಥೆಗಳಿಗೆ ಮೇಲ್ಪಂಕ್ತಿಯೇ ಸರಿ. ಸಂಸ್ಥೆಯಿಂದ ಇನ್ನಷ್ಟು ಸೇವೆ ನಿರಂತರವಾಗಿ ನಡೆಯಲಿ. ನಿಮ್ಮ ಎಲ್ಲಾ ಸೇವೆಗೂ ಸಂತ ಪೀಟರ್‌ ಬಲತುಂಬಿ ಪ್ರೇರೆಪಿಸಲಿ ಎಂದು ನುಡಿದು,  ಎಲ್ಲರಿಗೂ ಒಳಿತನ್ನೇ ಪ್ರಾಪ್ತಿಸಲಿ ಎಂದ‌ು ಆಶಿಸಿದರು.

ಗೌರವ ಅತಿಥಿಗಳಾಗಿ ಲಾರೆನ್ಸ್‌ ಕುವೆಲ್ಲೊ, ಸುಜಾನ್‌ ಕುವೆಲ್ಲೊ, ಹ್ಯಾರಿ ರೆಬೆಲ್ಲೊ, ಹ್ಯಾರಿ ಫೆರ್ನಾಂಡಿಸ್‌, ಫೆಲಿಕ್ಸ್‌ ಪಿಕಾರ್ಡೊ, ಆರ್ಚಿಬಾಲ್ಡ್‌ ಫ‌ುರ್ಟಾಡೊ ಉಪಸ್ಥಿತರಿದ್ದು ಶುಭಹಾರೈಸಿದರು. ಅಧ್ಯಕ್ಷ ಐವಾನ್‌ ರೆಬೆಲ್ಲೋ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪರರನ್ನು ಅರ್ಥೈಸುವ ಮನೋಭಾವ ಬೆಳೆಸಿ ನಾವೂ ಬೆಳೆದಾಗ ಜೀವನ ಪಾವನವಾಗುವುದು. ಅದಕ್ಕಾಗಿ ನಮ್ಮ ಸಂಸ್ಥೆಯ ಪೋಷಕ ಸಂತ ಪೀಟರ್‌ರ ವ್ಯಕ್ತಿತ್ವದ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು  ಜೀವಿಸಿದಾಗಲೇ ನಮ್ಮ ಉದ್ದೇಶಗಳು ಫಲಪ್ರದವಾಗುವುದು ಎಂದು ತಿಳಿಸಿದರು.

ಕಾರ್ಯದರ್ಶಿ ಎರಿಕ್‌ ಕರ್ವಾಲೋ ಸಂಸ್ಥೆಯ ಸೇವಾ ವೈಖರಿಯನ್ನು  ತಿಳಿಸಿದರು. ಉಪಾಧ್ಯಕ್ಷರಾದ ಆ್ಯಂಟನಿ ಗೋವಿಯಸ್‌, ತಿಮೊಥಿ ಡಿ’ಸೋಜಾ, ಕೋಶಾಧಿಕಾರಿ ಜೋನ್‌ ಗೋವಿಯಸ್‌, ಅಧ್ಯಕ್ಷರುಗಳಾದ ಫೆಲಿಕ್ಸ್‌ ಬಾರೆ°ಸ್‌, ರಿಚಾರ್ಡ್‌ ಕರ್ವಾಲೋ, ಬೊನಿ ಸಿಕ್ವೇರಾ, ಐಡಾ ರೋಚ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲೈನ್‌ ಕಾರ್ವಾಲೊ ಮತ್ತಿ ಜಿಜೆಲ್‌ ಫೆರ್ನಾಂಡಿಸ್‌ ಅವರ ಭಕ್ತಿ  ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಅಸೋಸಿಯೇ ಶನ್‌ನ ಸಂಸ್ಥಾಪಕರ, ಸದಸ್ಯರ  ಸೇವೆಯನ್ನು  ಸ್ಮರಿಸಿ ಉಪಸ್ಥಿತ ಹಿರಿಯ ಸದಸ್ಯರ‌ನ್ನು ಗೌರವಿಸಿದರು. ಜತೆ ಕಾರ್ಯದರ್ಶಿ ಜೋಯ್ಲನ್‌ ಫೆರ್ನಾಂಡಿಸ್‌ ಕಾರ್ಯಕ್ರಮ ನಿರೂಪಿಸಿದರು. ಐವಾನ್‌ ಸುವಾರಿಸ್‌ ವಂದಿಸಿದರು.  ಸಾಂಸ್ಕೃತಿಕವಾಗಿ ಸದಸ್ಯರಿಂದ ವಿವಿಧ ನೃತ್ಯವಾಳಿ, ಕಿರು ನಾಟಕ ಮತ್ತು  ಕೊಂಕಣಿ ಹಾಡುಗಳ ಗಾಯನ ನಡೆಯಿತು.

ಚಿತ್ರ-ವರದಿ: ರೊನಿಡಾ  ಮುಂಬಯಿ

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.