ಸಿಎ ಎನ್. ಬಿ. ಶೆಟ್ಟಿ ಅವರಿಗೆ 2020ನೇ ಸಾಲಿನ “ಟೈಮ್ಸ್ ಮೆನ್ ಆಫ್ ದ ಈಯರ್ ಪುರಸ್ಕಾರ’
Team Udayavani, Feb 8, 2021, 9:08 PM IST
ಮುಂಬಯಿ: ನಗರದ ಲೆಕ್ಕ ಪರಿಶೋಧಕ, ಫೈನಾನ್ಶಿಯಲ್ ಕನ್ಸಲ್ಟೆಂಟ್ ಸಿಎ ಎನ್. ಬಿ. ಶೆಟ್ಟಿ ಅವರು ಪ್ರತಿಷ್ಠಿತ 2020ನೇ ಸಾಲಿನ “ಟೈಮ್ಸ್ ಮೆನ್ ಆಫ್ ದ ಈಯರ್ ಪುರಸ್ಕಾರ’ ಕ್ಕೆ ಭಾಜನರಾಗಿದ್ದಾರೆ.
ಮಹಾನಗರದಲ್ಲಿ ಜರಗಿದ ಸಮಾರಂಭದಲ್ಲಿ ಬಾಲಿವುಡ್ ಪ್ರಸಿದ್ಧ ಗಾಯಕಿ ಇಲಾ ಅರುಣ್ ಪುರಸ್ಕಾರ ಫಲಕವನ್ನು ಸಿಎ ಎನ್. ಬಿ. ಶೆಟ್ಟಿ ಅವರಿಗೆ ಪ್ರದಾನ ಮಾಡಿ, ಗೌರವಿಸಿ ಅಭಿನಂದಿಸಿದರು. ಆರ್ಥಿಕ ರಾಜಧಾನಿ ಮುಂಬಯಿಯ ಬಾಂದ್ರಾ ಪಶ್ಚಿಮದ ವಿಲ್‌ರೋಡ್‌ನಲ್ಲಿ ಲೆಕ್ಕ ಪರಿಶೋಧಕ
ರಾಗಿ ಮತ್ತು ಫೈನಾನ್ಶಿಯಲ್ ಕನ್ಸಲ್ಟೆಂಟ್ ಸಂಸ್ಥೆ ಹೊಂದಿರುವ ಅವರು ಸುಮಾರು 5 ದಶಕಗಳ ಅಗಾಧ ಜ್ಞಾನ, ಸುದೀರ್ಘ ಅನುಭವಸ್ಥವುಳ್ಳ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಆಗಿ ಹೆಸರುವಾಸಿಯಾಗಿದ್ದಾರೆ. ತ್ರಿವೇಣಿ ಗ್ರೂಫ್ ಹಾಸ್ಪಿಟಾಲಿಟಿ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಅವರು ಉದ್ಯಮಿ ಯಾಗಿ, ಮಚೆìಂಟ್, ಬ್ಯಾಂಕಿಂಗ್, ಮ್ಯಾನೇಜ್‌ಮೆಂಟ್ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಇನ್ಫೋಟೆಕ್‌ನಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಉಡುಪಿ ಬೊಮ್ಮಾರಬೆಟ್ಟು ನಿವಾಸಿ, ಕೃಷಿಕರಾದ ಕರಿಯ ಶೆಟ್ಟಿ ಮತ್ತು ಜಲಜಾ ಶೆಟ್ಟಿ ಹಿರಿಯಡ್ಕ ದಂಪತಿ ಪುತ್ರರಾಗಿರುವ ಇವರು ಸರಳ, ಸಜ್ಜನ ವ್ಯಕ್ತಿತ್ವದ ಮಿತಭಾಷಿಯಾಗಿ, ತೆರೆಮರೆಯ ಸಮಾಜ ಸೇವಕರಾಗಿ ಹೆಸರು ಗಳಿಸಿದ್ದಾರೆ. ಜಾತಿ, ಮತ, ಧರ್ಮವನ್ನು ಮರೆತು ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಒಳನಾಡ ಮತ್ತು ಹೊರನಾಡ ಆರೋಗ್ಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಇನ್ನಿತರ ಸೇವಾ ಸಂಸ್ಥೆಗಳ ಪ್ರೋತ್ಸಾಹಕರಾಗಿದ್ದಾರೆ. 1970ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪದೋನ್ನತಿಯಾಗಿ ರಾಷ್ಟ್ರದಲ್ಲೇ ಹನ್ನೊಂದನೇ ರ್‍ಯಾಂಕ್ ಪಡೆದ ಅವರಿಗೆ ವಿವಿಧ ಕ್ಷೇತ್ರಗಳ ಸಾಧನೆಗಳಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. 2020ರಲ್ಲಿ ಎಸ್‌ಎಂಇ ಎಂಟರ್‌ಪ್ರಿನರ್‌ಶಿಪ್ ಎಕ್ಸ್‌ಲೆನ್ಸ್ ಪುರಸ್ಕಾರಕ್ಕೂ ಭಾಜನರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಹೊಸ ಸೇರ್ಪಡೆ
ಕುಟುಂಬ ಯೋಜನೆಗೆ ಇಸ್ಲಾಂನಲ್ಲಿ ವಿರೋಧವಿಲ್ಲ :ಚುನಾವಣಾ ಆಯೋಗದ ಮಾಜಿ ಅಧ್ಯಕ್ಷ ಖುರೇಷಿ ಹೇಳಿಕೆ
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ : ಸಿದ್ದರಾಮಯ್ಯ ಆರೋಪ
ಸಿನೆಮಾಗಳು ಚಿಂತನೆಗೆ ಪ್ರೇರಣೆಯಾಗಬೇಕು: ಗಿರೀಶ್ ಕಾಸರವಳ್ಳಿ
ಸಂಸದ ಅನಂತಕುಮಾರ ಹೆಗಡೆ ಕಾಲಿಗೆ ಶಸ್ತ್ರ ಚಿಕಿತ್ಸೆ
ಆಸ್ಟ್ರೇಲಿಯವನ್ನು 7 ವಿಕೆಟ್ಗಳಿಂದ ಮಣಿಸಿ ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್